Tag: ಮೊಹಮ್ಮದ್‌ ಯೂನಸ್

  • 2025ರ ಅಂತ್ಯ ಅಥವಾ 2026ರ ಆರಂಭದಲ್ಲಿ ಬಾಂಗ್ಲಾ ಚುನಾವಣೆ – ಮೊಹಮ್ಮದ್ ಯೂನಸ್

    2025ರ ಅಂತ್ಯ ಅಥವಾ 2026ರ ಆರಂಭದಲ್ಲಿ ಬಾಂಗ್ಲಾ ಚುನಾವಣೆ – ಮೊಹಮ್ಮದ್ ಯೂನಸ್

    ಢಾಕಾ: ಮುಂದಿನ ವರ್ಷದ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು (Elections) ನಡೆಸಲಾಗುವುದು ಎಂದು ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರದ ಮುಖ್ಯಸ್ಥ ನಾಯಕ ಮೊಹಮ್ಮದ್ ಯೂನಸ್ (Muhammad Yunus) ಹೇಳಿದ್ದಾರೆ.

    ಚುನಾವಣೆಯ ವ್ಯವಸ್ಥೆಗೂ ಮುನ್ನ ಸಾಕಷ್ಟು ಸುಧಾರಣೆಗಳು ಆಗಬೇಕಿದೆ. ದೋಷರಹಿತ ಮತದಾರರ ಪಟ್ಟಿ ತಯಾರಾಗಬೇಕು. ಅಲ್ಲದೇ ಸಂಪೂರ್ಣ ಸುಧಾರಣೆ ಮಾಡಿ ಚುನಾವಣೆ ನಡೆಸುವುದಾದರೆ ಕೆಲವು ತಿಂಗಳು ವಿಳಂಬವಾಗಲಿದೆ. ಇನ್ನೂ ರಾಜಕೀಯ ಪಕ್ಷಗಳು ಒಪ್ಪಿಕೊಂಡರೆ, ನವೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.

    ಆಗಸ್ಟ್‌ನಲ್ಲಿ ದೇಶದಲ್ಲಿ ನಡೆದ ದಂಗೆಯ ವೇಳೆ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಬಳಿಕ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲಾಗಿತ್ತು. ಇದೀಗ ಅವರ ಮೇಲೆ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಒತ್ತಡ ಹೆಚ್ಚುತ್ತಿದೆ. ಇದರಿಂದ ಚುನಾವಣೆ ನಿಗದಿಗೆ ಮುಖ್ಯ ಸಲಹೆಗಾರರನ್ನು ನೇಮಿಸಲಾಗಿದೆ.

    ಈ ಹಿಂದೆ ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರವು ನ್ಯಾಯಾಲಯ ಮತ್ತು ಸರ್ಕಾರಿ ಸಂಸ್ಥೆಗಳನ್ನು ರಾಜಕೀಯಗೊಳಿಸಿತ್ತು. ಅಲ್ಲದೇ ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಅಕ್ರಮ ಎಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

    ಹಸೀನಾ ಅವರ 15 ವರ್ಷಗಳ ಆಳ್ವಿಕೆಯಲ್ಲಿ ತಮ್ಮ ರಾಜಕೀಯ ವಿರೋಧಿಗಳ ಸಾಮೂಹಿಕ ಬಂಧನ. ಕಾನೂನುಬಾಹಿರ ಹತ್ಯೆಗಳು ನಡೆದಿವೆ. ಈ ಮೂಲಕ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪವನ್ನು ಸಹ ಎದುರಿಸುತ್ತಿದ್ದಾರೆ.

  • ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್‌ ಇಂದು ಪ್ರಮಾಣ ವಚನ

    ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್‌ ಇಂದು ಪ್ರಮಾಣ ವಚನ

    ಢಾಕಾ: ಬಾಂಗ್ಲಾದೇಶದಲ್ಲಿನ (Bangladesh) ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ ಜಾರಿಗೆ ಬರಲಿದೆ.

    ಮುಹಮ್ಮದ್ ಯೂನಸ್ ಅವರು ಗುರುವಾರ ರಾತ್ರಿ 8:00 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಹೇಳಿದ್ದಾರೆ. ಮಧ್ಯಂತರ ಸರ್ಕಾರದ ಸಲಹಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿರಬಹುದು ಎಂದು ಸೇನಾ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಚುಕ್ಕಾಣಿ ಹಿಡಿಯಲಿದ್ದಾರೆ ಹಸೀನಾ ಕಟು ಟೀಕಾಕಾರ ಮೊಹಮ್ಮದ್‌ ಯೂನುಸ್‌

    ದೇಶಾದ್ಯಂತ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತಿದೆ. ಇದು ರಾಷ್ಟ್ರದ ಸ್ಥಿರತೆಗೆ ಧನಾತ್ಮಕ ಸಂಕೇತವಾಗಿದೆ ಇದೇ ಸಮಯದಲ್ಲಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದರು. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.

    ಅರ್ಥಶಾಸ್ತ್ರಜ್ಞ ಯೂನಸ್ ಅವರಿಗೆ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡವರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ನೊಬೆಲ್​ ಶಾಂತಿ ಪ್ರಶಸ್ತಿ ಸಿಕ್ಕಿದೆ. ಇವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಸಹ ಇದೇ ಸಂದರ್ಭದಲ್ಲಿ ಬಹುಮಾನವನ್ನು ಪಡೆದುಕೊಂಡಿತು. ಯೂನಸ್ ವಿರುದ್ಧ ಭ್ರಷ್ಟಾಚಾರ ಸೇರಿ 150 ಕ್ಕೂ ಹೆಚ್ಚು ಪ್ರಕರಣಗಳಿದೆ. ಆರೋಪ ಸಾಬೀತಾದರೆ ಅವರನ್ನು ವರ್ಷಗಳವರೆಗೆ ಜೈಲಿನಲ್ಲಿಡಬಹುದು. ಆದರೆ ಯೂನಸ್ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿದೊಡ್ಡ ಯುರೇನಿಯಂ ಗಣಿಗಾರಿಕೆಯನ್ನು ಆಸ್ಟ್ರೇಲಿಯಾ ನಿಷೇಧಿಸಿದ್ದೇಕೆ?