Tag: ಮೊಬೈಲ್ ಸಿಮ್

  • ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    ನವದೆಹಲಿ: ಮೊಬೈಲ್‌ ಸಿಮ್‌ ಕಾರ್ಡ್‌ ಡೀಲರ್‌ಗಳ (Mobile Sim Card Dealer) ಪೊಲೀಸ್‌ ಪರಿಶೀಲನೆ (Police Verification) ಮತ್ತು ಬಯೋಮೆಟ್ರಿಕ್‌ (Biometric) ಪರಿಶೀಲನೆ ಕಡ್ಡಾಯ ಮಾಡಲಾಗಿದೆ. ಇದರ ಜೊತೆಗೆ ಎಲ್ಲಾ ಪಾಯಿಂಟ್‌ ಆಫ್‌ ಸೇಲ್‌ ಡೀಲರ್‌ಗಳ ನೋಂದಣಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಕಡ್ಡಾಯ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್

    ಸಂಚಾರ ಸಾಥಿ ಪೋರ್ಟಲ್ ಪ್ರಾರಂಭವಾದಾಗಿನಿಂದ ಅಕ್ರಮವಾಗಿ ಪಡೆದ 52 ಲಕ್ಷ ಸಂಪರ್ಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ. ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ 67,000 ಡೀಲರ್‌ಗಳನ್ನು ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಮೇ 2023 ರಿಂದ 300 ಸಿಮ್ ಕಾರ್ಡ್ ವಿತರಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಅವರು ಹೇಳಿದರು.

    ಹಿಂದೆ ಜನರು ಮೊಬೈಲ್‌ ಸಿಮ್ ಕಾರ್ಡ್‌ಗಳನ್ನು ಬಲ್ಕ್‌ ರೀತಿ ಖರೀದಿಸುತ್ತಿದ್ದರು. ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ ಎಂದರು.

    ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ.

     

    ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು. ಬಹುತೇಕ ಸೈಬರ್ ಅಪರಾಧಗಳು ಮತ್ತು ‘ದೇಶವಿರೋಧಿ’ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಈ ಕ್ರಮ ಕೈಗೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು

    ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಪಡಿಸಲು ಹೊರಟಿದ್ದ ಜಿಹಾದಿ ಗ್ಯಾಂಗನ್ನು ಮೊಬೈಲ್ ಸಿಮ್ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

    ದಕ್ಷಿಣ ಭಾರತದ ಐಸಿಸ್ ಕಮಾಂಡರ್ ಮೆಹಬೂಬ್ ಪಾಷಾನನ್ನ ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಮತ್ತಷ್ಟು ಮಾಹಿತಿಗಳು ಹೊರಬರಲಾಭಿಸಿವೆ. 10 ಮೊಬೈಲ್ ಸಿಮ್ ಖರೀದಿಸಿರುವುದನ್ನು ಆಧರಿಸಿಯೇ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇದೀಗ ತಿಳಿದು ಬಂದಿದೆ. ಇದನ್ನೂ ಓದಿ: ಶಂಕಿತ ನಾಲ್ವರು ಉಗ್ರರು 10 ದಿನ ಸಿಸಿಬಿ ಕಸ್ಟಡಿಗೆ

    2019ರ ಏಪ್ರಿಲಿನಲ್ಲಿ ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಹತ್ಯೆ ಪ್ರಕರಣದ ಆರೋಪಿ, ಜಿಹಾದಿ ಶಂಕಿತ ಉಗ್ರ ಮೊಹಿನುದ್ದೀನ್ ಖಾಜಾ ಜಾಮೀನು ಪಡೆದು ಬಂದು ತಲೆ ಮರೆಸಿಕೊಂಡಿದ್ದ. ಖಾಜಾ ಪತ್ತೆಗೆ ತಮಿಳುನಾಡು ನ್ಯಾಯಾಲಯ ಸೂಚಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದವು. ಸೇಲಂ ನಲ್ಲಿ ಖಾಜಾ ಶಿಷ್ಯನೊಬ್ಬ ನಕಲಿ ದಾಖಲೆ ನೀಡಿ 10 ಸಿಮ್ ಖರೀದಿಸಿದ್ದ. ಈ ಸಿಮ್‍ಗಳು ಕೋಲಾರ, ಬರ್ದಾನ್ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಪತ್ತೆ ಮಾಡಲಾಗಿತ್ತು. ಕೂಡಲೇ ಐಎಸ್‍ಡಿ ಮತ್ತು ಸಿಸಿಬಿ ಪೊಲೀಸರು ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಮೆಹಬೂಬ್ ಪಾಷಾನ ಸಹಚರರನ್ನು ಬಂಧಿಸಿದ್ದರು. ಹಿಂದೂ ಮುಖಂಡ ಸುರೇಶ್ ಹತ್ಯೆ ಬಳಿಕ ಮೊಹಿನುದ್ದೀನ್ ಖಾಜಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

    ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸುವ ಸಲುವಾಗಿ ಆಪ್ತರೊಬ್ಬರ ಮೂಲಕ ಮೆಹಬೂಬ್ ಪಾಷಾ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ. ಮೆಹಬೂಬ್ ಪಾಷಾನಿಗಿದ್ದ ಇಸ್ಲಾಮಿಕ್ ಸ್ಟೇಟ್ ಪರ ಒಲವು ಕಂಡು ಇಡೀ ದಕ್ಷಿಣ ಭಾರತದ ಕಮಾಂಡರ್ ಆಗಿ ಖಾಜಾನನ್ನು ನೇಮಿಸಲಾಗಿತ್ತು. ಈ ಮೂಲಕ ಯುವಕರ ಮೈಂಡ್ ವಾಶ್ ಮಾಡಿ, ತರಬೇತಿ ನೀಡುತ್ತಿದ್ದ ಪಾಶಾ, ಕೊನೆಗೆ ತನ್ನ ಅಣ್ಣನ ಮಕ್ಕಳಿಬ್ಬರಿಗೂ ಮೈಂಡ್ ವಾಶ್ ಮಾಡಿ ತರಬೇತಿ ನೀಡಲು ಮುಂದಾಗಿದ್ದ. ಬಹುದೊಡ್ಡ ಗಂಡಾಂತರ ನಡೆಯುವ ಮುನ್ನವೇ ಸಿಸಿಬಿ ಮತ್ತು ಐಎಸ್‍ಡಿ ಪೊಲೀಸರು ಉಗ್ರರನ್ನು ಬಂಧಿಸಿದ್ದಾರೆ.

  • ಮೊಬೈಲ್ ಸಿಮ್‍ಗಾಗಿ ಜಗಳ – ತಾಯಿ, ಮಗನಿಗೆ ಚಾಕು ಇರಿತ

    ಮೊಬೈಲ್ ಸಿಮ್‍ಗಾಗಿ ಜಗಳ – ತಾಯಿ, ಮಗನಿಗೆ ಚಾಕು ಇರಿತ

    ಹುಬ್ಬಳ್ಳಿ: ಮೊಬೈಲ್ ಸಿಮ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿ ಹಾಗೂ ಮಗನಿಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ನಿಯಾಜ್ ಅಹ್ಮದ್ ಶೇಖ್ (29) ಮೇಹಬೂಬಿ ಶೇಖ್ (50) ಗಾಯಗೊಂಡಿದ್ದಾರೆ. ನಿಯಾಜ್ ಬೆನ್ನಿಗೆ ಹಾಗೂ ಮೇಹಬೂಬಿ ಅವರ ಬಲ ಭಾಗಕ್ಕೆ ಶಾರುಖ್ ಕಲಾದಗಿ, ಮಹ್ಮದ್ ಕಲಾದಗಿ, ಸಾದೀಖ್ ಹಾಗೂ ಸಂಗಡಿಗರು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

    ಮೊಬೈಲ್ ಸಿಮ್ ವಿಷಯಕ್ಕೆ ಚಾಕುವಿನಿಂದ ಇರಿಯಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಆರೋಪಿ ಶಾರುಖ್ ಸಿಮ್‍ನ್ನು ನಿಯಾಜ್ ಶೇಖ್ ತಗೆದುಕೊಂಡಿದ್ದನಂತೆ. ಅದನ್ನು ಕೆಳಲು ಪದೇ ಪದೇ ಮನೆಗೆ ಬರುತ್ತಿದ್ದರು. ಆದರೆ ನಿನ್ನೆ ತನ್ನ ಸಿಮ್ ಕೊಡುವಂತೆ ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ತಾಯಿ ಹಾಗೂ ಮಗನ ಮೇಲೆ ಚಾಕು ಇರಿದು ಪರಾರಿಯಾಗಿದ್ದಾರೆ.

    ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕಸಬಾಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”

    ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.

    ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?
    ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.

    ಏನಿದು ಎಂ2ಎಂ?
    ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್‌ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.

    ಡಿಓಟಿ ಆದೇಶದಲ್ಲಿ ಏನಿದೆ?
    ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

    ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?
    ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.

    ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?
    ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್‍ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.

    ವೈರ್‌ಲೆಸ್‌ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ. ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಎಂ2ಎಂ ಸಿಮ್ ಯಾರು ಕೊಡ್ತಾರೆ?
    ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ.  ಇದನ್ನೂ ಓದಿ: ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ