– ಸಿದ್ದರಾಮಯ್ಯ ಮೊಮ್ಮಕ್ಕಳು ಓದುತ್ತಿರೋದು ಇಂಗ್ಲಿಷ್ ಶಾಲೆಗಳಲ್ಲೇ
ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಬೇಡ. ಕನ್ನಡವೇ ಮಾಧ್ಯಮ ಆಗಿರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾದ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭಾಮ, ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ `ಕನ್ನಡ ಮೇಷ್ಟ್ರು’ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮದ ಅಸಲಿಯತ್ತು ಇಲ್ಲಿದೆ.
ಹೌದು. ಸಿದ್ದರಾಮಯ್ಯನವರ ಮೊಮ್ಮಕ್ಕಳು ಇಂಗ್ಲೀಷ್ ಶಾಲೆಗಳಲ್ಲೇ ಓದುತ್ತಿದ್ದಾರೆ. ಹಿರಿಯ ಮಗ ರಾಕೇಶ್ ಪುತ್ರ ಧವನ್ ಪುತ್ರ ಕೆನೆಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಈ ಶಾಲೆಯಲ್ಲಿ ವರ್ಷಕ್ಕೆ ಡೊನೇಶನ್ 5ರಿಂದ 6 ಲಕ್ಷ ರೂಪಾಯಿ ಇರುತ್ತದೆ. ಇನ್ನು ಸಿದ್ದರಾಮಯ್ಯರ ಎರಡನೇ ಮೊಮ್ಮಗಳು ತನ್ಮಯಾ ಕೂಡ ಇಂಗ್ಲೀಷ್ ಮೀಡಿಯಾಂನಲ್ಲೇ ಓದುತ್ತಿದ್ದು, ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ತನ್ಮಯಾ ವಿದ್ಯಾರ್ಥಿಯಾಗಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯನವರ ಮೊಮ್ಮಕ್ಕಳೆಲ್ಲಾ ಇಂಗ್ಲೀಷ್ ಮೀಡಿಯಂನಲ್ಲಿ ಓದಬಹುದು. ಬಡವರ ಮಕ್ಕಳಿಗೆ ಇಂಗ್ಲೀಷ್ ಮೀಡಿಯಂ ಬೇಡ್ವಾ..? ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಾಂನಲ್ಲಿ ಬಡವರ ಮಕ್ಕಳು ಓದಬಾರದಾ..? ನಿಮ್ಮ ಮೊಮ್ಮಕಳಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ ಎಂಬಂತಹ ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಮುಂದಿನ ವರ್ಷದಿಂದ 1 ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯಬೇಕು ಅನ್ನೋ ನಿಲುವಿಗೆ ಸಿದ್ದರಾಮಯ್ಯನವರು ಕಳೆದ ಒಂದು ವಾರದಿಂದ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿ, ಕರ್ನಾಟಕದಲ್ಲಿ ಕನ್ನಡವೇ ಅಂತಿಮ ಭಾಷೆಯಾಗಬೇಕು. ಭಾಷೆಯ ವಿಚಾರದಲ್ಲಿ ಸರ್ಕಾರಕ್ಕೆ ಆದ್ಯತೆ ಬೇಕು. ಹೀಗಾಗಿ ಈ ಶಾಲೆಗಳನ್ನು ತೆರೆಯದಂತೆ ನಾನು ಕುಮಾರಸ್ವಾಮಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು. ಸದನದಲ್ಲಿಯೂ ಕನ್ನಡ ವಿಚಾರವಾಗಿ ಎಲ್ಲರ ಕಾಲೆಳೆಯುವ ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಯಾಕೆ ಕಳುಹಿಸುತ್ತಾರೆ ಎಂಬ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಯಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv