Tag: ಮೊಮೊಸ್

  • ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಮೊಮೊಸ್‌ ಅಂದ್ರೆ ನಿಮ್ಗೆ ಇಷ್ಟನಾ? ಒಂದೇ ರೀತಿ ಮೊಮೊಸ್‌ ತಿಂದು ಬೇಜಾರಿದ್ರೆ, ಸ್ಪೆಷಲ್‌ ಆಗಿ ಕ್ಯಾಬೇಜ್‌ ಮೊಮೊಸ್‌ (Cabbage Momos) ಮಾಡೋದು ಹೇಗೆ ಅಂತಾ ನಾವಿಂದು ತಿಳಿಸಿಕೊಡ್ತೀವಿ. ಇದು ಆರೋಗ್ಯಕ್ಕೂ ಒಳ್ಳೆಯದ್ದು, ಜೊತೆ ಕ್ವಿಕ್‌ ಆಂಡ್‌ ಈಸಿಯಾಗಿ ಫಟಾಫಟ್‌ ಅಂತ ತಯಾರಿಸಿ ಮನೆಯವರೊಂದಿಗೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    ತುರಿದ ಕ್ಯಾರೆಟ್ – 1 ಕಪ್
    ತುರಿದ ಎಲೆಕೋಸು – 1 ಕಪ್
    ಹಸಿಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ) – 1
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಸೋಯಾ ಸಾಸ್ – 1 ಚಮಚ
    ಕರಿಮೆಣಸಿನ ಪುಡಿ
    ಉಪ್ಪು – ರುಚಿಗೆ ತಕ್ಕಷ್ಟು

    ಡಿಪ್‌ಗೆ ಬೇಕಾಗುವ ಸಾಮಗ್ರಿಗಳು:
    ಟೊಮ್ಯಾಟೊ – 2
    ಒಣ ಕೆಂಪು ಮೆಣಸಿನಕಾಯಿ – 2 ಬೆಳ್ಳುಳ್ಳಿ
    ಎಸಳು – 3-4
    ಉಪ್ಪು – ರುಚಿಗೆ ತಕ್ಕಷ್ಟು

    ತಯಾರಿಸುವ ವಿಧಾನ:
    ಎಲೆಕೋಸಿನಿಂದ ಒಂದೊಂದೇ ಎಲೆಗಳನ್ನು ಬೇರ್ಪಡಿಸಿಟುಕೊಳ್ಳಬೇಕು. ಕುದಿಯುವ ನೀರಿನಲ್ಲಿ 1-2 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಬೇಕು. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಬೇಕು. ನಂತರ ತುರಿದ ಕ್ಯಾರೆಟ್, ಎಲೆಕೋಸನ್ನು ಸೇರಿಸಿ 2-3 ನಿಮಿಷ ಹುರಿಯಬೇಕು. ಬಳಿಕ ಇದಕ್ಕೆ ಸೋಯಾ ಸಾಸ್, ಕರಿಮೆಣಸು ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಿ.

    ಈಗ ಎಲೆಕೋಸಿನ ಎಲೆಗಳ ಮಧ್ಯದಲ್ಲಿ 1-2 ಚಮಚ ಈ ಸ್ಟಪ್ ಅನ್ನು ಇರಿಸಿ. ಅದನ್ನು ಮಡಚಿ ಮೊಮೊ ಆಕಾರ ನೀಡಿ. ಸಿದ್ಧಪಡಿಸಿದ ಮೊಮೊಗಳನ್ನು ಸ್ವೀಮರ್‌ನಲ್ಲಿ ಇರಿಸಿ ಮತ್ತು 10 ರಿಂದ 12 ನಿಮಿಷ ಆವಿಯಲ್ಲಿ ಬೇಯಿಸಬೇಕು.

    ಡಿಪ್‌ ತಯಾರಿಸುವ ವಿಧಾನ:
    ಟೊಮ್ಯಾಟೊ, ಕೆಂಪು ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಣ್ಣೆ ಮತ್ತು ಉಪ್ಪು ಸೇರಿಸಿ ಮಿಕ್ಸ್‌ ಮಾಡಬೇಕು. ಈಗ ಕ್ಯಾಬೇಜ್‌ ಮೊಮೊಸ್‌ ಅನ್ನು ಡಿಪ್‌ನೊಂದಿಗೆ ಸವಿಯಲು ಸಿದ್ಧ.

  • Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    ಹೈದರಾಬಾದ್: ಬೀದಿಬದಿಯ ಮೊಮೊಸ್ (Momos) ತಿಂದು ಓರ್ವ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್ (Food Poison) ಆಗಿರುವ ಘಟನೆ ಹೈದರಾಬಾದ್‌ನ (Hyderabad) ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು 33 ವರ್ಷದ ರೇಷ್ಮಾ ಬೇಗಂ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಜನರು ಫುಡ್ ಪಾಯ್ಸನ್‌ನಿಂದ ಬಳಲುತ್ತಿದ್ದಾರೆ.ಇದನ್ನೂ ಓದಿ: ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ

    ಶುಕ್ರವಾರ ಖೈರತಾಬಾದ್‌ನ ಬೀದಿಬದಿ ವ್ಯಾಪಾರಿಯಿಂದ ಮೂವರು ಮೊಮೊಸ್ ತಿಂದಿದ್ದಾರೆ. ತಿಂದು ಮನೆಗೆ ಮರಳಿದ ಸ್ವಲ್ಪ ಸಮಯದ ಬಳಿಕ ಹೊಟ್ಟೆ ನೋವು, ವಾಂತಿಯಿಂದ ಬಳಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಅವರ ತಾಯಿ ಸಾವನ್ನಪ್ಪಿದ್ದು, ಪುತ್ರಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರಕರಣದ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ್ ಬಾಬು ಮಾತನಾಡಿ, ಮಂಗಳವಾರ (ಅ.29) ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡುವ ಒಬ್ಬ ಬೀದಿಬದಿ ವ್ಯಾಪಾರಿಯಿಂದ ಮೊಮೊಸ್ ತಿಂದಿದ್ದ 15 ರಿಂದ ದೂರು ಬಂದಿದ್ದು, ದೂರು ದಾಖಲಿಸಿಕೊಂಡು ಸದ್ಯ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    ತನಿಖೆಯ ವೇಳೆ ಯಾವುದೇ ಆಹಾರ ಸುರಕ್ಷತಾ ಪರವಾನಗಿ ಇಲ್ಲದೇ ಮಾರಾಟಗಾರ ವ್ಯಾಪಾರ ನಡೆಸುತ್ತಿದ್ದು, ಯಾವುದೇ ರೀತಿಯ ಸ್ವಚ್ಛತೆಯಿಲ್ಲದೇ ಆಹಾರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಜೊತೆಗೆ ಮೊಮೊಸ್ ತಯಾರಿಸಲು ಬಳಸುವ ಹಿಟ್ಟನ್ನು ಯಾವುದೇ ಪ್ಯಾಕಿಂಗ್ ಇಲ್ಲದೆ ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು, ಅದರಲ್ಲೂ ರೆಫ್ರಿಜರೇಟರ್ ಬಾಗಿಲು ಮುರಿದಿರುವುದು ಕೂಡ ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಹಾರ ಸುರಕ್ಷತಾ ವಿಭಾಗ ಮತ್ತು ಪೊಲೀಸರು ಬೀದಿಬದಿ ವ್ಯಾಪಾರಿಯನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಸ್ಟಾಲ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

  • ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ

    ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ

    ಮೊಮೊಸ್ (Momos) ಎಂದ ತಕ್ಷಣ ಹಲವರಿಗೆ ಬಾಯಲ್ಲಿ ನೀರು ಬರುತ್ತದೆ. ಸ್ಟ್ರೀಟ್ ಫುಡ್ ಆಗಿರುವ ಮೊಮೊಸ್‌ನ ರುಚಿಯೇ ಅಂತಹದ್ದು. ಇಂದು ನಾವು ತುಂಬಾನೆ ರುಚಿಯಾಗಿರುವ ಚಿಕನ್ ಸ್ಟೀಮ್ಡ್ ಮೊಮೊಸ್ (Chicken Steamed Momos) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಮೊಮೊಸ್ ಪ್ರಿಯರು ಖಂಡಿತವಾಗಿ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಸ್ಟಫಿಂಗ್ ತಯಾರಿಸಲು:
    ಬೇಯಿಸಿದ ಚಿಕನ್ ಬ್ರೆಸ್ಟ್ – 200 ಗ್ರಾಂ
    ಉಪ್ಪು – ರುಚಿಗೆ ತಕ್ಕಷ್ಟು
    ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕರಿಮೆಣಸಿನ ಪುಡಿ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಎಣ್ಣೆ – ಅರ್ಧ ಟೀಸ್ಪೂನ್
    ಚಿಲ್ಲಿ ಟೊಮೆಟೊ ಕೆಚಪ್ – ಐಚ್ಛಿಕ
    ಹಿಟ್ಟು ತಯಾರಿಸಲು:
    ಮೈದಾ – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಒಮ್ಮೆ ಮಾಡಿ ನೋಡಿ ರುಚಿಯಾದ ಹರಿಯಾಲಿ ಎಗ್ ಕರಿ

    ಮಾಡುವ ವಿಧಾನ:
    * ಮೊದಲಿಗೆ ಹಿಟ್ಟನ್ನು ತಯಾರಿಸಲು ಒಂದು ಬೌಲ್ ತೆಗೆದುಕೊಂಡು, ಅದಕ್ಕೆ ಮೈದಾ ಹಿಟ್ಟು, ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ತಣ್ಣನೆಯ ಬಟ್ಟೆಯನ್ನು ಅದರ ಮೇಲೆ ಮುಚ್ಚಿ, 30 ನಿಮಿಷ ವಿಶ್ರಾಂತಿ ನೀಡಲು ಪಕ್ಕಕ್ಕಿಡಿ.
    * ಈ ನಡುವೆ ಚಿಕನ್ ಫಿಲ್ಲಿಂಗ್ಸ್ ತಯಾರಿಸಬೇಕು. ಇದಕ್ಕೆ ಇನ್ನೊಂದು ಪಾತ್ರೆ ತೆಗೆದುಕೊಂಡು, ಬೇಯಿಸಿದ ಚಿಕನ್ (ನೀರಿನಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ), ಉಪ್ಪು, ಸ್ಪ್ರಿಂಗ್ ಆನಿಯನ್, ಕೊತ್ತಂಬರಿ ಸೊಪ್ಪು, ಕರಿಮೆಣಸಿನ ಪುಡಿ, ಈರುಳ್ಳಿ, ಅರ್ಧ ಟೀಸ್ಪೂನ್ ಎಣ್ಣೆ ಹಾಕಿ, ಬ್ಲೆಂಡರ್‌ಗೆ ವರ್ಗಾಯಿಸಿ. ಅದನ್ನು ಒರಟಾಗಿ ಬ್ಲೆಂಡ್ ಮಾಡಿ.

    * ಈಗ ಮೈದಾ ಹಿಟ್ಟನ್ನು ತೆಗೆದುಕೊಂಡು, ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ. ಪೂರಿಗಿಂತಲೂ ಸ್ವಲ್ಪ ಸಣ್ಣದಾಗಿ ಲಟ್ಟಿಸಿ, ಅದರ ಮೇಲೆ ಚಿಕನ್ ಮಿಶ್ರಣವನ್ನು 1 ಟೀಸ್ಪೂನ್‌ನಷ್ಟು ಹಾಕಿ, ಹಿಟ್ಟಿನ ಅಂಚುಗಳನ್ನು ಜೋಡಿಸಿ.
    * ಹಿಟ್ಟು ಒಡೆದು, ಸ್ಟಫಿಂಗ್ ಹೊರ ಬರದಂತೆ ಗಮನಹರಿಸಿ.
    * ಈಗ ಬಿಸಿ ಮಾಡಿದ ಸ್ಟೀಮರ್‌ನಲ್ಲಿ ಪುಟ್ಟ ಪುಟ್ಟ ಮೊಮೊಸ್‌ಗಳನ್ನು 15-20 ನಿಮಿಷಗಳ ವರೆಗೆ ಬೇಯಲು ಬಿಡಿ.
    * ಇದೀಗ ರುಚಿಕರವಾದ ಚಿಕನ್ ಸ್ಟೀಮ್ಡ್ ಮೊಮೊಸ್ ತಯಾರಾಗಿದ್ದು, ಕೆಚಪ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಒಮ್ಮೆ ಸವಿದರೆ ಮತ್ತೆ ಬೇಕೆನಿಸುತ್ತದೆ ಚಿಕನ್ ಚಾಪ್ಸ್

    Live Tv
    [brid partner=56869869 player=32851 video=960834 autoplay=true]

  • ಪ್ಲೇಟ್‍ನಲ್ಲಿದ್ದ ಮೊಮೊಸ್ ಬೀಳಿಸಿದ್ದಕ್ಕೆ ನಡೀತು ವ್ಯಕ್ತಿ ಬರ್ಬರ ಹತ್ಯೆ

    ಪ್ಲೇಟ್‍ನಲ್ಲಿದ್ದ ಮೊಮೊಸ್ ಬೀಳಿಸಿದ್ದಕ್ಕೆ ನಡೀತು ವ್ಯಕ್ತಿ ಬರ್ಬರ ಹತ್ಯೆ

    ನವದೆಹಲಿ: ಪ್ಲೇಟ್‍ನಲ್ಲಿ ಮೊಮೊಸ್ ಅನ್ನು ನೆಲದ ಮೇಲೆ ಬೀಳಿಸಿದ್ದಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ತೆಗೈದಿರುವ ಘಟನೆ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.

    CRIME 2

    ಮೃತವ್ಯಕ್ತಿಯನ್ನು ಜೀತೇಂದ್ರ ಎಂದು ಗುರುತಿಸಲಾಗಿದ್ದು, ಜೀತೇಂದ್ರ ಅವರ ಕುತ್ತಿಗೆಗೆ ನಕುಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ನಂತರ ಜೀತೇಂದ್ರ ಅವರನ್ನು ಸಮೀಪದಲ್ಲಿರುವ ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಗಿತ್ತು. ಆದರೆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡೋ ಟಿಕೆ ಹಳ್ಳಿ ಪಂಪ್‌ ಸ್ಟೇಷನ್‌ ಮುಳುಗಡೆ

    ಘಟನೆ ಕುರಿತಂತೆ ತನಿಖೆ ವೇಳೆ ಮೃತ ವ್ಯಕ್ತಿ ಜೀತೇಂದ್ರ ಮೇಸ್ತ್ರಿ ಕೆಲಸಗಾರರಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ತಿರಂಗಾ ಚೌಕ್ ಬಳಿ ವಾಸಿಸುತ್ತಿದ್ದರು. ಶನಿವಾರ ರಾತ್ರಿ ತಮ್ಮ ಸ್ನೇಹಿತ ವೀರೇಂದ್ರನನ್ನು ಭೇಟಿಯಾಗಲು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮಾರುಕಟ್ಟೆಗೆ ಬಂದಿದ್ದ ನಕುಲ್ ಮೊಮೊಸ್ ಖರೀದಿಸಿ ತಿನ್ನಲು ಆರಂಭಿಸಿದ್ದನು. ಆಗ ಸ್ಥಳದಲ್ಲಿಯೇ ನಿಂತಿದ್ದ ಜೀತೇಂದ್ರ ಅವರು ಆಕಸ್ಮಿಕವಾಗಿ ನಕುಲ್ ಅನ್ನು ತಳ್ಳಿದ್ದಾರೆ. ಈ ವೇಳೆ ಪ್ಲೇಟ್‍ನಲ್ಲಿದ್ದ ಮೊಮೊಸ್ ನೆಲದ ಮೇಲೆ ಬಿದ್ದಿದೆ. ಇದನ್ನೂ ಓದಿ: ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು – ಕುಡಿದು ಮೈಮರೆತು ಪೊಲೀಸರ ಕೈಗೆ ಸಿಕ್ಕಿಬಿದ್ರು

    ಇದರಿಂದ ರೊಚ್ಚಿಗೆದ್ದ ನಕುಲ್ ಜೀತೇಂದ್ರ ಅವರನ್ನು ನಿಂದಿಸಲು ಆರಂಭಿಸಿದ್ದಾನೆ. ಇದನ್ನು ವಿರೋಧಿಸಿ ಅವರು ತಿರುಗಿ ಬಿದ್ದಾಗ ಆರೋಪಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಜೀತೇಂದ್ರ ಅವರ ಕುತ್ತಿಗೆಗೆ ಇರಿದಿದ್ದಾನೆ. ಇದೀಗ ಆರೋಪಿ ನಕುಲ್ ಅನ್ನು ಪೊಲೀಸರು ಬಂಧಿಸಿ, ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]