Tag: ಮೊಹಮ್ಮದ್ ಹಫೀಜ್

  • ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ದುಬೈ: ಟೀಂ ಇಂಡಿಯಾ ಆಟಗಾರ ಅರ್ಶ್‌ದೀಪ್‌ ಸಿಂಗ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಬೆಂಬಲಿಸಿದ್ದಾರೆ.

    ಏಷ್ಯಾಕಪ್‌ನ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಹಣಾಹಣಿ ನಡೆಯಿತು. ಈ ಪಂದ್ಯದ 18ನೇ ಓವರ್‌ನಲ್ಲಿ ಎಡಗೈ ವೇಗಿ ಬೌಲರ್ ಅರ್ಶ್‌ದೀಪ್‌ ಸಿಂಗ್ ಒತ್ತಡದ ಸಮಯದಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.

    ಇದರಿಂದ ಭಾರೀ ಟಿಕೆಗಳು ವ್ಯಕ್ತವಾಯಿತು. ಅಲ್ಲದೇ ಅರ್ಶ್‌ದೀಪ್‌ ಅವರ ಪುಟದಲ್ಲಿ ಖಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತೀಯ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅರ್ಶ್‌ದೀಪ್‌ ಸಿಂಗ್ ಬೆಂಬಲಕ್ಕೆ ನಿಂತರು. ಈ ಬೆನ್ನಲ್ಲೇ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸಹ ಅರ್ಶ್‌ದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಅವಮಾನಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಹಫೀಜ್, ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ ಏನೆಂದರೆ ನಾವು ಕ್ರೀಡೆಯಲ್ಲಿ ಮನುಷ್ಯರಾಗಿ ಸಹಜ ತಪ್ಪುಗಳನ್ನು ಮಾಡುತ್ತೇವೆ. ಆದರೆ ದಯವಿಟ್ಟು ಈ ತಪ್ಪುಗಳಿಂದ ಯಾರನ್ನೂ ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಇಸ್ಲಾಮಾಬಾದ್: 2022ರ ಟಿ20 ವಿಶ್ವಕಪ್‍ನಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರುಬದುರಾಗಲಿದೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗರು ಮಾತನಾಡಲಾರಂಭಿಸಿದ್ದಾರೆ.  ಪಾಕಿಸ್ತಾನ ತಂಡ ಭಾರತದ ಆ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಇತರ ಆಟಗಾರರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಹೇಳಿಕೆ ನೀಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಾಟದ ವೇಳಾ ಪಟ್ಟಿಬಿಡುಗಡೆಯಾಗಿದೆ. ಈ ಬಗ್ಗೆ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ಹಫೀಜ್, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟದಲ್ಲಿ ಭಾರತದ ತಂಡದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಹೊರತು ಪಡಿಸಿದರೆ ಭಾರತ ತಂಡದಲ್ಲಿರುವ ಇತರ ಆಟಗಾರರು ಆ ಒತ್ತಡವನ್ನು ನಿಭಾಯಿಸುತ್ತಾರೆ ಎಂಬ ನಂಬಿಕೆ ಇಲ್ಲ. ಆದರೆ ಇವರಿಬ್ಬರು ಮಾತ್ರ ಅಪಾಯಕಾರಿ ಆಟಗಾರರು ಹಾಗಾಗಿ ಪಾಕಿಸ್ತಾನ ಈ ಇಬ್ಬರ ಬಗ್ಗೆ ಎಚ್ಚರಿಕೆಯ ನಡೆ ಇಡಬೇಕು ಎಂದಿದ್ದಾರೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಾಗ ಹೆಚ್ಚಿನ ಒತ್ತಡ ಇರುತ್ತದೆ. ನಾನು ಸಾಕಷ್ಟು ಬಾರಿ ಆಡಿದ್ದೇನೆ ದುಬೈನಲ್ಲಿ 2021ರ ಟಿ20 ವಿಶ್ವಕಪ್‍ನಲ್ಲಿ ನಮ್ಮ ತಂಡ 10 ವಿಕೆಟ್‍ಗಳಿಂದ ಗೆದ್ದಿರುವುದು ಅವಿಸ್ಮರಣೀಯ. ಭಾರತ ಸೂಪರ್‌-12 ಹಂತದಲ್ಲಿ ಸೋತರ, ನಾವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತೆವು ಎಂದರು. ಇದನ್ನೂ ಓದಿ: ಅಮೆರಿಕದ ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಕಾಫಿನಾಡ ಪ್ರತಿಭೆ ನಾಸ್ತೋಶ್ ಕೆಂಜಿಗೆ

  • ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಆಟಗಾರ ಮೊಹಮ್ಮದ್ ಹಫೀಜ್ ಬ್ಯಾಟಿಂಗ್ ಮಧ್ಯದಲ್ಲಿ ಮೂತ್ರವಿಸರ್ಜನೆಗೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಗೆಪಾಟಲಿಗೀಡಾಗಿದ್ದಾರೆ.

    ಕೊರೊನಾ ಅಬ್ಬರಿಸುವ ಮುಂಚೆಯೇ ಲೀಗ್ ಹಂತದ ಪಿಎಸ್‍ಎಲ್ ಪಂದ್ಯಗಳು ಮುಗಿದಿದ್ದವು. ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗುವ ಮೊದಲೇ ಕೊರೊನಾ ಆರಂಭವಾಗಿತ್ತು. ಈಗ ಕೊರೊನಾ ನಂತರ ಮತ್ತೆ ಪಿಎಸ್‍ಎಲ್ ಶುರುವಾಗಿ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತಿವೆ.

    ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯ ಪೇಶಾವರ್ ಜಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಸುಲಭ ಜಯ ಸಾಧಿಸಿದೆ. ಆದರೆ ಪೇಶಾವರ್ ಜಲ್ಮಿ ತಂಡ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿದ್ದ ಲಾಹೋರ್ ಖಲಂದರ್ಸ್ ತಂಡದ ಮೊಹಮ್ಮದ್ ಹಫೀಜ್, ಬ್ಯಾಟಿಂಗ್ ಆಡುವ ಮಧ್ಯದಲ್ಲಿ ಮೈದಾನದಿಂದ ಹೊರಹೋಗಿ ಮೂತ್ರ ವಿಸರ್ಜನೆ ಮಾಡಿ ಬಂದಿದ್ದಾರೆ. ಈ ಕಾರಣಕ್ಕೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

    ಹಫೀಜ್‍ನನ್ನು ಪೇಶಾವರ್ ಜಲ್ಮಿ ತಂಡದ ವಿಕೆಟ್ ಕೀಪರ್ ಇಮಾಮ್-ಉಲ್-ಹಕ್ ಟ್ರೋಲ್ ಮಾಡಿದ್ದು, ಆತ ಕಳೆದ ಎರಡು ಓವರಿನಿಂದ ಸೂಸು ಮಾಡಬೇಕು ಎನ್ನುತ್ತಿದ್ದ ಎಂದು ಹೇಳಿ ಹಾಸ್ಯ ಮಾಡಿದ್ದಾರೆ. ಪಂದ್ಯದ ಮಧ್ಯೆ ಕಮೆಂಟೆಟರ್ ಜೊತೆ ವಹಾಬ್ ರಿಯಾಜ್, ಶೊಯೇಬ್ ಮಲ್ಲಿಕ್ ಮತ್ತು ಇಮಾಮ್-ಉಲ್-ಹಕ್ ಮಾತನಾಡುತ್ತಿರುತ್ತಾರೆ. ಈ ವೇಳೆ ಇಮಾಮ್ ಹಫೀಜ್ ಎರಡು ಓವರಿನಿಂದ ಸೂಸು ಮಾಡಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.