Tag: ಮೊಸಾದ್‌

  • ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

    ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

    ಟೆಹ್ರಾನ್‌: 12 ಗಂಟೆಯ ಒಳಗಡೆ ಇರಾನ್‌ (Iran) ತೊರೆಯಿರಿ. ಇಲ್ಲದೇ ಇದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) 20 ಕಮಾಂಡರ್‌ಗಳಿಗೆ ಇಸ್ರೇಲ್‌ (Israel) ಗುಪ್ತಚರ ಸಂಸ್ಥೆ ಮೊಸಾದ್‌ (Mossad) ಕರೆ ಮಾಡಿ ನೇರವಾಗಿ ಬೆದರಿಕೆ ಹಾಕಿದೆ.

    ಐಆರ್‌ಜಿಸಿಯ ಕಮಾಂಡರ್‌ಗೆ ಮೊಸಾದ್‌ ಅಧಿಕಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಆಡಿಯೋದಲ್ಲಿ ಏನಿದೆ?
    ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ತಪ್ಪಿಸಿಕೊಳ್ಳಲು ನಿಮಗೆ 12 ಗಂಟೆಗಳ ಸಮಯವಿದೆ ಎಂದು ನಾನು ಈಗ ನಿಮಗೆ ಸಲಹೆ ನೀಡಬಲ್ಲೆ. ನೀವು ಈಗ ನಮ್ಮ ಪಟ್ಟಿಯಲ್ಲಿದ್ದೀರಿ. ನಿಮ್ಮ ಕುಟುಂಬದ ಮೇಲೆ ನಾವು ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು. ನಿಮ್ಮ ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ.  ಇದನ್ನೂ ಓದಿ: 1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್‌ ಟಾಪ್‌ ಸೇನಾ ನಾಯಕ ಹತ್ಯೆ

    ಈಗಾಗಲೇ ಹಲವು ಕಮಾಂಡರ್‌, ವಿಜ್ಞಾನಿಗಳನ್ನು ನಾವು ಹತ್ಯೆ ಮಾಡಿರುವುದು ನಿಮಗೆ ಗೊತ್ತಿರಬಹುದು. ನಿಮ್ಮನ್ನು ಹತ್ಯೆ ಮಾಡುವುದು ನಮಗೆ ಕಷ್ಟದ ಕೆಲಸವಲ್ಲ. ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಜೀವ ಉಳಿಸಿಕೊಳ್ಳಲು ನಿಮಗೆ ಕೊನೆಯ ಆಯ್ಕೆ ನೀಡುತ್ತಿದ್ದೇವೆ ಎಂದು ಆಡಿಯೋದಲ್ಲಿ ಎಚ್ಚರಿಕೆ ನೀಡಲಾಗಿದೆ.

  • ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    – ದೇಶಾದ್ಯಂತ ಗೂಢಚಾರಿಣಿ ಫೋಟೋ ಪ್ರಕಟಿಸಿದ ಇರಾನ್‌
    – ಇಸ್ರೇಲ್‌ ದಾಳಿ ಬೆನ್ನಲ್ಲೇ ಇರಾನ್‌ನಿಂದ ಕಣ್ಮರೆ

    ಟೆಲ್‌ ಅವಿವ್‌: ಪುಟ್ಟ ದೇಶ ಇಸ್ರೇಲ್‌ (Israel) ಇರಾನ್‌ (Iran) ಮೇಲೆ ಇಷ್ಟೊಂದು ನಿಖರವಾಗಿ ದಾಳಿ ಮಾಡಿದರ ಹಿಂದೆ ಮೊಸಾದ್‌ (Mossad) ಮಹಿಳಾ ಗೂಢಚಾರಿಣಿ ಕೆಲಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಹೌದು. ಫ್ರಾನ್ಸ್‌ ಮೂಲದ ಕ್ಯಾಥರೀನ್ ಪೆರೆಜ್ ಶಕ್ಡಮ್ (Catherine Perez Shakdam) ಎಂಬಾಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್‌ ಪ್ರವೇಶಿಸಿದ್ದಳು. ನೋಡಲು ಸುಂದರವಾಗಿದ್ದ ಈಕೆ ಮೂಲತ: ಯಹೂದಿ. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.

    ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್‌ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾ ಧರ್ಮ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!

    ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಪ್ರವೇಶಿಸಿದ್ದ ಕ್ಯಾಥರೀನ್ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.

    ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನು ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಕಲ್ಪಿಸಿದ್ದ ಈ ಮನೆಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗುತ್ತಿದ್ದಳು. ಮನೆಗೆ ಭೇಟಿ ನೀಡುವುದರ ಜೊತೆಗೆ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ಇರಾನ್‌ ಏಜೆನ್ಸಿಗಳು ಸಂದರ್ಶಕರ ಫೋನ್‌ ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದರೂ ಕ್ಯಾಥರೀನ್ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೇರವಾಗಿ ಮೊಸಾದ್‌ಗೆ ಕಳುಹಿಸುತ್ತಿದ್ದಳು. ಕಳೆದ ಮೂರು ವಾರಗಳಲ್ಲಿ ಸೇನಾ ಮುಖ್ಯಸ್ಥರಿಂದ ಹಿಡಿದು ಐಆರ್‌ಜಿಸಿ ನಾಯಕರವರೆಗೆ 9 ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದು ಹಾಕಿದೆ. ಪ್ರತಿ ಬಾರಿಯೂ, ಇಸ್ರೇಲಿ ಜೆಟ್‌ಗಳು ಈ ಅಧಿಕಾರಿಗಳು ನೆಲೆಸಿದ್ದ  ನಿಖರವಾಗಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಮಾರಕ ದಾಳಿಗಳನ್ನು ನಡೆಸಿವೆ.

    ಈಕೆ ಕಳುಹಿಸಿದ ಮಾಹಿತಿ ಆಧಾರದಲ್ಲೇ ಇಸ್ರೇಲ್‌ ಕೆಲ ದಿನಗಳಿಂದ ಸೇನಾ ನಾಯಕರ ಮತ್ತು ವಿಜ್ಞಾನಿಗಳ ಮನೆ ಮೇಲೆ ನಿಖರ ದಾಳಿ ಮಾಡಿರಬಹುದು ಎಂದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

     
    ಈಗ ಎಲ್ಲಿದ್ದಾಳೆ?
    ಇಸ್ರೇಲ್‌ ದಾಳಿ ಆರಂಭಿಸುತ್ತಿದ್ದಂತೆ ಸೇನಾ ನಾಯಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುರಕ್ಷಿತ ಸ್ಥಳಕ್ಕೆ ತೆರಳಿದ್ದರೂ ಇಸ್ರೇಲ್‌ ಆ ಜಾಗಕ್ಕೆ ನಿಖರವಾಗಿ ದಾಳಿ ಮಾಡಿ ಹತ್ಯೆ ಮಾಡುತ್ತಿತ್ತು.

    ಇಸ್ರೇಲ್‌ ದಾಳಿಗೆ ಬೆಚ್ಚಿಬಿದ್ದ ಇರಾನ್‌ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿತು. ತನಿಖೆ ಆರಂಭಿಸಿದಾಗ ಅಧಿಕಾರಿಗಳು ಕ್ಯಾಥರೀನ್ ಜೊತೆ ತೆಗೆಸಿದ್ದ ಫೋಟೋಗಳು ನಂತರ ಆಕೆ ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಇರಾನ್‌ ಆಕೆಯ ಪತ್ತೆಗೆ ಬಲೆ ಬೀಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆ ಇರಾನ್‌ನಿಂದ ಕಣ್ಮರೆಯಾಗಿದ್ದಳು.

    ಇರಾನ್‌ನ ಗುಪ್ತಚರ ಸಂಸ್ಥೆ ಈಕೆಯ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದೇಶಾದ್ಯಂತ ಪ್ರಕಟಿಸಿ ಈಕೆಯ ಸುಳಿವು ನೀಡಬೇಕೆಂದು ಕೇಳಿಕೊಂಡಿದೆ. ಒಂದೋ ಆಕೆ ತನ್ನ ಗುರುತನ್ನು ಬದಲಾಯಿಸಿರಬೇಕು ಅಥವಾ ಬೇರೆ ದೇಶಕ್ಕೆ ತೆರಳಿರಬಹುದು ಎಂದು ವರದಿಯಾಗಿದೆ. ಇರಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಈಗ ವೈರಲ್‌ ಆಗಿದೆ.

  • ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

    ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

    ಬೈರೂತ್‌: ಪೇಜರ್‌ಗಳು ಸ್ಫೋಟಗೊಂಡ  (Pager Explosions) ಬೆನ್ನಲ್ಲೇ ಲೆಬನಾನ್‌ನಲ್ಲಿ (Lebanon) ಈಗ ಏಕಕಾಲದಲ್ಲಿ ವಾಕಿಟಾಕಿಗಳು (Walkie Talkie )ಸ್ಫೋಟಗೊಂಡಿವೆ.

    ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಸಾಧನಗಳು ಬುಧವಾರ ಮಧ್ಯಾಹ್ನ ಏಕಾಏಕಿಯಾಗಿ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ವಾಕಿ-ಟಾಕಿಗಳನ್ನು ಹಿಜ್ಬುಲ್ಲಾ ಸದಸ್ಯರು ಮತ್ತು ಅವರ ಸಹಚರರು ಬಳಸುತ್ತಿದ್ದರು. 4000 ಅಧಿಕ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ 24 ಗಂಟೆಗಳ ನಂತರ ಲೆಬನಾನ್‌ ಈಗ ಇನ್ನೊಂದು ಸ್ಫೋಟ ಸಂಭವಿಸಿದೆ.

  • ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ಬೈರೂತ್‌: ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಯುದ್ಧದ ಪರಿಭಾಷೆಯೇ ಬದಲಾಗಿದೆ. ಲೆಬನಾನ್, ಸಿರಿಯಾದಲ್ಲಿ (Lebanon Pager Explosions) ಬುಧವಾರ ಯಾರೂ ಊಹೆ ಮಾಡದ ಸಿನಿಮಾ ಶೈಲಿಯಲ್ಲಿ ದಾಳಿಗಳು ನಡೆದಿದೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿವೆ.

    ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಿದ್ದು ನಿಖರ ಮಾಹಿತಿಯನ್ನು ಎರಡು ದೇಶಗಳು ನೀಡುತ್ತಿಲ್ಲ ಎಂದು ವರದಿಯಾಗಿದೆ.

    ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ. ಗಾಯಾಳುಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿ ಜೊತೆಗೆ ಹಿಜ್ಬುಲ್ಲಾ ಸಂಘಟನೆಯ ಮುಖ್ಯ ನಾಯಕರಿದ್ದಾರೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾಗೆ ಯಾವುದೇ ಅಪಾಯವಾಗಿಲ್ಲ. ಅವರು ಕ್ಷೇಮವಾಗಿದ್ದಾರೆ ಎಂದು ಆ ಸಂಘಟನೆ ಹೇಳಿಕೊಂಡಿದೆ.

    ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ.

    ತಮ್ಮ ವಿರುದ್ಧದ ಆರೋಪಗಳನ್ನು ಇಸ್ರೇಲ್ ಇಲ್ಲಿಯವರೆಗೆ ತಳ್ಳಿಹಾಕಿಲ್ಲ. ನಿಗೂಢ ಕಾರ್ಯಚರಣೆಗೆ ಹೆಸರಾದ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್, ಹೆಜ್ಬುಲ್ಲಾ ಸ್ವಂತ ಟೆಲಿಕಾಂ ನೆಟ್‌ವರ್ಕ್ ಹ್ಯಾಕ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

     

    ಪೇಜರ್‌ ಬಳಸಿದ್ದು ಯಾಕೆ?
    ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ ಬಳಸುತ್ತಿತ್ತು. ಈಗ ಅದೇ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.

    ಸ್ಫೋಟ ಹೇಗೆ ಆಗಿರಬಹುದು?
    ಈ ಸ್ಫೋಟ ಹೇಗೆ ನಡೆದಿದೆ ಎನ್ನುವುದಕ್ಕೆ ಯಾರೂ ನಿಖರವಾದ ಕಾರಣ ನೀಡಿಲ್ಲ. ತಜ್ಞರು ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರುಗಳನ್ನು ನೀಡಿದ ವಿವರಗಳನ್ನು ಇಲ್ಲಿ ಒಟ್ಟಾಗಿ ಕ್ರೋಢಿಕರಿಸಿ ತಿಳಿಸಲಾಗಿದೆ.

    ಹೊಸ ಮಾಡೆಲ್‌ನ ಪೇಜರ್‌ಗಳನ್ನು ಇರಾನ್‌ನಿಂದ ತಂದು ಲೆಬನಾನ್‌ನಲ್ಲಿ ಬಳಕೆ ಮಾಡಲಾಗಿದೆ. ಇಸ್ರೇಲ್ ಜೊತೆ ಇರಾನ್‌ನ ಪೇಜರ್ ಕಂಪನಿ ಕೈಜೋಡಿಸಿರಬಹುದು.

     

    ಕಂಪನಿಯಿಂದ ಪೇಜರ್‌ ರಫ್ತಾಗುವ ವೇಳೆ ದಾರಿ ಮಧ್ಯೆ ಈ ಪೇಜರ್‌ ಬಾಕ್ಸ್‌ಗಳನ್ನು ಬದಲಾಯಿಸಿ ಸ್ಫೋಟಕ ಇರುವ ಪೇಜರ್‌ಗಳನ್ನು ಬಾಕ್ಸ್‌ ಇಡಲಾಗಿತ್ತು ಅಥವಾ ಸ್ಫೋಟಕ ಇರುವ ಯಾವುದೋ ವಸ್ತುವನ್ನು ಸೇರಿಸಲಾಗಿದೆ. ಪೇಜರ್‌ ಸಾಗಾಣಿಕೆ ಮಾಡಿದವರು ಸ್ಫೋಟದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಎದ್ದಿದೆ.

    ಪೇಜರ್‌ಗಳಲ್ಲಿ ತಯಾರಾಗುವ ಸಮಯದಲ್ಲೇ ಬ್ಯಾಟರಿಗಳಲ್ಲಿ ಶಕ್ತಿಯುತ ಸ್ಫೋಟಕವಾದ ಸಣ್ಣ ಪ್ರಮಾಣದ PETN ಇಡಲಾಗಿತ್ತು. ರೇಡಿಯೋ ಸಿಗ್ನಲ್‌ ಬಳಸಿ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟ ಮಾಡಿರಬಹುದು. ಸೈಬರ್ ದಾಳಿ ಮೂಲಕ ಪೇಜರ್‌ನ ಬ್ಯಾಟರಿ ಬಿಸಿಯಾಗುವಂತೆ ಮಾಡಿ ಸ್ಫೋಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಒಂದೇ ಸಮಯದಲ್ಲೇ ಹೇಗೆ?
    ಸ್ಪೋಟಕ ಇರಿಸಿದರೆ ಒಂದೇ ಸಮಯದಲ್ಲಿ ಸ್ಫೋಟವಾಗಲು ಸಾಧ್ಯವಿಲ್ಲ. ಬ್ಯಾಟರಿ ಚಾರ್ಜ್‌ ಮಾಡಿದ ನಂತರ ಈ ಹಿಂದೆ ಸ್ಫೋಟವಾಗಿರಬೇಕಿತ್ತು. ಹೀಗಾಗಿ ಒಂದು ರಹಸ್ಯ ಕೋಡ್‌ಗೆ ಪೇಜರ್‌ ಸ್ಫೋಟಗೊಳ್ಳುವಂತೆ ಮಾಡುವ ಒಂದು ಬೋರ್ಡ್‌ ಅನ್ನು ಮೊಸಾದ್‌ ಸೇರಿಸಿತ್ತು. ಪೇಜರ್‌ ಕನೆಕ್ಟ್‌ ಆಗಿರುವ ಟೆಲಿಕಾಂ ನೆಟ್‌ವರ್ಕ್‌ ಅನ್ನು ಮೊಸಾದ್‌ ಹ್ಯಾಕ್‌ ಮಾಡಿ ಆ ಕೋಡ್‌ ಸಂದೇಶವನ್ನು ಕಳುಹಿಸಿದ್ದರಿಂದ ಏಕಕಾಲದಲ್ಲಿ ಪೇಜರ್‌ ಸ್ಫೋಟಗೊಂಡಿರಬಹುದು ಎಂಬ ಬಲವಾದ ಶಂಕೆಯನ್ನು ಹಲವು ಮಂದಿ ವ್ಯಕ್ತಪಡಿಸಿದ್ದಾರೆ.


    ನಮ್ಮಿಂದ ತಪ್ಪಾಗಿಲ್ಲ:
    ಈ ಪೇಜರ್‌ಗಳನ್ನು ತೈವಾನ್‌ ಮೂಲದ ಕಂಪನಿ ಅಭಿವೃದ್ಧಿ ಪಡಿಸಿದೆ ಎಂಬ ವಿಷಯಕ್ಕೆ ಗೋಲ್ಡ್ ಅಪೊಲೊ ಕಂಪನಿ ಸ್ಪಷ್ಟನೆ ನೀಡಿದೆ. ಈ ಪೇಜರ್‌ಗಳನ್ನು ನಾವು ತಯಾರಿಸಿಲ್ಲ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಪಾಲುದಾರಿಕೆ ಹೊಂದಿರುವ BAC CONSULTING KFT ಕಂಪನಿ ತಯಾರಿಸಿದೆ.

     

    ಈ ಪೇಜರ್‌ಗಳನ್ನು ಲೆಬನಾನ್‌ಗೆ ನೇರವಾಗಿ ರಫ್ತು ಮಾಡಿಲ್ಲ. ಸಾಧನದಲ್ಲಿನ ಘಟಕಗಳಾದ ಆಂಟೆನಾ, ಮೈಕ್ರೋಚಿಪ್, ಡಿಕೋಡರ್, ಸಣ್ಣ ಸಂಖ್ಯೆ, ಬ್ಯಾಟರಿಯು ಸ್ಫೋಟಕ್ಕೆ ಕಾರಣವಾಗುವುದಿಲ್ಲ.


    2022 ರಿಂದ ಆಗಸ್ಟ್ 2024 ರವರೆಗೆ ನಾವು 2.60 ಲಕ್ಷ ಪೇಜರ್‌ಗಳನ್ನು ರಫ್ತು ಮಾಡಿದ್ದೇವೆ. ಅಮೆರಿಕ(24,771), ಹಾಂಕಾಂಗ್‌ (5,570), ಆಸ್ಟ್ರೇಲಿಯಾ(3,665), ನೆದರ್ಲ್ಯಾಂಡ್ಸ್ (1,808), ಫ್ರಾನ್ಸ್(1,264), ಹಂಗೇರಿ(254) ಪೇಜರ್‌ಗಳನ್ನು ರಫ್ತು ಮಾಡಲಾಗಿದೆ. ಇಲ್ಲಿಯವರೆಗೆ ಈ ಪೇಜರ್‌ಗಳು ಸ್ಫೋಟಗೊಂಡ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.

  • ಗಾಜಾ ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರ ಹತ್ಯೆಗೆ ಮುಂದಾದ ಇಸ್ರೇಲ್‌

    ಗಾಜಾ ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರ ಹತ್ಯೆಗೆ ಮುಂದಾದ ಇಸ್ರೇಲ್‌

    ಟೆಲ್‌ ಅವೀವ್‌: ಕೇವಲ ಗಾಜಾ ಪಟ್ಟಿಯಲ್ಲಿ (Gaza Strip) ಅಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ (Hamas) ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್‌ (Israel) ಈಗ ಮುಂದಾಗಿದೆ.

    ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ (Mossad) ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಆರಂಭಿಸಿದೆ. ಕತಾರ್‌ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.  ಇದನ್ನೂ ಓದಿ: ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್‌ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.


    ವಿದೇಶದಲ್ಲಿ ಹಮಾಸ್‌ ನಾಯಕರನ್ನು ಇಸ್ರೇಲ್‌ ಹತ್ಯೆ ಮಾಡುವುದು ಹೊಸದೆನಲ್ಲ. ಈ ಹಿಂದೆ ಹಲವು ರಹಸ್ಯ ಕಾರ್ಯಾಚರಣೆ ನಡೆಸಿ ನಾಯಕರನ್ನು ಹತ್ಯೆ ಮಾಡಿತ್ತು. ಲೆಬನಾನ್‌ ಮತ್ತು ಬೈರುತ್‌ನಲ್ಲಿದ್ದ ಪ್ಯಾಲೆಸ್ತೇನಿಯನ್‌ ಉಗ್ರಗಾಮಿಗಳ ಮೇಲೆ ಮಹಿಳೆಯರ ಮೂಲಕ ಇಸ್ರೇಲ್‌ ದಾಳಿ ನಡೆಸಿ ಕೊಂದು ಹಾಕಿತ್ತು. ಪ್ರವಾಸಿಯ ಸೋಗಿನಲ್ಲಿ ದುಬೈನಲ್ಲಿದ್ದ ಹಮಾಸ್‌ ನಾಯಕನನ್ನು ಹತ್ಯೆ ಮಾಡಿತ್ತು. ಸಿರಿಯಾದಲ್ಲಿ ಹಿಜ್ಬುಲ್ಲಾ ನಾಯಕನನ್ನು ಕೊಲ್ಲಲು ಇಸ್ರೇಲ್ ಕಾರ್ ಬಾಂಬ್ ಬಳಸಿತ್ತು. ಇರಾನ್‌ನಲ್ಲಿ ಪರಮಾಣು ವಿಜ್ಞಾನಿಯನ್ನು ಕೊಲ್ಲಲು ರಿಮೋಟ್-ನಿಯಂತ್ರಿತ ರೈಫಲ್ ಬಳಸಿತ್ತು.