Tag: ಮೊಯಿದ್ದೀನ್ ಬಾವಾ

  • 6 ಜನರ ಮೇಲೆ ಎಫ್‌ಐಆರ್ ದಾಖಲು – ಹನಿಟ್ರ್ಯಾಪ್‌ಗೆ ಮುಮ್ತಾಜ್ ಅಲಿ ಬಲಿ?

    6 ಜನರ ಮೇಲೆ ಎಫ್‌ಐಆರ್ ದಾಖಲು – ಹನಿಟ್ರ್ಯಾಪ್‌ಗೆ ಮುಮ್ತಾಜ್ ಅಲಿ ಬಲಿ?

    ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ತಮ್ಮ ಮುಮ್ತಾಜ್ ಅಲಿ (Mumtaz Ali) ಅವರ ಮೃತದೇಹ ಪತ್ತೆಯಾಗಿದ್ದು, ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೆ ಮುಮ್ತಾಜ್ ಅಲಿ ಅವರು ಹನಿಟ್ರ್ಯಾಪ್‌ಗೆ (Honeytrap) ಬಲಿಯಾಗಿದ್ರಾ ಎಂಬ ಪ್ರಶ್ನೆ ಎದ್ದಿದೆ.

    ಮಾಜಿ ಶಾಸಕ ಮೊಯಿದ್ದೀನ್ ಬಾವಾ ತಮ್ಮ ಮುಮ್ತಾಜ್ ಅಲಿ ಅವರು ಭಾನುವಾರ ಬೆಳಗ್ಗೆಯಿಂದ ಕಾಣೆಯಾಗಿದ್ದರು. ನಾಪತ್ತೆಯಾಗಿದ್ದ ಹಿನ್ನೆಲೆ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಪ್ರಚೋದಿಸಿರುವುದಾಗಿ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿತ್ತು?
    ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿದ್ದಾರೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ. 2024ರ ಜುಲೈನಿಂದ ಈವರೆಗೆ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಚೆಕ್ ಮೂಲಕವೂ ಮಹಿಳೆ ಹಣ ಪಡೆದಿದ್ದಾಳೆ.ಇದನ್ನೂ ಓದಿ: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ

    ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಅಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ನಾನು ಅಲ್ಲಾಹುನ ಕಡೆಗೆ ಹೋಗುತ್ತಿದ್ದೇನೆ ಎಂದು ಆಡಿಯೋ ಮೆಸೇಜ್ ಹಾಕಿ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

    ದೂರು ನೀಡಿದ ಬೆನ್ನಲ್ಲೆ ಮಹಿಳೆ ರೆಹಮತ್ ಜೊತೆ ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಎಫ್‌ಐಆರ್ ದಾಖಲಾಗಿದ್ದ ಆರು ಜನರ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ನಾಪತ್ತೆಯಾಗಿದ್ದು, ಕೇರಳದಲ್ಲಿ ಆಕೆಯ ಲೊಕೇಷನ್ ಪತ್ತೆಯಾಗಿದೆ. ಅಲ್ಲಿಗೆ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಆಕೆಯ ಕೈವಾಡ ಇದೆ ಎನ್ನುವುದು ತಿಳಿದುಬಂದಿದ್ದು, ತನಿಖೆ ನಡೆಯುತ್ತಿದೆ.

    ಏನಿದು ಪ್ರಕರಣ?
    ಮಾಜಿ ಶಾಸಕ ಮೊಯಿದ್ದೀನ್ ಬಾವಾ ತಮ್ಮ ಮುಮ್ತಾಜ್ ಅಲಿ ಅವರು ಭಾನುವಾರ ಬೆಳಗ್ಗೆಯಿಂದ ಕಾಣೆಯಾಗಿದ್ದರು. ಮಂಗಳೂರಿನ ಕೂಳೂರು ಫಲ್ಗುಣಿ ನದಿ ಸೇತುವೆ ಮೇಲೆ ಅವರ ಕಾರು ನಿನ್ನೆ ಪತ್ತೆಯಾಗಿತ್ತು. ಇದರಿಂದ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಶಂಕೆಯಿದ ಭಾನುವಾರ ಬೆಳಗ್ಗೆಯಿಂದ ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರಿಂದ ಶೋಧ ಕಾರ್ಯಚರಣೆ ನಡೆದಿತ್ತು.

    ಸೋಮವಾರ ಬೆಳಗ್ಗೆ ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಸಿಕ್ಕ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ವಿನೋದ್ ರಾಜ್, ಸಿರಾಜ್ ಕೂಳೂರು, ಲಾರೆನ್ಸ್ ಹಾಗೂ ಡೇವಿಡ್ ತಂಡ ನದಿಯ ಮಧ್ಯೆ ಶೋಧ ಕಾರ್ಯ ನಡೆಸುತ್ತಿರುವಾಗ ಶವ ಪತ್ತೆಯಾಗಿದೆ. ಕೂಳೂರು ಸೇತುವೆಯಿಂದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡ ಮಾಜಿ ಶಾಸಕ ಮೊಯಿದ್ದೀನ್ ಬಾವ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ತರದ್ದಕ್ಕೆ ಗೃಹಿಣಿಯ ಕತ್ತು ಹಿಸುಕಿ ಕೊಲೆ

  • ಮೊಯಿದ್ದೀನ್ ಬಾವ  ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

    ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

    ಮಂಗಳೂರು: ಮಾಜಿ ಕಾಂಗ್ರೆಸ್‌ ಶಾಸಕ ಮೊಯಿದ್ದೀನ್ ಬಾವ (Moinuddin Bawa) ಅವರ ಸಹೋದರ ಮುಮ್ತಾಜ್ ಅಲಿ (Mumtaz Ali) ಅವರ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

    ಕೂಳೂರಿನ ಸೇತುವೆಯ ಸಮೀಪವೇ ಇರುವ ಮತ್ತೊಂದು ಸೇತುವೆ ಬಳಿ ಇಂದು ನೀರಿನಲ್ಲಿ ವ್ಯಕ್ತಿಯೊಬ್ಬರ ತಲೆ ಕಾಣುತ್ತಿತ್ತು. ಸಮೀಪಕ್ಕೆ ತೆರಳಿದಾಗ ಇದು ಮುಮ್ತಾಜ್ ಅಲಿ ಅವರ ದೇಹ ಎನ್ನುವುದು ಖಚಿತವಾಗಿದೆ.

    ಫಲ್ಗುಣಿ ನದಿಯ ನೀರಿನಿಂದ ಶವವನ್ನು ಈಗ ಮೇಲಕ್ಕೆ ಎತ್ತಲಾಗಿದೆ. ಮುಮ್ತಾಜ್ ಅಲಿ ಅವರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಇದು ದೃಢಪಡಲಿದೆ.

     

    ಬಾವಾ ಅವರ ತಮ್ಮ 52 ವರ್ಷದ ಮುಮ್ತಾಜ್ ಅಲಿ ಭಾನುವಾರ ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದರು. ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

    ಮುಮ್ತಾಜ್ ಅಲಿ ಫಿಶ್‌ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್ ಅಲಿ ಶನಿವಾರ ರಾತ್ರಿ ಮನೆಯವರೊಂದಿಗೆ ಮುನಿಸಿಕೊಂಡು ಮಾತುಕತೆ ನಡೆಸಿದ್ದರು. ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು (BMW Car) ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದರು. ಅಲ್ಲಿಂದ ವೇಗವಾಗಿ ಕೂಳೂರು ಹೈವೇಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು.

    ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ  ಫಲ್ಗುಣಿ ನದಿಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸೇರಿದಂತೆ ಈಜುತಜ್ಞ ಈಶ್ವರ್ ಮಲ್ಪೆ ತಂಡ ಮುಮ್ತಾಜ್ ಅಲಿಗಾಗಿ ಶೋಧ ಕಾರ್ಯ ನಡೆಸಿತ್ತು.

     

  • ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ : ಮೊಯಿದ್ದಿನ್ ಬಾವಾ ಆರೋಪ

    ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ : ಮೊಯಿದ್ದಿನ್ ಬಾವಾ ಆರೋಪ

    ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ  ಮೊಯಿದ್ದಿನ್ ಬಾವಾ (Mohiuddin Bava) ಗಂಭೀರವಾಗಿ ಆರೋಪಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನಾಯತ್ ಆಲಿಗೆ ಟಿಕೆಟ್ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಸರ್ವೆಯಲ್ಲಿ ಶೇ. 78 ನನ್ನ ಪರವಾಗಿ ಮತಗಳು ಬಂದಿದ್ದವು. ಇನಾಯತ್ ಆಲಿಗೆ ಕೇವಲ 7 ಶೇ. ಮತ ಸಿಕ್ಕಿದ್ದರೂ, ಡಿಕೆಶಿಯ ಪಾಲುದಾರ ಎಂಬ ನೆಪದಲ್ಲಿ ಟಿಕೆಟ್ ಮಾರಿದ್ದಾರೆ. ನನ್ನ ಟಿಕೆಟ್ ತಪ್ಪಿಸಿದ್ದು ಡಿಕೆ ಶಿವಕುಮಾರ್ ಅವರೇ, ಖಚಿತವಾಗಿ ಹೇಳುತ್ತೇನೆ. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಸ್ಟ್‌ ಒಂದು ಕರೆಯಿಂದ ಟಿಕೆಟ್‌ ಕಳೆದುಕೊಂಡ ಮೊಯಿದ್ದಿನ್ ಬಾವಾ!

    ಡಿಕೆಶಿ ನೀರಾವರಿ ಸಚಿವನಾದ ಬಳಿಕ ಇನಾಯತ್ ಅಲಿ ಹಣ ಮಾಡಿದ್ದಾನೆ ಎಂಬುದು ಗೊತ್ತಿದೆ. ಇನಾಯತ್ ಅಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ಗೊತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೂ ಗೊತ್ತಿಲ್ಲ ಎಂದು ಗುಡುಗಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜಿನಾಮೆ ನೀಡಿ ಜೆಡಿಎಸ್ ಸೇರುತ್ತೇನೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇನಾಯತ್ ಗೆದ್ದರೆ ನನ್ನ ತಲೆ ಕಡಿದು ಕೊಡಲು ಸಿದ್ಧನಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

    ಸಿದ್ದರಾಮಯ್ಯ (Siddaramaiah) ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್‌ (DK Shivakumar) ಬಣದ ಇನಾಯತ್ ಅಲಿ (Inayat Ali) ಮಧ್ಯೆ ಮಂಗಳೂರು ಉತ್ತರ (Mangalore North) ಕ್ಷೇತ್ರದ ಟಿಕೆಟ್‌ಗೆ ಭಾರೀ ಫೈಟ್‌ ನಡೆಯುತ್ತಿತ್ತು. ಬಹುತೇಕ ಮಾಜಿ‌ ಶಾಸಕ‌ ಮೊಯಿದ್ದಿನ್ ಬಾವಾಗೆ ಟಿಕೆಟ್ ಫೈನಲ್ ಆಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲೇ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು.  ಆದರೆ ಕೊನೆ ಕ್ಷಣದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಡಿಕೆ ಬಣದ ಇನಾಯತ್ ಅಲಿಗೆ ಸಿಕ್ಕಿದೆ.

  • ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    – ಇದು ನೆಹರು ದೇಶವಲ್ಲ, ಮೋದಿ ದೇಶ
    – ಬೆದರಿಕೆ ಕರೆ ವಿರುದ್ಧ ದೂರು ದಾಖಲು

    ಮಂಗಳೂರು: ದೇವಸ್ಥಾನದ ನವರಾತ್ರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

    ಮಂಗಳೂರು ಹೊರವಲಯದ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕೊಪ್ಪರಿಗೆ ಇಡುವ ಕಾರ್ಯಕ್ರಮವಿತ್ತು. ಇದಕ್ಕೆ ಕ್ಷೇತ್ರದ ಆಹ್ವಾನದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿದ್ದರು. ಅದೇ ವೇಳೆ ಕೊಪ್ಪರಿಗೆ ಇಡುವ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿತ್ತು. ಹೀಗಾಗಿ ಕ್ಷೇತ್ರಾಡಳಿತ ಮಂಡಳಿಯವರು ಮಾಜಿ ಶಾಸಕ ಮೊಯಿದ್ದೀನ್ ಬಾವಾರಿಂದಲೂ ಕೊಪ್ಪರಿಗೆಗೆ (ಅನ್ನದಾನಕ್ಕೆ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ) ಅಕ್ಕಿ ಹಾಕುವಂತೆ ಹೇಳಿದ್ದು, ಬಾವಾ ಅವರು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದಾರೆ.

    ಇದರ ವೀಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೆದಿತ್ತು. ಇದೇ ವೇಳೆ ಮುಂಬೈನಿಂದ ಅನಿಲ್ ಎಂದು ಹೇಳಿಕೊಂಡ ವ್ಯಕ್ತಿ ಮೊಯಿದ್ದೀನ್ ಬಾವಾ ಅವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂದೂ ದೇವಸ್ಥಾನದಲ್ಲಿ ನೀವು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದು ಯಾಕೆ? ನೀವು ದನದ ಮಾಂಸ ತಿನ್ನೋರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗೋದು ಸರಿಯಲ್ಲ. ಇದು ನೆಹರು ದೇಶವಲ್ಲ, ಮೋದಿಯ ದೇಶ, ಇನ್ನು ಮುಂದೆ ಹೀಗೆಲ್ಲಾ ಹೋದ್ರೆ ಹುಷಾರ್ ಎಂದು ತುಳುವಿನಲ್ಲಿ ಮಾತಾಡಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕರೆಯ ಬಗ್ಗೆ ಮೊಯಿದ್ದೀನ್ ಬಾವಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಸುಂಕದಕಟ್ಟೆ ದೇವಸ್ಥಾನದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿಕೆ ನೀಡಿದ್ದು, ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಅಲ್ಲಿನ ಸ್ವಾಮೀಜಿಯವರ ಮಗ ನನ್ನನ್ನು ಆಹ್ವಾನಿದ್ದರು. ನಾನು ಅಲ್ಲಿನ ಮಾಜಿ ಶಾಸಕನ ನೆಲೆಯಲ್ಲಿ ಅಲ್ಲಿಗೆ ಹೋಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕೊಪ್ಪರಿಗೆಗೆ ಅಕ್ಕಿಯನ್ನ ಹಾಕುವ ಧಾರ್ಮಿಕ ಕಾರ್ಯ ನಡೆಯುತ್ತಿತ್ತು. ದೇವರ ಅನುಗ್ರಹದಂತೆ ನನಗೆ ಆ ಅವಕಾಶ ಸಿಕ್ಕಿತು ಅಂದುಕೊಳ್ತೇನೆ. ಆಗಷ್ಟೇ ಹಾಲಿ ಶಾಸಕರು ಬಂದು, ಅರ್ಜೆಂಟ್ ಇದೆ ಅಂತ ಹೋದರು ಅನ್ನೋದು ಗೊತ್ತಾಯ್ತು. ಅಲ್ಲಿದ್ದವರು ನನಗೆ ಅಕ್ಕಿ ಹಾಕಿ ಅಂತ ಹೇಳಿದಾಗ ಹಾಕಿದೆ.

    ನಾನು ಜಾತಿವಾದಿಯಲ್ಲ, ಜಾತ್ಯಾತೀತ ನೆಲೆಯಲ್ಲಿ ಮಾಡಿದೆ. ಇದರಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಅಲ್ಲಿ ಸೋತಿದ್ದರೂ ಜನರ ಪ್ರೀತಿ ಇಂದಿಗೂ ನನಗಿದೆ. ಚುನಾವಣೆ ವೇಳೆ ನಡೆದ ಒಂದು ಕೊಲೆಯನ್ನು ನನ್ನ ತಲೆಗೆ ಕಟ್ಟಿ ಸೋಲಿಸಿದ್ದರು. ಈ ಷಡ್ಯಂತ್ರದಿಂದ ಭರತ್ ಶೆಟ್ಟಿ ಅಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಪ್ರತಿಕ್ರಿಯಿಸಿದ್ದಾರೆ.

  • ಮಂಗಳೂರು ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ- ಪಾಲಿಕೆ ಟಿಕೆಟ್‍ಗಾಗಿ ಮಾರಾಮಾರಿ

    ಮಂಗಳೂರು ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ- ಪಾಲಿಕೆ ಟಿಕೆಟ್‍ಗಾಗಿ ಮಾರಾಮಾರಿ

    – ರಮಾನಾಥ ರೈ, ಖಾದರ್ ಮುಂದೆಯೇ ಡಿಶುಂ ಡಿಶುಂ
    – ಮೊಯಿದ್ದೀನ್ ಬಾವಾ ಮೇಲೂ ಹಲ್ಲೆ
    – ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಪೊರೇಟರ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ವಿಚಾರಕ್ಕೆ ಕಾರ್ಯಕರ್ತರ ಮಧ್ಯೆ ಮಾರಾಮಾರಿಯಾಗಿದೆ.

    ಮಂಗಳೂರು ಪಾಲಿಕೆ ಚುನಾವಣೆಯು ನವೆಂವರ್ 12ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಿಸಿದರು. ಈ ವಿಚಾರವಾಗಿ ನಗರದಲ್ಲಿ ಹೈಡ್ರಾಮಾ ನಡೆದಿದೆ.

    ಮಾಜಿ ಮೇಯರ್ ಗುಲ್ಜಾರ್ ಬಾನು ಈ ಹಿಂದೆ ಸುರತ್ಕಲ್ ವಾರ್ಡ್ ನಿಂದ ಸ್ಪರ್ಧಿಸಿ ಸೋತಿದ್ದರು. ಆದರೂ ಈ ಬಾರಿ ಟಿಕೆಟ್ ನೀಡುವುದಾಗಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ ಕೊಟ್ಟಿದ್ದರು. ಬುಧವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುರತ್ಕಲ್ ವಾರ್ಡ್ ಟಿಕೆಟ್ ಬೇರೆಯವರ ಪಾಲಾಗಿದ್ದು ಗುಲ್ಜಾರ್ ಬಾನು ಅಸಮಾಧಾನಕ್ಕೆ ಕಾರಣವಾಯಿತು.

    ಸುದ್ದಿಗೋಷ್ಠಿ ವೇಳೆ ಗಲಾಟೆ ಆರಂಭವಾಗಿದ್ದರಿಂದ ಮಾಜಿ ಶಾಸಕ ಮೊದಿನ್ ಬಾವಾ ಸಭಾಂಗಣದಿಂದ ಹೊರಗೆ ಬಂದರು. ಆಗ ಪಾಲಿಕೆ ಟಿಕೆಟ್ ಕೈತಪ್ಪಿದ್ದಕ್ಕೆ ಗುಲ್ಜಾರ್ ಬಾನು, ಮೊದಿನ್ ಬಾವಾ ವಿರುದ್ಧ ಕಿಡಿಕಾರಿದರು. ಇದರಿಂದಾಗಿ ನಾಯಕರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ಉಂಟಾಗಿ, ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

    ಈ ಮಧ್ಯೆ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ಅಜೀಂ, ಮೊಯ್ದಿನ್ ಬಾವಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದರಾಗಿ ಗಲಾಟೆ ಮತ್ತಷ್ಟು ಜೋರಾಯಿತು. ತಕ್ಷಣವೇ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆದರು.

    ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಉಸ್ತುವಾರಿ ವಿ.ಆರ್.ಸುದರ್ಶನ್ ಇದ್ದಾಗಲೇ ಘಟನೆ ನಡೆದಿದೆ. ಇತ್ತ ಈ ಬಾರಿ ಟಿಕೆಟ್ ವಂಚಿತರಾದ ಕಾಂಗ್ರೆಸ್ಸಿನ ಹಾಲಿ ಕಾರ್ಪೊರೇಟ್ ಆಶಾ ಡಿಸಿಲ್ವಾ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ವೆಲೆನ್ಸಿಯಾ ವಾರ್ಡಿನಲ್ಲಿ ಆಶಾ ಡಿಸಿಲ್ವಾಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಜೆ.ಆರ್.ಲೋಬೋ ಅರಿಂದಾಗಿ ತಮ್ಮವರಿಗೆ ಟಿಕೆಟ್ ತಪ್ಪಿದೆಯೆಂದು ಕಾಂಗ್ರೆಸ್ಸಿನ ಕೆಲವು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಪ್ರಸಂಗವೂ ರಾತ್ರಿ ನಡೆಯಿತು.

  • ಮಹಿಳೆಯರಿಗೆ ಕದ್ದು ಮುಚ್ಚಿ ಸೀರೆ ಕೊಟ್ಟ ಶಾಸಕ ಮೊಯಿದ್ದೀನ್ ಬಾವಾ!

    ಮಹಿಳೆಯರಿಗೆ ಕದ್ದು ಮುಚ್ಚಿ ಸೀರೆ ಕೊಟ್ಟ ಶಾಸಕ ಮೊಯಿದ್ದೀನ್ ಬಾವಾ!

    ಮಂಗಳೂರು: ನಗರದ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವಾ ತನ್ನ ಕ್ಷೇತ್ರದ ಮಹಿಳೆಯರಿಗೆ ಕದ್ದು ಮುಚ್ಚಿ ಸೀರೆ ಹಂಚೋ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚುನಾವಣೆ ಹತ್ತಿರ ಬರುತ್ತಿದ್ದು, ಮುಂದಿನ ಚುನಾವಣೆಗೆ ತಾನೇ ಸ್ಪರ್ಧಿ ಎಂದು ಖಚಿತಗೊಳ್ಳುತ್ತಿದ್ದಂತೆ ಶಾಸಕ ಬಾವಾ ತನ್ನ ಕ್ಷೇತ್ರದಲ್ಲಿ ಓಡಾಟ ಹೆಚ್ಚಾಗಿಸಿದ್ದಾರೆ. ಇದರ ಜೊತೆಗೆ ಮನೆ ಮನೆಗೆ ತೆರಳಿ ಯಾರಿಗೂ ಗೊತ್ತಾಗದಂತೆ ಕದ್ದುಮುಚ್ಚಿ ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ.  ಇದನ್ನೂ ಓದಿ: `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಮತದಾರ!

    ಬಿಜೆಪಿ ಮತದಾರರೇ ಹೆಚ್ಚಿರುವ ಪ್ರದೇಶದ ಮನೆಯಲ್ಲಿ ಗಂಡಸರು ಇಲ್ಲದ ಮಧ್ಯಾಹ್ನದ ವೇಳೆಯೇ ಮೊಯಿದ್ದೀನ್ ಬಾವ ಮನೆ ಮನೆಗೆ ಭೇಟಿ ನೀಡಿ ಸೀರೆಯನ್ನು ಹಂಚಿ ಮುಂದಿನ ಚುನಾವಣೆಯಲ್ಲಿ ನನ್ನನ್ನು ಆಶೀರ್ವಾದಿಸಬೇಕೆಂದು ಕೇಳಿ ಕೊಳ್ಳುತ್ತಿದ್ದಾರೆ. ಕೆಲವು ಮನೆಗಳಲ್ಲಿ ಸೀರೆಯನ್ನು ಪಡೆಯದೆ ನಿರಾಕರಿಸಿದ್ದ ಪ್ರಸಂಗವೂ ನಡೆದಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಾಸಕ ಬಾವಾ ಆಮಿಷಗಳನ್ನು ಒಡ್ಡಲಾರಂಭಿಸಿದ್ದಾರೆ ಅನ್ನುವ ಆರೋಪವೂ ಕೇಳಿ ಬಂದಿದೆ.