Tag: ಮೋಡ

  • ಅಕ್ಷತಾ ಪಾಂಡವಪುರ ಪ್ರಧಾನ ಪಾತ್ರದಲ್ಲಿ ಮೋಡ ಮಳೆ ಮತ್ತು ಶೈಲ

    ಅಕ್ಷತಾ ಪಾಂಡವಪುರ ಪ್ರಧಾನ ಪಾತ್ರದಲ್ಲಿ ಮೋಡ ಮಳೆ ಮತ್ತು ಶೈಲ

    ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್‌ನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ನಿರ್ಮಾಣದಲ್ಲಿ ಎರಡನೇ ಪ್ರಯತ್ನವಾಗಿ ಸಿದ್ಧವಾಗುತ್ತಿರುವ ಚಿತ್ರ ‘ಮೋಡ, ಮಳೆ ಮತ್ತು ಶೈಲ’. ವಿಭಿನ್ನ ಪ್ರಯತ್ನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕಾಗಿ ಒಂದಾಗಿದ್ದ ನಿರ್ದೇಶಕ ರಕ್ಷಿತ ತೀರ್ಥಹಳ್ಳಿ ಹಾಗೂ ನಿರ್ಮಾಪಕ ಆದರ್ಶ ಅಯ್ಯಂಗಾರ್ ಇದೀಗ ಮತ್ತೆ ಒಂದಾಗಿ ‘ಮೋಡ, ಮಳೆ ಮತ್ತು ಶೈಲ’ ಚಿತ್ರ ತಯಾರಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಾಘು ರಾಮನಕೊಪ್ಪ, ಬಲರಾಜ್ ವಾಡಿ, ಅಶ್ವಿನ್ ಹಾಸನ ಪ್ರಮುಖ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಪಿಆರ್‌ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಬರಹಗಾರ ಮತ್ತು ನಿರ್ದೇಶಕ ರಕ್ಷಿತ ತೀರ್ಥಹಳ್ಳಿ, ‘ಸದ್ಯ ನಮ್ಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ ಚಿತ್ರ ಮಾಡೋಣ ಎಂದರು. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್ ನಲ್ಲಿ ಶೂಟ್ ಮಾಡಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲ ಕಥೆ ಹೇಳಲು ಹೊರಟಿದ್ದೇನೆ. ಕಲಾವಿದರು ಚೆನ್ನಾಗಿ ನಟಿಸಿದ್ದು, ಇದು ಕಲಾವಿದರ ಸಿನಿಮಾ ಎನ್ನಬಹುದು. ಡ್ರಾಮಾ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.ಇದನ್ನೂ ಓದಿ: ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ನಂತರ ಚಿತ್ರದ ಪ್ರಮುಖ ಪಾತ್ರಧಾರಿ ಅಕ್ಷತಾ ಪಾಂಡವಪುರ ಮಾತನಾಡಿ, ‘ನಾನಿಲ್ಲಿ ಶೈಲ ಪಾತ್ರ ಮಾಡಿದ್ದೇನೆ. ಮೂಲತಃ ರಂಗಭೂಮಿ ಕಲಾವಿದೆ. ಇಂತಹ ಸಿನಿಮಾ ನನ್ನ ಕೆರಿಯರ್ ನಲ್ಲಿ ಮುಂದೆ ಸಿಗುತ್ತೋ ಇಲ್ವೋ..! ಹಾಗಾಗಿ ನಂಗೆ ಇದು ಸ್ಪೆಷಲ್ ಸಿನಿಮಾ. ಇದರಲ್ಲಿ ನಿರ್ದೇಶಕರು ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳ ಹೊರಟಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕರು ತುಂಬಾ ಶ್ರಮ ಪಟ್ಟಿದ್ದಾರೆ. ಇದರಲ್ಲಿ ಮಳೆ ಕೂಡ ಒಂದು ಪ್ರಮುಖ ಪಾತ್ರವಾಗಿ ತೋರಿಸಲಾಗಿದೆ. ನಾನು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು. ವೇದಿಕೆಯಲ್ಲಿ ನಟರಾದ ಸಂಪತ್ ಮೈತ್ರೇಯ, ಉತ್ಪಲ್ ಗೌಡ, ಕಣಿವೆ ವಿನಯ್, ಅಶ್ವಿನ್ ಹಾಸನ, ಶ್ರೀಹರ್ಷ ಗೋಭಟ್ ಹಾಗೂ ಸಂಕಲನಕಾರ ಅಕ್ಷಯ ಪಿ. ರಾವ್, ಛಾಯಾಗ್ರಾಹಕ ಸಾಗರ ಹೆಚ್.ಜಿ ತಮ್ಮ ಅನುಭವ ಹಂಚಿಕೊಂಡರು. ಈ ಮೊದಲು ರಕ್ಷಿತ ತೀರ್ಥಹಳ್ಳಿ ‘ಹೊಂಬಣ್ಣ’, ‘ಎಂಥಾ ಕಥೆ ಮಾರಾಯ’, ‘ತಿಮ್ಮನ ಮೊಟ್ಟೆಗಳು’ ಸಿನಿಮಾ ನಿರ್ದೇಶಿಸಿದ್ದು ಇದೀಗ ನಾಲ್ಕನೇ ಪ್ರಯತ್ನವಾಗಿ ‘ಮೋಡ ಮಳೆ ಮತ್ತು ಶೈಲ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ರಾಮನಾಳ ಗ್ರಾಮದಲ್ಲಿ ಕಂಡು ಬಂದ ಪ್ರಕೃತಿಯ ಅಪರೂಪದ ದೃಶ್ಯಕ್ಕೆ ಇಡೀ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

    ಒಂದೆಡೆ ವಿಚಿತ್ರ ಸುಂಟರಗಾಳಿ ಇನ್ನೊಂದೆಡೆ ಆಕಾಶದಲ್ಲಿ ಸುರಳಿಯಾಕಾರದಲ್ಲಿ ಭೂಮಿಗೆ ಇಳಿಯಲು ಸಜ್ಜಾದ ಮೋಡದ ದೃಶ್ಯ ಬೆರಗು ಮೂಡಿಸಿದೆ. ಪ್ರಕೃತಿಯ ವೈಶಿಷ್ಟ್ಯಕ್ಕೆ ಬೆರಗಾದ ಗ್ರಾಮಸ್ಥರು ವಿಚಿತ್ರ ಸುಳಿ ಗಾಳಿ ಕಂಡು ಗಾಬರಿಗೊಂಡಿದ್ದಾರೆ.

    ಜಮೀನೊಂದರಲ್ಲಿ ಕಂಡು ಬಂದ ಸುಂಟರಗಾಳಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಗ್ರಾಮೀಣ ಭಾಗದಲ್ಲಿ ಸುಳಿಗಾಳಿಗೆ ದೆವ್ವದ ಗಾಳಿ ಅಂತಲೇ ಕರೆಯುತ್ತಾರೆ. ಇನ್ನೂ ಆಗಸದಲ್ಲಿ ಸುರಳಿ ಆಕಾರದಲ್ಲಿ ಕಂಡು ಬಂದ ಮೋಡ ಅಚ್ಚರಿಯನ್ನ ಮೂಡಿಸಿತು.

    ಗ್ರಾಮಸ್ಥರು ಈ ಅಪರೂಪದ ದೃಶ್ಯಗಳನ್ನ ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಉಡುಪಿ: ಜಿಲ್ಲೆಯಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗಿದೆ. ಬೆಳಗ್ಗೆ 10.04 ನಿಮಿಷಕ್ಕೆ ಸರಿಯಾಗಿ ಸೂರ್ಯಗ್ರಹಣ ಆರಂಭವಾಗಿದೆ. ಮಳೆ ಮೋಡದ ನಡುವೆ ಗ್ರಹಣದ ಸೂರ್ಯ ಆಗಾಗ ದರ್ಶನ ಕೊಟ್ಟಿದ್ದಾನೆ.

    ಈ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಆರಂಭವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮುಂಗಾರು ಅಬ್ಬರಿಸುತ್ತಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯ ಮೋಡದ ಮರೆಯಿಂದ ಆಗಾಗ ಹೊರಬಂದು ಕಾಣಿಸಿಕೊಳ್ಳುತ್ತಿದ್ದಾನೆ. ನಿಗದಿತ ಸಮಯಕ್ಕೆ ಅಂದರೆ 10.04ಕ್ಕೆ ಗ್ರಹಣ ಆರಂಭವಾಗಿದ್ದು, ಲಕ್ಷಾಂತರ ಜನ ಗ್ರಹಣವನ್ನು ವೀಕ್ಷಣೆ ಮಾಡಿದ್ದಾರೆ.

    11.37ಕ್ಕೆ ಉಡುಪಿ ಜಿಲ್ಲೆಯಲ್ಲಿ ಶೇ.40ರಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಮಧ್ಯಾಹ್ನ 1.22 ಗ್ರಹಣ ಮೋಕ್ಷ ಕಾಲ. ದಕ್ಷಿಣ ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹೆಚ್ಚು ಅಂಶ ಗೋಚರವಾಗುತ್ತದೆ. ಕುರುಕ್ಷೇತ್ರದಲ್ಲಿ ಇಡೀ ದೇಶದ ಅತಿ ಹೆಚ್ಚು ಸೂರ್ಯ ಗ್ರಹಣ ಗೋಚರವಾಗಲಿದೆ ಎಂದು ಹಿರಿಯ ಭೌತಶಾಸ್ತ್ರಜ್ಞ ಎ.ಪಿ.ಭಟ್ ಮಾಹಿತಿ ನೀಡಿದರು.

  • ಸಿಲಿಕಾನ್ ಸಿಟಿಯಲ್ಲಿ ವರುಣನ ಸಿಂಚನ- ವಾಹನ ಸವಾರರ ಪರದಾಟ

    ಸಿಲಿಕಾನ್ ಸಿಟಿಯಲ್ಲಿ ವರುಣನ ಸಿಂಚನ- ವಾಹನ ಸವಾರರ ಪರದಾಟ

    ಬೆಂಗಳೂರು: ಸಿಲಿಕಾನ್ ಸಿಟಿಯ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ವರುಣನ ಸಿಂಚನವಾಗಿದ್ದು, ಮಧ್ಯಾಹ್ನದ ಮಳೆಗೆ ವಾಹನ ಸವಾರರು ಪರದಾಡುವಂತಾಯಿತು.

    ನಗರದ ಮಲ್ಲೇಶ್ವರ, ಮೆಜೆಸ್ಟಿಕ್, ಶೇಷಾದ್ರಿ ಪುರ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕೆಲವೇ ಹೊತ್ತು ಮಳೆ ಸುರಿದರೂ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಧ್ಯಾಹ್ನದ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು.

    ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವಣವಿದ್ದು, ಬಿಸಿಲು ಬಿದ್ದಿಲ್ಲ. ಪ್ರತಿ ದಿನ ಅಲ್ಪ ಪ್ರಮಾಣದಲ್ಲಿ ವರುಣನ ಸಿಂಚನವಾಗುತ್ತಿದೆ. ಇದರಿಂದಾಗಿ ಸಿಟಿ ಪೂರ್ತಿ ಫುಲ್ ಕೂಲ್ ಆಗಿದ್ದು, ಚಳಿ ವಾತಾವರಣ ನಿರ್ಮಾಣವಾಗಿದೆ. ಮೋಡ ಕವಿದ ವಾತಾರಣದಿಂದಾಗಿ ಬಿಸಿಲು ಮಾಯವಾಗಿದ್ದು, ನಗರದ ಜನತೆ ಖುಷಿ ಪಡುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.

    ಬೆಂಗಳೂರಿನಲ್ಲಿ ಶನಿವಾರ ಗರಿಷ್ಟ 28, ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

  • ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಚಿಕ್ಕಬಳ್ಳಾಪುರ: ಮೋಡ ಮುಸುಕಿದ ವಾತಾವಾರಣದ ನಡುವೆಯೂ ಕೇತುಗ್ರಸ್ಥ ಕಂಕಣ ಸೂರ್ಯ ಗ್ರಹಣ ಚಿಕ್ಕಬಳ್ಳಾಪುರದಲ್ಲಿ ಗೋಚರವಾಗಿದೆ.

    ಗ್ರಹಣ ಸ್ಪರ್ಶಕಾಲದಲ್ಲಿ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಗ್ರಹಣ ದರ್ಶನ ಭಾಗ್ಯ ಸಿಗಲಿಲ್ಲ. ಆದರೆ ಗ್ರಹಣ ಮಧ್ಯ ಕಾಲ ಆಗಮಿಸುತ್ತಿದ್ದಂತೆ ಮೋಡಗಳು ಮರೆಯಾದ ಕಾರಣ ಜನರಿಗೆ ಸೂರ್ಯ ಗ್ರಹಣ ದರ್ಶನ ಭಾಗ್ಯ ಸಿಕ್ಕಿತು.

    ಆಗೊಮ್ಮೆ ಹೀಗೊಮ್ಮೆ ಎಂದು ಮೋಡಗಳು ಮರೆಯಾಗುತ್ತಿದ್ದಂತೆ ಜನರಿಗೆ ಸೂರ್ಯ ಗ್ರಹಣ ಭಾಗ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿತ್ತು. ಮೋಡಗಳ ಆಟ ನೋಡುಗರಿಗೆ ಇರುಸು ಮುರುಸಾದರೂ ಆಗಾಗ ಮೋಡಗಳ ಮರೆಯಲ್ಲಿ ನಾನು ಇರುವೆ ಎಂದು ಬಂದು ಹೋಗುತ್ತಿದ್ದ ಸೂರ್ಯಗ್ರಹಣದ ಭಾಗ್ಯ ನೋಡುಗರ ಮನ ಸಂತಸಗೊಳಿಸಿತ್ತು.

    ಹಲವು ವರ್ಷಗಳ ನಂತರ ಸೂರ್ಯಗ್ರಹಣ ಕಂಡ ಜಿಲ್ಲೆಯ ಜನರಗೆ ಕೊನೆಗೂ ಮೋಡಗಳ ಮರೆಯಿಂದ ಸೂರ್ಯ ಗ್ರಹಣದ ದರ್ಶನ ಭಾಗ್ಯವಂತೂ ದಕ್ಕಿದೆ.

  • ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಭಾನುವಾರ ಸಂಜೆ ನಡೆದ ಶಿವ-ಗಂಗಾ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಅಚ್ಚರಿಯೊಂದು ನಡೆದಿದೆ.

    ಕಡಲತೀರದಲ್ಲಿ ಶಿವ-ಗಂಗಾ ವಿವಾಹ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಆಕಾಶದಲ್ಲಿ ಮೋಡವು ಶಿವಲಿಂಗದ ಆಕಾರದಲ್ಲಿ ಗೋಚರಿಸಿದೆ. ಇದನ್ನು ಕಂಡು ಭಕ್ತಾದಿಗಳು ವಿಸ್ಮಯಗೊಂಡಿದ್ದಾರೆ. ಅಚ್ಚರಿಯಿಂದ ಮೋಡದಲ್ಲಿ ಮೂಡಿದ್ದ ಶಿವಲಿಂಗಕ್ಕೆ ನಮಿಸಿದ್ದಾರೆ.

    ಸೂರ್ಯಾಸ್ತದ ಬಳಿಕ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗದ ರೂಪ ಮೂಡಿತ್ತು. ಇದನ್ನು ಕಂಡ ಸ್ಥಳದಲ್ಲಿ ನೆರೆದಿದ್ದ ಭಕ್ತರು ಅಚ್ಚರಿಪಟ್ಟರು. ಅಲ್ಲದೆ ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡಿದ್ದರೆ, ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ.

    ಈ ವಿಸ್ಮಯ ದೃಶ್ಯವನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಮೋಡದಲ್ಲಿ ಮೂಡಿದ್ದ ಶಿವಲಿಂಗ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.

  • ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

    ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.

    ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಚಿಕ್ಕಮಗಳೂರು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗಾಳಿ, ನೀರು, ಬೆಂಕಿ ಪ್ರಕೃತಿ ಮುಂದೆ ಮನುಷ್ಯ ಸೊನ್ನೆಯೇ. ಚಿಕ್ಕಮಗಳೂರಿನಲ್ಲಿ ಈಗ 28-30 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ಬಿಸಿಲಿಗೆ ಜನ ಬಸವಳಿದಿದ್ದಾರೆ.

    ಬೀಸುತ್ತಿರುವ ಗಾಳಿ ಕೂಡ ಬೆಂಕಿಯನ್ನು ಉಗುಳುತ್ತಿದೆ. ಹೀಗಿರುವಾಗ ಕಾಫಿನಾಡ ರಣಬಿಸಿಲ ಮಧ್ಯೆಯೂ ನೋಡ ನೋಡ್ತಿದ್ದಂತೆ ಜಿಲ್ಲಾ ಆಟದ ಮೈದಾನದಲ್ಲಿ ಬಿಸಿದ ಬಿರುಗಾಳಿಗೆ ಧೂಳಿನ ಕಣ ಕೂಡ ಮೋಡಕ್ಕೆ ಮುತ್ತಿಕ್ಕಿ ಹೊರಟಂತೆ ಭಾಸವಾಗಿದೆ.

    ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಜನ ಅತ್ತ ದೃಷ್ಟಿ ಹಾಯುಸುವಷ್ಟರಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳಿಯರು ಪ್ರಕೃತಿಯಲ್ಲಿನ ಸತ್ಯ ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ. ಅಲ್ಲದೆ ಈ ಘಳಿಗೆಯನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.

  • ಮೋಡಗಳನ್ನು ಇಸ್ರೇಲ್ ಕದ್ದಿದ್ದರಿಂದ ಇರಾನ್‍ನಲ್ಲಿ ಬರಗಾಲ!

    ಮೋಡಗಳನ್ನು ಇಸ್ರೇಲ್ ಕದ್ದಿದ್ದರಿಂದ ಇರಾನ್‍ನಲ್ಲಿ ಬರಗಾಲ!

    ಟೆಹರಾನ್: ಇಸ್ರೆಲ್ ತನ್ನ ಮೋಡ ಮತ್ತು ಹಿಮಗಳನ್ನು ಕದ್ದಿದೆ ಎಂದು ಇರಾನ್ ಬ್ರಿಗೇಡಿಯರ್ ಜನರಲ್ ಗೊಲಾಮ್ ರೆಜ್ ಜಲಾಲಿ ಆರೋಪಿಸಿದ್ದಾರೆ.

    ಇರಾನ್ ರಾಜಧಾನಿಯಲ್ಲಿ ನಡೆದ ಕೃಷಿ ಸಮ್ಮೇಳನದಲ್ಲಿ ಈ ಹೇಳಿಕೆಯನ್ನು ನೀಡಿದ್ದು, ಸಭೆಯಲ್ಲಿ ಮಾತನಾಡಿದ ಅವರು, ಇಸ್ರೆಲ್ ಮತ್ತು ನೆರೆಹೊರೆಯ ರಾಷ್ಟ್ರಗಳು ಇರಾನಿಗೆ ಬರುತ್ತಿದ್ದ ಮೋಡಗಳು ಮತ್ತು ಹಿಮವನ್ನು ತಡೆದು, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇಸ್ರೇಲ್ ದೇಶದ ಹೆಸರನ್ನು ಪ್ರಸ್ತಾಪಿಸದೆ ಇನ್ನೊದು ದೇಶ ನಮ್ಮ ದೇಶದ ಮೋಡ ಹಾಗೂ ಮಂಜನ್ನು ಕದ್ದಿರಬಹುದೆಂದು ನಾನು ನಂಬಿದ್ದೇನೆ. ಇದರಿಂದಲೇ ನಮ್ಮ ದೇಶದಲ್ಲಿ ತೀವ್ರ ಬರಗಾಲ ಬಂದಿದೆ ಎಂದು ತಿಳಿಸಿದರು.

    ನಮ್ಮನ್ನು ಆರ್ಥಿಕವಾಗಿಯೂ ಸೋಲಿಸಬೇಕೆಂದು ನೆರೆಹೊರೆಯ ದೇಶಗಳು ಮೋಡಗಳನ್ನು ನಾಶಮಾಡಿದ್ದಾರೆ. ಇದರಿಂದಾಗಿ ನಮ್ಮಲ್ಲಿ ಬರಗಾಲ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.

    ತೀವ್ರ ಬರಗಾಲದಿಂದ ಇರಾನ್ ದೇಶವು ತತ್ತರಿಸಿದ್ದು, ಕುಡಿಯುವ ನೀರಿಗೂ ಸಹ ಹಾಹಾಕಾರ ಸೃಷ್ಟಿಯಾಗಿದೆ ಎಂದು ವರದಿಗಳು ತಿಳಿಸಿವೆ.

  • ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಬಳ್ಳಾರಿ: ಕಣ್ಣು ಇದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಅನ್ನೋ ನಾಣ್ಣುಡಿಯಿದೆ. ವಿಶ್ವ ವಿಖ್ಯಾತ ಹಂಪಿಯನ್ನು ನೋಡುವುದೇ ಒಂದು ವೈಶಿಷ್ಟ್ಯ.

    ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ಎರಡು ಕಣ್ಣು ಸಾಲದೂ ಅಂತಾರೆ. ಆದರೆ ಮೋಡಗಳ ಮರೆಯಲ್ಲಿ ನಿಮಿಷ ನಿಮಿಷಕ್ಕೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ನೋಡುವುದೇ ಒಂದು ಹಬ್ಬವಾಗಿದೆ. ಛಾಯಾ ಚಿತ್ರಗ್ರಾಹಕ ಮತ್ತು ಪತ್ರಕರ್ತ ಅವರು ತಮ್ಮ ಕ್ಯಾಮೆರಾದಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿಯ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ.

    ಕಮಲಾಪುರದ ನಿವಾಸಿ ರಾಚಯ್ಯ ತಮ್ಮ ಕ್ಯಾಮೆರಾಗಳಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿ ಹೇಗೆ ಬಿಂಬಿಸುತ್ತವೆ ಅನ್ನೋ ವಿಶೇಷವಾದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

    ವಿಜಯ ವಿಠ್ಠಲ ದೇವಾಲಯ ಹಾಗೂ ಹಂಪಿಯ ಕಲ್ಲಿನ ರಥದ ಮೇಲೆ ಮೋಡಗಳು ಹಾಯ್ದು ಹೋಗುವ ವೇಳೆ ಈ ಚಿತ್ರಗಳನ್ನು ರಾಚಯ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಮನೋಜ್ಞವಾಗಿ ಮೂಡಿಬಂದಿದೆ.