Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಚಿಕ್ಕಮಗಳೂರು: ರಾಜ್ಯಾದ್ಯಂತ ಈಗಾಗಲೇ 2023ರ ವಿಧಾನಸಭೆ ಚುನಾವಣೆಯ ಚಟುವಟಿಕೆಗಳು ಗರಿಗೆದರಿದೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ರಾಜಕೀಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವೆ ಮೋಟಮ್ಮ (Motamma) ಪುತ್ರಿ ನಯನಾ ಮೋಟಮ್ಮಗೆ (Nayana Motamma) ಟಿಕೆಟ್ ಬೇಡವೇ-ಬೇಡ ಎಂದು ಕಾಂಗ್ರೆಸ್ (Congress) ಕಾರ್ಯಕರ್ತರು ಬಹಿರಂಗ ಸಭೆ ನಡೆಸಿದ್ದಾರೆ.
ಚಿಕ್ಕಮಗಳೂರು (Chikkamagaluru) ತಾಲೂಕಿನ ಮೂಡಿಗೆರೆ ಮತಕ್ಷೇತ್ರ ವ್ಯಾಪ್ತಿಯ ವಸ್ತಾರೆ ಹೋಬಳಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ನಯನಾಗೆ ಟಿಕೆಟ್ ನೀಡಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಲು ನಿರ್ಧರಿಸಿದ್ದಾರೆ. ನಯನಾಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲು ಖಚಿತ. ಕ್ಷೇತ್ರದ ಜನ ನಯನಾ ಅವರನ್ನು ಒಪ್ಪುತ್ತಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ನಯನಾಗೆ ಟಿಕೆಟ್ ನೀಡಲು ವಿರೋಧಿಸಿದ್ದಾರೆ.

ಈಗಾಗಲೇ ಮೋಟಮ್ಮ ಐದು ಬಾರಿ ಸೋಲು ಕಂಡಿದ್ದಾರೆ. ಈ ಮಧ್ಯೆ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈಗ ಅವರ ಮಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುವುದು ಗ್ಯಾರಂಟಿ. ಹಾಗಾಗಿ, ಸ್ಥಳೀಯರು ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿ ನಯನಾ ವಿರುದ್ಧ ಬಹಿರಂಗ ಸಭೆ ನಡೆಸುತ್ತಿದ್ದಾರೆ.
ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆಯಲ್ಲೂ ಸಭೆ ಸೇರಿ ಅಸಮಾಧಾನ ಹೊರಹಾಕಿದ್ದರು. ಮುಂದಿನ ವಾರದಲ್ಲಿ ಗೋಣಿಬೀಡು ಹೋಬಳಿಯಲ್ಲೂ ಸಭೆ ಸೇರುವುದಾಗಿ ತೀರ್ಮಾನಿಸಿದ್ದಾರೆ. ನಯನಾ ವಿರುದ್ಧ ಕಾಂಗ್ರೆಸ್ ಹೋಬಳಿಗಳಿಗೆ ಹೋಗಿ ಸಭೆ ನಡೆಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೊಸ ಮುಖಕ್ಕೆ ಮಣೆ ಹಾಕುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ

ಕೇವಲ ಕಾಂಗ್ರೆಸ್ ಪಕ್ಷವಷ್ಟೇ ಅಲ್ಲದೆ ಜೆಡಿಎಸ್ ಹಾಗೂ ಬಿಜೆಪಿಯಲ್ಲೂ (BJP) ಟಿಕೆಟ್ ಲಾಬಿ ಜೋರಾಗಿದೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ, ಅವರು ಕಾಂಗ್ರೆಸ್ ಸೇರುತ್ತಾರೆ, ಜೆಡಿಎಸ್ (JDS) ಸೇರುತ್ತಾರೆ ಎಂಬ ಗಾಳಿ ಸುದ್ದಿ ಕೂಡ ಹರಿದಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್‍ನಲ್ಲಿ ಮಾತ್ರ ಮೋಟಮ್ಮ ಮಗಳಿಗೆ ಖಡಾ ಖಂಡಿತವಾಗಿ ಟಿಕೆಟ್ ಬೇಡವೇ ಬೇಡ ಕಾಂಗ್ರೆಸ್ ಕಾರ್ಯಕರ್ತರೇ ಹೋಬಳಿ-ಹೋಬಳಿಯಲ್ಲಿ ಅಭಿಯಾನದ ರೀತಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಂಧದ ಮರ ಕಳವು ಮಾಡಲು ಚಿಕನ್ ಪೀಸ್‍ನಲ್ಲಿ ವಿಷವಿಟ್ಟು ಶ್ವಾನಗಳನ್ನು ಕೊಂದ್ರು

ಬೆಂಗಳೂರು: ಸಿದ್ದರಾಮಯ್ಯರ ಅಹಿಂದ ಹೋರಾಟ ಈಗ ಅಕ್ಷರಶಃ ಬೆತ್ತಲಾಗಿದ್ದು, ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಮಾಜಿ ಸಚಿವೆ ಮೋಟಮ್ಮ ಆತ್ಮಕತೆಯಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮೂಲಕ ಟೀಕಿಸಿರುವ ಬಿಜೆಪಿ, ಸಿದ್ದರಾಮಯ್ಯನವರ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ ಎಂದು ಟೀಕಿಸಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು
ಸಿದ್ದರಾಮಯ್ಯ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಕೊನೆಮೊದಲಿಲ್ಲದ ಪಟ್ಟಿಯಿದೆ.
√ ಮಲ್ಲಿಕಾರ್ಜುನ ಖರ್ಗೆ
√ ಡಾ.ಜಿ.ಪರಮೇಶ್ವರ್
√ ಮೋಟಮ್ಮ
√ ಶ್ರೀನಿವಾಸ್ ಪ್ರಸಾದ್ಇನ್ನೆಷ್ಟು ದಲಿತರ ಬಲಿ ಪಡೆಯುತ್ತೀರಿ?#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) June 12, 2022
ಟ್ವೀಟ್‌ನಲ್ಲಿ ಏನಿದೆ?
ದಲಿತ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೇ ಅವರನ್ನು ಮೂಲೆಗುಂಪು ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಈಗ ಅವರ ಆತ್ಮಕಥನದಲ್ಲಿ ಖಳನಾಯಕನಾಗಿ ಉಳಿದಿದ್ದಾರೆ. ಅವರ ಅಹಿಂದ ಹೋರಾಟ ಈಗ ಅಕ್ಷರಶಃ ಬೆತ್ತಲಾಗಿದೆ. ಹಾಗಾಗಿ ಅಹಿಂದದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಸಿದ್ದರಾಮಯ್ಯ ಅವರಿಂದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಮೋಟಮ್ಮ ಹಾಗೂ ವಿ.ಶ್ರೀನಿವಾಸ ಪ್ರಸಾದ್ ದಲಿತ ನಾಯಕರು ತುಳಿತಕ್ಕೆ ಒಳಗಾಗಿದ್ದಾರೆ. ಇನ್ನೆಷ್ಟು ದಲಿತ ನಾಯಕರನ್ನು ಬಲಿ ಪಡೆಯುತ್ತೀರಿ?
ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಮೋಟಮ್ಮ ಅವರು ಸಚಿವೆಯಾಗುವುದಕ್ಕೆ ಎಲ್ಲ ಅರ್ಹತೆ ಹೊಂದಿದ್ದರು.
ಆದರೆ ಮೈಸೂರು "ಜಲದರ್ಶಿನಿ" ಬಳಗಕ್ಕೆ ಅವಕಾಶ ನೀಡಬೇಕೆಂಬ ಕಾರಣಕ್ಕೆ @siddaramaiah ಅವರು ಅರ್ಹ ಮೋಟಮ್ಮ ಅವರನ್ನು ಮೂಲೆಗುಂಪು ಮಾಡಿದರು.#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) June 12, 2022
ಅಂದು ದಲಿತ ನಾಯಕ ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದಿರಿ, ದಲಿತ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿಯಾದಾಗ, ದಾಳಿ ಮಾಡಿದ ಮತಾಂಧರ ಪರವಾಗಿ ನಿಂತಿರಿ. ಈಗ ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಖಳ ನಾಯಕನಾಗಿದ್ದೀರಿ. ಇದನ್ನೂ ಓದಿ: ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ – ಎಲ್ಲಿದ್ದಾರೆ ನಿತ್ಯಾನಂದ?
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಮೋಟಮ್ಮ ಅವರ ಶ್ರಮ ಮಹತ್ವದ್ದಾಗಿದೆ. ಆದರೆ ಅಂತಹವರನ್ನೇ ಕಾಂಗ್ರೆಸ್ ಹೀನಾಮಾನವಾಗಿ ನಡೆಸಿಕೊಂಡಿದೆ. ಇದು ದಲಿತ ಹಾಗೂ ಮಹಿಳಾ ಸಮಾಜಕ್ಕೆ ಮಾಡಿದ ಅಪಮಾನ.

ದಲಿತರಿಗೆ ಅನ್ಯಾಯ ಮಾಡುವಾಗ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಎಲ್ಲಿತ್ತು? ಸಿದ್ದರಾಮಯ್ಯ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ. ಸಿದ್ದರಾಮಯ್ಯ ಅವರೇ ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ?
ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿದ್ದ ಮೋಟಮ್ಮ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಅವರನ್ನು ಸಚಿವರಾಗಿ ಮಾಡುವ ಸಂದರ್ಭ ಬಂದಾಗ ವಿಧಾನಪರಿಷತ್ ಸದಸ್ಯರು ಎಂದು ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯ ಈಗ ದಲಿತ ವಿರೋಧಿಯಾಗಿ ಬದಲಾಗಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು

ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಮೋಟಮ್ಮ ಅವರು ಸಚಿವರಾಗುವುದಕ್ಕೆ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಮೈಸೂರು `ಜಲದರ್ಶಿನಿ’ ಬಳಗಕ್ಕೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಅರ್ಹ ಮೋಟಮ್ಮ ಅವರನ್ನು ಮೂಲೆಗುಂಪು ಮಾಡಿದರು. ಬಿಜೆಪಿ ಎಸ್ಸಿ ಮೋರ್ಚಾ ರಾಜಾಧ್ಯಕ್ಷರು ಸಿದ್ದರಾಮಯ್ಯ ಅವರ ಬಗ್ಗೆ ಮಾಡಿದ ವ್ಯಾಖ್ಯಾನಕ್ಕೆ ಮೋಟಮ್ಮ ಆತ್ಮಕಥನ ಇನ್ನಷ್ಟು ಪುಷ್ಠಿ ಒದಗಿಸಿದೆ. ಅಧಿಕಾರಕ್ಕಾಗಿ ನಾನೇ ದಲಿತ ಎಂದವರು, ರಾಜಕೀಯದುದ್ದಕ್ಕೂ ದಲಿತ ದ್ರೋಹವನ್ನೇ ಮಾಡಿದ್ದಾರೆ. ದಲಿತ ಸಮುದಾಯದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೇ ಅವರನ್ನು ಮಂತ್ರಿ ಮಂಡಲದಲ್ಲಿ ತೆಗೆದುಕೊಳ್ಳದೇ ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಂಡ್ಯ: ಕಳೆದ 60 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಗದ್ದೆ ತಮಗೆ ಬರಬೇಕೆಂದು ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಕುಟುಂಬವೊಂದು ದಯಾಮರಣ ನೀಡಿ ಎಂದು ಅಸಹಾಯಕತೆ ಹೊರಹಾಕುತ್ತಿದೆ.
ಈ ಘಟನೆ ಮಂಡ್ಯದ ಕೀಲಾರ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಮೂರ್ತಿ ಎಂಬವರಿಗೆ ಸೇರಿದ 20 ಗುಂಟೆ ಗದ್ದೆಯ ಪಕ್ಕದಲ್ಲೇ ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಅವರ ಗದ್ದೆಯಿದೆ. ಇದೀಗ ಮೋಟಮ್ಮ ಅವರ ಪತಿ ವೆಂಕಟರಾಮು ಅವರು, ಅವರ ಗದ್ದೆಯ ಪಕ್ಕದಲ್ಲಿರುವ ನಮ್ಮ ಗದ್ದೆಯ ಮೇಲೆ ಕಣ್ಣು ಹಾಕಿ, ಗದ್ದೆಯನ್ನು ಊಳಲು ಬಿಡುತ್ತಿಲ್ಲ ಅಂತ ರೈತ ಆರೋಪಿಸುತ್ತಿದ್ದಾರೆ.

ಕೀಲಾರ ಗ್ರಾಮದ ಸರ್ವೆ ನಂಬರ್ 357 ಮತ್ತು 358 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಬರುವ 20 ಗುಂಟೆ ಗದ್ದೆಯನ್ನು ಕಳೆದ 60 ವರ್ಷಗಳಿಂದ ನಾವೇ ಊಳುತ್ತಿದ್ದೇವೆ. ಈ ಜಮೀನು ಸರ್ಕಾರದಿಂದ ನಮಗೆ ಕೊಡುಗೆಯಾಗಿ ಬಂದಿದೆ. ಆದ್ರೆ ಈಗ ಏಕಾಏಕಿ ಮೋಟಮ್ಮ ಪತಿ ವೆಂಕಟರಾಮು ಮತ್ತು ಜೊತೆಯವರು ಸೇರಿಕೊಂಡು ಗದ್ದೆಯಲ್ಲಿ ನಾಟಿ ಮಾಡಲು ಬಿಡುತ್ತಿಲ್ಲ. ಸುತ್ತಮುತ್ತ ಎಲ್ಲರ ಗದ್ದೆಯೂ ನಾಟಿ ಮಾಡಿಯಾಗಿದೆ. ಆದ್ರೆ ನಮ್ಮ ಗದ್ದೆ ಮಾತ್ರ ನಾಟಿ ಕೆಲಸ ಆಗದೇ ಹಾಗೇ ಉಳಿದಿದೆ ಎಂದು ನಾಗರಾಜು ಮತ್ತು ಮೂರ್ತಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ನಾಗರಾಜು, ಮೂರ್ತಿ ಹಾಗೂ ಮೋಟಮ್ಮ ಪತಿ ವೆಂಕಟರಾಮು ಎಲ್ಲರೂ ಸಂಬಂಧಿಕರೇ ಆಗಿದ್ದು ಹಳೇ ವೈಷಮ್ಯದಿಂದ ಗಲಾಟೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿರುವ ನಾಗರಾಜು, ನಾನು ನಿವೃತ್ತ ಎಸ್‍ಐ ಆಗಿದ್ರು ಮಾಜಿ ಸಚಿವರ ಕುಟುಂಬದ ದೌರ್ಜನ್ಯ ಎದುರಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ಹೊರಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಧಾರವಾಡ: ಕಾಂಗ್ರೆಸ್‍ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ನಮ್ಮನ್ನು ಕೀಳಾಗಿ ನೋಡುತ್ತಾರೆ ಎಂದು ಕಾರ್ಯಕರ್ತೆಯೊಬ್ಬರು ಹಿರಿಯ ನಾಯಕಿ ಮೋಟಮ್ಮವರ ಎದುರು ಅಳಲು ತೋಡಿಕೊಂಡಿದ್ದಾರೆ.
ಧಾರವಾಡದಲ್ಲಿ ನಡೆದ ‘ಚುನಾವಣೆ: ಒಳ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಾಯಕಿ ಮೋಟಮ್ಮ ಭಾಗಿಯಾಗಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತೆ ಆಗಿರುವ ಅನಿತಾ ಗುಂಜಾಳ ಎಂಬವರು ತಮ್ಮ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು.
ಪಕ್ಷದಲ್ಲಿ ಲೀಡರ್ ಶಿಪ್ ಸಿಗಲು ಗ್ಲಾಮರ್ ಆಗಿರಬೇಕೆಂತೆ. ನಾನು ಹರಿದ ಸೀರೆಯನ್ನು ಧರಿಸಿ ರಾಜಕಾರಣ ಮಾಡಬಹುದು ಎಂಬ ವಿಚಾರವನ್ನು ಹೊಂದಿರುವ ಮಹಿಳೆ. ಆದ್ರೆ ನಮ್ಮ ನಾಯಕರಿಗೆ ಚುನಾವಣಾ ಪ್ರಚಾರದಲ್ಲಿ ಮಾತ್ರ ಕಾರ್ಯಕರ್ತರು ನೆನಪು ಬರುತ್ತಾರೆ. ಬನ್ನಿ ಮೇಡಂ ನಿಮಗೆ ಸ್ಥಳೀಯ ಜನರು ಪರಿಚಯವಿದ್ದರೆ ಎಂದು ನಮ್ಮ ಪರವಾಗಿ ಪ್ರಚಾರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.

ಕೇವಲ ಪ್ರಚಾರದ ಸಮಯದಲ್ಲಿ ಮಾತ್ರ ಮಹಿಳಾ ಕಾರ್ಯಕರ್ತರು ನೆನಪಾಗುತ್ತಾರೆ. ಆದ್ರೆ ಪ್ರಚಾರದ ವೇಳೆಯಲ್ಲಿಯೂ ನಮಗೆ ಗೌರವ ನೀಡಲ್ಲ. ಗೌರವಯುತವಾದ ಕುಟುಂಬದಿಂದ ಬಂದ ನಮಗೆ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕು. ಪಕ್ಷದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವ್ಯವಸ್ಥೆ ಬದಲಾಗಬೇಕಾಗಿದ್ದು, ಇಂದು ನನಗೆ ನಿಮ್ಮಿಂದ ಉತ್ತರ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಟ್ಟಡವೊಂದರಲ್ಲಿ ಸಭೆ ನಡೆದಿತ್ತು. ಹತ್ತಾರು ಪುರಷರ ನಡುವೆ ನಾನೊಬ್ಬಳೆ ಮಹಿಳೆ. ಆದ್ರೆ ಅಲ್ಲಿ ನನಗೆ ಯಾರು ಗೌರವ ನೀಡಲಿಲ್ಲ. ಬದಲಾಗಿ ಒಬ್ಬ ನಾಯಕ ನನ್ನನ್ನು ಮುಟ್ಟಲು ಬಂದಾಗ, ಆತನನ್ನು ನಾನು ದೂರ ತಳ್ಳಿದ್ದೇನೆ. ಆ ವೇಳೆ ಘಟನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ರೆ ಇವತ್ತಿನ ನಮ್ಮ ನಾಯಕರು ಶಾಸಕರಾಗಿಯೇ ಆಯ್ಕೆ ಆಗುತ್ತಿರಲಿಲ್ಲ. ಕೊನೆಗೆ ಆ ವ್ಯಕ್ತಿ ನನ್ನ ಕಾಲುಗಳನ್ನು ಹಿಡಿದು ಕ್ಷಮೆ ಕೇಳಿಕೊಂಡ ಎಂದು ಹೇಳುತ್ತಾ ಭಾವುಕರಾದರು.

ಮಹಿಳೆಯರನ್ನು ರಾಜಕಾರಣಕ್ಕೆ ಕರೆತರೋದಕ್ಕೆ ನಮಗೆ ಪಕ್ಷದಿಂದ ಯಾವುದೇ ಬೆಂಬಲ ಸಿಗಲ್ಲ. ಪಕ್ಷಕ್ಕಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ. ಮಹಿಳೆಯರಿಗೆ ಸಂಬಂಧಿಸಿದ ಸ್ಥಾನಮಾನಗಳು ಪಕ್ಷದಲ್ಲಿ ಬದಲಾಗಬೇಕಿದೆ ಎಂದು ಆಗ್ರಹಿಸಿದರು.

ಮಂಗಳೂರು: ಹಜ್ ಭವನಕ್ಕೆ ಟಿಪ್ಪು ಹೆಸರು ಇಡುವುದರಲ್ಲಿ ತಪ್ಪೇನಿಲ್ಲ. ಟಿಪ್ಪು ಹೆಸರಿಂದಲೇ ಕಾಂಗ್ರೆಸ್ ಗೆ ಸೋಲಾಗಿದೆ ಅನ್ನೋದು ತಪ್ಪು ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಧರ್ಮಸ್ಥಳದಲ್ಲಿ ಹೇಳಿದ್ದಾರೆ.
ಒಬ್ಬ ಶ್ರೇಷ್ಠ ವ್ಯಕ್ತಿ, ಹೋರಾಟಗಾರರ ಹೆಸರನ್ನು ಹಜ್ ಭವನಕ್ಕೆ ಇಡುವುದರಲ್ಲಿ ತಪ್ಪಿಲ್ಲ. ಆದರೆ ಹಠಕ್ಕೆ ಬಿದ್ದು ಹೆಸರಿಡೋದು ಸರಿಯಲ್ಲ. ನಿಜವಾದ ಗೌರವದಿಂದ ನಾಯಕರ ಮೇಲಿನ ವಿಶ್ವಾಸಕ್ಕೆ ಆ ಹೆಸರಿಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಜಮೀರ್ ಅಹ್ಮದ್ ಆಸಕ್ತಿ

ಸಮಾಜಕ್ಕಾಗಿ ಬಹಳಷ್ಟು ಒಳ್ಳೆ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಅಂದಿನಿಂದಲೂ ನೆಹರೂ, ರಾಜೀವ್ ಗಾಂಧಿ ಕಾಲದಿಂದ ಒಳ್ಳೆ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿದ್ದರು. ಅದೊಂದೇ ತಪ್ಪು ಎಂದು ನೋಡಬಾರದು. ಜನರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಭಾಗ್ಯಗಳಿಗೆ ಬೆಲೆ ಇಲ್ಲವಾ. ಎಲ್ಲಾ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಕೂಡ ಸರ್ಕಾರದ ಕಾರ್ಯಕ್ರಮವಾಗಿ ಮಾಡುತ್ತಿದೆ. ಆದ್ದರಿಂದ ನಾವು ಕೆಲವೊಂದನ್ನು ಮಾತ್ರ ಯಾಕೆ ಕೆಟ್ಟ ದೃಷ್ಟಿಯಿಂದ ನೋಡಬೇಕು ಎಂದು ಮೋಟಮ್ಮ ವಿರೋಧ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋದರಲ್ಲಿ ತಪ್ಪೇನಿಲ್ಲ: ಜಮೀರ್ ಅಹ್ಮದ್ ಸಮರ್ಥನೆ

ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೃದಯಾಘಾತದಿಂದ ಸಾವು ಎಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.
ವೀರೇಂದ್ರ ಭಗತ್ ಎಂಬ ವ್ಯಕ್ತಿಯ ಹೆಸರಿನಿಂದ ಈ ಸಂದೇಶ ಶೇರ್ ಆಗಿದ್ದು, ಈ ಕುರಿತು ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಯನ್ನು ಸತ್ತಿದ್ದಾರೆಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

ಇದರಿಂದ ಕುಟುಂಬಸ್ಥರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಕೂಡಲೇ ಫೇಸ್‍ಬುಕ್‍ನಲ್ಲಿ ಸಂದೇಶ ರವಾನೆ ಮಾಡಿದ ವ್ಯಕ್ತಿ ವೀರೇಂದ್ರ ಭಗತ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅನಂತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಮೂಡಿಗೆರೆ ಪೊಲೀಸರು ವೀರೇಂದ್ರ ಭಗತ್ ಬಗ್ಗೆ ತನಿಖೆ ನಡೆಸಿ, ಆತನ ಫೇಸ್‍ಬುಕ್ ಖಾತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಚುನಾವಣೆ ಹೊತ್ತಲ್ಲಿ ಕಾರ್ಯಕರ್ತರು ತಮ್ಮ ವಿರೋಧ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ತಮ್ಮ ಅಭ್ಯರ್ಥಿಗಳನ್ನ ಹಾಡಿ ಹೊಗಳೋದು ಮಾಮೂಲಿ. ಆದರೆ ಓರ್ವ ಬದುಕಿರುವ ವ್ಯಕ್ತಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಯಿಸುವ ಮಟ್ಟಕ್ಕೆ ಆಧುನಿಕ ಸಮಾಜ ಬೆಳೆದು, ಸಮಾಜ ತಂತ್ರಜ್ಞಾನವನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ತಿದೆ ಎಂದು ಎಂದು ಮೋಟಮ್ಮ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.