Tag: ಮೊಮ್ಮಗು

  • ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ. ಇದನ್ನೂ ಓದಿ: ಕಲಘಟಗಿ ತೊಟ್ಟಿಲಿನ ವಿಶೇಷತೆ ಏನು?

    ಕಲಘಟಗಿ ಕಲಾವಿದ ಮಾರುತಿ ಬಳಿಯೇ ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತೊಟ್ಟಿಲಿನಲ್ಲಿ ಕೃಷ್ಣನ ಬಾಲ ಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

    ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬವರು ಜನಾರ್ದನ ರೆಡ್ಡಿ ಮೊಮ್ಮಗುವಿಗೆ ಈ ತೊಟ್ಟಿಲನ್ನು ನೀಡುತ್ತಿದ್ದಾರೆ. ಈಗಾಗಲೇ 40,000 ಮುಂಗಡ ರೂಪಾಯಿಯನ್ನು ನೀಡಲಾಗಿದ್ದು, ಉಳಿದ 50,000 ರೂ.ಹಣವನ್ನು ಇಂದು ಕೊಟ್ಟು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.

    ಅಲ್ಲದೇ ಸಿನಿಮಾ ನಟರು ಕೂಡ ಕಲಘಟಗಿ ಬಣ್ಣದ ತೊಟ್ಟಿಲಿಗೆ ಮಾರು ಹೋಗಿದ್ದು, ಯಶ್-ರಾಧಿಕಾ ಪಂಡಿತ್ ಮಗುವಿಗೂ ಕಲಘಟಗಿ ತೊಟ್ಟಿಲನ್ನು ನೀಡಲಾಗಿದೆ. ರಾಜ್‍ಕುಮಾರ್ ಅವರ ಕುಟುಂಬಕ್ಕೆ ಇವರೇ ತೊಟ್ಟಿಲನ್ನು ನೀಡುವುದು.

  • ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

    ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

    ಫ್ಲೋರಿಡಾ: ಪುಟ್ಟ ಮಕ್ಕಳ ಜೊತೆ ಪೋಷಕರು ಮಾತನಾಡ್ತಾರೆ. ಆದ್ರೆ ಅದಕ್ಕೆ ಯಾವುದೇ ಅರ್ಥ ಇರಲ್ಲ. ಮಗುವಿನ ಜೊತೆ ಕಾಲ ಕಳೆಯಲು ಏನೇನೋ ಮಾತಾಡ್ತಾರೆ. ಕಿವುಡರೊಂದಿಗೆ ಮಾತನಾಡುವುದು ತುಂಬಾನೇ ಕಷ್ಟ. ಆದ್ರೆ ಇಲ್ಲೊಬ್ಬರು ಅಜ್ಜಿ, 9 ತಿಂಗಳ ಕಿವುಡ ಮಗುವಿನ ಜೊತೆ ಸಂಜ್ಞೆಯ ಮೂಲಕ ಮಾತಾನಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಹೌದು. ಅಜ್ಜಿ ಮಗುವಿನ ಜೊತೆ ಸಂಜ್ಞೆಯಲ್ಲೇ ಏನೋ ಹೇಳುತ್ತಿದ್ದು, ಮಗು ಕೂಡ ಮಾತಿಗೆ ತಕ್ಕಂತೆಯೇ ನಗುತ್ತಿರೋ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಗುವಿನ ತಾಯಿ ಮತ್ತು ಆಕೆಯ ಫೋಟೋಗ್ರಾಫರ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಹಾಕಿ `ಅಜ್ಜಿ-ಆರ್ಯನ ಸಮಯವಿದು’. `ಕಿವುಡ ಅಜ್ಜಿ ಮತ್ತು ಕಿವುಡ ಮಗುವಿನ ಸಂಜ್ಞೆಯ ಮಾತುಗಳು’ ಅಂತಾ ಸ್ಟೇಟಸ್ ಹಾಕಿ ಪೋಸ್ಟ್ ಮಾಡಿದ್ದಾರೆ.

    ವೀಡಿಯೋದಲ್ಲಿ ತೋರಿಸಿದಂತೆ ಫ್ಲೋರಿಡಾ ನಿವಾಸಿ ಪಮೇಲಾ ಮೆಕ್ ಮಹೋನ್, ತನ್ನ ಮೊಮ್ಮಗ ಆರ್ಯನ ಜೊತೆ ಸಂಜ್ಞೆಯಲ್ಲೇ ಸಂಭಾಷಣೆ ಮಾಡಿದ್ದಾರೆ. ಅಜ್ಜಿಯ ಸಂಭಾಷಣೆಗೆ ಮಗು ಕೂಡ ತಲೆದೂಗಿದ್ದು, ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿರುವುದು ವಿಶೇಷ. ಒಟ್ಟಿನಲ್ಲಿ ಆರ್ಯ ಕೂಡ ಅಜ್ಜಿಯ ಸಂಭಾಷಣೆಗೆ ನಗುಮುಖದಿಂದಲೇ ಉತ್ತರಿಸೋದನ್ನ ವೀಡಿಯೋದಲ್ಲಿ ನೀವು ಕೂಡ ಗಮನಿಸಬಹುದು.

    ಈ ವಿಡಿಯೋವನ್ನು `ಲವ್ ವಾಟ್ ನೇಚರ್ಸ್’ ಅನ್ನೋ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಏಪ್ರಿಲ್ 16ರಿಂದ ಇಲ್ಲಿಯವರೆಗೆ ಸುಮಾರು 1 ಕೋಟಿ 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 2.3 ಲಕ್ಷ ಮಂದಿ ಪ್ರತಿಕ್ರಿಯಿಸಿದ್ದು, 20 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋವನ್ನು ನೋಡಿದ್ರೆ ನೀವು ಒಂದು ಬಾರಿ ಮೂಕವಿಸ್ಮಿತರಾಗೋದ್ರಲ್ಲಿ ಎರಡು ಮಾತಿಲ್ಲ.

    `9 ವಾರದ ಈ ಮಗು ಅತ್ಯಂತ ಚುರುಕುತನದಿಂದಿದ್ದು, ಅಜ್ಜಿಯನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿರೋ ಈ ವೀಡಿಯೋ ನಿಜಕ್ಕೂ ಅದ್ಭುತವಾಗಿದೆ’ ಅಂತಾ ಫೇಸ್ಬುಕ್ ನಲ್ಲಿ ಕೆಲವರು ಕಮೆಂಟ್ಸ್ ಹಾಕಿದ್ದಾರೆ.

    https://www.facebook.com/lovewhatreallymatters/videos/1485096161512777/