Tag: ಮೋದಿ ವಿಜಯ ಸಂಕಲ್ಪ ಯಾತ್ರೆ

  • ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸ್ಮೃತಿ ಇರಾನಿ

    ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸ್ಮೃತಿ ಇರಾನಿ

    ಗದಗ: ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದ್ದ ಸ್ಥಿತಿಯೇ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೂ ಬಂದಿದೆ. ಇಲ್ಲಿ ಒಬ್ಬರು ರಿಮೋಟ್‍ನಿಂದ ಚಲಿಸಿದರೆ, ಇನ್ನೊಬ್ಬರು ಕುಂಕುಮ ಕಂಡರೆ ಭಯ ಪಡುತ್ತಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.

    ಇಂದು ಗದಗ ಜಿಲ್ಲೆಯಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಿಮೋಟ್ ಕಂಟ್ರೋಲ್‍ನಿಂದ ನಡೆಯೋ ಸಿಎಂ ಅವರ ರಿಮೋಟ್ ಯಾವಾಗ ಚಾಲನೆಯಾಗುತ್ತೋ, ಯಾವಾಗ ಬಂದ್ ಆಗುತ್ತೋ ಅಂತ ಗೊತ್ತಿಲ್ಲ. ಇನ್ನೊಂದೆಡೆ ಕುಂಕುಮಧಾರಿಗಳನ್ನು ನೋಡಿದರೆ ಭಯ ಪಡುವ ವ್ಯಕ್ತಿ. ಇವರಿಬ್ಬರು ಸೇರಿ ಕರ್ನಾಟಕವನ್ನು ದುರ್ದೆಸೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು.

    ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ಏಕೆ ತಲುಪಿಸಲು ಇಷ್ಟ ಇಲ್ಲ ಅಂತ ಇಬ್ಬರು ಉತ್ತರಿಸಲಿ. ರಿಮೋಟ್ ಸಿಎಂ ಹಾಗೂ ಕಾಂಗ್ರೆಸ್ ನಾಯಕರು ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡ್ತೀನಿ ಎಂದು ಭರವಸೆ ನೀಡಿದ್ರು. ಆದರೆ ಸಾಲ ಮನ್ನಾ ಆಗಿದೆಯಾ? ಎಲ್ಲಿವರೆಗೂ ಈ ಸುಳ್ಳು ಭರವಸೆ ನಡೆಯುತ್ತೆ? ಇವರಿಗೆ ರೈತರ ಚಿಂತೆಯಿಲ್ಲ, ಒಬ್ಬರಿಗೆ ಅವರ ಹಾಗೂ ಕುಟುಂಬದ ಚಿಂತೆಯಾದರೆ, ಇನ್ನೊಬ್ಬರಿಗೆ ಕುಂಕುಮ ಕಂಡರೆ ಭಯ ಎಂದು ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv