Tag: ಮೊಳಕಾಲ್ಮೂರ

  • ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಬಸ್, ಕ್ರೂಸರ್ ಡಿಕ್ಕಿಯಾಗಿ ನಾಲ್ವರು ದುರ್ಮರಣ

    ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಬಸ್, ಕ್ರೂಸರ್ ಡಿಕ್ಕಿಯಾಗಿ ನಾಲ್ವರು ದುರ್ಮರಣ

    – ಅಪಘಾತದ ತೀವ್ರತೆಗೆ ಕಿತ್ತು ಹೋದ ಕ್ರೂಸರ್ ಮೇಲ್ಭಾಗ
    – 7ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

    ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಬಿ.ಜಿ.ಕೆರೆ ಗ್ರಾಮದ ಬಳಿ ಬಸ್ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಏಳಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನದ ಮೇಲ್ಭಾಗ ಕಿತ್ತು ಹೋಗಿದೆ.

    ಕ್ರೂಸರ್ ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಬೆಂಗಳೂರಿನಿಂದ ಲಿಂಗಸುಗೂರಿನತ್ತ ತೆರಳುತ್ತಿತ್ತು. ಬಿ.ಜಿ.ಕೆರೆ ಗ್ರಾಮದ ಬಳಿ ಬಸ್ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿವೆ. ಕ್ರೂಸರ್ ನಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ.

    ಅಪಘಾತದಲ್ಲಿ ಮೃತರಾದವರ ಗುರುತು ಪತ್ತೆಯಾಗಿಲ್ಲ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಚಿತ್ರದುರ್ಗ: ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಎರಡು ದಿನಗಳ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇಂದು ಮೊಳಕಾಲ್ಮೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಈ ಹಿಂದೆ ಪರಿವರ್ತನಾ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ನನ್ನ ಬಳಿ ಹಣ ಕೇಳಿದ್ದಕ್ಕೆ, 25 ಲಕ್ಷ ರೂ. ನೀಡಿದ್ದೆ. ಮೋದಿ, ಅಮಿತ್ ಶಾ ಸಮಾವೇಶಗಳಿಗಾಗಿ ಇಲ್ಲಿಂದ ನನ್ನ ಖರ್ಚಿನಲ್ಲಿ ಬಸ್‍ಗಳನ್ನು ಕಳುಹಿಸಲಾಗಿತ್ತು. ಬಿಜೆಪಿ ನಾಯಕರೆಲ್ಲಾ ಪಕ್ಷ ಸಂಘಟನೆಗಾಗಿ ನನ್ನಿಂದ 4-5 ಕೋಟಿ ರೂ. ಖರ್ಚು ಮಾಡಿಸಿದ್ದಾರೆ ಅಂತಾ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

    ನನ್ನಿಂದ ಹಣ ಪಡೆದುಕೊಂಡ ಬಳಿಕ ಕೊನೆ ಗಳಿಗೆಯಲ್ಲಿ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ದೊಡ್ಡ ಲೀಡರ್ ಎಂದು ಹೇಳಿಕೊಂಡು ಮತ ಕೇಳಲು ಬರುವವರನ್ನು ಎಷ್ಟು ಮನೆಯ ದೀಪ ತೆಗೆದಿದ್ದೀರಿ ಎಂದು ಪ್ರಶ್ನಿಸಿ ಅಂತಾ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ರು.

  • ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ಚಿತ್ರದುರ್ಗ: ನನ್ನನ್ನು ಇದುವರೆಗೂ ಯಾರು ಸಂಪರ್ಕಿಸಿಲ್ಲ ಮತ್ತು ನಾನು ಬಿಜೆಪಿಗೆ ಮತ್ತೆ ಸೇರಲ್ಲ. ಬಳ್ಳಾರಿಯವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿದೆ. ಆದ್ರೆ ಇವರ ಆಟ ಇಲ್ಲಿ ನಡೆಯಲ್ಲ ಅಂತಾ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.

    ಸಂಸದ ಶ್ರೀರಾಮುಲು ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ, ಕಣದಿಂದ ಹಿಂದೆ ಸರಿಯುವಂತೆ ತಿಪ್ಪೇಸ್ವಾಮಿ ಅವರ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ತಮ್ಮ ಬಗ್ಗೆ ಹುಟ್ಟಿಕೊಂಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ ತಿಪ್ಪೇಸ್ವಾಮಿ, ನನ್ನ ಬೆಂಬಲಿಗರು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿಯ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಕೆಲಸವನ್ನು ಬಳ್ಳಾರಿಯವ್ರೆ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇದನ್ನೂ ಓದಿ:  ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ