Tag: ಮೊಲ

  • ಮಸ್ಕಿ ಶಾಸಕನ ಪುತ್ರ, ಸಹೋದರನಿಂದ ಮೊಲ ಬೇಟೆ – ಮಾರಕಾಸ್ತ್ರ ಹಿಡಿದು ಮೆರವಣಿಗೆ

    ಮಸ್ಕಿ ಶಾಸಕನ ಪುತ್ರ, ಸಹೋದರನಿಂದ ಮೊಲ ಬೇಟೆ – ಮಾರಕಾಸ್ತ್ರ ಹಿಡಿದು ಮೆರವಣಿಗೆ

    ರಾಯಚೂರು: ಮಸ್ಕಿ(Maski) ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ(Rabbit) ಬೇಟೆಯಾಡಿ ವಿಜೃಂಭಿಸಿದ ಘಟನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

    ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ಶಾಸಕನ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – ಮೂವರು ಮಕ್ಕಳು ಸೇರಿ 6 ಮಂದಿ ಸಜೀವ ದಹನ

    ಮೊಲಗಳ ಬೇಟೆಯಾಡುವುದು ಅರಣ್ಯ ಇಲಾಖೆ ಕಾಯ್ದೆಯಡಿ ಅಪರಾಧ ಕೃತ್ಯವಾದರೂ ಇದುವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನೂ ಓದಿ: ಟೀಚರಮ್ಮನ ಒಂದು ಮುತ್ತಿಗೆ 50,000 ರೂ. – ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ

    ಇನ್ನೂ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ ಶಾಸಕನ ಕುಟುಂಬಕ್ಕೆ ಒಂದು ನ್ಯಾಯಾನಾ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.

  • ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

    ಬಾಗಲಕೋಟೆ: ಕಾಡು ಮೊಲ ಹಾಗೂ ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆ ನಡೆದಿದೆ.

    ಹುನಗುಂದ ತಾಲೂಕಿನ ಅಮೀನಗಡ ಬಳಿಯ ಮದಾಪುರ ಗ್ರಾಮದ ವಿಠ್ಠಲ್ ವಾಲಿಕಾರ ಬಂಧಿತ ಆರೋಪಿ. ವಿಠ್ಠಲ್ ರಾಷ್ಟ್ರಪಕ್ಷಿಯಾದ ನವಿಲು ಹಾಗೂ ಕಾಡು ಮೊಲವನ್ನು ಬೇಟೆಯಾಡುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ಹಿಡಿದು ವಿಡಿಯೋ ಮಾಡಿ ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹುನಗುಂದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಆರೋಪಿ ವಿಠ್ಠಲ್‍ಗೆ ಬಲೆ ಬೀಸಿ ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಆರೋಪಿಯನ್ನ ಬಂಧಿಸಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಮೊಲವನ್ನು ಬೇಟೆಯಾಡಿ ಟಿಕ್‍ಟಾಕ್- ಯುವಕರಿಬ್ಬರು ಅರೆಸ್ಟ್

    ಮೊಲವನ್ನು ಬೇಟೆಯಾಡಿ ಟಿಕ್‍ಟಾಕ್- ಯುವಕರಿಬ್ಬರು ಅರೆಸ್ಟ್

    ರಾಯಚೂರು: ತಾಲೂಕಿನ ಸರ್ಜಾಪುರ ಗ್ರಾಮದ ಇಬ್ಬರು ಯುವಕರು ಮೊಲ ಬೇಟೆಯಾಗಿ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ.

    ಮೇ 19ರಂದು ಮೊಲ ಬೇಟೆಯಾಡಿ, ಮೊಲದ ಚರ್ಮ ಸುಳಿದು ಟಿಕ್‍ಟಾಕ್ ಮಾಡಿದ್ದಾರೆ. ಸರ್ಜಾಪುರದ ಪವನ ನಾಯಕ್ ಹಾಗೂ ಸ್ವಾಮಿ ನಾಯಕ್ ಬಂಧಿತ ಆರೋಪಿಗಳು. ಮೊಲ ಬೇಟೆಯಾಡಿ, ಅದನ್ನು ಕೈಯಲ್ಲಿಡಿದ ವಿಡಿಯೋವನ್ನು ಅವರು ಟಿಕ್‍ಟಾಕ್‍ಗೆ ಅಪ್ಲೋಡ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾವೇ ಮೊಲಗಳನ್ನು ಬೇಟೆಯಾಡಿರುವುದಾಗಿ ಯುವಕರು ಬಾಯಿ ಬಿಟ್ಟಿದ್ದಾರೆ. ವಿಚಾರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಜೀವದ ಹಂಗು ತೊರೆದು ಮೊಲವನ್ನು ರಕ್ಷಿಸಿದ ಯುವಕರು

    ಜೀವದ ಹಂಗು ತೊರೆದು ಮೊಲವನ್ನು ರಕ್ಷಿಸಿದ ಯುವಕರು

    ಬೆಳಗಾವಿ: ಕೃಷ್ಣೆಯ ಆರ್ಭಟಕ್ಕೆ ಕೇವಲ ಮನುಷ್ಯ ಸಂಕುಲ ಮಾತ್ರ ನಲುಗಿ ಹೋಗಿಲ್ಲ. ಸಾಕಷ್ಟು ಮೂಕ ಪ್ರಾಣಿಗಳೂ ಕೂಡ ನೆರೆಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದು, ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದ ಮೊಲವೊಂದನ್ನು ಯುವಕರು ರಕ್ಷಿಸಿ ಅಭಯ ನೀಡಿದ್ದಾರೆ.

    ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ಸಿಕ್ಕ ಮೊಲವೊಂದನ್ನು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿಕೊಂಡ ಮೊಲ ಸಂಪೂರ್ಣವಾಗಿ ಗಾಯಗೊಂಡಿದೆ. ನೀರಿನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಮೊಲ ಗಾಬರಿಗೊಂಡಿದೆ.

    ಮೊಲವನ್ನು ರಕ್ಷಿಸಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕರು, “ನಾಯಿಯಾಗಲಿ, ಮೊಲಯಾಗಲಿ ನಿಲ್ಲುವುದಕ್ಕೆ ಎಲ್ಲಿಯೂ ಜಾಗ ಇಲ್ಲ. ಏಕೆಂದರೆ ಊರೆಲ್ಲಾ ಸಂಪೂರ್ಣ ಜಲಾವೃತವಾಗಿದೆ. ಎಲ್ಲಿ ಜಾಗ ಇರುತ್ತೋ ಅಲ್ಲಿ ಪ್ರಾಣಿಗಳು ನಿಲ್ಲುತ್ತಿದೆ. ಆದರೆ ಅಲ್ಲಿಯೂ ನೀರು ಬರುತ್ತಿರುವ ಕಾರಣ ಪ್ರಾಣಿಗಳು ಓಡಿ ಹೋಗುತ್ತಿದೆ. ಅದು ಓಡಿ ಹೋಗುತ್ತಿರುವುದನ್ನು ನೋಡಿ ಹಿಡಿದುಕೊಂಡಿದ್ದೇವೆ” ಎಂದರು.

    ಬಳಿಕ ಮಾತನಾಡಿದ ಅವರು, ಈ ಮೊಲ ಈಗ ಬದುಕುತ್ತಿರಲಿಲ್ಲ. ಈಗಲೇ ಈ ಮೊಲಕ್ಕೆ ಗಾಯಗಳಾಗಿದೆ. ಈಗ ಈ ಮೊಲಕ್ಕೆ ಚಿಕಿತ್ಸೆ ನೀಡಿ ಸುರಕ್ಷಿತ ಜಾಗಕ್ಕೆ ಕಳುಹಿಸುತ್ತೇವೆ. ಈಗಾಗಲೇ ಸರ್ಕಾರಿ ವೈದ್ಯರು ಬಂದಿದ್ದಾರೆ. ಪಶು ವೈದ್ಯರು ಕೂಡ ಬಂದಿದ್ದಾರೆ. ಮೊಲವನ್ನು ಪಶು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಯುವಕರು ಹೇಳಿದ್ದಾರೆ.

  • ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

    ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

    ಕೋಲಾರ: ಮೊಲ ನುಂಗಿ ಸುಸ್ತಾಗಿ ಪರದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಕುಪ್ಪಂ ತಾಲೂಕಿನ ಗುಡಿಪಲ್ಲಿ ಬಳಿ ಈ ಹೆಬ್ಬಾವು ಪತ್ತೆಯಾಗಿದ್ದು, ಮೊಲ ನುಂಗಿ ಸುಸ್ತಾಗಿ ಗಿಡಗಳ ಮಧ್ಯೆ ಅವಿತುಕೊಂಡಿತ್ತು. ಇದನ್ನು ಕಂಡ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಹೆಬ್ಬಾವನ್ನ ರಕ್ಷಣೆ ಮಾಡಿದ್ದಾರೆ.

    10 ಅಡಿ ಉದ್ದದ ಹೆಬ್ಬಾವನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ಬಳಿಕ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರು ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗ್ರಾಮದ ಸಮೀಪ ಬಂದಿದ್ದ ಹೆಬ್ಬಾವನ್ನ ಹಿಡಿಯುತ್ತಿದ್ದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಸ್ಥಳದಲ್ಲಿ ಹೆಬ್ಬಾವನ್ನ ನೋಡಲು ಆಗಮಿಸಿದ ಗ್ರಾಮದ ಜನರು ಹೆಬ್ಬಾವಿನೊಂದಿಗೆ ಫೋಟೋಗಳನ್ನ ಕ್ಲಿಕ್ಕಿಸಿಕೊಂಡರಲ್ಲದೇ, ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋವನ್ನೂ ಕೂಡ ಸೆರೆಹಿಡಿದಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷಿತವಾಗಿ ಚಿಕಟಪಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

  • ತ್ರಿಬಲ್ ಡಿಗ್ರಿ ಮಾಡಿದ್ರೂ, ಮಣ್ಣಿನ ಮಕ್ಕಳಾಗಿ ಸ್ವಾವಲಂಬಿ ಜೀವನ ಕಟ್ಟಿಕೊಂಡ್ರು!

    ತ್ರಿಬಲ್ ಡಿಗ್ರಿ ಮಾಡಿದ್ರೂ, ಮಣ್ಣಿನ ಮಕ್ಕಳಾಗಿ ಸ್ವಾವಲಂಬಿ ಜೀವನ ಕಟ್ಟಿಕೊಂಡ್ರು!

    ಹಾವೇರಿ: ಹಳ್ಳಿ ಮಕ್ಕಳೆಲ್ಲಾ ನಾಲ್ಕಕ್ಷರ ಕಲಿತು ಸಿಟಿ ಸೇರಿ ಸಾಫ್ಟ್ ವೇರ್, ಕಾಲ್ ಸೆಂಟರ್ ಹೀಗೆ ನಾನಾ ದಾರಿ ಹಿಡೀತಾರೆ. ಆದರೆ ಇಂತವರ ಮಧ್ಯೆ ರೈತರ ಮಕ್ಕಳಾಗಿ ಹುಟ್ಟಿ ತ್ರಿಬಲ್ ಡಿಗ್ರಿ ಮಾಡಿದರೂ ಮಣ್ಣಿನ ಮಕ್ಕಳಾಗಿ ಸ್ವಾವಲಂಬಿ ಜೀವನವನ್ನ ಕಟ್ಟಿಕೊಳ್ಳುವವರು ತುಂಬಾ ವಿರಳ.

    ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ನಿವಾಸಿ ಯಲ್ಲಪ್ಪ, ಬಿಎ, ಬಿಎಸ್‍ಸಿ ಮತ್ತು ಎಂಎ ಮಾಡಿಕೊಂಡಿದ್ದಾರೆ. ಇವರು ತ್ರಿಬಲ್ ಡಿಗ್ರಿ ಹೋಲ್ಡರ್ ಆದರೂ ಸರ್ಕಾರಿ ಕೆಲಸನೂ ಬೇಡ. ನಗರದ ಜೀವನವೂ ಬೇಡ ಅಂತಾ ಹುಟ್ಟಿದ ಊರಲ್ಲೇ ಮೊಲ ಸಾಕಾಣಿಕೆ ಮಾಡಿಕೊಂಡು ಸ್ವಾವಲಂಬಿ ಜೀವನವನ್ನ ಕಟ್ಟಿಕೊಂಡಿದ್ದಾರೆ. ಇವರ ಜೊತೆಗೆ ಗೆಳೆಯ ರುದ್ರೇಶ್ ಕೂಡ ಸಾಥ್ ನೀಡುತ್ತಿದ್ದಾರೆ.


    ನಮ್ಮದು ಕೃಷಿ ಪ್ರಧಾನವಾದ ಕುಟುಂಬವಾಗಿದ್ದರಿಂದ ಮೆಕ್ಕೆಜೋಳ, ಹತ್ತಿ, ಶೇಂಗಾ ಹೀಗೆ ಹಲವು ಬೆಳೆಗಳನ್ನ ಬೆಳೆಯುತ್ತಿದ್ದೇವು. ಆದರೆ ಬರದಿಂದ ಕೃಷಿ ಕೈ ಕೊಟ್ಟು ಹೈನುಗಾರಿಕೆ ಮಾಡಿದೆವು. ಈಗ ಇದೇ ನಮ್ಮ ಕೈ ಹಿಡಿದಿದೆ.

    ಮೊಲ ಸಾಕಾಣಿಕೆ ಹಾಗೂ ಲಾಭಗಳಿಕೆ ಬಗ್ಗೆ ಮಾಹಿತಿ ಪಡೆದುಕೊಂಡು, ನಾನು ಮತ್ತು ರುದ್ರೇಶ್ ಸೇರಿ 10 ಯೂನಿಟ್ ನಷ್ಟು ಮೊಲಗಳನ್ನ ಸಾಕಾಣಿಕೆ ಮಾಡುತ್ತಿದ್ದೇವೆ. ನ್ಯೂಜಿಲೆಂಡ್ ವೈಟ್, ಸೋಯಿಟ್ ಮತ್ತು ಜಿಂಜಿಲಾ ವಿದೇಶಿ ತಳಿಗಳ ಮೊಲಗಳನ್ನ ಸಾಕುತ್ತಿದ್ದೇವೆ ಅಂತ ಯಲ್ಲಪ್ಪ ಹೇಳಿದ್ದಾರೆ.

    ಸಿಟಿ ಲೈಫ್‍ ನ ಜಂಜಾಟಗಳ ಮಧ್ಯೆ ದುಡ್ಡಿನ ಹಿಂದೆ ಓಡಿ ನೆಮ್ಮದಿ ಕಳೆದುಕೊಳ್ಳುವುದಕ್ಕಿಂತ ಹಳ್ಳಿಯಲ್ಲಿ ಮಣ್ಣಿನ ಮಕ್ಕಳಾಗಿ ಜೀವನ ಸಾಗಿಸುವುದು ಉತ್ತಮವಾಗಿದೆ.

  • ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಳ್ಗಿಚ್ಚಿನಿಂದಾಗಿ ಮೊಲವೊಂದು ದಾರಿ ತಪ್ಪಿದ್ದು, ಬೆಂಕಿಯ ಕಡೆಗೆ ಓಡಿ ಹೋಗುತ್ತಿತ್ತು. ಆಗ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಮೊಲವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಗುರುವಾರದಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ 35 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿ ಆ ಚಿಕ್ಕ ಪ್ರಾಣಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಸೆರೆಯಾಗಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು 6,000 ಬಾರಿ ರೀಟ್ವೀಟ್ ಆಗಿದ್ದು, 13,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

    ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ದಿನಗಳಿಂದ ಕಾಳ್ಗಿಚ್ಚು ಆವರಿಸಿದೆ. ಈ ಬೆಂಕಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಲಾಸ್-ಏಂಜಲೀಸ್ ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 2 ಲಕ್ಷಗಿಂತ ಹೆಚ್ಚು ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ.

  • ಮೊಲದ ಮರಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ತಿದೆ ಬೆಕ್ಕು- ವಿಡಿಯೋ ನೋಡಿ

    ಮೊಲದ ಮರಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ತಿದೆ ಬೆಕ್ಕು- ವಿಡಿಯೋ ನೋಡಿ

    ಮಡಿಕೇರಿ: ಬೆಕ್ಕು ತನ್ನದಲ್ಲದ ಮೊಲದ ಮರಿಗಳಿಗೆ ಹಾಲುಣಿಸುವ ಮೂಲಕ ತಾಯ್ತನವನ್ನು ತೋರಿಸಿತ್ತಿದೆ. ತನ್ನ ಬೆಕ್ಕಿನ ಮರಿಗಳಿಗೆ ಹಾಲು ಉಣಿಸುವುದರ ಜೊತೆಗೆ ಮೊಲದ ಮರಿಗಳಿಗೂ ಹಾಲು ಉಣಿಸುತ್ತಿದೆ. ತಾಯಿ ಮೊಲದಿಂದ ಬೇರ್ಪಟ್ಟ ಮರಿ ಮೊಲಗಳನ್ನು ಬೆಕ್ಕು ರಕ್ಷಣೆ ಮಾಡುತ್ತಿದೆ.

    ಒಂದು ವಾರದ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ತೋಟದಲ್ಲಿ ತಾಯಿ ಇಲ್ಲದೇ ಮೂರು ಮೊಲದ ಮರಿಗಳು ಮಳೆಯಲ್ಲಿ ಒದ್ದೆಯಾಗುತ್ತಿತ್ತು. ಈ ಸಂದರ್ಭ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಎಂಬವರು ಮೂರು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಮೂರು ಮೊಲದ ಮರಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಬಂದು ಸಾಕಲು ಮುಂದಾಗಿದ್ದಾರೆ. ಆದರೆ ತಾಯಿಯನ್ನು ಕಳೆದುಕೊಂಡಿರುವ ಮೂರು ಮೊಲದ ಮರಿಗಳಿಗೆ ಈಗ ನಾಡಿನ ತಾಯಿ ಬೆಕ್ಕು ಆಸರೆಯಾಗಿದೆ.

    ಕಳೆದ ಒಂದು ವಾರದ ಹಿಂದೆ ಮಹೇಶ್ ಅವರ ಮನೆಯಲ್ಲಿರುವ ಬೆಕ್ಕು ಎರಡು ಮರಿಗಳಿಗೆ ಜನ್ಮ ನೀಡಿದೆ. ಇದೀಗ ಆ ತಾಯಿ ಬೆಕ್ಕು ಮೊಲಗಳಿಗೂ ತನ್ನ ಆಸರೆ ನೀಡಿದೆ. ರಾತ್ರಿ ವೇಳೆಯಲ್ಲಿಯೂ ತನ್ನೊಂದಿಗೆ ಮಲಗಿಸಿಕೊಂಡು ಪೋಷಣೆ ಮಾಡುತ್ತಿದೆ. ಮರಿಗಳು ಸ್ವಲ್ಪ ಬೆಳೆದ ನಂತರ ಅದನ್ನು ಕಾಡಿಗೆ ಬಿಡುವ ನಿರ್ಧಾರ ಮಾಡಿಕೊಂಡಿದ್ದಾರೆ.

     

  • ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ನಗರದ ಜೋರಾಪುರ ಪೇಟ್ ನಲ್ಲಿರುವ ಗೋಂಧಳಿ ಗಲ್ಲಿಯ ದುರ್ಗಾ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ಮುಗ್ದ ಮೊಲಗಳ ಮಾರಣಹೋಮ ನಡೆಯುತ್ತದೆ.

    ಯುಗಾದಿ ಹಬ್ಬದ ದಿನದಂದು ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಬೇವು-ಬೆಲ್ಲ ವಿನಿಮಯ ಮಾಡುವುದು ಹಬ್ಬದ ವಿಶೇಷತೆ. ಆದ್ರೆ ವಿಜಯಪುರದಲ್ಲಿ ಯುಗಾದಿ ಮರುದಿನ ಬೇಟೆಗೆ ಪ್ರಸಿದ್ಧವಾದ ಮುಧೋಳ ನಾಯಿಗಳೊಂದಿಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಸಂಜೆ ವೇಳೆಗೆ ನಾಯಿಗಳೊಂದಿಗೆ ಬೇಟೆಗೆ ತೆರಳುವ ಭಕ್ತರು ನೂರಾರು ಮೊಲ ಮತ್ತು ಕಾಡು ಮಿಕಗಳನ್ನು ಸೆರೆ ಹಿಡಿದು ತರುತ್ತಾರೆ.

    ಬೇಟೆಯಾಡಿ ತರುವ ಮೊಲಗಳನ್ನ ದೇವಿಯ ಹೆಸರಲ್ಲಿ ಬಲಿ ಕೊಡುತ್ತಾರೆ. ಈ ಪ್ರಾಣಿಗಳ ಮಾರಣಹೋಮ ಮಾಡಿದ ನಂತರ ದೇವಸ್ಥಾನದ ಆವರಣದಲ್ಲಿ ಅಡುಗೆ ತಯಾರಿಸಿ ತಿನ್ನುತ್ತಾರೆ. ಈ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪೊಲೀಸರು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಈ ದೇವಸ್ಥಾನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಹೆಡ್ ಕ್ವಾಟರ್ಸ್‍ಗೆ ಕೂಗಳತೆಯ ದೂರದಲ್ಲಿದೆ.

     

  • KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

    KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

    ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇನ್ಮುಂದೆ ಸಾಕುಪ್ರಾಣಿಗಳ ಜೊತೆ ಪ್ರಯಾಣ ಬೆಳೆಸೋಕೆ ಅವಕಾಶ ನೀಡಲಾಗಿದೆ. ನಾಯಿಗಳನ್ನ ಜೊತೆಗೆ ಕೊಂಡೊಯ್ಯಲು ಮನಷ್ಯರಿಗೆ ನೀಡಲಾಗುವ ಬೆಲೆಯಷ್ಟೇ ಟಿಕೆಟ್ ಪಡೆಯಬೇಕಿದೆ.

    ಕೆಎಸ್‍ಆರ್‍ಟಿಸಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಯಾಯ ಊರಿಗೆ ವಯಸ್ಕರಿಗೆ ಎಷ್ಟು ಬೆಲೆಯ ಟಿಕೆಟ್ ನೀಡಲಾಗುತ್ತದೆಯೋ ಅಷ್ಟೇ ಬೆಲೆಯ ಟಿಕೆಟ್ ದೊಡ್ಡ ನಾಯಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ. ಇನ್ನು ಮರಿ ನಾಯಿಗಳಿಗೆ ಮಕ್ಕಳ ಟಿಕೆಟ್ ದರ ಅನ್ವಯವಾಗಲಿದೆ.

    ಕೇವಲ ನಾಯಿಗಳು ಮಾತ್ರವಲ್ಲದೇ ಬೆಕ್ಕು, ಮೊಲದ ಜೊತೆಯೂ ಪ್ರಯಾಣ ಬೆಳೆಸಬಹುದು. ಆದ್ರೆ ಇವುಗಳಿಗೆ ಮಕ್ಕಳ ಟಿಕೆಟ್ ಅಂದ್ರೆ ಹಾಫ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕೆಎಸ್‍ಆರ್‍ಟಿಸಿಯಿಂದ ಇಂದು ಅಧಿಕೃತವಾಗಿ ಸುತ್ತೊಲೆ ಹೊರಡಿಸಲಾಗಿದೆ. ಇದರ ಜೊತೆಗೆ ಸರಕು ಸಾಗಾಣೆಯ ದರವೂ ಕೂಡ ಪರಿಷ್ಕರಣೆ ಮಾಡಲಾಗಿದೆ.