Tag: ಮೋಕ್ಷಿತಾ

  • BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    ದೊಡ್ಮನೆಯ (Bigg Boss Kannada 11)  ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಮನೆಯ ಪಕ್ಷಪಾತಿ, ಅಶಕ್ತ ಎಂಬ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ, ಉಗ್ರಂ ಮಂಜುಗೆ (Ugramm Manju) ರಜತ್ (Rajath) ಚೀಪ್ ಎಂದು ಕುಟುಕಿದ್ದಾರೆ. ಇತ್ತ ಮೋಕ್ಷಿತಾ (Mokshitha) ಕೂಡ ಭವ್ಯಾ ಮೇಲೆ ಎಗರಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಚೈತ್ರಾ ಆಚಾರ್ ತಿರುಗೇಟು

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ನನ್ನಿಂದಲೇ ಈ ಟಾಸ್ಕ್ ಗೆಲ್ತು. ನನ್ನಿಂದಲೇ ಈ ಆಟ ಗೆದ್ದರು ಅಂದುಕೊಳ್ಳುವ ಚೀಪ್ ಮೆಂಟಾಲಿಟಿ ಮಂಜಣ್ಣನದ್ದು ಎಂದು ರಜತ್ ಹೇಳಿದ್ದಾರೆ. ರಜತ್ ಮಾತು ಕೇಳಿ, ಮಂಜು ಗರಂ ಆಗಿದ್ದಾರೆ. ನಾನು ಮಾಡಿರೋ ಕೆಲಸನಾ ನಾನೇ ಹೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಬಿಗ್ ಬಾಸ್‌ನ ಟಾಸ್ಕ್ ರೂಲ್ಸ್‌ನಂತೆಯೇ ಸ್ಪರ್ಧಿ ಮಂಜುರನ್ನು ರಜತ್ ನೀರಿಗೆ ತಳ್ಳಿದ್ದಾರೆ.

    ಭವ್ಯಾ ಎಲ್ಲರ ಜೊತೆ ಮಿಂಗಲ್ ಆಗೋದಿಲ್ಲ. ನೀವು ತ್ರಿವಿಕ್ರಮ್ ಜೊತೆ ಡಿಪೆಂಡ್ ಆಗ್ತೀರಾ. ತುಂಬಾ ನಿಷ್ಠುರವಾಗಿ ಮಾತಾಡ್ತೀರಾ ಎಂದು ಮೋಕ್ಷಿತಾ ಹೇಳಿದರು. ಮೋಕ್ಷಿತಾರ ಪ್ರತಿ ಮಾತಿಗೂ ಭವ್ಯಾ ತಿರುಗೇಟು ನೀಡಿದ್ದಾರೆ. ನಾನು ಎಲ್ಲರ ಬಳಿ ಹೋಗಿ ಕಷ್ಟ ಸುಖ ಹೇಳಬೇಕಾಗಿಲ್ಲ. ತ್ರಿವಿಕ್ರಮ್ ನನ್ನ ಆಟವನ್ನ ಆಡುತ್ತಿಲ್ಲ. ನಾನು ಈ ಮನೆಗೆ ಸಂಬಂಧಗಳನ್ನು ಬೆಳೆಸಲು ಬಂದಿಲ್ಲ. ಯಾರ ಬಳಿ ಕೂಡ ಸರ್ಟಿಫಿಕೇಟ್ ಬೇಕಿಲ್ಲ ಎಂದು ಭವ್ಯಾ ಕೆಂಡಕಾರಿದ್ದಾರೆ. ಆ ನಂತರ ಭವ್ಯಾರನ್ನು (Bhavya Gowda) ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ.

    ಇನ್ನೂ ಶಿಶಿರ್ ಎಲಿಮಿನೇಷನ್ ಮತ್ತು ಗೋಲ್ಡ್ ಸುರೇಶ್ ನಿರ್ಗಮನದ ನಂತರ ಈ ವಾರಾಂತ್ಯ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ.

  • ನಾಮಿನೇಷನ್ ಹಾಟ್ ಸೀಟ್‌ನಲ್ಲಿ 8 ಮಂದಿ- ಈ ಬಾರಿ ಡಬಲ್ ಎಲಿಮಿನೇಷನ್?

    ನಾಮಿನೇಷನ್ ಹಾಟ್ ಸೀಟ್‌ನಲ್ಲಿ 8 ಮಂದಿ- ಈ ಬಾರಿ ಡಬಲ್ ಎಲಿಮಿನೇಷನ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಎಲಿಮಿನೇಷನ್ ನಂತರ ಕಳೆದ ವಾರ ಯಾರ ಎಲಿಮಿನೇಷನ್ ಕೂಡ ನಡೆದಿಲ್ಲ. ಈ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಯಾರಿಗೆ ಈ ವಾರ ಮನೆಯಿಂದ ಗೇಟ್ ಪಾಸ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಸ್ಪರ್ಧಿಗಳು ಅಳಿವು- ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಸದ್ಯ ಈ ವಾರ ಕ್ಯಾಪ್ಟನ್ ಗೌತಮಿ ಕಡೆಯಿಂದ ಮೋಕ್ಷಿತಾ ಅವರು ನೇರವಾಗಿ ನಾಮಿನೇಟ್ ಆದರೆ, ಮನೆಯ ಸದಸ್ಯರಿಂದ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಕೂಡ ಇದ್ದಾರೆ. ಒಟ್ಟು ಈ ಎಂಟು ಮಂದಿಯಲ್ಲಿ ಭವ್ಯಾ ಮತ್ತು ಮೋಕ್ಷಿತಾ ಅವರೇ ಅತೀ ಹೆಚ್ಚು ಬಾರಿ ನಾಮಿನೇಟ್ ಆಗಿರುವುದು. ಉಳಿದಂತೆ, ಚೈತ್ರಾ ಕುಂದಾಪುರ (Chaithra Kundapura), ತ್ರಿವಿಕ್ರಮ್, ಶಿಶಿರ್, ಧನರಾಜ್ ಆಚಾರ್, ರಜತ್ ಕಿಶನ್, ಹನುಮಂತ ಲಮಾಣಿ (Hanumantha Lamani) ಇದ್ದಾರೆ.

    ಈ ಎಂಟು ಮಂದಿಯಲ್ಲಿ ಈ ವಾರ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲ. ಹಾಗಾಗಿ, ಈ ವಾರ ಡಬಲ್ ಎಲಿಮಿನೇಷನ್ ಮಾಡಿದರೂ ಅಚ್ಚರಿ ಇಲ್ಲ. ವಿಶೇಷವೆಂದರೆ, ಪದೇಪದೇ ನಾಮಿನೇಟ್ ಆಗುತ್ತಿದ್ದ ಗೋಲ್ಡ್ ಸುರೇಶ್ ಈ ಬಾರಿ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.

  • ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇದೀಗ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ದೊಡ್ಮನೆಯ ಮಹಾರಾಜನಾಗಿ ಆಳಿದ ಉಗ್ರಂ ಮಂಜು ಅವರು ಗೌತಮಿಗೆ ಕಟುಕ ರಾಜನಾಗಿರಲಿಲ್ಲ. ಈ ವಿಷ್ಯದಲ್ಲಿ ಪಕ್ಷಪಾತವಾಗಿ ಮಂಜು ಆಡಿದ್ದರು. ಅದಕ್ಕೆ ಸುದೀಪ್ (Sudeep) ವಾರಾಂತ್ಯ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ, ಬಿಗ್ ಬಾಸ್‌ನಲ್ಲಿ ಆಟ ಆಡಿ ಎಂದು ಮಂಜು ಹಾಗೂ ಗೌತಮಿಗೆ (Gouthami) ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    ಗೆಳತಿ ಮಂಜು ಅವರು ಪಕ್ಷಪಾತವಾಗಿ ಆಟ ಆಡಿದ್ದರು. ಇದು ಮನೆಯ ಉಳಿದ ಸದಸ್ಯರ ಮೇಲೂ ಪರಿಣಾಮ ಬಿದ್ದಿತ್ತು. ಇದರ ಬಗ್ಗೆ ಮನೆ ಮಂದಿಗೂ ಬೇಸರವಿದೆ. ಈ ಕುರಿತು ಸುದೀಪ್ ಅವರು ಪರೋಕ್ಷವಾಗಿಯೇ ಮಾತನಾಡಿದರು. ಬಿಗ್ ಬಾಸ್‌ಗೆ ಇಲ್ಲಿ ಯಾರೂ ಸಂಬಂಧ ಬೆಳೆಸಲು ಬಂದಿಲ್ಲ. ಈ ರಾಜನ ಆಟ ಮೊದಲಿಗೆ ಚೆನ್ನಾಗಿಯೇ ಟೇಕ್ ಓವರ್ ಆಗಿತ್ತು. ಆಮೇಲೆ ಏನಾಯ್ತು ಮುಂಜು ಅವರೆ? ಇಲ್ಲಿ ಪಾತ್ರವನ್ನೂ, ಸಂಬಂಧವನ್ನೂ ನಿಭಾಯಿಸುವಾಗ, ಈ ರೀತಿ ಆಗತ್ತದೆ. ಈ ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿ ಇಡಿ. ಸಂಬಂಧ ಹೊರಗಡೆ ಬೆಳೆಸಿ, ಸದ್ಯಕ್ಕೆ ಬಿಗ್ ಬಾಸ್‌ನಲ್ಲಿ ಆಟ ಆಡಿ. ವೀಕ್ಷಕರಿಗೆ ಇದೊಂದು ಉಪಕಾರ ಮಾಡಿ ಎಂದು ಗೌತಮಿ ಮತ್ತು ಮಂಜುಗೆ (Ugramm Manju) ಸುದೀಪ್ ಎಚ್ಚರಿಕೆ ನೀಡಿದ್ದಾರೆ.

    ಒಂದು ಸಲಹೆ ಏನೆಂದರೆ, ನೀವು ಅಲ್ಲಿ ಸ್ನೇಹಿತರಾಗಿಯೇ ಇರಿ. ಆದರೆ ಟಾಸ್ಕ್ ಅಂತ ಬಂದಾಗ, ನಿಮ್ಮ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮನೆಯಲ್ಲಿ ಬಂದಿವೆ. ಆದರೆ ನಾಳೆ ನೀವಿಬ್ಬರೂ ಜಗಳ ಆಡಿ ಅಂತಲ್ಲ. ಟಾಸ್ಕ್ ಅಂತ ಬಂದಾಗ ಸರಿಯಾಗಿ ಗಮನ ವಹಿಸಿ. ಆಗಿಲ್ಲ ಅಂದರೆ ಬಿಗ್ ಬಾಸ್ ಹತ್ತಿರ ಹೇಳಿ. ಉಸ್ತುವಾರಿ ವಹಿಸಿಕೊಳ್ಳಬೇಡಿ ಎಂದಿದ್ದಾರೆ ಸುದೀಪ್.

    ಇನ್ನೂ ಯುವರಾಣಿ ಮೋಕ್ಷಿತಾ ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆ ಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದರೆ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಮಂಜುಗೆ ಹೇಳಿರುತ್ತಾರೆ. ರಾಜನಾಗಿ ಮಂಜು ಅವರು ಗೌತಮಿಗೆ ಮೋಕ್ಷಿತಾರ ಆಜ್ಞೆ ಪಾಲಿಸಿ ಎಂದು ಹೇಳದೇ ಬೆಂಬಲ ನೀಡಿರುತ್ತಾರೆ. ಅದಕ್ಕಾಗಿ ಸುದೀಪ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.