Tag: ಮೊರ್ಬಿ ಸೇತುವೆ

  • 13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    ಪಾಟ್ನಾ: ಬಿಹಾರದ (Bihar) ಬೇಗುಸರಾಯ್‍ನಲ್ಲಿ (Begusarai) ಗಂಡಕ್ ನದಿ (Gandak River) ದಾಟಲು 13 ಕೋಟಿ ರೂ. ಖರ್ಚು ಮಾಡಿ ಕಟ್ಟಲಾಗಿದ್ದ 206 ಮೀಟರ್ ಉದ್ದದ ಬ್ರಿಡ್ಜ್ (Bridge) ಉದ್ಘಾಟನೆಗೂ ಮುನ್ನ ಕುಸಿದು ಬಿದ್ದಿದೆ.

    ಭಾನುವಾರ ಬೆಳಗ್ಗೆ ಬಿಹಾರದ ಬೇಗುಸರಾಯ್‍ನಲ್ಲಿ ಗಂಡಕ್ ನದಿ ಬಳಿ ನಿರ್ಮಿಸಲಾಗಿದ್ದ ಬ್ರಿಡ್ಜ್‌ ಮುಂಭಾಗ ಕುಸಿದು ನದಿ ಪಾಲಾಗಿದೆ. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೊಂಡಿರಲಿಲ್ಲ (Inauguration). ಆ ಬಳಿಕ ಕೆಲದಿನಗಳ ಹಿಂದೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಸಾಹೇಬ್‍ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‍ಪುರ ನಡುವೆ ಸಂಪರ್ಕ ಕಲ್ಪಿಸಲು 206 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಉದ್ಘಾಟನೆಗೂ ಮುನ್ನ ಕುಸಿದು ಬಿದ್ದ ಪರಿಣಾಮ ದುರಂತವೊಂದು ತಪ್ಪಿದೆ. ಕೆಲ ತಿಂಗಳ ಹಿಂದೆ ಗುಜರಾತ್‍ನ ಮೊರ್ಬಿಯಲ್ಲಿ ದುರಸ್ತಿಗೊಂಡಿದ್ದ ಕೇಬಲ್ ಸೇತುವೆ ಕುಸಿತಗೊಂಡು ಹಲವು ಸಾವು-ನೋವುಗಳು ಸಂಭವಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    Live Tv
    [brid partner=56869869 player=32851 video=960834 autoplay=true]