Tag: ಮೋದಿ ಗ್ಯಾರಂಟಿ

  • ದೇವೇಗೌಡರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ – ಮೋದಿ ಗುಣಗಾನ

    ದೇವೇಗೌಡರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ – ಮೋದಿ ಗುಣಗಾನ

    – ನನ್ನ ಪ್ರತಿ ಕಣಕಣದಲ್ಲೂ ದೇಶ, ದೇಶದ ಜನರೇ ಇದ್ದಾರೆ ಎಂದ ಪ್ರಧಾನಿ
    – 24 ಗಂಟೆಯೂ ನಿಮಗಾಗಿ ದುಡಿಯುತ್ತೇನೆಂದ ಮೋದಿ

    ಚಿಕ್ಕಬಳ್ಳಾಪುರ: ದೇಶದಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ. ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು ಅಂತಾ ಜನ ಭಾವಿಸಿದ್ದಾರೆ. ಆ ಉತ್ಸಾಹ ನನಗೆ ಕಾಣಿಸುತ್ತಿದೆ. ಅಲ್ಲದೇ ದೇವೇಗೌಡರು (HD Deve Gowda) ಐ.ಎನ್.ಡಿ.ಐ.ಎ ಒಕ್ಕೂಟದ ಒಬ್ಬೊಬ್ಬರ ಬಗ್ಗೆಯೂ ಹೇಳಿದ್ದಾರೆ. ಅವರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ ಎಂದು ಪ್ರಧಾನಿ ಮೋದಿ (Narendra Modi) ಶ್ಲಾಘಿಸಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಪಕ್ಷದ ಜಯಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇವೇಗೌಡರನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಬರಿದಾದ ಚೊಂಬನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡ್ತೀವಿ- ಬಿಜೆಪಿ ಸಮಾವೇಶದಲ್ಲಿ ಅಬ್ಬರಿಸಿದ ಹೆಚ್‍ಡಿಡಿ

    `ಚಿಕ್ಕಬಳ್ಳಾಪುರದ (Chikkaballapur) ಸಹೋದರ ಸಹೋದರಿಯರಿಗೆ ನಮಸ್ಕಾರಗಳು’ ಅಂತ ಕನ್ನಡದಲ್ಲೇ ಭಾಷಣ ಶುರು ಮಾಡಿದ ಮೋದಿ, ಕೈವಾರ ತಾತಯ್ಯ, ವಿಶ್ವೇಶ್ವರಯ್ಯ ಮಣ್ಣಿನ ಜನರ ದರ್ಶನ ಪಡೆದದ್ದು ನನ್ನ ಸೌಭಾಗ್ಯ. ದೇಶದಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ. ಆ ಉತ್ಸಾಹ ನನಗೆ ಕಾಣ್ತಿದೆ. ಈ ವಯಸ್ಸಿನಲ್ಲಿ ದೇವೇಗೌಡ ಉತ್ಸಾಹ ನಮಗೆ ಪ್ರೇರಣೆ ಮತ್ತು ಮಾರ್ಗದರ್ಶನವಾಗಿದೆ. ಗೌಡರ ಆಶೀರ್ವಾದವೂ ನಮಗೆ ಸಿಕ್ಕಿದೆ. ಅವರ ಮಾತಿನಿಂದ ಪ್ರೇರಣೆ ಸಿಕ್ಕಿದೆ. ಅವರು ಈ ದೇಶದ ಹಿರಿಯ ರಾಜಕಾರಣಿ ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡ್ತೀವಿ ಎಂದು ಗುಣಗಾನ ಮಾಡಿದ್ದಾರೆ.

    ದೇವೇಗೌಡರು ಐ.ಎನ್.ಡಿ.ಐ.ಎ (I.N.D.I.A) ಒಕ್ಕೂಟದ ಒಬ್ಬೊಬ್ಬರ ಬಗ್ಗೆಯೂ ಹೇಳಿದ್ದಾರೆ. ಆ ಒಕ್ಕೂಟದ ಅಕ್ರಮಗಳ ಬಗ್ಗೆ ಹೇಳಿದ್ದಾರೆ. ಆ ಒಕ್ಕೂಟದಲ್ಲಿ ಹೇಳಿಕೊಳ್ಳುವ ನಾಯಕರು ಯಾರೂ ಇಲ್ಲ, ನಿರ್ದಿಷ್ಟ ಗುರಿಯೂ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರದ ಜನ ಹೇಳ್ತಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಅಂತ. ನನ್ನ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಬಂದು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ. ನಿಮ್ಮನ್ನ ನನ್ನ ಪರಿವಾರ ಅಂತ ಭಾವಿಸಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ದುಡಿಯುತ್ತೇನೆ. ನನ್ನ ಪ್ರತಿ ಕಣಕಣದಲ್ಲಿ ದೇಶ, ದೇಶದ ಜನರು ಇದ್ದಾರೆ. ನಾನು ಉತ್ತಮ ಗ್ಯಾರಂಟಿಗಳ ಜೊತೆ ಬಂದಿದ್ದೇನೆ ಎಂದು ಹೇಳಿದ್ದಾರೆ.

    ಜನರು ಉಚಿತ ರೇಷನ್ ಸಿಗುತ್ತೆ ಅಂತ ಯೋಚನೆ ಮಾಡಿರಲಿಲ್ಲ. ಆದ್ರೆ ಮೋದಿ ಇವತ್ತು ಉಚಿತ ರೇಷನ್ ಕೊಡ್ತಿದ್ದಾರೆ. ಮುಂದಿನ 5 ವರ್ಷವೂ ಉಚಿತ ಪಡಿತರ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರ ಸಂಪೂರ್ಣ ಸಾಲಮನ್ನಾ: ಸಿಎಂ ಘೋಷಣೆ

    ಮೋದಿ ಸರ್ಕಾರ ಎಸ್ಸಿ-ಎಸ್ಟಿ ಸಮುದಾಯಗಳ ಪರ ಇದೆ:
    ಕರ್ನಾಟದ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಈಗ 70 ವರ್ಷ ಮೀರಿದ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಗ್ಯಾರಂಟಿ ನೀಡುತ್ತಿದ್ದೇನೆ. ಮೋದಿ ಸರ್ಕಾರ ಎಸ್ಸಿ-ಎಸ್ಟಿ-ಒಬಿಸಿ ಸಮುದಾಯಗಳ ಪರವಾಗಿದೆ. ಈ ಹಿಂದೆ ಬಹಳಷ್ಟು ಎಸ್ಸಿ-ಎಸ್ಟಿ ಕುಟುಂಬಗಳಿಗೆ ಮೂಲ ಸೌಕರ್ಯ ಇರಲಿಲ್ಲ. ಅದೆಲ್ಲವನ್ನೂ ಮೋದಿ ಸರ್ಕಾರ ಮಾಡಿದೆ. 25 ಕೋಟಿ ಜನರನ್ನ ಬಡತನ ರೇಖೆಗಿಂತ ಮೇಲೆಕ್ಕೆ ತರುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಅಷ್ಟೇ ಅಲ್ಲ ಚಿಕ್ಕಬಳ್ಳಾಪುರದಲ್ಲಿ 14 ಸಾವಿರ, ಕೋಲಾರದಲ್ಲಿ 13 ಸಾವಿರ ಮನೆ ನಿರ್ಮಾಣ ಮಾಡಿಕೊಡುವ ಕೆಲಸ ಮೋದಿ ಮಾಡಿದ್ದಾರೆ. ಮುಂದೆ ಬಡವರಿಗಾಗಿ ದೇಶಾದ್ಯಂತ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸವನ್ನೂ ಮೋದಿ ಮಾಡ್ತಾರೆ ಎಂದು ಗ್ಯಾರಂಟಿಗಳನ್ನು ಪ್ರಸ್ತಾಪಿಸಿದ್ದಾರೆ.

  • ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

    ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

    ಗಾಂಧಿನಗರ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ (Modi Guarantee) ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಯ ನೀಡಿದರು.

    ಗುಜರಾತ್‌ (Gujarat) ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಂದು ರಾಜ್‌ಕೋಟ್‌, ಪಂಜಾಬ್‌ನ ಬಟಿಂಡಾ, ಉತ್ತರ ಪ್ರದೇಶದ ರಾಯ್‌ಬರೇಲಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11,500 ಕೋಟಿ ರೂ. ವೆಚ್ಚದ 200ಕ್ಕೂ ಹೆಚ್ಚು ಆರೋಗ್ಯ ರಕ್ಷಣೆ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ 48,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

    ಕಳೆದ 6-7 ದಶಕಗಳಲ್ಲಿ ನಡೆದಿದ್ದಕ್ಕಿಂತ ಹಲವು ಪಟ್ಟು ವೇಗವಾಗಿ ನಮ್ಮ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲಿ ಇತರರ ಗ್ಯಾರಂಟಿಗಳು ಕೊನೆಗೊಳ್ಳುತ್ತವೆಯೋ ಅಲ್ಲಿಂದ ಮೋದಿ ಗ್ಯಾರಂಟಿ ಪ್ರಾರಂಭವಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

    ಸ್ವಾತಂತ್ರ್ಯಾ ನಂತರ 50 ವರ್ಷಗಳ ವರೆಗೆ ದೇಶದಲ್ಲಿ ಒಂದೇ ಒಂದು AIIMS ಆಸ್ಪತ್ರೆ ಇತ್ತು. ಸ್ವಾತಂತ್ರ್ಯಾ ನಂತರ 7 ದಶಕಗಳಲ್ಲಿ 7 ಏಮ್ಸ್‌ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದರೂ ಹಿಂದಿನ ಸರ್ಕಾರಗಳು ಅವುಗಳನ್ನು ಪೂರ್ಣಗೊಳಿಸಿಲ್ಲ. ಕೆಲವರಂತೂ ತಮ್ಮ ರಾಜ್ಯಗಳಿಗೆ ಏಮ್ಸ್‌ ಆಸ್ಪತ್ರೆ ಪಡೆಯುವಷ್ಟರಲ್ಲಿ ಸುಸ್ತಾಗುತ್ತಿದ್ದರು. ಆದ್ರೆ ‌ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ 10 ಏಮ್ಸ್‌ ಆಸ್ಪತ್ರೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಏಮ್ಸ್‌ ಹೊರತುಪಡಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ ಒಂದರ ಹಿಂದೆ ಒಂದರಂತೆ ತಲೆ ಎತ್ತುತ್ತಿವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.

    ಇನ್ನೂ ಕಾಂಗ್ರೆಸ್‌ ರಾಜಮನೆತನವು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಅಧಿಕಾರ ಹಿಡಿದಿದೆ. ಆದ್ರೆ ಆ ಕ್ಷೇತ್ರದ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ರಾಯ್‌ಬರೇಲಿಯಲ್ಲೂ ಏಮ್ಸ್‌ ಸ್ಥಾಪಿಸುವ ಭರವಸೆ ನೀಡಿದ್ದೇನೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

    ಆರೋಗ್ಯ ಸಂಪದ್ಭರಿತ ದೇಶವಾಗಬೇಕು: ಭಾರತ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಟಾಪ್‌-5 ದೇಶಗಳಲ್ಲಿಯೂ ಒಂದಾಗಬೇಕು. ಅಭಿವೃದ್ಧಿ ಹೊಂದಿದ ಭಾರತದಲ್ಲಿ ಆರೋಗ್ಯ ಸೌಲಭ್ಯಗಳ ಮಟ್ಟ ಹೇಗಿರುತ್ತದೆ ಎಂಬುದನ್ನು ನಾವು ಈಗ ನೋಡುತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಿಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ವಿಸ್ತರಿಸಿದ್ದೇವೆ. ಹಿಂದೆ ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು 309 ರಿಂದ 706ಕ್ಕೆ ಕೊಂಡೊಯ್ಯಲಾಗಿದೆ. ಎಂಬಿಬಿಎಸ್ ಮತ್ತು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ 50,000 ದಿಂದ 1 ಲಕ್ಷಕ್ಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

  • ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್‌ ಟ್ರೆಂಡ್‌

    ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್‌ ಟ್ರೆಂಡ್‌

    ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಬಿಜೆಪಿಯಲ್ಲಿ (BJP) ಸಂಭ್ರಮ ಮುಗಿಲುಮುಟ್ಟಿದ್ದು, ಬಿಜೆಪಿ ನಾಯಕರು ದೇಶಕ್ಕೆ ಮೋದಿಯೇ ಗ್ಯಾರಂಟಿ (ModiKiGuarantee) ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.

    ಕರ್ನಾಟಕ (Karnataka) ಚುನಾವಣೆಯಲ್ಲಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್‌ (Congress) ಈಗ ನಡೆಯುತ್ತಿರುವ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತ್ತು. ದೇಶಾದ್ಯಂತ ನಮ್ಮ ಗ್ಯಾರಂಟಿ (Congress Guarantee) ಕೆಲಸ ಮಾಡುತ್ತದೆ ಎಂದು ವಿಶ್ವಾಸ ಇಟ್ಟುಕೊಂಡಿದ್ದರು.  ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಕೈ ಹಿಡಿದ ಮಹಿಳೆಯರು

     

    ಕಾಂಗ್ರೆಸ್‌ ಪ್ರಚಾರಕ್ಕೆ ಪರ್ಯಾಯವಾಗಿ ಬಿಜೆಪಿ ನರೇಂದ್ರ ಮೋದಿ (Narendra Modi) ಅವರನ್ನೇ ಹೆಚ್ಚು ಬಿಂಬಿಸಿತ್ತು. ಅಷ್ಟೇ ಅಲ್ಲದೇ ಮೋದಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳುತ್ತಿದ್ದರು. ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ (Economy) ಭಾರತದ (India) ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ ಎಂದು ಭಾಷಣ ಮಾಡಿದ್ದರು.

    ಲೋಕಸಭಾ ಚುನಾವಣೆ ನಡೆಯುವ ಮುನ್ನ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಹಿಂದಿ ಬೆಲ್ಟ್‌ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #ModiKiGuarantee ಟ್ರೆಂಡ್‌ ಆಗಿದೆ. ದೇಶಕ್ಕೆ “ನಮೋ‌” ಗ್ಯಾರಂಟಿ. ಪ್ರಧಾನಿ ಶ್ರೀ ನರೇಂದ್ರ ಮೋದಿ ಇದ್ದರೆ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದೆ.