Tag: ಮೋಹಕ ತಾರೆ ರಮ್ಯಾ

  • ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಟಿ ರಮ್ಯಾ

    ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಟಿ ರಮ್ಯಾ

    ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ (Actress Ramya) ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ (Bande Mahakali Temple) ಭೇಟಿ ನೀಡಿದ್ದಾರೆ. ದೀಪಾವಳಿ ಅಮವಾಸ್ಯೆಯ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಂಡೆ ಮಹಾಕಾಳಿ ದರ್ಶನ ಪಡೆದಿದ್ದಾರೆ.

    ನಟಿ ರಮ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟಿ ರಮ್ಯಾ ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ನಿರ್ಮಾಣದ ಜೊತೆಗೆ ನಟನೆ ಮಾಡಲು ಮನಸ್ಸು ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇನ್ನು ಯಾವ ಅಪ್‌ಡೇಟ್ ಸಿಕ್ಕಿಲ್ಲ.ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ

    ದೀಪಾವಳಿ ಹಬ್ಬದ ಪ್ರಯುಕ್ತ ಮಹಾಕಾಳಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಟನೆಯ ಬಗ್ಗೆ ಹೊಸ ಅಪ್‌ಡೇಟ್ ಕೊಡುವ ನಿರೀಕ್ಷೆಗಳಿವೆ. ಇದರ ಮಧ್ಯೆ ಜಾಲತಾಣದಲ್ಲಿ ತಮಗೆ ಕೆಟ್ಟದಾಗಿ ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ್ದರು. ಅದಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿಸಿದ್ದಾರೆ.

  • ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ಮೋಹಕತಾರೆ ರಮ್ಯಾ- ಪದ್ಮಾವತಿಗೆ ಏನಾಯ್ತು?

    ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ಮೋಹಕತಾರೆ ರಮ್ಯಾ- ಪದ್ಮಾವತಿಗೆ ಏನಾಯ್ತು?

    ಸ್ಯಾಂಡಲ್‌ವುಡ್‌ನ (Sandalwood) ಮೋಹಕ ತಾರೆ ರಮ್ಯಾ (Ramya) ಏಕಾಏಕಿ ಲಂಡನ್‌ಗೆ (London) ಹಾರಿದ್ದಾರೆ. ಅಯ್ಯೋ, ಅದರಲ್ಲೇನು ಸ್ಪೆಶಲ್ಲು ಬಿಡ್ರಿ. ಈ ಹಿಂದೆ ಅಲ್ಲಿಯೇ ಗುಟ್ಟಾಗಿ ವರ್ಷಗಟ್ಟಲೆ ಇದ್ದಿದ್ದು ಗೊತ್ತಿಲ್ಲವಾ? ಹೀಗಂತ ಕೇಳಬೇಡಿ. ಕಾರಣ ಈ ಬಾರಿ ಪದ್ಮಾವತಿ ಅಲ್ಲಿಗೆ ಹೋಗಿದ್ದು ಚಿಕಿತ್ಸೆಗಾಗಿ. ಅದು ಅನಾಹುತಕಾರಿ ಏನೂ ಅಲ್ಲ. ಹಾಗಿದ್ದರೆ ಯಾವುದು ಟ್ರೀಟ್‌ಮೆಂಟ್? ಇಲ್ಲಿದೆ ಮಾಹಿತಿ.

    ಚಿತ್ರರಂಗ -ರಾಜಕೀಯ ಎರಡು ಕ್ಷೇತ್ರದಲ್ಲಿ ಮಿರ ಮಿರ ಅಂತಾ ಮಿಂಚಿದವರು. ಸಡನ್ ಆಗಿ ಎಲ್ಲದ್ದಕ್ಕೂ ಗುಡ್ ಬೈ ಹೇಳಿ ದೂರದ ದೇಶ ಲಂಡನ್‌ನಲ್ಲಿ ಸೆಟಲ್ ಆಗಿದ್ರು. ಈಗ ಮತ್ತೆ ಸಿಲಿಕಾನ್ ಸಿಟಿಗೆ ಬಂದಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಹೊಸಬರ ಸಿನಿಮಾಗೆ ಬೆಂಬಲಿಸುತ್ತಿದ್ದಾರೆ. ತಾವೂ ಕೂಡ ಹೀರೋಯಿನ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಮುನ್ನ ಚಿಕಿತ್ಸೆಗಾಗಿ (Treatment) ದೂರದ ದೇಶಕ್ಕೆ ಹೋಗಿದ್ದಾರೆ. ಇದನ್ನೂ ಓದಿ:Exclusive: ತನ್ನ ನಿರ್ದೇಶನದ ಸಿನಿಮಾ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗೆ ರಾಕೇಶ್ ಅಡಿಗ ಗ್ರೀನ್ ಸಿಗ್ನಲ್

    ಪದ್ಮಾವತಿ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ವರ್ಷದ ಹಿಂದೆ ಯಾವ್ಯಾವುದೋ ದೇಶದಲ್ಲಿದ್ದುಕೊಂಡು ನಿಗೂಢ ರಹಸ್ಯವಾಗಿದ್ದ ಇವರು ಅದಾಗಲೇ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದು ಗೊತ್ತಿದೆ. ಸದ್ಯದಲ್ಲೇ ‘ಉತ್ತರ ಕಾಂಡ’ (Uttarakanda) ಸಿನಿಮಾದಿಂದ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಅದಕ್ಕೂ ಮುನ್ನ ಲಂಡನ್‌ಗೆ ಹಾರಿದ್ದಾರೆ. ತಲೆ ಕೆಡಿಸಿಕೊಳ್ಳೋದೇನೂ ಆಗಿಲ್ಲ. ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಲ್ಯಾಕ್ಸ್ ಆಗೋದು. ಹಾಗೂ ಇನ್ನಷ್ಟು ಸ್ಲಿಮ್ ಆಗೋದು. ಇದೇ ಪದ್ಮಾವತಿ ಒನ್ ಲೈನ್ ಅಜೆಂಡ್ ಅಷ್ಟೇಯಾ.

    ಇದನ್ನು ಖುದ್ದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಫ್ಯಾನ್ಸ್ ಕೂಡ ಇದನ್ನು ಕೇಳಿ ಖುಷಿಯಾಗಿದ್ದಾರೆ. ಬಣ್ಣದ ಲೋಕ ತೊರೆದು ಹೋದ ಮೇಲೆ ಸುಮಾರು ಎಂಟು ವರ್ಷ ರಮ್ಯಾ ಡಯಟ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲವೇನೊ? ಈಗ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗೋಲ್ಡನ್ ಗರ್ಲ್ ಆ ಹುರುಪಿನಲ್ಲಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಕತೆಯ ಉತ್ತರಕಾಂಡದಲ್ಲಿ ಮೆರವಣಿಗೆ ಹೊರಡಲಿದ್ದಾರೆ. ದಿ ನ್ಯೂ ರಮ್ಯಾ ಹೆಂಗರ‍್ತಾರೋ ಕಾದುನೋಡಬೇಕಿದೆ.

  • ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

    ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

    ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥೆ ತಂದು ಸ್ಯಾಂಡಲ್‌ವುಡ್‌ನಲ್ಲಿ ಪವರ್‌ಫುಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಪುನೀತ್ ರಾಜ್‌ಕುಮಾರ್. ತಮ್ಮ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಸಂದೇಶದ ಜತೆಗೆ ನವಿರಾದ ಪ್ರೇಮಕಥೆಯನ್ನೂ ತೆರೆಯ ಮೇಲೆ ಅಚ್ಚುಕಟ್ಟಾಗಿ ನಟಿಸುವುದರಲ್ಲಿ ಅಪ್ಪು ಯಾವಾಗೂ ಮುಂದು. ಅಂತಹ ಸಿನಿಮಾ ಸಾಲಿನಲ್ಲಿ ಸಿಗುವ ಚಿತ್ರಗಳಲ್ಲಿ `ಆಕಾಶ್’ ಕೂಡ ಒಂದು.

    ನಟ ಪುನೀತ್ ಮಲ್ಟಿ ಟ್ಯಾಲೆಂಟೆಡ್ ಆ್ಯಕ್ಟರ್. ಹಾಡೋಕು ಸೈ ಡ್ಯಾನ್ಸ್ ಮಾಡುವುದಕ್ಕೂ ಜೈ. ತಮ್ಮ ಪ್ರತಿ ಚಿತ್ರದಲ್ಲಿ ಮನರಂಜನೆ ಫ್ಯಾಕ್ಟರ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಪ್ರೇಕ್ಷಕ ಪ್ರಭುಗಳಿಗೆ ಯಾವ ತರಹದ ಸಿನಿಮಾ ಕೊಟ್ಟರೆ ಇಷ್ಟ ಆಗುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಂಡು ಆ ಜನರೇಷನ್‌ಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. `ಆಕಾಶ್’ ಸಿನಿಮಾ ಏ.27ಕ್ಕೆ ತೆರೆಕಂಡು 17 ವರ್ಷಗಳಾಗಿವೆ. ಅಸಲಿಗೆ ಆಕಾಶ್ ಸಿನಿಮಾ ಹೇಗೆ ಶುರುವಾಯ್ತು. ಇಲ್ಲಿದೆ ತೆರೆಹಿಂದಿನ ಸ್ಟೋರಿ.

    2004ರಲ್ಲಿ ಪುನೀತ್ ರಾಜ್‌ಕುಮಾರ್ ಕೆರಿಯರ್‌ನ ಪೀಕ್ ಟೈಮ್. ನಟಿಸಿದ ನಾಲ್ಕು ಸಿನಿಮಾಗಳಾದ ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ ಅಷ್ಟೂ ಚಿತ್ರಗಳು ಸೂಪರ್ ಹಿಟ್ ಆದ ಕಾಲವದು. `ಆಕಾಶ್’ ಚಿತ್ರ ಹುಟ್ಟೋಕೆ ಕಾರಣನೇ ಪುನೀತ್. ಆಗ ಅಪ್ಪು ಚಿತ್ರದಲ್ಲಿ ಅಸೋಸಿಯೇಟ್ ಆಗಿ ಮಹೇಶ್ ಬಾಬು ಕೆಲಸ ಮಾಡುತ್ತಿದ್ದರು. ಅವರನ್ನು ಕರೆದು ಒಂದು ಕಥೆಯ ಲೈನ್ ಹೇಳಿ, ಜನಾರ್ಧನ್ ಮಹರ್ಷಿ ಅವರು ಹೇಳಿದ ಕಥೆ ಇದು ತುಂಬಾ ಇಷ್ಟವಾಗಿದೆ ಅಂದಿದ್ದರು. ಈ ಬಗ್ಗೆ ನೀವು ಯೋಚಿಸಿ ಜತೆಗೆ ಈ ಚಿತ್ರವನ್ನು ನೀವೇ ಡೈರೆಕ್ಟ್ ಮಾಡಿ ಅಂತಾ ಪುನೀತ್ ಸರ್ಪೋಟ್ ಮಾಡಿದ್ರರಂತೆ.

    ನಂತರದ ದಿನದಲ್ಲಿ ಮಹೇಶ್ ಬಾಬು ಅವರು ರಾಜ್‌ಕುಮಾರ್, ವರದಣ್ಣ ಮತ್ತು ರಾಘಣ್ಣ ಅವರಿಗೆ ಕಥೆ ನರೇಟ್ ಮಾಡಿದಾಗ ಅಣ್ಣಾವ್ರು ಕಥೆ ಎಳೆ ಇಷ್ಟಪಟ್ಟು ಒಳ್ಳೆಯ ಡೈಲಾಗ್ ಬರೆಸಿ ಅಂತಾ ಹೇಳಿದ್ದರಂತೆ. ಈ ಚಿತ್ರವು ಕಲ್ಮಶ ಇಲ್ಲದ ಮಧ್ಯಮ ಹುಡುಗನ ಕಥೆಯಾಗಿದರಿಂದ `ಆಕಾಶ್’ ಎಂಬ ಟೈಟಲ್ ಸೂಟ್ ಆಗತ್ತೆ ಅಂತಾ ನಟ ಶಿವರಾಜ್‌ಕುಮಾರ್ ಸಲಹೆ ನೀಡುತ್ತಾರೆ. ಅಲ್ಲಿಗೆ ಆಕಾಶ್ ಅಂತಲೇ ಟೈಟಲ್ ಫಿಕ್ಸ್ ಮಾಡಲಾಗುತ್ತದೆ.

    `ಆಕಾಶ್’ ಸಿನಿಮಾ ಕಲ್ಮಶಗಳೇ ಇಲ್ಲದ ಎಲ್ಲರಿಗೂ ಒಳಿತನ್ನೇ ಬಯಸುವ ಮಧ್ಯಮ ವರ್ಗದ ಆಕಾಶನ ಕಥೆಯಾಗಿತ್ತು. ಜತೆಗೆ ಚೆಂದದ ಲವ್ ಸ್ಟೋರಿಯನ್ನೂ ಕೂಡ ಹೆಣೆಯಲಾಗಿತ್ತು. ಕಥೆ, ಹೀರೋ ಎಲ್ಲಾ ಸಿದ್ಧವಾದ ಮೇಲೆ ನಾಯಕಿಯ ಹುಡುಕಾಟದಲ್ಲಿತ್ತು ಚಿತ್ರತಂಡ. ಆಕಾಶ್‌ಗೆ ನಾಯಕಿಯಾಗಿ ರಮ್ಯಾ ಅವರನ್ನು ಫೈನಲ್ ಮಾಡುವ ಮೊದಲೇ ರಕ್ಷಿತಾನೇ ನಾಯಕಿ ಅಂತಾ ಹೇಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ರಮ್ಯಾ ಕ್ಯಾರೆಕ್ಟರ್ ಗ್ಲಾಮರಸ್ ರೋಲ್ ಆಗಿರೋ ಕಾರಣ ರಕ್ಷಿತಾ ಈ ಪಾತ್ರಕ್ಕೆ ಸೂಟ್ ಆಗಲ್ಲ ಅನಿಸಿ ರಮ್ಯಾನೇ ಸರಿ ಎಂದು ಕ್ಯಾಸ್ಟಿಂಗ್ ಮಾಡಲಾಯಿತು. ಇದನ್ನೂ ಓದಿ: ಅಂದು ವಿಷ್ಣು ಹೆಸರಿನಲ್ಲಿ ‘ಉಪ್ಪಿನಕಾಯಿ’ ಇಂದು ‘ಮೆಡಿಕಲ್ ಸ್ಟೋರ್’

    ಇನ್ನು `ಆಕಾಶ್’ ಚಿತ್ರವನ್ನು ನಾಲ್ಕೇ ತಿಂಗಳಲ್ಲಿ ಶೂಟ್ ಮಾಡಲಾಗಿತ್ತು. ನವೆಂಬರ್‌ನಲ್ಲಿ ಚಿತ್ರದ ಮುಹೂರ್ತ ನೆರವೇರಿದರೆ, 2004ರಲ್ಲಿ ಡಿಸೆಂಬರ್ 6ರಿಂದ ಭರದಿಂದ ಶೂಟಿಂಗ್ ಆರಂಭವಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಪುನೀತ್, ರಮ್ಯಾ ಜತೆ ಅವಿನಾಶ್, ಆಶೀಷ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಟೆನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ಸಾಥ್ ನೀಡಿದ್ದರು. ಕರ್ನಾಟಕದ ಹಲವೆಡೆ ಸೇರಿದಂತೆ ಕಾಶ್ಮೀರ ಮತ್ತು ಫಾರಿನ್‌ನಲ್ಲಿ ಸಾಂಗ್‌ಗಳ ಶೂಟಿಂಗ್ ಮಾಡಲಾಯಿತು. ಏಪ್ರಿಲ್ 29, 2005ಕ್ಕೆ ಚಿತ್ರ ರಿಲೀಸ್ ಆಗಿ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತು. ಬರೋಬ್ಬರಿ 200 ದಿನ ಓಡಿತ್ತು. ಆಕಾಶ್ ಕಥೆಗೆ ಪುನೀತ್ ಮತ್ತು ರಮ್ಯಾ ಜೋಡಿಯ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ರು. ಈ ಸಿನಿಮಾ ಮಿಡಲ್ ಕ್ಲಾಸ್ ಜನರಿಗೆ ತುಂಬಾ ಇಷ್ಟ ಆಗಿತ್ತು. ಇದೇ ಈ ಚಿತ್ರದ ಸ್ಪೆಷಾಲಿಟಿ, ಸಿನಿಮಾರಂಗದಲ್ಲಿ ಗಟ್ಟಿ ಕಥೆಯಾಗಿ ನಿಂತು ಹಿಸ್ಟರಿ ಕ್ರಿಯೇಟ್ ಮಾಡಿತ್ತು.