Tag: ಮೋಟಾರು ವಾಹನ ಕಾಯ್ದೆ

  • ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಪುಣೆ: ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಮಾಡಿದ್ದ ವಧುವಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

    23 ವರ್ಷದ ವಧು ಎಸ್‍ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಹೊರಟಿದ್ದಳು. ಪುಣೆ- ಸಾಸ್ವಾಡ್ ರಸ್ತೆಯಲ್ಲಿ ಕಾರು ಸಂಚರಿಸಿತ್ತು. ಬೈಕಿನ ಕುಳಿತು ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸಿದ್ದ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಅಡಿ ಕಾರಿನ ಮಾಲೀಕ, ಯುವತಿ, ಚಾಲಕ, ವಿಡಿಯೋಗ್ರಾಫರ್ ಮೇಲೆ ದಂಡ ವಿಧಿಸಿದ್ದಾರೆ. ಕೊರೊನಾ ನಡುವೆಯೂ ಅಲ್ಲಿದ್ದವರು ರೂ ಮಾಸ್ಕ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ : ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

    ವಾಹನವು ಸಾಸ್ವಾಡ್‍ನಿಂದ ವಿವಾಹದ ಸ್ಥಳಕ್ಕೆ ತೆರಳುತ್ತಿತ್ತು. ಪುಣೆ-ಸಾಸ್ವಾಡ್ ರಸ್ತೆಯ ಉದ್ದಕ್ಕೂ ಪ್ರಯಾಣಿಸುತ್ತಿದ್ದ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು.

  • ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆ – ಬೆಂಗ್ಳೂರಲ್ಲಿ ಬರೋಬ್ಬರಿ 17 ಸಾವಿರ ದಂಡ ಕಟ್ಟಿದ ಬೈಕ್ ಸವಾರ

    ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆ – ಬೆಂಗ್ಳೂರಲ್ಲಿ ಬರೋಬ್ಬರಿ 17 ಸಾವಿರ ದಂಡ ಕಟ್ಟಿದ ಬೈಕ್ ಸವಾರ

    ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಮೊದಲ ಬಾರಿಗೆ ಬೈಕ್ ಸವಾರ 17 ಸಾವಿರ ದಂಡ ಪಾವತಿ ಮಾಡಿದ್ದಾನೆ.

    ಮೋಟಾರು ವಾಹನ ಕಾಯ್ದೆ ಜಾರಿಯ ಆದೇಶ ಪ್ರತಿ ಸಿಕ್ಕ 24 ಗಂಟೆಯಲ್ಲಿ ಮೊದಲ ಬಾರಿಗೆ ಭಾರೀ ದಂಡ ವಿಧಿಸಲಾಗಿದೆ. ಸವಾರ ಆಕಾಶ್ ಹೆಲ್ಮೆಟ್ ಧರಿಸದೇ ಕುಡಿದು ವಾಹನ ಚಲಾಯಿಸಿದ್ದಾನೆ.

    ಈ ವೇಳೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆಕಾಶ್‍ನನ್ನು ತಡೆದು ಪರಿಶೀಲನೆ ನಡೆಸಿದ್ದು, ಡಿಎಲ್ ಕೂಡ ಇಲ್ಲದಿರುವುದರಿಂದ ದಂಡ ವಿಧಿಸಿದ್ದಾರೆ. ನಿಯಮಗಳ ಅನ್ವಯ ಕುಡಿದು ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ 10 ಸಾವಿರ, ಡಿಎಲ್ ಇಲ್ಲದಿದ್ದಕ್ಕೆ 5 ಸಾವಿರ ರೂ. ಹಾಗೂ ಹೆಲ್ಮೆಟ್ ಧರಿಸಿದ ಕಾರಣ ಇಬ್ಬರಿಗೆ ತಲಾ 1 ಸಾವಿರದಂತೆ 2 ಸಾವಿರ ರೂ. ದಂಡ ಬಿಲ್ ನೀಡಿದ್ದಾರೆ.

    ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಶಿವಣ್ಣ ಅವರು ಬೈಕ್ ಸವಾರನಿಗೆ ದಂಡ ವಿಧಿಸಿದ್ದು, ದಂಡದ ಮೊತ್ತ ಕಂಡ ಆಕಾಶ್ ಕಂಗಾಲಾಗಿದ್ದಾರೆ. ಇದರೊಂದಿಗೆ ನಗರದಲ್ಲೂ ವಾಹನ ಸವಾರರಿಗೆ ಹೊಸ ನಿಯಮಗಳ ಬಿಸಿ ತಟ್ಟಿದೆ. ನಿನ್ನೆ ಸಂಜೆಯಷ್ಟೇ ರಾಜ್ಯ ಸರ್ಕಾರಕ್ಕೆ ಹೊಸ ಕಾಯ್ದೆ ಜಾರಿಯ ಆದೇಶ ಪ್ರತಿ ಲಭಿಸಿತ್ತು.

    ಇತ್ತ ಮಂಗಳವಾರ ದೆಹಲಿಯ ಗೀತಾ ಕಾಲೋನಿಯ ನಿವಾಸಿ ಗುರುಗ್ರಾಮದಲ್ಲಿ 23 ಸಾವಿರ ರೂ. ದಂಡ ಪಾವತಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 25ರ ಬಿಸ್ಟಲ್ ಚೌಕದ ಬಳಿ ಆಟೋ ಡ್ರೈವರ್ ಗೆ ಸಂಚಾರಿ ಪೊಲೀಸರು 32 ಸಾವಿರ ದಂಡ ವಿಧಿಸಿದ್ದರು.