Tag: ಮೌನ ಗುಡ್ಡೆಮನೆ

  • ಹಾಟ್‌ ಅವತಾರದಲ್ಲಿ ‘ರಾಮಾಚಾರಿ’ ನಟಿ ಮೌನ ಗುಡ್ಡೆಮನೆ

    ಹಾಟ್‌ ಅವತಾರದಲ್ಲಿ ‘ರಾಮಾಚಾರಿ’ ನಟಿ ಮೌನ ಗುಡ್ಡೆಮನೆ

    ಕಿರುತೆರೆಯ ಜನಪ್ರಿಯ ‘ರಾಮಾಚಾರಿ’ (Ramachari Serial) ಸೀರಿಯಲ್ ನಟಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಹಾಟ್ ಅವತಾರ ತಾಳಿದ್ದಾರೆ. ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ‘ರಾಮಾಚಾರಿ’ ಸೀರಿಯಲ್‌ನ (Ramachari Serial) ಶುರುವಿನಲ್ಲಿ ಚಾರು ಪಾತ್ರ ಬೋಲ್ಡ್ ಆಗಿತ್ತು. ಆ ನಂತರ ಸೀರೆ ಗೆಟಪ್‌ನಲ್ಲಿ ನಟಿ ಮೌನ ಕಾಣಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಅಂತ ನಟಿ ಹಾಟ್ ಅವತಾರ ತಾಳಿದ್ದಾರೆ. ಈ ಲುಕ್ ಪಡ್ಡೆಹುಡುಗರಿಗೂ ಖುಷಿ ಕೊಟ್ಟಿದೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ಕಪ್ಪು ಬಣ್ಣದ ಮಿಸಿ ಡ್ರೆಸ್ ಧರಿಸಿ ನಟಿ ಮಿಂಚಿದ್ದಾರೆ. ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಮಾದಕ ಅವತಾರಕ್ಕೆ ಬ್ಲ್ಯಾಕ್ ಬ್ಯೂಟಿ, ಸಖತ್, ಹಾಟ್ ಎಂದೆಲ್ಲಾ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ: ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು

    ‘ರಾಮಾಚಾರಿ’ ಸೀರಿಯಲ್‌ನಲ್ಲಿ ಬ್ಯುಸಿಯಾಗಿರುವಾಗಲೇ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜುಲೈ 18ರಂದು ಸಿನಿಮಾ ರಿಲೀಸ್ ಆಗಲಿದೆ.

    ‘ರಾಮಾಚಾರಿ’ಯ ಚಾರು ಆಗಿ ಗೆದ್ದ ಮೌನಗೆ ಸಿನಿಮಾದಿಂದ ಬ್ರೇಕ್‌ ಸಿಗಲಿದೆಯಾ. ಬೆಳ್ಳಿಪರದೆಯಲ್ಲೂ ನಾಯಕಿಯಾಗಿ ಸದ್ದು ಮಾಡ್ತಾರಾ? ಕಾಯಬೇಕಿದೆ.

  • BBK 11: ಹನುಮಂತನ ಪ್ರಪೋಸ್‌ಗೆ ನಾಚಿ ನೀರಾದ ಚಾರು

    BBK 11: ಹನುಮಂತನ ಪ್ರಪೋಸ್‌ಗೆ ನಾಚಿ ನೀರಾದ ಚಾರು

    ದೊಡ್ಮನೆಗೆ ವಿಶೇಷ ಅತಿಥಿಗಳ ಎಂಟ್ರಿಯಾಗಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಮಚಾರಿ’ (Ramachari) ಖ್ಯಾತಿಯ ಜೋಡಿ ರಿತ್ವಿಕ್ ಕೃಪಾಕರ್ (Rithvik Krupakar) ಮತ್ತು ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಬಿಗ್ ಬಾಸ್‌ಗೆ ಅತಿಥಿಗಳಾಗಿ ಭಾಗವಹಿಸಿ ಮನರಂಜನೆ ಡಬಲ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

    ಈ ಜೋಡಿ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ಸ್ಪರ್ಧಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ನಂತರ ಆತ್ಮೀಯವಾಗಿ ಬರಮಾಡಿಕೊಂಡ ಸ್ಪರ್ಧಿಗಳು, ಬಿಗ್ ಬಾಸ್ ಮನೆಯನ್ನು ಪರಿಚಯಿಸಿದ್ದಾರೆ. ವಿಶೇಷ ಅಂದ್ರೆ ಮನೆಗೆ ಎಂಟ್ರಿ ಆಗ್ತಿದ್ದಂತೆ ‘ಬಿಗ್ ಬಾಸ್’ ಇಬ್ಬರಿಗೂ ಟಾಸ್ಕ್ ಒಂದನ್ನು ನೀಡಿದ್ದಾರೆ.

    ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.

    ದೊಡ್ಮನೆಯಲ್ಲಿ ಮನರಂಜನೆ ನೀಡಲು ‘ರಾಮಾಚಾರಿ’ ಸೀರಿಯಲ್ (Ramachari) ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿರುವ ವಿಡಿಯೋದಲ್ಲಿ, ಚಾರು ಅವರು ಹನುಮಂತಗೆ ತಮ್ಮನ್ನು ಇಂಪ್ರೆಸ್ ಮಾಡುವಂತೆ ಗುಲಾಬಿ ಹೂ ನೀಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರುಗೆ ಇಂಪ್ರೆಸ್ ಮಾಡಲು ಪ್ರಯತ್ನಿಸಿದ್ದಾರೆ. ನನ್ನ ಕಣ್ಣು ನಿನ್ನ ಮೇಲೆ ಎಂದು ಹಾಡುತ್ತಾ ಗುಲಾಬಿ ಹೂ ಕೊಟ್ಟು ಮಂಡಿಯೂರಿ ಪ್ರಪ್ರೋಸ್ ಮಾಡಿದ್ದಾರೆ. ಹನುಮಂತನ ಪ್ರೇಮ ನಿವೇದನೆಗೆ ಚಾರು ನಾಚಿ ನೀರಾಗಿದ್ದಾರೆ. ಹನುಮಂತನ ನಡೆಗೆ ಸಹಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.

  • ‘ಕುಲದಲ್ಲಿ ಕೀಳ್ಯಾವುದೋ’ ಎನ್ನುತ್ತಾ ಬೆಳ್ಳಿತೆರೆಗೆ ಮೌನ ಗುಡ್ಡೆಮನೆ ಎಂಟ್ರಿ

    ‘ಕುಲದಲ್ಲಿ ಕೀಳ್ಯಾವುದೋ’ ಎನ್ನುತ್ತಾ ಬೆಳ್ಳಿತೆರೆಗೆ ಮೌನ ಗುಡ್ಡೆಮನೆ ಎಂಟ್ರಿ

    ‘ರಾಮಾಚಾರಿ’ (Ramachari) ಸೀರಿಯಲ್ ಮೂಲಕ ಮನೆಮಾತಾಗಿದ್ದ ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಲಗ್ಗೆ ಇಟ್ಟಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಎನ್ನುತ್ತಾ ಚಿತ್ರರಂಗಕ್ಕೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ.

    ಕಿರುತೆರೆಯಲ್ಲಿ ಚಾರು ಎಂದೇ ಫೇಮಸ್ ಆಗಿರುವ ಕುಡ್ಲದ ಕುವರಿ ಮೌನ ಈಗ ಸಿನಿಮಾವೊಂದರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೀರಿಯಲ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನುಗೆ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ.

    ತಮ್ಮ ಮೊದಲ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಮಾಡಿ, ನನ್ನ ಕನಸುಗಳು ನನಸಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪ್ರಯಾಣಕ್ಕೆ ಬೆಂಬಲ ನೀಡಿ ಎಂದು ಬರೆದುಕೊಂಡಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಫ್ಯಾನ್ಸ್ ಶುಭಕೋರಿದ್ದಾರೆ.

     

    View this post on Instagram

     

    A post shared by Mouna Guddemane (@mouna_guddemane)

    ಇನ್ನೂ ಮೌನ ನಟಿಸುತ್ತಿರುವ ಈ ಚಿತ್ರವನ್ನು ಸಂತೋಷ್ ಕುಮಾರ್ ಎ.ಕೆ ಮತ್ತು ವಿದ್ಯಾ ನಿರ್ಮಾಣ ಮಾಡುತ್ತಿದ್ದು, ಕೆ. ರಾಮನಾರಾಯಣ್ ಚಿತ್ರ ನಿರ್ದೇಶನ ಮಾಡಿದ್ದಾರೆ.