Tag: ಮೋಹನ್ ಗೌಡ

  • ಬೆಂಗಳೂರಿನಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಡಿ – ಹಿಂದೂ ಸಂಘಟನೆಗಳಿಂದ ದೂರು

    ಬೆಂಗಳೂರಿನಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಡಿ – ಹಿಂದೂ ಸಂಘಟನೆಗಳಿಂದ ದೂರು

    ಬೆಂಗಳೂರು: ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜನೆಗೊಂಡಿರುವ ವೀರ್ ದಾಸ್(Vir Das) ಕಾಮಿಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆ ಆಗ್ರಹಿಸಿದೆ.

    ಹಿಂದೂ ಜನಜಾಗೃತಿ ಸಮಿತಿಯ(Hindu Janajagriti Samiti) ರಾಜ್ಯ ವಕ್ತಾರ ಮೋಹನ ಗೌಡ, ಶ್ರೀರಾಮ‌ಸೇನೆಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ ನೇತೃತ್ವದಲ್ಲಿ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ಸಂಘಟನೆಗಳು ದೂರು ನೀಡಿವೆ.

    ಮೋಹ‌ನ ಗೌಡ ಪ್ರತಿಕ್ರಿಯಿಸಿ, ವೀರ್ ದಾಸ್‌ ಎನ್ನುವ ವಿವಾದಿತ ಕಾಮಿಡಿಯನ್ ನ.12 ರಂದು ಕಾಮಿಡಿ ಶೋವನ್ನು ಆಯೋಜನೆ ಮಾಡಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಈತ ಅಮೆರಿಕದಲ್ಲಿ ಭಾರತದ(India) ಬಗ್ಗೆ ಅತ್ಯಂತ ಕೆಟ್ಟದಾಗಿ ಕಾಮಿಡಿ ಮಾಡಿ ಅವಹೇಳನ ಮಾಡಿದ್ದನು. ಈ ಕಾರಣಕ್ಕಾಗಿ ಮುಂಬೈ ಪೋಲಿಸರು ಇವನ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಹೀಗೆ ವಿದೇಶದಲ್ಲಿ ಭಾರತದ ಪ್ರಧಾನಿ ಭಾರತದ ಮಹಿಳೆಯರ ವಿರುದ್ಧ ಮತ್ತು ಭಾರತದ ಘನತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ ಎಂದು ದೂರಿದರು. ಇದನ್ನೂ ಓದಿ: ಹಿಂದೂ ಪದದ ಅರ್ಥವೇ ಅಶ್ಲೀಲ – ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್‌

    ಈತ ಕೆಲವು ದಿನಗಳ ಹಿಂದೆ ಅಮೇರಿಕದ ವಾಷಿಗ್ಟನ್ ಡಿಸಿಯಲ್ಲಿ ಮಾತನಾಡಿದ ಒಂದು ವಿಡಿಯೋದಲ್ಲಿ ತಾನು ಎಲ್ಲಿ ಮಹಿಳೆಯರನ್ನು ಬೆಳಗ್ಗೆ ಪೂಜೆ ಮಾಡಿ ರಾತ್ರಿ ಅವರ ಮೇಲೆ ಅತ್ಯಾಚಾರ ಮಾಡುವ ಭಾರತದಿಂದ ಬಂದಿದ್ದೇನೆ ಎಂದು ದೇಶದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ. ಇದು ಭಾರತದ ದಂಡ ಸಂಹಿತೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಿರುವಾಗ ಇಂತಹ ವಿವಾದಿತ ವ್ಯಕ್ತಿ ಬೆಂಗಳೂರಿನಂತಹ ಅತ್ಯಂತ ಕೋಮು ಸೂಕ್ಚ್ಮ ಪ್ರದೇಶದಲ್ಲಿ ಈ ರೀತಿಯ ವಿವಾದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು.

    ಈಗಾಗಲೇ ಕರ್ನಾಟಕದಲ್ಲಿ(Karnataka) ಕೋಮು ಘಟನೆಗಳ ಪ್ರಕರಣದಿಂದ ಅನೇಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಪುನಃ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಕೂಡಲೇ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಮೋಹನ್‌ ಗೌಡ ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಮಿಕ್ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ: ಹಿಂದೂ ಮಹಾಸಭಾ ಕಿಡಿ

    ಇಸ್ಲಾಮಿಕ್ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ: ಹಿಂದೂ ಮಹಾಸಭಾ ಕಿಡಿ

    ಬೆಂಗಳೂರು: ಕೋರ್ಟ್ ತೀರ್ಪು ಬರುವ ತನಕ ಯಾವುದೇ ಧಾರ್ಮಿಕ ಉಡುಪು ಧರಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದ್ದರೂ, ಅದನ್ನು ಮೀರಿ ಅಲ್ಪ ಸಂಖ್ಯಾತರು ಹಿಜಾಬ್ ಜೊತೆಗೆ ಬುರ್ಕಾ ಧರಿಸಿ ಬರುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕ್ತಾರ ಮೋಹನ್ ಗೌಡ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಮಧ್ಯಂತರ ಆದೇಶ ಬಂದ ನಂತರದಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಬಿಟ್ಟು ತರಗತಿಗೆ ಹಾಜರಾಗಿದ್ದಾರೆ. ಕುಶಾಲನಗರ ಸೇರಿದಂತೆ ಹಲವು ಕಡೆ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಜೊತೆಗೆ ಕಾನೂನು ಚೌಕಟ್ಟು ಮೀರಿ ಮುಸ್ಲಿಂ ವಿದ್ಯಾರ್ಥಿಗಳು ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಹಿಜಾಬ್ ವಿವಾದದ ಹಿಂದೆ ಮತೀಯ ಶಕ್ತಿಗಳು ಕೆಲಸ ಮಾಡುತ್ತಿವೆ. ಇಸ್ಲಾಮಿಕ್‍ನ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್

    ಹಿಜಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡುತ್ತಿಲ್ಲ. ಶಿಕ್ಷಕಿ ಶಶಿಕಲಾ ಮುಸ್ಲಿಂ ಪೋಷಕರ ಗಲಾಟೆಯಿಂದ ತನ್ನ ಕೆಲಸವನ್ನೆ ಕಳೆದುಕೊಂಡರು. ಇದೇ ರೀತಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿದೆ ಜೊತೆಗೆ ಬೆದರಿಕೆ ಕರೆಗಳು ಬರುತ್ತಿವೆ. ಹಿಂದೂ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಿದೆ. ಈ ಸಂಬಂಧ ಗೃಹ ಸಚಿವರ ಗಮನಕ್ಕೆ ತಂದಿದ್ದೆವೆ ಎಂದರು. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ