ಸ್ಯಾಂಡಲ್‌ವುಡ್ (Sandalwood) ಸಲಗ ದುನಿಯಾ ವಿಜಯ್ (Duniya Vijay) ಅವರು ‘ಭೀಮ’ನಾಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ವಿಜಯ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ಮಗಳು ಮೋನಿಕಾ(Monica Vijay) ನಟಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ದೊಡ್ಡ ಮಗಳು ಮೋನಿಕಾ ಸಿನಿಮಾರಂಗಕ್ಕೆ ಬರೋದಾಗಿ ದುನಿಯಾ ವಿಜಯ್ ಅನೌನ್ಸ್ ಮಾಡಿದ್ದರು. ಅದರಂತೆ ಇದೀಗ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ದರ್ಶನ್ ನಟನೆಯ ‘ಕಾಟೇರ’ (Katera) ಚಿತ್ರದ ರೈಟರ್ ಜಡೇಶ್ ಕುಮಾರ್ (Jadesh Kumar) ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್-ಮೋನಿಕಾ ಜೊತೆಯಾಗಿ ನಟಿಸುತ್ತಿದ್ದಾರೆ.
ಸಂಬಂಧಗಳ ಕುರಿತು ಬಾಂಧವ್ಯ ಸಾರುವ ಸಿನಿಮಾದಲ್ಲಿ ದುನಿಯಾ ವಿಜಯ್- ಮಗಳು ಮೋನಿಕಾ ಒಟ್ಟಾಗಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇಬ್ಬರ ಪಾತ್ರ ಕೂಡ ಡಿಫರೆಂಟ್ ಆಗಿದೆ. ತೆರೆಯ ಮೇಲೂ ಕೂಡ ತಂದೆ-ಮಗಳಾಗಿಯೇ ನಟಿಸುತ್ತಿದ್ದಾರಾ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ವರ್ಕ್ ಆಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್
ಮೋನಿಕಾ (Monica Vijay) ಅವರು ನಟನೆಗೆ ಬರೋದ್ದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಡ್ಯಾನ್ಸ್, ಫಿಟ್‌ನೆಸ್ ಹೀಗೆ ಸಾಕಷ್ಟು ವಿಚಾರಗಳಿಗೆ ಒತ್ತು ಕೊಟ್ಟು ಅಪ್ಪನ ಹಾದಿಯಲ್ಲಿ ಮಗಳು ಹೆಜ್ಜೆ ಇಡ್ತಿದ್ದಾರೆ. ಮೋನಿಕಾ ವಿಜಯ್ ಕೂಡ ನಟಿಯಾಗಿ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.
ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ
ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.
ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
ಸಕಲ ತಯಾರಿ ಮಾಡಿಕೊಂಡೇ ನಟನೆಗಿಳಿಯುತ್ತಿರುವ ಮೋನಿಕಾ ಕೂಡ ತಂದೆ ದುನಿಯಾ ವಿಜಯ್ ಅವರಂತೆಯೇ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್ ಮತ್ತು ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆಯನ್ನು ರಹಸ್ಯ ಸ್ಥಳದಲ್ಲಿ ಪೊಲೀಸರು ವಿಡಿಯೋ ಮಾಡಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಹಾಗೂ ಪಿಎಸ್‍ಐ ರೇಣುಕಾ ಸಮ್ಮುಖದಲ್ಲಿ ಸಾಕ್ಷಿಗಳ ಈ ಹೇಳಿಕೆ ದಾಖಲು ಮಾಡಿದ್ದಾರೆ. ಇಬ್ಬರು ಪೊಲೀಸರ ಮುಂದೆ ಹೇಳಿದ್ದು ಏನು ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 6 ಮಂದಿ ಮೇಲೆ ನಿಂತಿದೆ ನಟ ಅರ್ಜುನ್ ಹಣೆಬರಹ!
ಕಿರಣ್ ಹೇಳಿದ್ದು ಏನು?
ಶೃತಿ ಹರಿಹರನ್ ಗೆ ಅರ್ಜುನ್ ಸರ್ಜಾ ಅವರಿಂದ ಕಿರುಕುಳ ಆಗಿದ್ದು ನಿಜ. ರಿಹರ್ಸಲ್ ವೇಳೆಯೂ ಶೃತಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ನಾವು ದೇವನಹಳ್ಳಿಯಿಂದ ಹೊರಟಾಗ ಸಿಗ್ನಲ್ ಬಳಿ ಅರ್ಜುನ್ ಸರ್ಜಾ ಮತ್ತೊಂದು ಕಾರಿನಲ್ಲಿ ಎದುರಾದರು. ಆಗ ನಾನು ಶೃತಿ ಹರಿಹರನ್ ಪಕ್ಕದಲ್ಲಿಯೇ ಕುಳಿತ್ತಿದ್ದೆ. ಶೃತಿ ಹರಿಹರನ್ ಅವರನ್ನು ಅರ್ಜುನ್ ಸರ್ಜಾರ ಊಟಕ್ಕೆ ಕರೆದರು. ಅಷ್ಟೇ ಅಲ್ಲದೇ ರೆಸಾರ್ಟ್ ಗೆ ಹೋಗೋಣ ಬಾ ಎಂದಿದ್ದರು. ಈ ಸಂದರ್ಭದಲ್ಲಿ ಸರ್ಜಾ ಜೊತೆ ಊಟಕ್ಕೆ ಹೋಗಲು ಶೃತಿ ಹರಿಹರನ್ ನಿರಾಕರಿಸಿ ಕಣ್ಣಿರು ಹಾಕಿದರು. ಇದಕ್ಕೆ ನಾನೇ ಸಾಕ್ಷಿ, ನಾನು ಆಗ ಅವರ ಪಕ್ಕದಲ್ಲೇ ಕುಳಿತಿದ್ದೆ. ನಂತರ ಅರ್ಜುನ್ ಸರ್ಜಾ ಹೊರಟರು.
ಮೋನಿಕಾ ಹೇಳಿದ್ದು ಏನು?
ನನಗೇನು ಗೊತ್ತಿಲ್ಲ, ನನಗೆ ಏನೂ ನೆನಪಾಗುತ್ತಿಲ್ಲ. ವಿಸ್ಮಯ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಏನಾಯ್ತು ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ. ಲೈಂಗಿಕ ಕಿರುಕುಳ ಬಗ್ಗೆ ನನಗೇನೂ ಗೊತ್ತಿಲ್ಲ, ಶೃತಿಯೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆ ನೀಡಿದ್ದಾರೆ.
ಶೃತಿ ಹರಿಹರನ್ ಅವರ ಆಪ್ತ ಸಹಾಯಕ ಬೋರೇಗೌಡ ಮತ್ತು ವಿಸ್ಮಯ ಚಿತ್ರದ ಮತ್ತೊಬ್ಬ ಸಹ ನಿರ್ದೇಶಕ ಭರತ್ ನೀಲಕಂಠ ಅವರು ಬುಧವಾರ ಪೊಲೀಸರ ಮುಂದೆ ಹೇಳಿಕೆ ನೀಡುವ ಸಾಧ್ಯತೆಗಳಿವೆ.
ಶುಕ್ರವಾರಕ್ಕೆ ಮುಂದೂಡಿಕೆ:
ಅರ್ಜುನ್ ಸರ್ಜಾ ಹೂಡಿದ್ದ ಮಾನನಷ್ಟ ಕೇಸ್ ವಿಚಾರಣೆಯನ್ನು ನವೆಂಬರ್ 2ಕ್ಕೆ ಮೇಯೋ ಹಾಲ್ ಕೋರ್ಟ್ ಮುಂದೂಡಿದೆ. ನಿನ್ನೆಯಷ್ಟೇ ಶೃತಿಹರನ್ ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಲು ಸಮಯ ಬೇಕು ಎಂದು ಸರ್ಜಾ ಪರ ವಕೀಲರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಧೀಶರು ವಿಚಾರಣೆಯನ್ನ ಶುಕ್ರವಾರಕ್ಕೆ ಮುಂದೂಡಿದ್ದಾರೆ.
ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.
ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.
ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.
ಬೆಂಗಳೂರು: ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಕೀರ್ತಿಗೌಡ ಅವರು ನೀಡಿದ ದೂರಿನ ಆಧಾರದ ಮೇರೆಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಒಮ್ಮೆ ಎಫ್‍ಐಆರ್ ದಾಖಲಾದ ನಂತರ ಹೆಚ್ಚುವರಿ ಸೆಕ್ಷನ್ ಸೇರಿಸಲು ಕೋರ್ಟ್ ಒಪ್ಪಿಗೆಯನ್ನು ಪಡೆಯಬೇಕು. ಈಗಾಗಲೇ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದು, ಈ ಬಗ್ಗೆ ಕೋರ್ಟ್ ಗೆ ಪೊಲೀಸರು ಮನವಿ ಮಾಡಲಿದ್ದಾರೆ. ಈ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 236 ಸೇರ್ಪಡೆ ಮಾಡಲು ಪೊಲೀಸರು ತೀರ್ಮಾನ ಮಾಡಿದ್ದಾರೆ.
ಎಫ್‍ಐಆರ್ ದಾಖಲಾದ ಹಿನ್ನೆಲೆಯಲ್ಲಿ ನಾಗರತ್ನ ಮತ್ತು ಮೋನಿಕಾಗೆ ಜೈಲಿಗೆ ಹೋಗಲೇಬೇಕಾದ ಸನ್ನಿವೇಶ್ ಸೃಷ್ಟಿಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಮೋನಿಕಾ ಮತ್ತು ನಾಗರತ್ನ ಬಂಧನದ ಸಾಧ್ಯತೆ ಇದೆ. ಇದು ನಾನ್ ಬೇಲಬೆಲ್ ಕೇಸ್ ಆಗಿದ್ದು, ಬಂಧನದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
ನಾಗರತ್ನರ ಬಂಧನ ಖಚಿತ. ಬಾಗಿಲು ಹಾಕಿಕೊಂಡು ನಾಗರತ್ನ ಮನೆಯಲ್ಲಿ ಕುಳಿತಿದ್ದಾರೆ. ಪೊಲೀಸರು ಮನೆಯ ಮುಂಭಾಗದಲ್ಲಿಯೇ ಕಾಯುತ್ತಿದ್ದರು. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಅವರನ್ನು ಬಂಧಿಸಲಾಗುವುದು ಎಂದು ಡಿಸಿಪಿ ಅಣ್ಣಾಮಲೈ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ನಟ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಮಗಳು ಮೋನಿಕಾಳೆ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ.
ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ನನ್ನ ಮಗನನ್ನು ನೋಡಲು ಹೋಗಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಕೀರ್ತಿಗೌಡ ವಿರುದ್ಧವೇ ನಾಗರತ್ನ ದೂರು ನೀಡಿದ್ದರು.
ದುನಿಯಾ ವಿಜಿ ಜೈಲಿನಲ್ಲಿದ್ದಾಗ ಅವರನ್ನು ಹೇಗೆ ಜೈಲಿನಿಂದ ಬಿಡಿಸಬೇಕೆಂದು ವಿಜಿ ಅವರ ತಂದೆ- ತಾಯಿ ಹಾಗೂ ಕೀರ್ತಿ ಮನೆಯಲ್ಲೇ ಕುಳಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ನಾಗರತ್ನ ಏಕಾಏಕಿ ಮನೆಗೆ ನುಗ್ಗಿ ಸೋಫಾ ಮೇಲೆ ಕುಳಿತಿದ್ದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದರು.
ನಾಗರತ್ನ ಅವರು ಕೀರ್ತಿ ಮೇಲೆ ಹಲ್ಲೆ ನಡೆಸಿದ ನಂತರ ಅವರು ಸ್ವತಃ ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಆದರೆ ಈಗ ನಾಗರತ್ನ, ಕೀರ್ತಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.
ನಾಗರತ್ನ ಅವರ ಮಗಳು ಮೋನಿಕಾ, ಕೀರ್ತಿ ಮನೆಯಲ್ಲಿದ್ದಾಗ ತನ್ನ ತಾಯಿಗೆ ಪ್ರತಿಯೊಂದು ವಿಷಯವನ್ನು ಹೇಳುತ್ತಿದ್ದರು. ಇದೊಂದು ಪೂರ್ವಯೋಜನೆ ಕೃತ್ಯವಾಗಿದ್ದು, ಮೋನಿಕಾ ತನ್ನ ತಾಯಿಗೆ ಕರೆ ಮಾಡಿ ಪ್ರತಿಯೊಂದು ವಿಷಯ ತಿಳಿಸಿದ್ದರು. ಹೀಗಾಗಿ ನಾಗರತ್ನ ನೇರವಾಗಿ ಮನಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿ ಮಂಜು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
ಈ ಮೂಲಕ ದುನಿಯಾ ವಿಜಿ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ನಾಗರತ್ನ ಮನೆಗೆ ಬೆಳ್ಳಂ ಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ವಿಜಿ ಮಗಳು ಮೋನಿಕಾ ಮಾಸ್ಟರ್ ಮೈಂಡ್ ಆಗಿದ್ದರು. ನಾಗರತ್ನ ಮನೆ ಮೇಲೆ ಪೊಲೀಸ್ ದಾಳಿಗೂ ಮೊದಲೇ ನಾಗರತ್ನ ಹಾಗೂ ಮೋನಿಕಾ ಎಸ್ಕೇಪ್ ಆಗಿದ್ದಾರೆ.
ಸದ್ಯ ಗಿರಿನಗರ ಪೊಲೀಸರು ನಾಗರತ್ನ ಹಾಗೂ ಅವರ ಮಗಳು ಮೋನಿಕಾ ಅವರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.
ಬೆಂಗಳೂರು: ಫೇಕ್ ಕಂಪ್ಲೇಂಟ್ ಕೊಡುವುದ್ದಕ್ಕೆ ನನಗೆ ತಲೆ ಸರಿಯಿಲ್ಲವಾ? ಏನಾದರೂ ನಡೆದಿದ್ದರೆ ತಾನೇ ದೂರು ನೀಡುವುದು ಎಂದು ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೋನಿಕಾ ಅವರು, ಜಗಳ ಆಗಿ ನನ್ನ ಮೇಲೆ ಹಲ್ಲೆ ಆಗಿರುವುದ್ದಕ್ಕೆ ನಾನು ದೂರು ನೀಡಿದ್ದೇನೆ. ಆದರೆ ಆಸ್ಪತ್ರೆಯಲ್ಲಿದ್ದಾಗ ನನ್ನ ತಂದೆ ನನಗೆ ಕರೆ ಮಾಡಿ ಸಂಪರ್ಕ ಮಾಡಿಲ್ಲ. ನನ್ನ ವಸ್ತುಗಳನ್ನು ತೆಗೆದುಕೊಂಡು ಬರಲು ಅಪ್ಪನ ಮನೆಗೆ ತೆರಳಿದ್ದೆ. ಈ ವೇಳೆ ಮನೆಗೆ ಹೋಗುತ್ತಿದಂತೆ ಲಾಕ್ ಮಾಡಿ ಕೀರ್ತಿ ಪರ ಪೊಲೀಸರಿಗೆ ಹೇಳಿಕೆ ನೀಡುವಂತೆ ಒತ್ತಡ ಹಾಕಿದರು. ಇದಕ್ಕೆ ನಿರಾಕರಿಸಿದಕ್ಕೆ ನನ್ನ ಮೇಲೆ 4 ರಿಂದ 5 ಜನ ಸೇರಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಸದ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆ ಹಿಡಿದಿರುವ ದೃಶ್ಯಗಳು ಮಾತ್ರ. ಮನೆಯ ಸಿಸಿಟಿವಿ ದೃಶ್ಯಗಳಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ದಾಖಲಾಗಿದೆ. ಇದನ್ನು ಪರಿಶೀಲನೆ ನಡೆಸಬೇಕು. ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದರಿಂದ ಮುಂದಿನ ಕ್ರಮ ಅವರೇ ಕೈಗೊಳ್ಳುತ್ತಾರೆ ಎಂದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು
ನನ್ನ ಮೇಲೆ ನಡೆಸಿದ ಬಳಿಕ ನನ್ನನ್ನು ಗೇಟ್‍ನಿಂದ ಹೊರ ಹಾಕಿದ್ದರು. ನನಗೆ ಕೋಪ ಬಂದ ಕಾರಣ ನಾನು ಮನೆ ಹೊರಭಾಗದಿಂದ ಕಲ್ಲನ್ನು ತೆಗೆದುಕೊಂಡು ಬಾಗಿಲಿಗೆ ಹೊಡೆದೆ. ಈ ವೇಳೆ ಅವರು ನನಗೆ ಏನೆಂದು ಬೈದರೋ, ನಾನು ಅದನ್ನೇ ಬೈದೆ ಅಷ್ಟೇ. ನಡೆದ ಘಟನೆ ಎಲ್ಲವೂ ಪೂರ್ವ ನಿಗದಿಯಂತೆ ಮಾಡಿದ್ದಾರೆ. ನಾನು ನನ್ನ ಬಟ್ಟೆ ಹಾಗೂ ಕಾರಿನ ದಾಖಲಾತಿ ಸೇರಿದಂತೆ ಕೆಲ ವಸ್ತುಗಳನ್ನು ತರಲು ಒಬ್ಬಳೇ ಹೋಗಿದ್ದೆ. ಒಂದೊಮ್ಮೆ ಜಗಳ ಮಾಡುವ ಉದ್ದೇಶ ಹೊಂದಿದ್ದರೆ. ನಾನು 5 ಜನರನ್ನು ಕರೆದುಕೊಂಡು ಹೋಗುತ್ತಿದೆ ವಿನಃ, ಒಬ್ಬಳೇ ಹೋಗುತ್ತಿರಲಿಲ್ಲ ಎಂದರು.
ನಿರಂತರ ಜಗಳ:
ಕೀರ್ತಿ ಗೌಡ ಮನೆಗೆ ಬಂದ ಬಳಿಕ ಮನೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಾನು, ನನ್ನ ತಂಗಿ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಇದ್ದ ವೇಳೆ ನನ್ನ ತಂಗಿಯ ಮೇಲೆಯೂ ಒತ್ತಡ ಹಾಕಿ ಅಮ್ಮನ ವಿರುದ್ಧ ದೂರು ನೀಡಲು ತಿಳಿಸಿದ್ದರು. ಆದರೆ ನಾವು ಒಪ್ಪಿಗೆ ನೀಡಿರಲಿಲ್ಲ. ಅಪ್ಪ ಜೈಲಿಂದ ಬಂದ ಮೇಲೆ ಹೇಗೆ ಇದ್ದಾರೆಂಬುದು ನನಗೆ ಗೊತ್ತಿಲ್ಲ. ಏಕೆಂದರೆ ಅವರು ಬಂದ ಕೂಡಲೇ 15 ದಿನ ಪ್ರವಾಸಕ್ಕೆ ಸಿದ್ಧರಾದರು. ಈ ವೇಳೆ ನಮ್ಮನ್ನು ಮನೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದ ಕಾರಣ ಅಮ್ಮನ ಮನೆಗೆ ಬಂದೆ. 15 ದಿನದ ಬಳಿಕ ನನ್ನ ವಸ್ತುಗಳನ್ನು ತರಲು ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ
ನನ್ನ ಮೇಲೆ ಹಲ್ಲೆ ನಡೆಸಿದ ವೇಳೆ ಕೈ ಗೆ ರಕ್ತ ಬರುವಂತೆ ಗಾಯವಾಗಿಲ್ಲ. ಆದರೆ ಮೂಳೆಗೆ ಗಾಯವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಮತ್ತೆ ನೋವು ಹೆಚ್ಚಾದರೆ ಬರುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ನಾನು ಮನೆಗೆ ತೆರಳುತ್ತಿದ್ದೇನೆ. ರಕ್ತ ಬರುವಂತೆ ಮಾಡಿದರೆ ಮಾತ್ರ ಅದು ಹಲ್ಲೆ ಎಂದು ಕರೆಯುವುದಾದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಇಲ್ಲಿ ನಾನು ಯಾರ ಮೇಲೂ ಹೋರಾಟ ಮಾಡುತ್ತಿಲ್ಲ. ಪೊಲೀಸರೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು, ನಾವು ಜೀವದ ಆಸೆ ಬಿಟ್ಟು ಬಿಟ್ಟಿದ್ದೇವೆ. ಅಪ್ಪನೇ ಈ ರೀತಿ ಮಾಡುತ್ತಾರೆ ಎಂದರೆ ಏನು ಹೇಳಲು ಸಾಧ್ಯ. ಅವರು ಸಿನಿಮಾ ಸೆಲೆಬ್ರೆಟಿ ಆಗಿರುವುದಿಂದ ಎಲ್ಲರೂ ಬೆಂಬಲ ನೀಡುತ್ತಾರೆ. ಸಾಯಿಸುವುದಾದರೆ ಸಾಯಿಸಲಿ. ಈ ಜೀವನವೇ ಸಾಕಾಗಿದೆ. ನನ್ನ ಮಕ್ಕಳು ನನಗೆ ಎಂದು ಭಾರ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ನನ್ನ ವಿರುದ್ಧ ಮಗಳು ಮೋನಿಕಾ ಸುಳ್ಳು ಆರೋಪದ ದೂರನ್ನು ನೀಡಿದ್ದಾಳೆ ಎಂದು ದುನಿಯಾ ವಿಜಿ ಸ್ಪಷ್ಟನೆ ನೀಡಿದ್ದಾರೆ.
ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಜಿ, ನನ್ನ ಮನೆಗೆ ಯಾರೂ ಬಂದಿಲ್ಲ. ಮೋನಿಕಾ ಮನೆಗೆ ಬಂದಿರುವುದು ನಾನು ರೆಕಾರ್ಡ್ ಮಾಡಿದ್ದೇನೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸದ್ಯ ಎಲ್ಲ ಮಾಹಿತಿಯನ್ನು ಗಿರಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದೇನೆ. ಮೋನಿಕಾ ಗಿರಿನಗರ ಠಾಣೆಗೆ ಬಂದಿದ್ದಾಗ ನಾನು ಆಕೆಗೆ ಕರೆ ಮಾಡಿ ಪೊಲೀಸರು ಬರುತ್ತಿದ್ದಾರೆ ಎಂದು ಹೇಳಿದೆ ಆಗ ಆಕೆ ಅಲ್ಲಿಂದ ಓಡಿ ಹೋಗಿ ಈ ರೀತಿಯ ದೂರು ನೀಡಿದ್ದಾಳೆ ಎಂದು ತಿಳಿಸಿದರು.
ನಮ್ಮ ಮನೆಗೆ ಬರಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಮಾತ್ರ ಇದ್ದಾರೆ. ನಾನು ಊರಿನಲ್ಲಿದ್ದೆ. ಹೀಗಿರುವಾಗ ಕಳೆದ ವಾರ ನಾಗರತ್ನ ಮನೆ ಮೇಲೆ ದಾಳಿ ಮಾಡಿಸಿದ್ದಳು. ಆಗ ನನ್ನ ತಂದೆ- ತಾಯಿ ಮಗ ಇಲ್ಲದ ಸಮಯದಲ್ಲಿ ನಮ್ಮ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿಗೆ ಪ್ರತಿ ದೂರು ನೀಡಲು ತಾಯಿ ಮತ್ತು ಮಗಳು ಈ ನಾಟಕವಾಡಿದ್ದಾರೆ ಎಂದು ವಿಜಿ ಹೇಳಿದರು.
ಮೋನಿಕಾ ಬಾಗಿಲು ಬಡಿದಾಗ ನಾವು ಬಾಗಿಲು ತೆಗೆಯಲಿಲ್ಲ. ಆಕೆ ಬಾಗಿಲು ಚಚ್ಚಿದ್ದಾಳೆ. ನಂತರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗ ಹೋಗಿ ದೂರು ನೀಡಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲಾಗುವಾಗ ವೈದ್ಯರು ನಿನಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇವರು ಡ್ರಾಮಾ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ ಎಲ್ಲ ಮಾಧ್ಯಮಗಳ ಮುಂದೆ ನಾನು ನಿಜವನ್ನು ಹೊರ ಹಾಕುತ್ತೇನೆ ಎಂದರು.
ಇವರಿಗೆ ಬೆಳಗ್ಗೆ ಎದ್ದರೆ ದೂರು, ಸಂಜೆ ಎಫ್‍ಐಆರ್ ಹಾಗೂ ಟಿವಿಯಲ್ಲಿ ಬರುವ ಆಸೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಲು ಈ ರೀತಿ ಮಾಡುತ್ತಿದ್ದಾರೆ. ನಾನು ತೊಂದರೆಯಲ್ಲಿದ್ದರೆ ಅವರಿಗೆ ಖುಷಿ. ಹಾಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ನನ್ನ ತಂದೆಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ನನ್ನ ತಾಯಿಗೆ ನಡೆದಾಡಲು ಆಗಲ್ಲ. ಹೀಗಿರುವಾಗ ನಾಗರತ್ನ ನನ್ನ ತಂದೆ- ತಾಯಿ ವಿರುದ್ಧ ದೂರು ನೀಡಿದ್ದಳು. ಮೋನಿಕಾ ಬಾಗಿಲು ಬಡಿಯುವಾಗ ನಾನು ಮನೆಯೊಳಗೆ ಇದ್ದೆ. ಈ ವೇಳೆ ಮನೆಯಲ್ಲಿದ್ದ ಮೂವರು ಯುವಕರನ್ನು ಕಿಟಕಿಯಿಂದ ಮೋನಿಕಾಳ ನೋಡುತ್ತಿದ್ದಳು. ಆ ಮೂವರನ್ನು ನೋಡಿ ಮೋನಿಕಾ ಅವರ ವಿರುದ್ಧ ಕೂಡ ದೂರು ದಾಖಲಿಸಿದ್ದಾಳೆ. ಮೋನಿಕಾ ಪ್ರೀಪ್ಲಾನ್ ಮಾಡಿಕೊಂಡು ಈ ರೀತಿ ಮಾಡಿದ್ದಾಳೆ. ನಾಗರತ್ನ ಬರಿ ಸುಳ್ಳು ಹೇಳುತ್ತಾರೆ, ಡ್ರಾಮಾ ಮಾಡುತ್ತಾರೆ ಅವರ ಮಾತನ್ನು ಯಾರೂ ನಂಬಬೇಡಿ. ಮೂರು ದಿನ ನನಗೆ ಸಮಯ ಕೊಡಿ ನಾನು ಎಲ್ಲ ಸತ್ಯವನ್ನು ಹೇಳುತ್ತೇನೆ ಎಂದು ವಿಜಯ್ ಹೇಳಿದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು
ನಾನು ಆಕೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರೆ, ಆಕೆಗೆ ಕನಿಷ್ಟಪಕ್ಷ 4-5 ಹೊಲಿಗೆ ಹಾಕಿರಬೇಕಿತ್ತು. ವೈದ್ಯರು ಆಕೆಗೆ ನಿನಗೆ ಏನೂ ಆಗಿಲ್ಲ. ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಬೈದು ಕಳುಹಿಸಿದ್ದಾರೆ ಎಂದು ದುನಿಯಾ ವಿಜಿ ಹಲ್ಲೆ ಪ್ರಕರಣಕ್ಕೆ ಸ್ಪಷ್ಟನೆ ನೀಡಿದರು.