Tag: ಮೋದಿ ಪತ್ನಿ

  • ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರು: ಸದ್ಯ ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರ ಪತ್ನಿ ಜಶೋದಾ ಬೆನ್ ಇಂದು ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಜಶೋದಾ ಬೆನ್ ಅವರು, ಇಂದು ಬೆಳಗ್ಗೆ ರಾಜನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ದೇವರ ದರ್ಶನ ಪಡೆದುಕೊಂಡರು.

    ಬುಧವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರಳುತ್ತಿದ್ದ ಜಶೋದಾ ಬೆನ್ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದ್ದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.

    ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ ಅಶ್ವಥ ಮರದ ಕಟ್ಟೆ ಸಿಗದೇ ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು. ನಂತರ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದ ಜಶೋದಾ ಬೆನ್, ಸಂಜೆ ಆರು ಗಂಟೆ ವೇಳೆಗೆ ಶೃಂಗೇರಿ ಶಾರದಾಂಬೆ ಸನ್ನಿದಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತುಂಗಾ ನದಿ ಹಾಗೂ ಸುತ್ತಮುತ್ತಲಿನ ಪರಿಸರ ಕಂಡು ಪುಳಕಿತರಾಗಿದ್ದರು.

    ಬಳಿಕ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಶಾರದಾಂಬೆ ಸನ್ನಿಧಿಯಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಶ್ರೀಮಠಕ್ಕೆ ತೆರಳಿದ ಜಶೋದಾ ಬೆನ್, ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬೆಂಗಳೂರುಗೆ ವಾಪಸ್ ಆಗಿದ್ದರು.

  • ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಪತ್ನಿ

    ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಪತ್ನಿ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಇಂದು ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ, ಮಠದಲ್ಲಿ ನಡೆಯುತ್ತಿದ್ದ ಕೃಷ್ಣಾರ್ಪಣಂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಮೊದಲು ಇಲ್ಲಿನ ಗೋವರ್ಧನ ಗಿರಿ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಜಶೋದಾ ಬೆನ್ ಅವರು ಭೇಟಿ ನೀಡಿ ಪೂಜೆ ನೆರವೇರಿಸಿದರು. ಆ ಬಳಿಕ ರಾಘವೇಶ್ವರ ಭಾರತೀ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಮಠದ ಆವರಣದಲ್ಲಿ ನಡೆಸಲಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ಹಂಚಿಕೊಂಡರು.

    ವಿಷ್ಣು ಸಹಸ್ರನಾಮ ಪಠಣದ ವೇಳೆ ಪ್ರಾರ್ಥನಾ ಗೀತೆ ಹಾಡಿದ ಜಶೋದಾ ಅವರು ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು.

    ಚಿತ್ರದುರ್ಗದ ನೀಲಕಂಠೇಶ್ವರನಿಗೆ ಪೂಜೆ:
    ಮೋದಿ ಅವರ ಪತ್ನಿ ರಾಮಚಂದ್ರಾಪುರ ಮಠಕ್ಕೆ ಬರುವ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.

    ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಅಶ್ವತ್ಥಾ ಮರದ ಕಟ್ಟೆ ಸಿಗದೇ, ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು.

  • ದಾಖಲೆ ಸಮೇತ ಶಾಸಕ ಇಕ್ಬಾಲ್ ಅನ್ಸಾರಿಯ ಸುಳ್ಳಿನ ಮುಖವಾಡ ಬಯಲು ಮಾಡಿದ ಅರ್ಚಕ!

    ದಾಖಲೆ ಸಮೇತ ಶಾಸಕ ಇಕ್ಬಾಲ್ ಅನ್ಸಾರಿಯ ಸುಳ್ಳಿನ ಮುಖವಾಡ ಬಯಲು ಮಾಡಿದ ಅರ್ಚಕ!

    ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳೋದೆಲ್ಲಾ ಬರೀ ಸುಳ್ಳು. ಅಲ್ಲದೇ ಸಂಸ್ಕೃತ ದ್ವೇಷಿ ಕೂಡ. ಇತ್ತೀಚೆಗಷ್ಟೇ ಶ್ರೀರಾಮನ ಬಗ್ಗೆ ಮಾತನಾಡಿದ್ದ ಇವರಿಗೆ ಸಂಸ್ಕೃತ ಪಾಠ ಶಾಲೆಯ ಅವಶ್ಯಕತೆಯಿಲ್ಲ ಅಂತ ಅರ್ಚಕ ವಿದ್ಯಾದಾಸ್ ಬಾಬಾ ಹೇಳಿದ್ದಾರೆ.

    ಅಂಜನಾದ್ರಿ ಪರ್ವತದಲ್ಲಿ ಸಂಸ್ಕೃತ ಪಾಠ ಶಾಲೆ ನಡೆಯಲು ಶಾಸಕರು ಅಡ್ಡಿಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಪತ್ನಿ ಪೂಜೆ ಸಲ್ಲಿಸೋ ಅಂಜನಾದ್ರಿ ಪರ್ವತಕ್ಕೆ 2 ಕೋಟಿ ರೂ. ಅನುದಾನ ನೀಡಿದ್ದೇನೆ ಅಂತಾ ಬೊಗಳೆ ಬಿಟ್ಟು ತಗಲಾಕೊಂಡಿದ್ದಾರೆ ಅಂತ ಶಾಸಕರ ಸುಳ್ಳಿನ ಮುಖವಾಡವನ್ನ ಅರ್ಚಕ ವಿದ್ಯಾದಾಸ್ ಬಾಬಾ ದಾಖಲೆ ಸಮೇತ ಬಯಲು ಮಾಡಿದ್ದಾರೆ. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

    ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ ದೇಶಪಾಂಡೆ ಪರ್ವತದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಎಂಎಲ್‍ಸಿ 10 ಲಕ್ಷ, ಸಂಸದ ಸಂಗಣ್ಣ ಕರಡಿ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದ್ರೆ ಶಾಸಕ ಇಕ್ಬಾಲ್ ಅನ್ಸಾರಿ ನಯಾಪೈಸೆ ಅನುದಾನ ನೀಡದೇ ಸುಳ್ಳು ಹೇಳುತ್ತಾ ಹಿಂದೂ ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.

    ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನ್ಸಾರಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಕೊಲೆ ಸುಲಿಗೆ ನಡೆಯುತ್ತಿದೆ. ಶ್ರೀರಾಮನ ಹೆಸರಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಮೂಲಕ ನಮ್ಮ ಯುವಕರನ್ನು ಜೈಲಿಗೆ ಹೋಗಬೇಕೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ, ಕಾನೂನು ಇಲ್ಲ. ನಮಗೆ ಇರುವ ದೇಶಾಭಿಮಾನ ಅವರಿಗಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಶಸಕರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ -ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೇಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೋದು ತಪ್ಪು ಅಂತಾರೆ ಎಂದು ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದ್ದರು.