Tag: ಮ್ಯಾಕ್ಸ್ ವೆಲ್

  • ಕಣ್ಣೀರಿಟ್ಟ ಕೊಹ್ಲಿಯನ್ನು ಅಪ್ಪಿ ಸಂತೈಸಿದ ಮ್ಯಾಕ್ಸ್‌ವೆಲ್‌

    ಕಣ್ಣೀರಿಟ್ಟ ಕೊಹ್ಲಿಯನ್ನು ಅಪ್ಪಿ ಸಂತೈಸಿದ ಮ್ಯಾಕ್ಸ್‌ವೆಲ್‌

    ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ವಿಶ್ವಕಪ್ 2023ರ ಫೈನಲ್ (World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಆಟಗಾರರು ಕಣ್ಣೀರಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ವೆಲ್‌ (Maxwell) ಅಪ್ಪಿ ಸಂತೈಸಿದರು.

    ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಮ್ಯಾಕ್ಸ್‌ವೆಲ್‌ ಬಿಗಿದಪ್ಪಿ ಸಾಂತ್ವ ಹೇಳಿದರಲ್ಲದೇ ಜೆರ್ಸಿಗೆ (Jeresey) ಕೊಹ್ಲಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿಯನ್ನು ಅಪ್ಪಿ ಹಿಡಿದ ಮ್ಯಾಕ್ಸ್ ವೆಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಕೊಹ್ಲಿ, ಮ್ಯಾಕ್ಸ್ ವೆಲ್ ಫೋಟೋವನ್ನು ಐಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಗೌರವ ಮತ್ತು ಅಭಿಮಾನದ ಸಂಕೇತ ಎಂದು ಕ್ಯಾಪ್ಷನ್ ನೀಡಿದೆ. ಸದ್ಯ ಫೋಟೋ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಇತ್ತ ಅನುಷ್ಕಾ ಶರ್ಮಾ (Anushka Sharma) ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತ ಕೆಲವೇ ಕ್ಷಣಗಳಲ್ಲಿ ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಪಂದ್ಯ ಸೋತು ಕಣ್ಣಲ್ಲಿ ನೀರು ತುಂಬಿಕೊಂಡು ಬೇಸರದಲ್ಲಿದ್ದ ಕೊಹ್ಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಹ ಪ್ರೀತಿಯ ಅಪ್ಪುಗೆ ನೀಡಿ ಸಮಾಧಾನ ಪಡಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.

  • ಧೋನಿ, ಜಾಧವ್ ಶತಕದ ಜೊತೆಯಾಟ – ಟೀಂ ಇಂಡಿಯಾಗೆ ಆಸೀಸ್ ವಿರುದ್ಧ ಹೈದರಾಬಾದ್‍ನಲ್ಲಿ ಮೊದಲ ಗೆಲುವು

    ಧೋನಿ, ಜಾಧವ್ ಶತಕದ ಜೊತೆಯಾಟ – ಟೀಂ ಇಂಡಿಯಾಗೆ ಆಸೀಸ್ ವಿರುದ್ಧ ಹೈದರಾಬಾದ್‍ನಲ್ಲಿ ಮೊದಲ ಗೆಲುವು

    ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಗೆಲುವು ಪಡೆದಿದ್ದು, ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.

    ಧೋನಿ, ಜಾಧವ್‍ರ ಉಪಯುಕ್ತ ಶತಕದ ಜೊತೆಯಾಟದ ಪರಿಣಾಮ ಟೀಂ ಇಂಡಿಯಾ 10 ಎಸೆತ ಬಾಕಿ ಇರುವಂತೆ ಗೆಲುವಿನ ಗುರಿ ತುಲುಪಿದ್ದು, 48.2 ಓವರ್ ಗಳಲ್ಲಿ 240 ರನ್ ಗಳಿಸಿತು. ಅಲ್ಲದೇ ಹೈದರಾಬಾದ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು ಪಡೆಯಿತು. ಈ ಹಿಂದೆ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.

    ಆಸ್ಟ್ರೇಲಿಯಾ ನೀಡಿದ 237 ರನ್ ಗುರಿ ಬೆನ್ನಟಿದ ಟೀಂ ಇಂಡಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಶಿಖರ್ ಧವನ್ ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ಮೊದಲ ಅಘಾತ ಎದುರಾಯಿತು. ಈ ವೇಳೆ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆಗೂಡಿ 2ನೇ ವಿಕೆಟ್‍ಗೆ 76 ರನ್ ಜೊತೆಯಾಟ ನೀಡಿದರು.

    45 ಎಸೆತಗಳಲ್ಲಿ 44 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ಸ್ ಬೀಸುತ್ತಿದ್ದ ಕೊಹ್ಲಿರನ್ನು ಜಂಪಾ ಎಲ್‍ಬಿ ಬಲೆಗೆ ಕೆಡವಿದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಮಾನ ನೀಡಿದರು, ಡಿಆರ್‍ಎಸ್ ಪಡೆದ ಆಸೀಸ್ ವಿಕೆಟ್ ಪಡೆಯಲು ಯಶಸ್ವಿಯಾಯಿತು. ಇದರ ಬೆನ್ನಲ್ಲೇ 66 ಎಸೆಗಳಿಂದ 37 ರನ್ ಗಳಿದ್ದ ರೋಹಿತ್ ಶರ್ಮಾ ಫಿಂಚ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ರಾಯುಡು ಕೂಡ 13 ರನ್ ಗಳಿಸಿ ನಿರ್ಗಮಿಸಿದರು. ಪರಿಣಾಮ ತಂಡ 23.3 ಓವರ್ ಗಳಲ್ಲಿ 99 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಈ ಹಂತದಲ್ಲಿ ಒಂದಾದ ಮಾಜಿ ನಾಯಕ ಧೋನಿ ಹಾಗೂ ಕೇಧಾರ್ ಜಾದವ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ನಿರ್ಣಾಯಕ ಹಂತದಲ್ಲಿ ರನ್ ಕದಿಯುತ್ತ, ಕೆಟ್ಟ ಎಸೆತಗಳನ್ನು ದಂಡಿಸುತ್ತಾ 149 ಎಸೆತಗಳಲ್ಲಿ 141 ರನ್ ಗಳ ಶತಕ ಜೊತೆಯಾಟ ನೀಡಿ ಗೆಲುವು ತಂದರು. ಜಾಧವ್ 67 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ಧೋನಿ 68 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಸಿಡಿಸಿದರು. ಆ ಮೂಲಕ ಧೋನಿ ವೃತ್ತಿ ಜೀವನದ 106ನೇ ಅರ್ಧ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ ಜಾಧವ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರೆ, ಧೋನಿ 72 ಎಸೆತಗಳಿಂದ 59 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಆಸ್ಟ್ರೇಲಿಯಾ ಖವಾಜಾ ಅರ್ಧ ಶತಕ ಹಾಗೂ ಮ್ಯಾಕ್ಸ್ ವೆಲ್ 40 ರನ್ ಗಳ ನೆರವಿನಿಂದ ನಿಗದಿ 50 ಓವರ್ ಗಳಲ್ಲಿ 236 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾಗೆ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಶಮಿ 44/2, ಕುಲ್ದೀಪ್ ಯಾದವ್ 46/2, ಬುಮ್ರಾ 60/2 ವಿಕೆಟ್ ಪಡೆದರೆ, ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ವಿಶಾಖಪಟ್ಟಣ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಸಿಂಗಲ್ ರನ್ ಗಳನ್ನು ಓಡಲು ನಿರಾಕರಿಸಿದ ಧೋನಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.

    ಪಂದ್ಯದ ಅಂತಿಮ 3 ಓವರ್ ಗಳನ್ನು ಎದುರಿಸಿದ ಧೋನಿ 17 ರನ್ ಮಾತ್ರ ಗಳಿಸಿದ್ದರು. ಅಲ್ಲದೇ ಈ ಹಂತದಲ್ಲಿ 1 ಬೌಂಡರಿಯನ್ನು ಸಿಡಿಸಿದ್ದರು. ಅಂತಿಮವಾಗಿ 37 ಎಸೆತಗಳಿಂದ 29 ರನ್ ಗಳಿಸಿದ್ದರು. ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 35 ಪ್ಲಸ್ ಎಸೆತಗಳಲ್ಲಿ ಗಳಿಸಿದ 2ನೇ ಅತಿ ಕಡಿಮೆ ರನ್ ಆಗಿದ್ದು, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಮತ್ತಷ್ಟು ರನ್ ಗಳಿಸಿದ್ದರೆ ಎದುರಾಳಿ ತಂಡ ಜಯಗಳಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅಂತಿಮ ಮೂರು ಓವರ್ ಗಳಲ್ಲಿ 8 ಬಾರಿ ಒಂಟಿ ರನ್ ಓಡಲು ಧೋನಿ ನಿರಾಕರಿಸಿದ್ದರು. ಆದರೆ 109 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸಿದ ಧೋನಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಆದರ ಧೋನಿ ತಂಡದ ಮೊತ್ತ ಹೆಚ್ಚಿಸಲು ವಿಫಲರಾಗಿದ್ದರು. ಪರಿಣಾಮ ತಂಡ ಸಾಧಾರಣ ಮೊತ್ತ ಗಳಿಸಿತ್ತು.

    ಇದರ ನಡುವೆಯೇ ಪಂದ್ಯದಲ್ಲಿ ಧೋನಿಯ ರಕ್ಷಣಾತ್ಮಕ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್ ಅರ್ಧ ಪಿಚ್‍ನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟಕರವಾಗಿತ್ತು. ಯಾವುದೇ ಬ್ಯಾಟ್ಸ್ ಮನ್‍ಗೆ ಆಡುವುದು ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ. ಧೋನಿ ತಮ್ಮ ಮ್ಯಾಚ್ ಫಿನಿಷಿಂಗ್ ಪ್ರದರ್ಶನಕ್ಕೆ ಖ್ಯಾತಿ ಪಡೆದವರು. ಪಂದ್ಯದ ಅಂತಿಮ ಓವರ್ ನಲ್ಲೂ ಕೂಡ ಅವರು ಸಿಕ್ಸರ್ ಸಿಡಿಸಿದ್ದರು. ಇದು ಅವರ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿ. ಆದರೆ ಆ ಓವರ್ ನಲ್ಲಿ 7 ರನ್ ಗಳಿಸಲಷ್ಟೇ ಸಾಧ್ಯವಾಗಿದ್ದು, ಪಿಚ್ ಎಷ್ಟು ಕಠಿಣವಾಗಿತ್ತು ಎನ್ನುವುದಕ್ಕೆ ಉದಾಹಣೆ ಆಗಬಹುದು ಎಂದು ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.

    ಧೋನಿ ಅವರಂತಹ ಬ್ಯಾಟ್ಸ್ ಮನ್‍ರನ್ನು ಅಂತಿಮ ಓವರ್ ಗಳಲ್ಲಿ ಕೇವಲ 1 ಬೌಂಡರಿಗೆ ಸಿಮೀತಗೊಳಿಸಿದ್ದು ಕೂಡ ನಮ್ಮ ಬೌಲರ್ ಸಾಧನೆಯೇ ಸರಿ ಎಂದು ಎಂದಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv