Tag: ಮೊಸರು ಬೋಂಡಾ

  • ಕ್ಷಣಮಾತ್ರದಲ್ಲೇ ಮೊಸರು ಬೋಂಡಾ ಮಾಡೋದು ಹೇಗೆ?

    ಕ್ಷಣಮಾತ್ರದಲ್ಲೇ ಮೊಸರು ಬೋಂಡಾ ಮಾಡೋದು ಹೇಗೆ?

    ಸಂಜೆ ವೇಳೆ ಕುಟುಂಬದವರ ಜೊತೆ ಟೀ, ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೊತೆ ಬಿಸಿಬಿಸಿಯಾಗಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಬೋಂಡಾ ಮಾಡೋಣ ಅಂದರೆ ತಿಂದು ತಿಂದು ಬೇಸರವಾಗಿರುತ್ತದೆ. ಹೀಗಾಗಿ ನಿಮಗಾಗಿ ಸುಲಭವಾಗಿ ಮೊಸರು ಬೋಂಡಾ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    1. ಮೈದಾ ಹಿಟ್ಟು – 1/2 ಕೆಜಿ
    2. ಗಟ್ಟಿ ಮೊಸರು – 1/4 ಲೀಟರ್
    3. ಈರುಳ್ಳಿ – 2
    4. ಹಸಿಮೆಣಸಿನಕಾಯಿ – 4-5
    5. ಜೀರಿಗೆ -1 ಚಮಚ
    6. ಉಪ್ಪು – ರುಚಿಗೆ ತಕ್ಕಷ್ಟು
    7. ತುರಿದ ತೆಂಗಿನ ಕಾಯಿ – ಸ್ವಲ್ಪ
    8. ಎಣ್ಣೆ – ಕರಿಯಲು
    9. ಅಕ್ಕಿ ಹಿಟ್ಟು – 1 ಚಮಚ

    ಮಾಡುವ ವಿಧಾನ
    * ಒಂದು ಬಟ್ಟಲಿಗೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿಕೊಳ್ಳಿ.
    * ಅದಕ್ಕೆ ಅಕ್ಕಿ ಹಿಟ್ಟು, ಸಣ್ಣಗೆ ಹಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ತೆಂಗಿನ ಕಾಯಿ, ಉಪ್ಪು ಹಾಕಿ ಕಲಸಿ.
    * ನಂತರ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. (ಹಿಟ್ಟು ಕಲಸಲು ನೀರು ಬಳಸಬಾರದು).
    * ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.
    * ಸಂಜೆಯ ಟೀ, ಕಾಫಿ ಜೊತೆಗೆ ಮೊಸರು ಬೋಂಡಾ ಸವಿಯಿರಿ.