Tag: ಮೊಹಮ್ಮದ್ ಅಲಿ ಜಿನ್ನಾ

  • ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

    ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

    ನವದೆಹಲಿ: ದೇಶಕ್ಕೆ ಕ್ಯಾಪ್ಟನ್ ಅಬ್ದುಲ್ ಹಮೀದ್ ( Captain Abdul Hamid) ಅವರಂತಹವರು ಬೇಕು, ಅಫ್ಜಲ್ ಗುರು (Afzal Guru) ಮತ್ತು ಮೊಹಮ್ಮದ್ ಅಲಿ ಜಿನ್ನಾ (Mohammad Ali Jinnah) ಅಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ್ ರೈ ಹೇಳಿದ್ದಾರೆ.

    ಜನವರಿ 22ರ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಬಿಜೆಪಿ ಇಂದು ಕಿಡಿಕಾರಿದೆ. ಚಂದ್ರಶೇಖರ್ (Minister Chandrashekhar) ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಪದೇ ಪದೇ ವಿರೋಧಿಸಲು ಭಗವಾನ್ ರಾಮ ಮತ್ತು ರಾಮ ಮಂದಿರದ ಮೇಲೆ ಅವರಿಗೆ ಯಾವ ದ್ವೇಷವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಬಾಬರ್ ಮತ್ತು ಅಫ್ಜಲ್ ಗುರುಗಳ ಚಿತ್ರಗಳನ್ನು ನೇತುಹಾಕಿ ಪೂಜಿಸುತ್ತಾರೆ. ದೇಶಕ್ಕೆ ಅಶ್ಫಾಕುಲ್ಲಾ ಖಾನ್ ಮತ್ತು ಕ್ಯಾಪ್ಟನ್ ಹಮೀದ್ ಅಗತ್ಯವಿದೆಯೇ ಹೊರತು ಬಾಬರ್, ಅಫ್ಜಲ್ ಗುರು ಅಥವಾ ಜಿನ್ನಾ ಅಲ್ಲ. ಇಲ್ಲಿ ಭಗವಾನ್ ರಾಮನ ಸಮಗ್ರತೆ ಅಗತ್ಯವಿದೆ ಎಂದು ಅವರು ಹೇಳಿದರು.

    ಇಂದು ಬೆಳಗ್ಗೆ ಬಿಹಾರ ಶಿಕ್ಷಣ ಸಚಿವ ಮತ್ತು ಆರ್‌ಜೆಡಿ ನಾಯಕ ಚಂದ್ರಶೇಖರ್, ದೇಶದಲ್ಲಿ ದೇವಾಲಯಗಳಿಗಿಂತ ಹೆಚ್ಚಿನ ಶಾಲೆಗಳ ಅಗತ್ಯವಿದೆ ಎಂದು ಹೇಳಿದರು. ಇದೇ ವೇಳೆ ಈ ತಿಂಗಳ ಕೊನೆಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭವನ್ನು ಉಲ್ಲೇಖಿಸಿದ ಅವರು, ಗಾಯಗೊಂಡರೆ ನೀವು ಮೊದಲು ಎಲ್ಲಿಗೆ ಹೋಗುತ್ತೀರಿ? ದೇವಸ್ಥಾನ ಅಥವಾ ಆಸ್ಪತ್ರೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದೇವಸ್ಥಾನದ ಹಾದಿ ಮಾನಸಿಕ ಗುಲಾಮಗಿರಿಯ ಹಾದಿ – ರಾಮಮಂದಿರ ಕುರಿತು ಶಿಕ್ಷಣ ಸಚಿವ ವಿವಾದಾತ್ಮಕ ಹೇಳಿಕೆ

    ನಿಮಗೆ ಶಿಕ್ಷಣ ಬೇಕು. ಅಧಿಕಾರಿ, ಶಾಸಕರು ಅಥವಾ ಸಂಸದರಾಗಲು ಬಯಸಿದರೆ, ನೀವು ದೇವಸ್ಥಾನ ಹೋಗುತ್ತೀರಾ ಅಥವಾ ಶಾಲೆಗೆ ಹೋಗುತ್ತೀರಾ?
    ದೇವಸ್ಥಾನಕ್ಕೆ ಹೋಗುವ ಹಾದಿ ಮಾನಸಿಕ ಗುಲಾಮಗಿರಿಯ ಹಾದಿಯಾಗಿದೆ. ಶಾಲೆಗಳಿಗೆ ಹೋಗುವ ಹಾದಿ ಮಾತ್ರವೇ ಬೆಳಕಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳಿ, ಇದನ್ನು ನಾನು ಹೇಳಿಲ್ಲ, ಸಾವಿತ್ರಿ ಬಾಯಿ ಫುಲೆ ಅವರು ಹೇಳಿದ್ದು ಎಂದಿದ್ದಾರೆ.

    ಭಗವಾನ್ ರಾಮನು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಮತ್ತು ಎಲ್ಲೆಡೆ ನೆಲೆಸಿರುವಾಗ, ಅವನನ್ನು ಹುಡುಕಲು ನೀವು ಎಲ್ಲಿಗೆ ಹೋಗುತ್ತೀರಿ ಎಂದು ಚಂದ್ರಶೇಖರ್‌ ಪ್ರಶ್ನಿಸಿದರು.

  • ಜಿನ್ನಾ ದೇಶದ ಸ್ವಾತಂತ್ರ್ಯ, ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು : ಶತ್ರುಘ್ನ ಸಿನ್ಹಾ

    ಜಿನ್ನಾ ದೇಶದ ಸ್ವಾತಂತ್ರ್ಯ, ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು : ಶತ್ರುಘ್ನ ಸಿನ್ಹಾ

    ಭೋಪಾಲ್: ಮೊಹಮ್ಮದ್ ಅಲಿ ಜಿನ್ನಾ ಅವರು ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು ಎಂದು ನಟ, ಕಾಂಗ್ರೆಸ್ ಮುಖಂಡ ಶತ್ರಘ್ನ ಸಿನ್ಹಾ ಹೇಳಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಸೌಸರ್ ನಲ್ಲಿ ನಡೆದ ಪ್ರಚಾರ ವೇಳೆ ಮಾತನಾಡಿ ಅವರು, ಕಾಂಗ್ರೆಸ್ ಪರಿವಾರವನ್ನು ಮಹಾತ್ಮ ಗಾಂಧಿ ನಡೆಸಿದರು. ಅವರ ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್, ಮೊಹಮ್ಮದ್ ಅಲಿ ಜಿನ್ನಾ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಈಗ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿ ಶ್ರಮಿಸಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದರು.

    ಮೊಹಮ್ಮದ್ ಅಲಿ ಜಿನ್ನಾ ಫೋಟೋ ವಿಚಾರವಾಗಿ ಉತ್ತರ ಪ್ರದೇಶದ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆದಿತ್ತು.

    ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಫೋಟೋವನ್ನು 2018ರ ಮೇನಲ್ಲಿ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದನ್ನು ಸಮರ್ಥಿಸಿಕೊಂಡಿದ್ದ ವಿವಿ ವಕ್ತಾರ ಶಫಿ ಕಿದ್ವಾಯಿ, ಜಿನ್ನಾ ಫೋಟೋ ದಶಕಗಳಿಂದಲೂ ವಿಶ್ವವಿದ್ಯಾಲಯಲ್ಲಿದೆ. ಜಿನ್ನಾ ಈ ವಿಶ್ವವಿದ್ಯಾಲಯದ ಸಂಸ್ಥಾಪಕರು ಮತ್ತು ವಿದ್ಯಾರ್ಥಿ ಸಂಘಟನೆಯ ಖಾಯಂ ಸದಸ್ಯರು. ಹೀಗಾಗಿ ಖಾಯಂ ಸದಸ್ಯತ್ವ ಹೊಂದಿದ ಮಹಾತ್ಮ ಗಾಂಧಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಜಿನ್ನಾ ಸೇರಿದಂತೆ ಅನೇಕ ಫೋಟೋ ಪ್ರದರ್ಶನ ಮಾಡಲಾಗಿದೆ ಎಂದು ತಿಳಿಸಿದ್ದರು.