ಮುಂಬೈ ಕ್ರಿಕೆಟ್ ಅಸೋಸಿಯೇಷನ್ 1 ಲಕ್ಷ ಆಸನಗಳ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಎದುರುನೋಡುತ್ತಿದೆ. ಥಾಣೆ ಜಿಲ್ಲೆಯಿಂದ ಸುಮಾರು 26 ಕಿಮೀ ಹಾಗೂ ವಾಂಖೆಡೆ ಕ್ರೀಡಾಂಗಣದಿಂದ (Wankhede Stadium) 68 ಕಿಮೀ ದೂರದಲ್ಲಿರುವ ಅಮಾನೆ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯವಿರುವ 50 ಎಕೆರೆ ಭೂಪ್ರದೇಶ ಸ್ವಾಧೀನಕ್ಕೆ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಟೆಂಡರ್ ಭರ್ತಿಯಾಗಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಶುಕ್ರವಾರ (ಜು.5) ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ನಾಲ್ವರು ಆಟಗಾರರ ಅಭಿನಂದನಾ ಸಮಾರಂಭದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಮಾತನಾಡಿದ್ದರು. ಅತ್ಯಾಧುನಿಕ ಹಾಗೂ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪರಿಗಣಿಸುವಂತೆ ಸಿಎಂ ಏಕನಾಥ್ ಶಿಂಧೆ (Eknath shinde) ಅವರಿಗೆ ಮನವಿ ಮಾಡಿದ್ದೇವೆ. ಮುಂಬೈನಲ್ಲಿ 1 ಆಸನಗಳ ಸಾಮರ್ಥ್ಯದ ಕ್ರೀಡಾಂಗಣ ಅವಶ್ಯಕತೆಯಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಅತ್ಯುತ್ಸಾಹ ಭದ್ರತಾ ವೈಫಲ್ಯಗಳಿಗೆ ದಾರಿ ಮಾಡಿಕೊಡುತ್ತಿದೆ. ಅದೇ ರೀತಿ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಧೋನಿ ಅಭಿಮಾನಿಯೊಬ್ಬರು (MS Dhoni Fans) ದಿಢೀರ್ ಮೈದಾನಕ್ಕೆ ನುಗ್ಗಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ.
MS Dhoni had a word with the pitch invader after he hugged and touched MS’ feet.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ. ಈಗಲೂ ಆರೋಗ್ಯ ಸಮಸ್ಯೆಯಿದ್ದರೂ ಮಹಿ ತಮ್ಮ ಅಭಿಮಾನಿಗಳಿಗಾಗಿಯೇ ಆಡುತ್ತಿದ್ದಾರೆ.
ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Titans) ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿದ್ದಾರೆ. ಎಂ.ಎಸ್ ಧೋನಿ ಅವರ ಪಾದಗಳನ್ನು ಮುಟ್ಟಿ, ತಮ್ಮ ತಲೆಯನ್ನು ನೆಲಕ್ಕೆ ಸ್ಪರ್ಶಿಸಿ ನಮಸ್ಕರಿಸಿದ್ದಾರೆ. ದಿಢೀರನೆ ಬಂದ ಅಭಿಮಾನಿ ಕಂಡು ಕ್ಷಣಿಕ ಬೆಚ್ಚಿದ ಮಹಿ ಬಳಿಕ ಅಭಿಮಾನಿಯನ್ನು ನಿಲ್ಲಿಸಿ, ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸಿದ್ದಾರೆ, ಪ್ರೀತಿಯ ಅಪ್ಪುಗೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಎಳೆದೊಯ್ಯುವ ವೇಳೆ, ಅವರನ್ನು ಆರಾಮಾಗಿ ಹೋಗಲು ಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಮಹಿ ಅವರ ಈ ನಡೆ ಅಭಿಮಾನಿಗಳ ಹೃದಯಸ್ಪರ್ಶಿಸುವಂತೆ ಮಾಡಿದೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ಮೂರು ವಿಕೆಟ್ ನಷ್ಟಕ್ಕೆ 231 ರನ್ ಬಾರಿಸಿತ್ತು. 232 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯಲ್ಲಿ 236.36 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಮಹಿ, 11 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್, 1 ಬೌಂಡರಿ ಸೇರಿ 26 ರನ್ ಚಚ್ಚಿದರು.
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ವಿಶ್ವಕಪ್ 2023ರ ಫೈನಲ್ (World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಆಟಗಾರರು ಕಣ್ಣೀರಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ವೆಲ್ (Maxwell) ಅಪ್ಪಿ ಸಂತೈಸಿದರು.
ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಮ್ಯಾಕ್ಸ್‌ವೆಲ್ ಬಿಗಿದಪ್ಪಿ ಸಾಂತ್ವ ಹೇಳಿದರಲ್ಲದೇ ಜೆರ್ಸಿಗೆ (Jeresey) ಕೊಹ್ಲಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿಯನ್ನು ಅಪ್ಪಿ ಹಿಡಿದ ಮ್ಯಾಕ್ಸ್ ವೆಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್
ಕೊಹ್ಲಿ, ಮ್ಯಾಕ್ಸ್ ವೆಲ್ ಫೋಟೋವನ್ನು ಐಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಗೌರವ ಮತ್ತು ಅಭಿಮಾನದ ಸಂಕೇತ ಎಂದು ಕ್ಯಾಪ್ಷನ್ ನೀಡಿದೆ. ಸದ್ಯ ಫೋಟೋ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಇತ್ತ ಅನುಷ್ಕಾ ಶರ್ಮಾ (Anushka Sharma) ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತ ಕೆಲವೇ ಕ್ಷಣಗಳಲ್ಲಿ ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಪಂದ್ಯ ಸೋತು ಕಣ್ಣಲ್ಲಿ ನೀರು ತುಂಬಿಕೊಂಡು ಬೇಸರದಲ್ಲಿದ್ದ ಕೊಹ್ಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಹ ಪ್ರೀತಿಯ ಅಪ್ಪುಗೆ ನೀಡಿ ಸಮಾಧಾನ ಪಡಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.
ಅಹಮದಾಬಾದ್: ಭಾರತದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಅಹಮದಬಾದ್‍ನ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ ಆಸ್ಟ್ರೇಲಿಯಾ (IND Vs AUS) ವಿರುದ್ಧ 6 ವಿಕೆಟ್‍ಗಳ ಸೋಲನ್ನು ಕಂಡಿದೆ. 20 ವರ್ಷಗಳ ಸೇಡನ್ನ ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಆಸ್ಟ್ರೇಲಿಯಾ ತಿವಿದಿದ್ದು ಮತ್ತೆ ಭಾರತ ಫೈನಲ್‍ನಲ್ಲಿ ಮುಗ್ಗರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..
ಗೆಲುವಿಗೆ ಕಾರಣಗಳೇನು..?
ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿದೆ. ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾವನ್ನು ವಿಕೆಟ್‍ನಲ್ಲೇ (Wicket) ಕಟ್ಟಿ ಹಾಕಿದೆ. ಅಲ್ಲದೆ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡೋದು ಕಷ್ಟಕರವಾಗಿದ್ದು, ಸ್ಲೋ ಬ್ಯಾಟಿಂಗ್ ಪಿಚ್ ಆಗಿರೋ ಕಾರಣ ಸ್ಫೋಟಕ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ
ಎರಡನೇ ಬ್ಯಾಟಿಂಗ್‍ಗೆ (Batting) ಮೊದಲ ಬ್ಯಾಟಿಂಗ್‍ಗಿಂತ ಪಿಚ್ ಉತ್ತಮವಾಗಿತ್ತು. ಡ್ಯೂಪ್ಯಕ್ಟರ್ ಕೂಡ ಟೀಂ ಆಸ್ಟ್ರೇಲಿಯಾಗೆ (Australia) ಸಾಥ್ ನೀಡಿದ್ದು, ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳ ವೈಫಲ್ಯವಾಗಿರುವುದು. ಮಿಡಲ್ ಓವರ್‍ನಲ್ಲಿ ಭಾರತಕ್ಕೆ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ ಇದ್ದದ್ದು, ಆಸ್ಟ್ರೇಲಿಯಾದ ಪ್ರಮುಖ ಮೂರು ವಿಕೆಟ್ ಬೇಗ ಕಳೆದುಕೊಂಡರೂ ದೃತಿಗೇಡದೆ ಇದ್ದದ್ದು ಹಾಗೂ ಭಾರತದ ಬೌಲಿಂಗ್ ಸ್ಟ್ರಾಂಗ್ ಇದ್ರೂ ಪಿಚ್ ಸಪೋರ್ಟ್ ಸಿಗದೇ ಇದ್ದಿದ್ದು ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಯಿತು.
ಒಟ್ಟಿನಲ್ಲಿ ಭಾರತ (Team India) ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.
ಲಕ್ನೋ: ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾನೆ. ಅಲ್ಲದೆ ಇಂದು ನಡೆಯಲಿರುವ ಪಂದ್ಯದಲ್ಲಿ ಗೆದ್ದು ವಿಶ್ವಕಪ್‍ನೊಂದಿಗೆ ಮಗ ಮನೆಗೆ ಮರಳುತ್ತಾನೆ ಎಂದು ಸ್ವಿಂಗ್ ಮಾಸ್ಟರ್ ಮೊಹಮ್ಮದ್ ಶಮಿ (Mohammad Shami) ತಾಯಿ ಹೇಳಿದ್ದಾರೆ.
ಐಸಿಸಿ ಕ್ರಿಕೆಟ್ ವರ್ಲ್ಡ್ ಫೈನಲ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅಂಜುಂ ಅರಾ (Anjum Ara) ಅವರು ಮೊದಲು ಟೀಂ ಇಂಡಿಯಾಗೆ (Team India) ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಲ್ಲದೆ ಇಂದು ಕೂಡ ನನ್ನ ಮಗ ಇಡೀ ದೇಶವೇ ಹೆಮ್ಮೆ ಪಡುವಂತೆ ಆಟವಾಡುತ್ತಾನೆ. ದೇವರು ಅವನಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್
ಇಂದು ಮಗ ವಿಶ್ವಕಪ್‍ನೊಂದಿಗೆ (World Cup 2023) ಮನೆಗೆ ಮರಳುತ್ತಾನೆ ಎಂಬ ವಿಶ್ವಾಸವಿದೆ. ಇಡೀ ಭಾರತ ಕ್ರಿಕೆಟ್ ತಂಡವೇ ನನ್ನ ಮಗನಿದ್ದಂತೆ. ಒಟ್ಟಿನಲ್ಲಿ ಎಲ್ಲರೂ ವಿಶ್ವಕಪ್ ಗೆದ್ದು ಮನೆಗೆ ಬರಲಿ ಎಮದು ಪ್ರಾರ್ಥಿಸುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ
ಒಟ್ಟಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಣಾಹಣಿ ನಡೆಯಲಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸೆ ಸೇರಿದಂತೆ ಭಾರತದ ಕ್ರಿಕೆಟ್ ದಿಗ್ಗಜರು, ಟೀಮ್ ಇಂಡಿಯಾ ಆಟಗಾರರ ಕುಟುಂಬದವರು, ಬಾಲಿವುಡ್, ಸ್ಯಾಂಡಲ್‍ವುಡ್ ನಟ-ನಟಿಯರು ಭಾರತ ಗೆಲ್ಲಲಿ ಎಂದು ಶುಭಕೋರಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಗೆಲುವಿಗೆ ದೇಶಾದ್ಯಂತ ಹೋಮ-ಹವನಗಳು ನಡೆಯುತ್ತಿದೆ.
ಪಾಟ್ನಾ: ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ (INDVsAUS) ನಡುವೆ ತೀವ್ರ ಹಣಾಹಣಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಅಂತೆಯೇ ಟೀಂ ಇಂಡಿಯಾದ ಎಡಗೈ ಓಪನಿಂಗ್ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಇಶನ್ ಕಿಶನ್ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.
ಭಾರತದ ಗೆಲುವಿಗಾಗಿ ಇಶನ್ ಕಿಶನ್ (Ishan Kishan) ಕುಟುಂಬಸ್ಥರು ಪಾಟ್ನಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಛತ್ ಪೂಜಾ ದಿನದಂದೇ ವಿಶ್ವಕಪ್ ಪಂದ್ಯ ನಡೆಯುತ್ತಿರುವುದು ಶುಭ ಲಕ್ಷಣವಾಗಿದೆ ಎಂದು ಕಿಶನ್ ತಾಯಿ ಸುಚಿತ್ರಾ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ
ಟೀಂ ಇಂಡಿಯಾವು ಏಕದಿನ ವಿಶ್ವಕಪ್ 2023ರ ಪ್ರತಿಯೊಂದು ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್‍ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಇದೀಗ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಎದುರಾಳಿ ತಂಡ ಆಸ್ಟ್ರೇಲಿಯಾದ ವಿರುದ್ಧ ಸೆಣಸಾಡಲಿದೆ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್
ಒಟ್ಟಿನಲ್ಲಿ ವಿಶ್ವಕಪ್ (World Cup 2023) ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ (Anthony Albanese), ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.
ಅಹಮದಾಬಾದ್: ಏಕದಿನ ವಿಶ್ವಕಪ್ (World Cup 2023) ಟೂರ್ನಿ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಪಂದ್ಯಕ್ಕೆ (Ind vs Pak) ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಟ್ವಿಟ್ಟರ್‌ನಲ್ಲೂ ಟ್ರೆಂಡ್ ಅಲೆ ಎದ್ದಿದೆ.
ಹೌದು. ಇದೇ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ಪಾಕ್ ಉಗ್ರರನ್ನು ಮಟ್ಟ ಹಾಕಿದ್ದ NSG ಕಮಾಂಡೋಗಳನ್ನು ಈ ಪಂದ್ಯಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಳೆದ 20 ವರ್ಷಗಳಲ್ಲಿ ಅಹಮದಾಬಾದ್ ನಗರದಲ್ಲಿ ಯಾವುದೇ ಕೋಮುಗಲಭೆಗಳು ನಡೆದಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುಜರಾತ್ ಸಿಎಂ ಭೂಪೇಂದ್ರಬಾಯ್ ಪಟೇಲ್ ಅವರು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ರಾಜ್ಯ ಡಿಜಿಪಿ ವಿಕಾಸ್ ಸಹಾಯ್, ಜಿ.ಎಸ್ ಮಲಿಕ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗಾಂಧಿನಗರದಲ್ಲಿ ಸಭೆ ನಡೆಸಿ ಪೊಲೀಸರ ಪ್ಲ್ಯಾನ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಇಂಡೋ ಪಾಕ್ ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್
7,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ, ಕ್ರೀಡಾಂಗಣದ ಭದ್ರತೆಗಾಗಿ ಮತ್ತು ಪಂದ್ಯದ ಸಮಯದಲ್ಲಿ ನಗರದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸುಮಾರು 4,000 ಗೃಹರಕ್ಷಕರನ್ನು ನಿಯೋಜಿಸಲಾಗುವುದು. ಈ ಸಿಬ್ಬಂದಿಯ ಜೊತೆಗೆ ನಾವು ಮೂರು ‘ಹಿಟ್ ತಂಡಗಳು’ ಮತ್ತು ಎನ್ಎಸ್ಜಿಯು ಒಂದು ಡ್ರೋನ್ ತಡೆ ತಂಡವನ್ನು ನಿಯೋಜಿಸುತ್ತೇವೆ. ನಮ್ಮ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ 9 ತಂಡಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೇ ಇನ್ಸ್‌ಪೆಕ್ಟರ್ ಜನರಲ್ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು 21 ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಶ್ರೇಣಿಯ ಅಧಿಕಾರಿಗಳು ಪಂದ್ಯದ ದಿನದಂದು ಸಿಬ್ಬಂದಿ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ಎಂದೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
“ರಾಜ್ಯ ಮೀಸಲು ಪೊಲೀಸ್ (SRP) ಯ 13 ತುಕಡಿಗಳಲ್ಲದೆ, ನಮ್ಮ ಭದ್ರತಾ ವ್ಯವಸ್ಥೆಯ ಭಾಗವಾಗಿ ನಾವು ಕ್ಷಿಪ್ರ ಕ್ರಿಯಾ ಪಡೆಯ ಮೂರು ತುಕಡಿಗಳನ್ನು ನಿಯೋಜಿಸುತ್ತೇವೆ. ಆರ್ ಎಎಫ್ ನಗರದ ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಿದೆ. ಕಾಲ್ತುಳಿತದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು, ನಾವು ಈಗಾಗಲೇ ಸ್ಥಳಾಂತರಿಸುವ ಯೋಜನೆಯನ್ನು ಸಿದ್ಧಪಡಿಸಿದ್ದೇವೆ ಮತ್ತು ಕ್ರೀಡಾಂಗಣದಲ್ಲಿ ಪೂರ್ವಾಭ್ಯಾಸವೂ ನಡೆಯುತ್ತಿದೆ ಎಂದು ಮಲಿಕ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನ ಬಿಡುಗಡೆ ಮಾಡಬೇಕು, ಜೊತೆಗೆ 500 ಕೋಟಿ ರೂ. ನೀಡಬೇಕು. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲಾಗುವುದು. ಅಷ್ಟೇ ಅಲ್ಲದೇ ಅಹಮದಾಬಾದ್‌ನ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸಲಾಗುವುದು ಎಂದು ಮುಂಬೈ ಪೊಲೀಸರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
– 500 ಕೋಟಿ ರೂ., ಲಾರೆನ್ಸ್ ಬಿಷ್ಣೋಯ್ ಬಿಡುಗಡೆಗೆ ಬೇಡಿಕೆ
ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹತ್ಯೆ ಮಾಡುವುದಾಗಿ ಹಾಗೂ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವನ್ನು (Narendra Modi Stadium) ಸ್ಫೋಟಿಸುವುದಾಗಿ ಭಯೋತ್ಪಾದಕರು ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ಹಾಕಿದ್ದು, ಭಾರತೀಯ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ ಆಗಿವೆ.
ರಾಷ್ಟ್ರೀಯ ತನಿಖಾ ದಳ (NIA) ಮತ್ತು ಮುಂಬೈ ಪೊಲೀಸರಿಗೆ (Mumbai Police) ಬೆದರಿಕೆ ಮೇಲ್ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗುಜರಾತ್ ಪೊಲೀಸರು ಹಾಗೂ ಪ್ರಧಾನಿಯ ಭದ್ರತೆಗೆ ಸಬಂಧಿಸಿದ ವಿವಿಧ ಏಜೆನ್ಸಿಗಳೊಂದಿಗೂ ಮಾಹಿತಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್ ಕಿರೀಟ ಧರಿಸಿದ ಭಾರತ
ಈ ಬಗ್ಗೆ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಎನ್‌ಐಎ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದಿದ್ದು, ಇಮೇಲ್ ಮೂಲ ಪತ್ತೆ ಹಚ್ಚಲು ಭದ್ರತಾ ಏಜೆನ್ಸಿಗಳು ಮುಂದಾಗಿವೆ. ಈಗಾಗಲೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 5 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನೂ ಆಯೋಜಿಸಿರುವುದರಿಂದ ಮುಂಬೈನಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೇ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆದಿದ್ದು, ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್ – ಬೆಂಗ್ಳೂರು ವಿಲ್ಸನ್ ಗಾರ್ಡನ್ ನೆನಪು ಹಂಚಿಕೊಂಡ ರವೀಂದ್ರ
ಅ.14 ರಂದು ಭಾರತ ಮತ್ತು ಪಾಕಿಸ್ತಾನ, ನವೆಂಬರ್ 4 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ, ನವೆಂಬರ್ 10 ರಂದು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಹಾಗೂ ನವೆಂಬರ್ 19 ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದ್ದರಿಂದ ಮೋದಿ ಕ್ರೀಡಾಂಗಣಕ್ಕೂ ಹೆಚ್ಚಿನ ಭದ್ರತೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್ ರವೀಂದ್ರ ಯಾರು ಗೊತ್ತಾ?
ಬೆದರಿಕೆ ಮೇಲ್‌ನಲ್ಲಿ ಬಂದ ಸಂದೇಶವೇನು?
ನಿಮ್ಮ ಸರ್ಕಾರ ನಮಗೆ 500 ಕೋಟಿ ರೂ. ನೀಡಬೇಕು. ಲಾರೆನ್ಸ್ ಬಿಷ್ಣೋಯ್‌ನನ್ನು ಬಿಡುಗೆ ಮಾಡಬೇಕು. ಇಲ್ಲವಾದರೆ ನಾವು ನರೇಂದ್ರ ಮೋದಿ ಹತ್ಯೆ ಮಾಡುತ್ತೇವೆ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಿಸುತ್ತೇವೆ. ಹಿಂದೂಸ್ತಾನದಲ್ಲಿ ಎಲ್ಲವೂ ಮಾರಾಟವಾಗುತ್ತದೆ. ಹಾಗಾಗಿ ನಾವೂ ಇದನ್ನು ಖರೀದಿಸಲು ನಿರ್ಧರಿಸಿದ್ದೇವೆ. ನೀವು ಎಷ್ಟೇ ಭದ್ರತೆ ಪಡೆದುಕೊಂಡರೂ ನಮ್ಮಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಇಮೇಲ್ ಸಂದೇಶ ಬಂದಿದೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾನೆ. ಜೈಲಿನ ಒಳಗಿನಿಂದಲೇ ತನ್ನ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪಂಜಾಬಿನಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಮುಂಬೈ: ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup) ಟೂರ್ನಿಗೆ BCCI ಸಿದ್ಧಪಡಿಸಿದ ಕರಡು ವೇಳಾಪಟ್ಟಿಯನ್ನು ICCಯೊಂದಿಗೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಸೆಣಸಲಿವೆ.
ಬಿಸಿಸಿಐ ಕರಡು ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 15 ರಂದು ಪಾಕ್ ವಿರುದ್ಧ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಕಣಕ್ಕಿಳಿದು ಅಬ್ಬರಿಸಲಿದೆ. ಮುಂದಿನ ವಾರದಲ್ಲೇ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಭಾಗವಹಿಸುವ ದೇಶಗಳಿಗೆ ಪ್ರತಿಕ್ರಿಯೆಗಾಗಿ ಕಳುಹಿಸಲಾಗಿದೆ.
ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ (ODI World Cup 2023) ಆರಂಭವಾಗಲಿದ್ದು, ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಹಾಗೂ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ನ್ಯೂಜಿಲೆಂಡ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ನವೆಂಬರ್ 19ರಂದು ಫೈನಲ್ ಪಂದ್ಯಕ್ಕೂ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆದರೆ ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಸ್ಥಳಗಳನ್ನೂ ಇನ್ನೂ ನಿರ್ಧರಿಸಲಾಗಿಲ್ಲ.
ಕೊನೆಯದ್ದಾಗಿ 2011ರಲ್ಲಿ ಸ್ವದೇಶದಲ್ಲಿ ವಿಶ್ವಕಪ್ ಗೆದ್ದ ಅತಿಥೇಯ ಭಾರತ ಕೋಲ್ಕತ್ತಾ, ಮುಂಬೈ, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ 9 ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನ ಆಡಲಿದೆ. ಪಾಕಿಸ್ತಾನ ಭಾರತದ 5 ನಗರಗಳಲ್ಲಿ ಲೀಗ್ ಪಂದ್ಯಗಳನ್ನಾಡಲಿದೆ. ಈ ನಡುವೆ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮೋದಿ ಅಂಗಳದಲ್ಲಿ ಮುಖಾಮುಖಿಯಾಗಲಿವೆ. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ
ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಪೈಕಿ 8 ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿವೆ.
ಯಾವ ಸ್ಥಳದಲ್ಲಿ ಆಯೋಜನೆ?
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಬಿಸಿಸಿಐ 12 ಕ್ರೀಡಾಂಗಣವನ್ನು ಅಂತಿಮಗೊಳಿಸಿದೆ. ಅದರಂತೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಪಂದ್ಯ ನಡೆಯಲಿದೆ.
ಟೀಂ ಇಂಡಿಯಾದ ತಾತ್ಕಾಲಿಕ ವೇಳಾಪಟ್ಟಿ:
ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ – ಸ್ಥಳ: ಚೆನ್ನೈ
ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ – ಸ್ಥಳ: ನವದೆಹಲಿ
ಅಕ್ಟೋಬರ್ 15: ಭಾರತ Vs ಪಾಕಿಸ್ತಾನ – ಸ್ಥಳ: ಅಹಮದಾಬಾದ್
ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ – ಸ್ಥಳ: ಪುಣೆ
ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ – ಸ್ಥಳ: ಧರ್ಮಶಾಲಾ
ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ – ಸ್ಥಳ: ಲಕ್ನೋ
ನವೆಂಬರ್ 2: ಭಾರತ Vs ಕ್ವಾಲಿಫೈಯರ್ – ಸ್ಥಳ: ಮುಂಬೈ
ನವೆಂಬರ್ 5: ಭಾರತ Vs ದಕ್ಷಿಣ ಆಫ್ರಿಕಾ – ಸ್ಥಳ: ಕೋಲ್ಕತ್ತಾ
ನಂವೆಬರ್ 11: ಭಾರತ Vs ಕ್ವಾಲಿಫೈಯರ್ – ಸ್ಥಳ: ಬೆಂಗಳೂರು
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಐಸಿಸಿ ಶೇ.20 ರಷ್ಟು ದಂಡವನ್ನು ವಿಧಿಸಿದೆ.
ನಿಗದಿತ ಸಮಯಕ್ಕಿಂತಲೂ ಒಂದು ಓವರ್ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಭಾರತ ತಂಡಕ್ಕೆ ದಂಡ ವಿಧಿಸಿದ್ದಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಅವಧಿಯ ಒಳಗಡೆ ತಂಡ ತನ್ನ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯ ಒಳಗಡೆ ಬೌಲಿಂಗ್ ಮುಕ್ತಾಯಗೊಳಿಸದಿದ್ದರೆ ಆಟಗಾರರು ತಮ್ಮ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ನಾಯಕ ಕೊಹ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಅನಿಲ್ ಚೌಧರಿ, ಕೆ.ಎನ್. ಅನಂತಪದ್ಮನಾಭನ್ ಮತ್ತು ಮೂರನೇ ಅಂಪೈರ್ ವೀರೇಂದ್ರ ಶರ್ಮಾ ಅವರು ರೆಫ್ರಿಗೆ ಭಾರತ ತಂಡದ ವಿರುದ್ಧ ದೂರು ನೀಡಿದ್ದರು.
ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 165 ರನ್‌ಗಳ ಗುರಿಯನ್ನು ಪಡೆದಿದ್ದ ಭಾರತ 3 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ 56 ರನ್(32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿರಾಟ್ ಕೊಹ್ಲಿ ಅಜೇಯ 73 ರನ್(49 ಎಸೆತ, 5 ಬೌಂಡರಿ, 3 ಸಿಕ್ಸರ್) ಹೊಡೆದು ಭಾರತಕ್ಕೆ ಜಯವನ್ನು ತಂದುಕೊಟ್ಟರು.
ಒಂದು ಪಂದ್ಯಕ್ಕೆ ಎಷ್ಟು ನಿಮಿಷ?
ಒಂದು ಟಿ 20 ಪಂದ್ಯ 180 ನಿಮಿಷಗಳಲ್ಲಿ ಮುಗಿಯಬೇಕಾಗುತ್ತದೆ. ಒಂದು ಇನ್ನಿಂಗ್ಸ್‌ಗೆ 90 ನಿಮಿಷ ಇರುತ್ತದೆ. ಎರಡು ಇನ್ನಿಂಗ್ಸ್ ನಡುವೆ 10 ನಿಮಿಷ ಬ್ರೇಕ್ ಇರುತ್ತದೆ. 90 ನಿಮಿಷದ ಒಳಗಡೆ ಇನ್ನಿಂಗ್ಸ್ ಮುಗಿಯದೇ ಇದ್ದಲ್ಲಿ ಬೌಲಿಂಗ್ ಹಾಕುವ ತಂಡಕ್ಕೆ ದಂಡವನ್ನು ವಿಧಿಸಲಾಗುತ್ತದೆ.