Tag: ಮೋದಿ ಕಾರು

  • ಮೋದಿ ಧರ್ಮಸ್ಥಳ ಭೇಟಿಗಾಗಿ ವಿಮಾನದಲ್ಲಿ ಬಂತು ವಿಶೇಷ ಕಾರು!

    ಮೋದಿ ಧರ್ಮಸ್ಥಳ ಭೇಟಿಗಾಗಿ ವಿಮಾನದಲ್ಲಿ ಬಂತು ವಿಶೇಷ ಕಾರು!

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅ.29ರ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸಂಚರಿಸಲಿರುವ ಕಾರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ವಾಯುಪಡೆ ವಿಮಾನದ ಮೂಲಕ ಬುಲೆಟ್ ಪ್ರೂಫ್ ಕಾರುಗಳನ್ನು ಮಂಗಳೂರಿಗೆ ತರಲಾಗಿದೆ.

    ಪ್ರಧಾನಿ ಸಂಚರಿಸುವ ನಾಲ್ಕು ಬಿಎಂಡಬ್ಲ್ಯೂ ಕಾರುಗಳನ್ನು ತರಲಾಗಿದ್ದು ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು ರಸ್ತೆ ಮೂಲಕ ಧರ್ಮಸ್ಥಳಕ್ಕೆ ಕರೆದೊಯ್ಯಲಾಗಿದೆ. ಪ್ರಧಾನಿ ಮೋದಿ ನಾಡಿದ್ದು ಅ.29ರಂದು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದು ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ.

    ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನ ಹಾಗೂ ಉಜಿರೆಯ ರತ್ನವರ್ಮ ಹೆಗ್ಗಡೆ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮಾವೇಶಕ್ಕೆ ತೆರಳುತ್ತಾರೆ.