Tag: ಮೊರಾಕ್ಕೋ

  • ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ

    ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ

    ರಬತ್‌: ಮೊರಾಕ್ಕೋ (Morocco Earhquake) ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಭೂಕಂಪಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 2,800 ಕ್ಕೆ ಏರಿಕೆಯಾಗಿದೆ.

    ಕಳೆದ ಶುಕ್ರವಾರ 6.8 ತೀವ್ರತೆಯ ಭೂಕಂಪ ಸಂಭವಿಸಿ ಅಪಾರ ಸಾವು-ನೋವಾಗಿತ್ತು. ಬದುಕುಳಿದವರ ಪತ್ತೆಗಾಗಿ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಇದನ್ನೂ ಓದಿ: ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕತಾರ್‌ನ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಭೂಕಂಪಕ್ಕೆ ಸಿಲುಕಿ 2,562 ಜನರು ಗಾಯಗೊಂಡಿದ್ದಾರೆ. ಮರ್ರಾಕೇಶ್‌ನಿಂದ 60 ಕಿ.ಮೀ. ದೂರದಲ್ಲಿರುವ ತಾಫೆಘಗ್ಟೆ ಎಂಬ ಪರ್ವತ ಹಳ್ಳಿಯಲ್ಲಿನ ಪ್ರತಿ ಕಟ್ಟಡವೂ ಭೂಕಂಪದಿಂದಾಗಿ ನಾಶವಾಗಿದೆ.

    ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ (Morocco Earthquake) 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಕಟ್ಟಡಗಳು ನೆಲಸಮವಾಗಿ ಅಪಾರ ಸಾವು-ನೋವಾಗಿತ್ತು. ದುರಂತಕ್ಕೆ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ವಿಷಾದ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ದುಃಖ ವ್ಯಕ್ತಪಡಿಸಿದ್ದರು. ಮೊರಾಕ್ಕೋಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ರಬತ್: ಮೊರಾಕ್ಕೋ (Morocco) ಭೀಕರ ಭೂಕಂಪಕ್ಕೆ (Earthquake) 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ವಸತಿ ಕಳೆದುಕೊಂಡವರು ಸಿಕ್ಕ ಜಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಅವರ ರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಐತಿಹಾಸಿಕ ಕಟ್ಟಡಗಳೂ ಸೇರಿದಂತೆ ಮಸೀದಿ ಹಾಗೂ ಮನೆಗಳು ಉರುಳಿಬಿದ್ದಿವೆ. ಇವುಗಳ ಅವಶೇಷಗಳ ಅಡಿ ಹಲವಾರು ಜನ ಸಿಲುಕಿ ಮೃತಪಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದ ಈ ಮಟ್ಟದ ಹಾನಿ ಸಂಭವಿಸಿದೆ. ಈ ಭೂಕಂಪ 6.8 ರಷ್ಟು ತೀವ್ರತೆ ಹೊಂದಿತ್ತು. ಭೂಕಂಪದ ಕೇಂದ್ರಬಿಂದು ಮಾರಾಕೆಚ್‌ನ ನೈಋತ್ಯಕ್ಕೆ 72 ಕಿಮೀ ದೂರದಲ್ಲಿದೆ. ಭೂಕಂಪವು 18.5 ಕಿಮೀ ಆಳದಲ್ಲಿ ಆಗಿರುವುದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

    ಈ ದುರಂತದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಜನ ದುಃಖದಲ್ಲಿ ಕಣ್ಣೀರಿಡುವ ದೃಶ್ಯಗಳು ಎಲ್ಲಾ ಕಡೆ ಕಾಣುತ್ತಿದೆ. ಮಕ್ಕಳನ್ನು ಕಳೆದುಕೊಂಡ ತಾಯಿ ಅವರ ಹುಡುಕಾಟದಲ್ಲಿ ಅಲೆಯುವ ದೃಶ್ಯಗಳು ಕರುಳು ಹಿಂಡುವಂತಿವೆ. ಅಲ್ಲದೇ ಆಹಾರ ಹಾಗೂ ಸರಿಯಾದ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ನೀರು ಹಾಗೂ ಆಹಾರದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಕಾಸಾಬ್ಲಾಂಕಾ: ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ (Morocco Earthquake) ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಅಪಾರ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ.

    ಮೊರಾಕ್ಕೋದ ಆಂತರಿಕ ಸಚಿವಾಲಯ ಶನಿವಾರ ಮುಂಜಾನೆ ಹೇಳಿದ್ದು, ಭೂಕಂಪವಾದ ಪ್ರದೇಶಕ್ಕೆ ಸಮೀಪವಿರುವ ಪ್ರಾಂತ್ಯಗಳಲ್ಲಿ ಕನಿಷ್ಠ 820 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ 300 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರಗಳು ಮತ್ತು ಪಟ್ಟಣಗಳ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ಭೂಕಂಪದಿಂದ ಮೃತಪಟ್ಟವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, “ಮೊರಾಕ್ಕೋದಲ್ಲಿ ಭೂಕಂಪದಿಂದ ಆಗಿರುವ ಜೀವಹಾನಿಯಿಂದ ತೀವ್ರ ನೋವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕ್ಕೋಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ 11:11 ಗಂಟೆಗೆ 6.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಇದನ್ನು ರಿಕ್ಟರ್ ಮಾಪಕದಲ್ಲಿ 7 ತೀವ್ರತೆ ಎಂದು ಇದೆ. ಇದನ್ನೂ ಓದಿ: ಮಾಲಿಯಲ್ಲಿ ಪ್ರಯಾಣಿಕ ಬೋಟ್, ಸೇನಾ ನೆಲೆಯ ಮೇಲೆ ಉಗ್ರರ ದಾಳಿ – 64 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ರಬತ್: ಶುಕ್ರವಾರ ತಡರಾತ್ರಿ ಮೊರಾಕ್ಕೋದಲ್ಲಿ (Morocco) ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ (Earthquake) 300 ಜನ ಮೃತಪಟ್ಟ ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‍ವರ್ಕ್ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಮರಕೇಶ್‍ನ ನೈಋತ್ಯದ 71 ಕಿಲೋಮೀಟರ್ ದೂರದ 18.5 ಕಿಮೀ ಆಳದಲ್ಲಿದೆ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪದ ತೀವ್ರತೆಗೆ ಪುರಾತನ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಭೂಕಂಪದಿಂದಾಗಿ ನಗರದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಈಗ ತಾತ್ಕಾಲಿಕ ನೆಟ್‍ವರ್ಕ್ ವ್ಯವಸ್ಥೆ ಮಾಡಲಾಗಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೆರೆಯ ಅಲ್ಜೀರಿಯಾದಲ್ಲಿಯೂ ಭೂಕಂಪದ ಅನುಭವವಾಗಿದ್ದು, ಯಾವುದೇ ಹಾನಿ ಅಥವಾ ಸಾವುನೋವುಗಳನ್ನು ಉಂಟುಮಾಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

    2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೋಸಿಮಾದಲ್ಲಿ ಭೂಕಂಪ ಸಂಭವಿಸಿದಾಗ ಕನಿಷ್ಠ 628 ಜನರು ಸಾವನ್ನಪ್ಪಿದ್ದರು ಮತ್ತು 926 ಜನರು ಗಾಯಗೊಂಡಿದ್ದರು. 1980 ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ (Algeria) 7.3 ತೀವ್ರತೆಯ ಭೂಕಂಪವು 2,500 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೇ ಕನಿಷ್ಠ 300,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಏನಿದೆ? ಏನಿರಲ್ಲ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]