Tag: ಮೋಹನ್

  • ಹಾಸನದ ಸೊಗಡಿನ ‘ಗೌರಿ ಶಂಕರ’: ಧಾರಾವಾಹಿಯಲ್ಲಿದೆ ಬೆಂಕಿ ಬಿರುಗಾಳಿಯ ಕಥೆ

    ಹಾಸನದ ಸೊಗಡಿನ ‘ಗೌರಿ ಶಂಕರ’: ಧಾರಾವಾಹಿಯಲ್ಲಿದೆ ಬೆಂಕಿ ಬಿರುಗಾಳಿಯ ಕಥೆ

    ನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ ಗೌರಿಶಂಕರ.

    ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು. ಇನ್ನು ಕಥಾ ನಾಯಕ ‘ಶಂಕರ’ ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್‌ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ.

    ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ. ಮತ್ತೊಂದೆಡೆ ಅಧಿಕಾರ, ದರ್ಪ, ಹಣ ತುಂಬಿರೋ ಶಂಕರನ ಪರಿವಾರ. ಈ ಎರಡೂ ತದ್ವಿರುದ್ಧ ಭಾವಗಳನ್ನು ಹೊಂದಿರುವ ಇವರಿಬ್ಬರ ನಡುವೆ ನಡೆಯುವ ಘರ್ಷಣೆ, ಸಂಧಾನ, ಪ್ರೇಮಾಂಕುರವೇ ಈ ಧಾರಾವಾಹಿಯ ಮುಖ್ಯಕಥಾ ಹಂದರ.

    ಗೌರಿಶಂಕರ (Gauri Shankar) ಧಾರಾವಾಹಿಯಲ್ಲಿ ನಾಯಕನಾಗಿ ಯಶವಂತ್ (Yashwant), ನಾಯಕಿಯಾಗಿ ಕೌಸ್ತುಭಮಣಿ (Kaustubhamani) ನಟಿಸುತ್ತಿದ್ದಾರೆ. ಜೊತೆಗೆ ಜನಪ್ರಿಯ ಕಲಾವಿದರಾದ ವಿದ್ಯಾಮೂರ್ತಿ, ಮೋಹನ್ (Mohan), ಕೀರ್ತಿ ಭಾನು ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ನವೆಂಬರ್ 13, ಸೋಮವಾರದಿಂದ ರಾತ್ರಿ 7 ಗಂಟೆಗೆ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಕಮಲ್ ಜೊತೆ ನಟಿಸಿದ್ದ ಸಹನಟನ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

    ಕಮಲ್ ಜೊತೆ ನಟಿಸಿದ್ದ ಸಹನಟನ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

    ಲವಾರು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಮೋಹನ್ (Mohan) ವಿಧಿವಶರಾಗಿದ್ದಾರೆ (Passed away). ಕಮಲ್ ಹಾಸನ್ (Kamal Haasan)ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದ ಮೋಹನ್ ಅವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ತಮಿಳಿನ ನಾಡಿನ ಮಧುರೈ (Madurai) ಜಿಲ್ಲೆಯ ತಿರುಪ್ಪಂಗುಂಡ್ರಂ ರಸ್ತೆಯಲ್ಲಿ ಅನಾಥ ಶವ ನೋಡಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಶವವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆಮೇಲೆ ಅದು ನಟ ಮೋಹನ್ ಅವರ ಮೃತದೇಹ ಎಂದು ಗೊತ್ತಾಗಿದೆ. ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಹನ್ ಕುಟುಂಬಸ್ಥರು ಸೇಲಂ (Salem) ಜಿಲ್ಲೆಯ ಮೆಟ್ಟೂರಿನಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ.

     

    ಮೋಹನ್ ಕೂಡ ಅದೇ ಗ್ರಾಮದಲ್ಲಿ ವಾಸವಿದ್ದರು. ಆದರೆ, ಮಧುರೈಗೆ ಹೋಗಿದ್ದು ಏಕೆ ಎನ್ನುವ ಅನುಮಾನ ಮೂಡಿದೆ. ಮೂಲಗಳ ಪ್ರಕಾರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾರಣದಿಂದಾಗಿ ಕೆಲಸ ಹುಡುಕಿಕೊಂಡು ಬಂದಿದ್ದರು ಎಂದು ಹೇಳಲಾಗುತ್ತಿದೆ. 60ರ ವಯಸ್ಸಿನ ಮೋಹನ್ ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಾಲರ್ಸ್ ಪೇಟೆ’ಯಲ್ಲಿ ಕಾಣಿಸಿಕೊಂಡ ಲೂಸಿಯಾ ಪವನ್ ಪತ್ನಿ  ಸೌಮ್ಯ

    ‘ಡಾಲರ್ಸ್ ಪೇಟೆ’ಯಲ್ಲಿ ಕಾಣಿಸಿಕೊಂಡ ಲೂಸಿಯಾ ಪವನ್ ಪತ್ನಿ ಸೌಮ್ಯ

    ಮೋಹನ್ ಎನ್ ಮುನಿನಾರಾಯಣಪ್ಪ (Mohan) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ‘ಡಾಲರ್ಸ್ ಪೇಟೆ’ (Dollars Pete). ಈ ಚಿತ್ರದ ಮೂಲಕ ‘ಮಾರ್ಫಿ’, ‘ಮದಗಜ’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿ ನಾರಾಯಣಪ್ಪ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿತ್ತು. ಇದೀಗ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡಿ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

    ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಲೂಸಿಯ ಖ್ಯಾತಿಯ ನಿರ್ದೇಶಕ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ (Soumya Jagan Murthy) ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಕ್ಯಾರೆಕ್ಟರ್ ಪೋಸ್ಟರ್ ಚಿತ್ರತಂಡ ರಿವೀಲ್ ಮಾಡಿದೆ. ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಕ್ಯಾಶಿಯರ್ ಪಾತ್ರವನ್ನು ನಿರ್ವಹಿಸಿದ್ದು, ಬಿಡುಗಡೆಯಾಗಿರುವ ಕ್ಯಾರೆಕ್ಟರ್ ಪೋಸ್ಟರ್ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಮುಂದಿನ ದಿನಗಳಲ್ಲಿ ಉಳಿದ ಕಲಾವಿದರ ಪೋಸ್ಟರ್ ಬಿಡುಗಡೆ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

    ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ಕುಶಾಲ್.ಎಸ್, ದತ್ತು, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಕ್ಯಾಮೆರಾ ವರ್ಕ್, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಪೂಜಾ.ಟಿ.ವೈ ‘ಡಾಲರ್ಸ್ ಪೇಟೆ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಗಿರೀಶ್ ನಿರ್ದೇಶನದ ‘ಶಾಲಿವಾಹನ ಶಕೆ’ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್

    ನಟ ಗಿರೀಶ್ ನಿರ್ದೇಶನದ ‘ಶಾಲಿವಾಹನ ಶಕೆ’ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್

    ಒಂದ್ ಕಥೆ ಹೇಳ್ಲಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಪ್ರತಿಭಾನ್ವಿತ ನಿರ್ದೇಶಕ ಕಂ ನಟ ಗಿರೀಶ್ ಜಿ ಸದ್ಯ ವಾವ್ಹಾ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಪ್ರಖ್ಯಾತ ಒಟಿಟಿಯಲ್ಲಿ ವಾವ್ಹಾ ಜುಲೈ ಕೊನೆಗೆ ರಿಲೀಸ್ ತಯಾರಿಯಲಿದ್ದು, ಇದೇ ಗ್ಯಾಪ್ ನಲ್ಲಿ ಗಿರೀಶ್ ಮತ್ತೊಂದು ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಅದೇ ಶಾಲಿವಾಹನ ಶಕೆ.

    ಮೊದಲ ಸಿನಿಮಾದಲ್ಲಿಯೇ ಗಿರೀಶ್ ತಮ್ಮದೆ ಶೈಲಿಯಲ್ಲಿ ಕಥೆ ಹೇಳಿ ತಾವೊಬ್ಬ ಪ್ರತಿಭಾನ್ವಿತ ನಿರ್ದೇಶಕ ಅನ್ನುವುದನ್ನು ತೋರಿಸಿಕೊಟ್ಟಿದ್ದರು. ಈ ಬಾರಿಯೂ ಅಂತಹದ್ದೇ ಒಂದು ಹೊಸಬಗೆಯ ಹಾಗೂ ವಿಶೇಷ ಕಥೆಯೊಂದಿಗೆ ಶಾಲಿವಾಹನ ಶಕೆ ಸಿನಿಮಾ ಮೂಲಕ ನಿಮ್ಮ ಮುಂದೆ ಹಾಜರಾಗಲು ಸಜ್ಜಾಗಿದ್ದು, ಅದರ ಮೊದಲ ಭಾಗವಾಗಿ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಡಿಜಿಟಲ್ ಸ್ಕೆಚ್ ಆರ್ಟ್ ಮೂಲಕ ತಯಾರಿಸಿರುವ ಮೋಷನ್ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ಟೈಮ್ ಥ್ರಿಲ್ಲರ್ ಕಥಾನಕದ ಈ ಸಿನಿಮಾ ಕನ್ನಡ ಇಂಡಸ್ಟ್ರೀ ಮಟ್ಟಿಗೆ ಹೊಸತದಿಂದ ಕೂಡಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಒಂದಷ್ಟು ಹೊಸಬರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಜಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾಗೆ ಶೈಲೇಶ್ ಕುಮಾರ್ ಎಂ.ಎಂ ಬಂಡವಾಳ ಹೂಡಿದ್ದು, ಅರುಣ್ ಸುರೇಶ್ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಕಾರ್ತಿಕ್ ಭೂಪತಿ-ಹರಿ ಅಜಯ್ ಸಂಗೀತ, ಪ್ರಶಾಂತ್ ವೈಎನ್ ಸಂಭಾಷಣೆ ಸಿನಿಮಾಕ್ಕಿದೆ. ಸದ್ಯ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿಯೇ ತಾರಾಬಳಗದ ಜೊತೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

    Live Tv

  • 2.57 ಲಕ್ಷ ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    2.57 ಲಕ್ಷ ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    ಬೆಂಗಳೂರು: ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಅದರ ಮಾಲೀಕನಿಗೆ ವಾಪಸ್ ಮಾಡುವ ಮೂಲಕ ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೋಹನ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಯಾಣಿಕರೊಬ್ಬರು ಮೋಹನ್ ಆಟೋ ಹತ್ತಿದ್ದರು. ಬಳಿಕ ಅವರು ಮೈಸೂರು ರಸ್ತೆ ಶಿರಸಿ ಸರ್ಕಲ್ ನಲ್ಲಿ ಆಟೋ ಇಳಿದು ಬ್ಯಾಗ್ ಬಿಟ್ಟು ಹೋಗಿದ್ದಾರೆ. ಈ ವೇಳೆ ಆಟೋದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕ ಮೋಹನ್, ಅದನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಬ್ಯಾಗ್ ಒಳಗಡೆ 2.57 ಲಕ್ಷ ನಗದು ಇರುವುದು ಬೆಳಕಿಗೆ ಬಂದಿದೆ.

    ಕೂಡಲೇ ಮೋಹನ್ ಅವರು ಚಾಮರಾಜಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಪ್ರಯಾಣಿಕರಿಗೆ ಅವರ ಹಣದ ಬ್ಯಾಗ್ ಅನ್ನು ಮೋಹನ್ ಹಿಂದಿರುಗಿಸಿದ್ದಾರೆ. ಇತ್ತ ಹಣದ ಬ್ಯಾಗ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಹಿನ್ನೆಲೆಯಲ್ಲಿ ಆಟೋ ಚಾಲಕನಿಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅವರು ಪ್ರಶಂಸೆ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.