Tag: ಮೋಟಾರ್

  • ವಿದ್ಯುತ್ ಅವಘಡದಿಂದ ಇಬ್ಬರು ರೈತರು ಸಾವು

    ವಿದ್ಯುತ್ ಅವಘಡದಿಂದ ಇಬ್ಬರು ರೈತರು ಸಾವು

    ದಾವಣಗೆರೆ: ತೋಟದಲ್ಲಿ ಮೋಟರ್ ಆನ್ ಮಾಡಲು ಹೋಗಿ ಇಬ್ಬರು ರೈತರು ಮೃತಪಟ್ಟ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಾ ಗ್ರಾಮದಲ್ಲಿ ನಡೆದಿದೆ.

    ಮೃತ ರೈತರನ್ನು (Farmer) ಮಲ್ಲಪ್ಪ (62), ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಅಡಿಕೆ ತೋಟಕ್ಕೆ ನೀರು ಬಿಡಲು ಮೋಟಾರ್ (Motar) ಸ್ವಿಚ್ ಆನ್ ಮಾಡುವ ಸಮಯದಲ್ಲಿ ವಿದ್ಯುತ್ ಶಾಕ್‍ನಿಂದ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಮೋಟಾರ್ ಆನ್ ಮಾಡಲು ತೆರಳಿದ್ದ ಮಂಜುನಾಥ್‍ಗೆ ವಿದ್ಯುತ್ ಪ್ರವಹಿಸಿತ್ತು (Electric shock). ನಂತರ ಆತನ ರಕ್ಷಣೆಗೆ ತೆರಳಿದ್ದ ಮಲ್ಲಪ್ಪನಿಗೂ ಕೂಡ ಪ್ರವಹಿಸಿ ಇಬ್ಬರೂ ಮೃತಪಟ್ಟಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆ ನಿರ್ಮಾಣದ ವೇಳೆ ವಿದ್ಯುತ್ ಶಾಕ್ – ಕಾರ್ಮಿಕ ಸಾವು

    ಮನೆ ನಿರ್ಮಾಣದ ವೇಳೆ ವಿದ್ಯುತ್ ಶಾಕ್ – ಕಾರ್ಮಿಕ ಸಾವು

    ಹುಬ್ಬಳ್ಳಿ: ಮನೆ ನಿರ್ಮಾಣ ಕಾಮಗಾರಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಬಿಡನಾಳದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಸಿದ್ದಾರೂಢ ಭೋವಿ ಎಂದು ಗುರುತಿಸಲಾಗಿದ್ದು, ಇವರು ಕಲಘಟಗಿ ತಾಲೂಕಿನ ಮಿಶ್ರಿಕೋಟಿ ನಿವಾಸಿಯಾಗಿದ್ದಾರೆ. ಮನೆ ನಿರ್ಮಾಣ ಕಾಮಗಾರಿಯ ಕೆಲಸಕ್ಕೆ ನೀರಿನ ಮೋಟರ್ ಆನ್ ಮಾಡುವ ವೇಳೆ ಕಾರ್ಮಿಕ ಸಿದ್ದಾರೂಢ ಭೋವಿ ಮೃತಪಟ್ಟಿದ್ದಾರೆ.

    ಬಿಡನಾಳ ಗ್ರಾಮದಲ್ಲಿ ಮನೆ ಕಟ್ಟುವ ಕಾಮಗಾರಿಗಾಗಿ ಮೇಸ್ತ್ರಿಯೊಂದಿಗೆ ಆಗಮಿಸಿದ್ದ ಕಾರ್ಮಿಕ ನೀರಿಗಾಗಿ ಮೋಟಾರ್ ಆರಂಭಿಸಲು ಹೋದ ವೇಳೆ ಅದೇ ಸಮಯದಲ್ಲಿ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

    ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಮೃತ ಸಿದ್ದಾರೂಢ ಶವವನ್ನ ಕಿಮ್ಸ್ ಶವಗಾರಕ್ಕೆ ರವಾನಿಸಿದ್ದಾರೆ.

  • ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆ ಸಾವು

    ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆ ಸಾವು

    ಚಾಮರಾಜನಗರ: ಜಮೀನಿನಲ್ಲಿ ಮೋಟಾರ್‍ ಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕೆಂಪನಪುರದಲ್ಲಿ ನಡೆದಿದೆ.

    ಗೂಳಿಪುರ ಗ್ರಾಮದ 50 ವರ್ಷದ ಕೆಂಪಮ್ಮ ಮೃತಪಟ್ಟ ಮಹಿಳೆ. ಇವರು ಕಟ್ಟಿಗೆ ತರಲು ತೆರಳಿದ್ದಾಗ ಬೋರ್‍ವೆಲ್ ಮೋಟಾರ್‍ ಗೆ ಅಳವಡಿಸಿದ್ದ ತಂತಿ ಸ್ಪರ್ಶಿಸಿದೆ. ಪರಿಣಾಮ ಕೆಂಪಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೋಹನ್ ಎಂಬವರಿಗೆ ಸೇರಿದ ಬಾಳೆ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಸಂತೇಮರಹಳ್ಳಿ ಪಿಎಸ್‍ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಸಂಬಂಧ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶವದಂತೆ ಮೋಟಾರ್ ಪಂಪ್ ಮಲಗಿಸಿ ಕೋಲಾರ ಜನತೆಯಿಂದ ಪ್ರತಿಭಟನೆ

    ಶವದಂತೆ ಮೋಟಾರ್ ಪಂಪ್ ಮಲಗಿಸಿ ಕೋಲಾರ ಜನತೆಯಿಂದ ಪ್ರತಿಭಟನೆ

    ಕೋಲಾರ: ನಗರಸಭೆ ಮುಂದೆ ಮೋಟಾರ್ ಪಂಪ್ ಅನ್ನು ಶವದ ಹಾಗೆ ಮಲಗಿಸಿ ಕೋಲಾರದ ಜನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ಕೋಲಾರ ವಾರ್ಡ್ ನಂ.17 ರ ಶಹೀಂ ಷಾ ಬಡಾವಣೆಯಲ್ಲಿರುವ ಮೋಟಾರ್ ಪಂಪ್ ಹಾಳಾಗಿದ್ದು, 15 ದಿನಗಳಿಂದ ನೀರು ಬರುತ್ತಿರಲಿಲ್ಲ. ಕೆಟ್ಟು ಹೋಗಿರುವ ಪಂಪ್ ಸರಿ ಪಡಿಸುವಂತೆ ನಗರಸಭೆಗೆ ದೂರು ನೀಡಿದರು ಏನೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಅಲ್ಲಿನ ಜನರು ಮೋಟಾರ್ ಪಂಪ್ ಮೇಲೆ ಬಿಳಿ ಬಟ್ಟೆ ಮುಚ್ಚಿ, ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಮಾಡುವ ಮೂಲಕ ನಗರಸಭೆ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ.

    2 ಗಂಟೆಗಳ ಕಾಲ ಈ ಪ್ರತಿಭಟನೆ ನಡೆದ ಬಳಿಕ ಸ್ಥಳಕ್ಕೆ ನಗರಸಭೆ ಎಂಜಿನಿಯರ್ ಪೂಜಾರಪ್ಪ ಆಗಮಿಸಿದರು. ಈ ವೇಳೆ ಪ್ರತಿಭಟನಾ ನಿರತ ಜನ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಪೂಜಾರಪ್ಪ ಜನರಿಗೆ ಪಂಪ್ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದರು.

  • ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ 5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷ!

    ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ 5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷ!

    ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್ ನ ಮನೆಯೊಂದರ ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ ಐದು ಅಡಿ ಉದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ.

    ನಂದೀಶ್ ಮನೆಯಲ್ಲಿ ಹಾವು ಪತ್ತೆಯಾಗಿದೆ. ಮೋಟಾರ್ ಬಾಕ್ಸ್ ನಲ್ಲಿ ಹಾವು ಬುಸುಗುಟ್ಟಿದ ಶಬ್ಧ ಮನೆಯವರಿಗೆ ಕೇಳಿಸಿದೆ. ಬೋರ್ ವೆಲ್ ಮೋಟಾರ್ ಗೆ ಮುಚ್ಚಿದ ಕಲ್ಲು ಎತ್ತಿದಾಗ ಹಾವು ಪ್ರತ್ಯಕ್ಷವಾಗಿದೆ. ನಾಗರಹಾವು ನೋಡಿ ಮನೆಯವರು ಭಯಗೊಂಡು ಹೊರಬಂದಿದ್ದಾರೆ.

    ಕೂಡಲೇ ಮನೆ ಮಾಲೀಕ ಸ್ನೇಕ್ ನರೇಶ್ ಅವರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ನೇಕ್ ನರೇಶ್ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.