Tag: ಮೋರಿ

  • Assam| ನಿರ್ಮಾಣ ಹಂತದ ಮೋರಿಗೆ ಬಿದ್ದ ಕಾರು – ನಾಲ್ವರು ಸಾವು, ಇಬ್ಬರು ಗಂಭೀರ

    Assam| ನಿರ್ಮಾಣ ಹಂತದ ಮೋರಿಗೆ ಬಿದ್ದ ಕಾರು – ನಾಲ್ವರು ಸಾವು, ಇಬ್ಬರು ಗಂಭೀರ

    ಗುವಾಹಟಿ: ನಿರ್ಮಾಣ ಹಂತದಲ್ಲಿದ್ದ ಮೋರಿಗೆ (Culvert) ಕಾರೊಂದು ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಅಸ್ಸಾಂನ (Assam) ತಿನ್ಸುಕಿಯಾದಲ್ಲಿ ನಡೆದಿದೆ.

    ಒಂದೇ ಕುಟುಂಬದ ಆರು ಮಂದಿ ಬಿಹಾರದಿಂದ ಮದುವೆಗೆಂದು ತಿನ್ಸುಕಿಯಾಗೆ (Tinsukia) ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಂಗಳವಾರ ಮುಂಜಾನೆ 4 ಗಂಟೆಯ ವೇಳೆಗೆ ಘಟನೆ ಸಂಭವಿಸಿದೆ. ತಿನ್ಸುಕಿಯಾ-ದಿಬ್ರುಗಢ್ ಮಾರ್ಗದ ದಿಹಿಂಗಿಯಾ ಗಾಂವ್‌ನ ಬೈಪಾಸ್‌ನಲ್ಲಿ ಅಪಘಾತ ಸಂಭವಿಸಿದೆ. ದಿಬ್ರುಗಢದಿಂದ ತಿನ್ಸುಕಿಯಾಗೆ ಪ್ರಯಾಣಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ನಿರ್ಮಾಣ ಹಂತದಲ್ಲಿರುವ ಮೋರಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಬಿ ಎಟಿಎಂ ಮಷಿನ್‌ನಲ್ಲಿ ಹಣ ಹಾಕಲು ಬಂದು 39,500 ರೂ. ಕಳೆದುಕೊಂಡ ವ್ಯಕ್ತಿ

    ಕಾರಿನಲ್ಲಿ ಐದು ವರ್ಷದ ಮಗು ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಮೋಹನ್ ಶಾ, ರಾಜೇಶ್ ಗುಪ್ತಾ, ಮೊಂಟು ಶಾ ಮತ್ತು ಮಗು ಅರ್ಥವ್ ಗುಪ್ತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಪಿಹೆಚ್‌ಡಿ: ಮೋದಿ ವಾಗ್ದಾಳಿ

    ದಟ್ಟವಾದ ಮಂಜು ಮತ್ತು ಸರಿಯಾದ ಸೂಚನಾ ಫಲಕಗಳಿಲ್ಲದ ಕಾರಣ ಈ ಘಟನೆ ಸಂಭವಿಸಿರಬಹುದು. ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲು ನೆರವಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Kalaburagi| ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

  • ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಕಾಲುವೆಯಲ್ಲಿ 5 ವರ್ಷದ ಮಗುವೊಂದು ಕೊಚ್ಚಿಹೋಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಗೋರಿಪಾಳ್ಯದ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ಈ ಘಟನೆ ನಡೆದಿದೆ. ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರನಾಗಿರೊ ಮೊಹಮ್ಮದ್ ಝೈನ್ (5) ಕೊಚ್ಚಿ ಹೋಗಿದ್ದಾನೆ ಎಂದು ಹೇಳಲಾಗಿದೆ.

    ಮಗುವಿನ ತಂದೆ ನಾಲ್ಕು ತಿಂಗಳ ಹಿಂದೆ ತೀರಿಹೋಗಿದ್ದು, ಕಳೆದ ಶುಕ್ರವಾರ ಏರಿಯಾದ ಹುಡುಗರ ಜೊತೆ ಕಸ ಹಾಕಲು ಬಂದಿದ್ದ ಮಗು ಆಯತಪ್ಪಿ ಮೋರಿಯೊಳಗೆ ಬಿದ್ದಿರುವುದಾಗಿ ಮಗು ತಾಯಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಜೆಜೆ ನಗರ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಮತ ಚಲಾಯಿಸಿ ಬರುವಾಗ ಮೋರಿಗೆ ಬಿದ್ದ ಮಹಿಳೆ!

    ಮತ ಚಲಾಯಿಸಿ ಬರುವಾಗ ಮೋರಿಗೆ ಬಿದ್ದ ಮಹಿಳೆ!

    ಬೆಂಗಳೂರು: ಇಂದು ರಾಜ್ಯಾದ್ಯಂತ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಹೀಗೆ ಮತದಾನ ಮಾಡು ಹಿಂದಿರುಗುತ್ತಿದ್ದಾಗ ಮಹಿಳೆಯೊಬ್ಬರು ಮೋರಿಗೆ ಬಿದ್ದು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

    ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚಂದ್ರಾಲೇಔಟ್ ಸೆಂಟ್ ಫ್ಲವರ್ ಇಂಗ್ಲೀಷ್ ಸ್ಕೂಲ್ ನಲ್ಲಿ ಈ ಅವಘಡ ನಡೆದಿದೆ. ಮಹಿಳೆ ತಮ್ಮ ಹಕ್ಕು ಚಲಾಯಿಸಿ ಮತಗಟ್ಟೆ ಬಳಿ ಇರುವ ಮೋರಿ ಸಿಮೆಂಟ್ ಚಪ್ಪಡಿ ಮೇಲೆ ನಿಂತಿದ್ದರು. ಈ ವೇಳೆ ಚರಂಡಿ ಮೇಲಿನ ಹೊದಿಕೆ ಏಕಾಏಕಿ ಕುಸಿದಿದೆ. ಪರಿಣಾಮ ನಿಂತಿದ್ದ ಮಹಿಳೆ ಮೋರಿಗೆ ಬಿದ್ದಿದ್ದಾರೆ.

    ಮಹಿಳೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ಮೋರಿಯಿಂದ ಮೇಲೆತ್ತಿ ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

  • ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋಗಿದ್ದ ವ್ಯಕ್ತಿ ಮೋರಿಯಲ್ಲಿ ಶವವಾಗಿ ಪತ್ತೆ!

    ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋಗಿದ್ದ ವ್ಯಕ್ತಿ ಮೋರಿಯಲ್ಲಿ ಶವವಾಗಿ ಪತ್ತೆ!

    ಬೆಂಗಳೂರು: ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋದ ವ್ಯಕ್ತಿ ಗ್ರಾಮದ ಹೊರವಲಯದ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೆದ್ದಲಹಳ್ಳಿ ಗ್ರಾಮದ ರವಿಕುಮಾರ್ ಮೃತ ದರ್ದೈವಿ.

    ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ್, ಬುಧವಾರ ತೊರೆ ಕೆಂಪೋಹಳ್ಳಿಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ತನ್ನ ಗೆಳೆಯರೊಂದಿಗೆ ಬಂದಿದ್ದರು ಎನ್ನಲಾಗಿದೆ. ಬಳಿಕ ರವಿಕುಮಾರ್ ಮೃತ ದೇಹ ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ.

    ಈ ದೃಶ್ಯವನ್ನು ಕಂಡು ಮೃತನ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು. ಊರಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋಗುತ್ತೇನೆ ಅಂತ ಹೇಳಿ ಹೋಗಿದ್ದರು. ಆದರೆ ವೈಯಕ್ತಿಕವಾಗಿ ಯಾವುದೇ ವೈಷ್ಯಮ್ಯ ಯಾರ ಮೇಲೂ ಇರಲಿಲ್ಲ. ಈ ಘಟನೆಗೆ ಕಾರಣವೇನೆಂದು ತಿಳಿಯುತ್ತಿಲ್ಲ. ಮನೆಯ ಯಜಮಾನನ್ನೇ ಕಳೆದುಕೊಂಡ ಮೇಲೆ ನಮ್ಮ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ ಎಂದು ಮೃತ ರವಿಕುಮಾರ್ ಪತ್ನಿ ಜಯಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    – 40 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

    ಬೆಂಗಳೂರು: ಕಳ್ಳರ ಗುಂಪೊಂದು ಮೋರಿಯ ಒಳಗಿನಿಂದ ಚಿನ್ನದ ಅಂಗಡಿಗೆ ಕನ್ನ ಹಾಕಿ ಚಿನ್ನಾಭರಣವನ್ನು ಕದ್ದಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂನಲ್ಲಿ ನಡೆದಿದೆ.

    ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲ್ಲರಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, ಗುರುವಾರ ಬೆಳಗ್ಗೆ ಮಾಲೀಕ ಮೋಹನ್ ಲಾಲ್ ಅವರು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.

    ಮೋರಿಯಿಂದ 6 ಅಡಿ ಉದ್ದದ ಸುರಂಗವನ್ನು ಕೊರೆದು ಮಧ್ಯಭಾಗವನ್ನು ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಮೇಲೆ ಮಾಲೀಕ ಕೆಆರ್‍ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಳ್ಳಿ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

    ಬೆಳ್ಳಿ ಪತ್ತೆ: ಪೊಲೀಸರು ಸ್ಥಳಕ್ಕೆ ಆಗಮಿಸಿ ಸುರಂಗದ ಒಳಗಡೆ ನುಗ್ಗಿ ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 40 ಕೆಜಿಯಷ್ಟು ಬೆಳ್ಳಿಯನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಅಂದಾಜು ಒಟ್ಟು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

    ಮೋರಿ ಮೇಲೆ ಕಲ್ಲಿನ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ಇದ್ದ ಕಾರಣ ಸುರಂಗ ಕೊರೆದಿದ್ದ ವಿಚಾರ ಪತ್ತೆಯಾಗಿರಲಿಲ್ಲ. ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

    ಪೊಲೀಸರು ಈಗ ಜ್ಯುವೆಲ್ಲರಿ ಒಳಗಡೆ ಇದ್ದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಷ್ಟು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಎರಡು ಅಥವಾ ಮೂರು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.