Tag: ಮೋಚಾ ಚಂಡಮಾರುತ

  • ಮೋಚಾ ಅಬ್ಬರಕ್ಕೆ ನಲುಗಿದ ಮ್ಯಾನ್ಮಾರ್ – 6 ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ

    ಮೋಚಾ ಅಬ್ಬರಕ್ಕೆ ನಲುಗಿದ ಮ್ಯಾನ್ಮಾರ್ – 6 ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ

    ನೈಪಿಡಾವ್: ಬಂಗಾಳಕೊಲ್ಲಿಯಲ್ಲಿ (Bay of Bengal) ಹುಟ್ಟಿಕೊಂಡಿರುವ ಮೋಚಾ ಚಂಡಮಾರುತ (Cyclone Mocha) ಭಾರತ, ಬಾಂಗ್ಲಾ (Bangladesh) ಹಾಗೂ ಮ್ಯಾನ್ಮಾರ್ (Myanmar) ದೇಶಗಳಲ್ಲಿ ಭೀತಿ ಹುಟ್ಟಿಸಿದೆ. ಇದು 1982ರ ಬಳಿಕ ಬಂಗಾಳಕೊಲ್ಲಿಯಲ್ಲಿನ 2ನೇ ಅತ್ಯಂತ ತೀವ್ರವಾದ ಚಂಡಮಾರುತ ಎನ್ನಲಾಗಿದೆ. ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿದೆ.

    ಚಂಡಮಾರುತದ ಹೊಡೆತಕ್ಕೆ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸಿಟ್ವೆ ಟೌನ್‌ಶಿಪ್ ಬಳಿ ಭೂಕುಸಿತವಾಗಿದೆ. ಕಟ್ಟಡವೊಂದರ ಛಾವಣಿ ಕುಸಿದು ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ. ರಸ್ತೆಗಳು ನೀರಿನಿಂದ ತುಂಬಿ ಹರಿದು ನದಿಗಳಾಗಿ ಪರಿವರ್ತನೆಗೊಂಡಿವೆ. ಮರ, ಕಂಬಗಳು ಬಿದ್ದು, ಸಂಪರ್ಕವೂ ಕಡಿತಗೊಂಡಿದೆ ಎಂದು ವರದಿಯಾಗಿದೆ.

    ಚಂಡಮಾರುತ ಗಂಟೆಗೆ ಸುಮಾರು 209 ಕಿ.ಮೀ ವೇಗದ ಪ್ರಬಲ ಗಾಳಿ ಹೊಂದಿದೆ ಎನ್ನಲಾಗಿದೆ. ಇದರಿಂದ ಹಲವು ನಗರಗಳ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಮೊಬೈಲ್ ಫೋನ್ ಟವರ್‌ಗಳು, ದೋಣಿಗಳು ಮತ್ತು ದೀಪದ ಕಂಬಗಳಿಗೆ ಹಾನಿಯಾಗಿದೆ. ಬಲವಾದ ಗಾಳಿಯಿಂದಾಗಿ ಸಿಟ್ವೆ ಟೌನ್‌ಶಿಪ್‌ನ ಎತ್ತರದ ಪ್ರದೇಶಗಳಲ್ಲಿ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 20,000 ಜನರಲ್ಲಿ 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಹೆಚ್ಚು ಮಕ್ಕಳನ್ನ ಹೆರಲು ಚೀನಾ ಪ್ರೋತ್ಸಾಹ – 20ಕ್ಕೂ ಹೆಚ್ಚು ನಗರಗಳಲ್ಲಿ ಹೊಸ ಯೋಜನೆ ಜಾರಿಗೆ ಪ್ಲ್ಯಾನ್

    ಮ್ಯಾನ್ಮಾರ್ ಕರಾವಳಿಗೆ ಅಪ್ಪಳಿಸಿರುವ ಮೋಚಾದಿಂದ ಪಾರಾಗಲು ಸಾವಿರಾರು ಜನರನ್ನು ಮಠ, ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಮೋಚಾ ಸುಮಾರು 2 ದಶಕಗಳಲ್ಲಿಯೇ ಬಾಂಗ್ಲಾದೇಶದಲ್ಲಿ ಕಂಡುಬಂದ ಅತ್ಯಂತ ಭಯಾನಕ ಚಂಡಮಾರುತವಾಗಿದೆ ಎಂದು ಮುನ್ಸೂಚಕರು ಎಚ್ಚರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಚಂಡಮಾರುತದ ಎಫೆಕ್ಟ್ ಇರಲಿದ್ದು, ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: 12 ವಿದ್ಯಾರ್ಥಿನಿಯರಿಗೆ ಕಿರುಕುಳ – ಶಿಕ್ಷಕ ಅರೆಸ್ಟ್

  • ತೀವ್ರ ಸ್ವರೂಪ ತಾಳಿದ ಮೋಚಾ ಚಂಡಮಾರುತ – ಹಲವು ರಾಜ್ಯಗಳಲ್ಲಿ ಹೈ ಅಲರ್ಟ್

    ತೀವ್ರ ಸ್ವರೂಪ ತಾಳಿದ ಮೋಚಾ ಚಂಡಮಾರುತ – ಹಲವು ರಾಜ್ಯಗಳಲ್ಲಿ ಹೈ ಅಲರ್ಟ್

    ನವದೆಹಲಿ: ಆಗ್ನೇಯ ಬಂಗಾಳಕೊಲ್ಲಿಯಲ್ಲಿ (Bay of Bengal) ಸೃಷ್ಟಿಯಾಗಿರುವ ಮೋಚಾ ಚಂಡಮಾರುತ (Cyclone Mocha) ಅತ್ಯಂತ ತೀವ್ರ ಸ್ವರೂಪ ತಾಳಿದೆ. ಪ್ರಸ್ತುತ ಚಂಡಮಾರುತ ಪೋರ್ಟ್‌ಬ್ಲೇರ್‌ನಿಂದ 520 ಕಿ.ಮೀ ದೂರದ ಆಗ್ನೇಯ ದಿಕ್ಕಿನಲ್ಲಿ ಚಲಿಸುತ್ತಿದೆ.

    ಮೋಚಾ ಚಂಡಮಾರುತ ಜನತೆಯನ್ನು ಭೀತಿಗೆ ತಳ್ಳಿದೆ. ಇದು ಕರಾವಳಿ ಭಾಗದಲ್ಲಿ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಬಂಗಾಳ (West Bengal) ಸೇರಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: 115-120 ಸೀಟ್‌ ಗೆಲ್ತೀವಿ – ಹೋಟೆಲಿನಲ್ಲಿ ದೋಸೆ ಸವಿದ ಬಿಜೆಪಿ ನಾಯಕರು

    ಶನಿವಾರ ತ್ರಿಪುರಾ, ಮಿಜೋರಾಂ ಮತ್ತು ಬಂಗಾಳದಲ್ಲಿ ಭಾರೀ ಮಳೆಯಾಗಲಿದೆ. ಭಾನುವಾರ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ರಣಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಮೋಚಾ ಚಂಡಮಾರುತ ಬಳಿಕ ಬಾಂಗ್ಲಾದೇಶ ಮತ್ತು ಮಯನ್ಮಾರ್ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ