Tag: ಮೊಬೈಲ್ ಶಾಪ್

  • ಸೋಂಕಿತ ಭೇಟಿ ನೀಡಿದ್ದಕ್ಕೆ ಬಟ್ಟೆ ಅಂಗಡಿ ಮೊಬೈಲ್ ಶಾಪ್ ಸೀಲ್‍ಡೌನ್

    ಸೋಂಕಿತ ಭೇಟಿ ನೀಡಿದ್ದಕ್ಕೆ ಬಟ್ಟೆ ಅಂಗಡಿ ಮೊಬೈಲ್ ಶಾಪ್ ಸೀಲ್‍ಡೌನ್

    ಹಾಸನ: ಜಿಲ್ಲೆಯ ಅರಕಲಗೂಡಿನಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಅಂಗಡಿಗೆ ಕೊರೊನಾ ಸೋಂಕಿತ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಸೀಲ್‍ಡೌನ್ ಮಾಡಲಾಗಿದೆ.

    ಕೊಡಗಿನಲ್ಲಿ ಪಾಸಿಟಿವ್ ಬಂದ ಕೊರೊನಾ ಸೋಂಕಿತರೊಬ್ಬರು ಎರಡು ಬಾರಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಶಾಪ್‍ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡು ಅಂಗಡಿಗಳನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ.

    ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ನಿಟ್ಟಿನಲ್ಲಿ ಬಟ್ಟೆ ಅಂಗಡಿಯವರನ್ನು ಮತ್ತು ಮೊಬೈಲ್ ಶಾಪ್‍ನವರನ್ನು ಸೇರಿದಂತೆ ಒಟ್ಟು 12 ಜನರನ್ನು ಕೋವಿಡ್ ಟೆಸ್ಟ್ ಮಾಡಿಸಲು ಅರಕಲಗೂಡು ಪಟ್ಟಣದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿಗಳು ಸೋಂಕಿತನ ಜೊತೆ ಇನ್ನು ಎಷ್ಟು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಮೊಬೈಲ್ ಅಂಗಡಿಯಲ್ಲಿ ಕಳ್ಳತನ- ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ

    ಮೊಬೈಲ್ ಅಂಗಡಿಯಲ್ಲಿ ಕಳ್ಳತನ- ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ

    ದಾವಣಗೆರೆ: ಮೊಬೈಲ್ ಅಂಗಡಿಯಲ್ಲಿ ಕಳ್ಳನೊಬ್ಬ ರಾಜಾರೋಷವಾಗಿ ಕಳ್ಳತನ ಮಾಡಿದ್ದು, ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಲ್ಲೆಯ ಹೊನ್ನಳ್ಳಿ ನಗರದ ಸಂಪಿಗೆ ರಸ್ತೆಯಲ್ಲಿರುವ ಯು.ಬಿ. ಮೊಬೈಲ್ ಶಾಪ್ ನಲ್ಲಿ ಭಾನುವಾರ ಬೆಳಗಿನ ಜಾವ ಈ ಕಳ್ಳತನ ನಡೆದಿದೆ.

    ಬಸವರಾಜ್ ಎಂಬವರ ಅಂಗಡಿಯಲ್ಲಿ ಮೊಬೈಲ್ ಕಳ್ಳತನವಾಗಿದೆ. ಪ್ರತಿನಿತ್ಯದಂತೆ ಮೊಬೈಲ್ ಅಂಗಡಿ ತೆರೆದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಸವರಾಜ್ ಕೂಡಲೇ ಅಂಗಡಿಯ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕಳ್ಳನ ಕೈಚಳಕ ಗೊತ್ತಾಗಿದೆ.

    ಕಳ್ಳ ಬೆಲೆಬಾಳುವ ಮೊಬೈಲ್ ಮತ್ತು ಅಂಗಡಿಯಲ್ಲಿದ್ದ ಹಣವೆನ್ನಲ್ಲಾ ದೋಚಿ ಪರಾರಿಯಾಗಿದ್ದಾನೆ. ಈ ಸಂಬಂಧ ಹೊನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ.

    https://youtu.be/xpQiIqlvmcU

  • ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ತುಮಕೂರು: ವಿಧವೆಯನ್ನು ಚುಡಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತಿದ್ದ ನರೇಶ್ ಎಂಬವನೇ ಗೂಸಾ ತಿಂದ ವ್ಯಕ್ತಿ. ನರೇಶ್ ಇಲ್ಲಿನ ಎಸ್‍ಎಫ್‍ಕೆ ಸಮುದಾಯ ಭವನದಲ್ಲಿ ಕೆಲಸ ಮಾಡಿಕೊಂಡಿದ್ದ ವಿಧವೆಗೆ ಚುಡಾಯಿಸುತಿದ್ದ. ಅಲ್ಲದೇ ಪದೇ ಪದೇ ಸಮುದಾಯ ಭವನಕ್ಕೆ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಕಿರುಕುಳದಿಂದ ಬೆಸತ್ತ ಮಹಿಳೆ ತಮ್ಮ ಸಂಬಂಧಿಕರಿಗೆ ಈ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ನರೇಶ್‍ನ ಮೊಬೈಲ್ ಶಾಪ್ ಬಳಿ ಬಂದ ಮಹಿಳೆಯ ಸಂಬಂಧಿಕರು ಆತನನ್ನು ಹೊರಕ್ಕೆ ಎಳೆದುಕೊಂಡು ಬಂದು ಸಖತ್ ಗೂಸಾ ನೀಡಿದ್ದಾರೆ. ಇವರ ಜೊತೆಗೆ ಸಾರ್ವಜನಿಕರೂ ಸೇರಿಕೊಂಡು ಧರ್ಮದೇಟು ನೀಡಿ ನರೇಶ್‍ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    https://www.youtube.com/watch?v=6WMAHAuDJf4&feature=youtu.be

  • ಮಡಿಕೇರಿ: ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ರಾಡ್‍ನಿಂದ ಹಲ್ಲೆ!

    ಮಡಿಕೇರಿ: ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ರಾಡ್‍ನಿಂದ ಹಲ್ಲೆ!

    – ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆ

    ಮಡಿಕೇರಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಕ್ಷುಲ್ಲಕ ಕಾರಣಕ್ಕೆ ಗುಂಪು-ಗುಂಪಲ್ಲಿ ತೆರಳಿ ಸಿಕ್ಕವರ ಮೇಲೆ ಹಲ್ಲೆ ಮಾಡೋ ಪ್ರವೃತ್ತಿ ಹೆಚ್ಚಾಗ್ತಿದೆ. ಕಳೆದ ರಾತ್ರಿ ನಗರದ ಮೊಬೈಲ್ ಶಾಪ್‍ವೊಂದಕ್ಕೆ ತೆರಳಿರೋ ಪುಂಡರ ಗುಂಪೊಂದು ಜಗಳ ತೆಗೆದು ಶಾಪ್ ಮಾಲಿಕನಿಗೆ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನಗರದಲ್ಲಿರುವ ಪಡ್ಡೆ ಹುಡುಗರಿಗೆ ಹೆಸರು ಮಾಡೋ ಹುಚ್ಚು, ದೊಡ್ಡೋರಿಗೆ ಹುಡುಗರನ್ನು ಬೆಳೆಸೋ ಆಸೆ. ಇದರ ಪರಿಣಾಮವೇ ನಗರದಲ್ಲಿ ಚಿಗುರು ಮೀಸೆಯ ಹುಡುಗರೆಲ್ಲಾ ಪುಡಿ ರೌಡಿಗಳಾಗ್ತಿದ್ದಾರೆ. ತಮ್ಮದೇ ಗುಂಪುಗಳನ್ನು ಕಟ್ಕೊಂಡು ಏರಿಯಾ ಹೆಸರಲ್ಲಿ ಹೊಡೆದಾಡ್ಕೊಳ್ತಿದ್ದಾರೆ. ಇಂತಹ ಹೊಡೆದಾಟಕ್ಕೆ ಒಂದು ವಾರದ ಹಿಂದೆ ಒಬ್ಬ ಹರೆಯದ ಹುಡುಗನ ಬರ್ಬರ ಹತ್ಯೆಯೂ ಆಗಿತ್ತು.

    ಪುಡಿ ರೌಡಿಗಳ ವಾರ್ ಯಾವಾಗ ಜಾಸ್ತಿ ಆಯ್ತೋ ತಕ್ಷಣ ಪೊಲಿಸ್ರು ಎಚ್ಚೆತ್ತುಕೊಂಡು ಪಡ್ಡೆ ಹುಡುಗ್ರ ಮೇಲೆ ನಿಗಾ ಇಟ್ರು. ಆದ್ರೂ ನಗರದಲ್ಲಿ ದಿನವೂ ಗುಂಪು ಕಟ್ಕೊಂಡು ಹೊಡೆದಾಡೋ ಪ್ರವೃತ್ತಿ ನಿಂತಿಲ್ಲ. ಕಳೆದ ರಾತ್ರಿಯೂ ಅದೇ ಆಗಿದ್ದು, ನಗರ ಕೈಗಾರಿಕಾ ಬಡಾವಣೆಯಲ್ಲಿರೋ ಝೆಡ್ ಮೊಬೈಲ್ ಶಾಪ್‍ಗೆ ಎಂಟ್ರಿ ಕೊಟ್ಟ ನಾಲ್ಕೈದು ಮಂದಿಯ ಪುಡಿ ರೌಡಿಗಳು ಶಾಪ್ ಕ್ಲೋಸ್ ಮಾಡು ಎಂದು ತಗಾದೆ ತೆಗೆದಿದ್ದಾರೆ. ಇದನ್ನು ಅಂಗಡಿ ಮಾಲೀಕ ಜುಬೇರ್ ವಿರೋಧಿಸಿದಾಗ ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಶಾಪ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ನಗರದ ಪ್ರಶಾಂತ್ ಹಾಗೂ ಅಭಿಲಾಶ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಪುಡಿ ರೌಡಿಗಳು ಯಾವ ಕಾರಣಕ್ಕೆ ಅಂಗಡಿ ಮಚ್ಚುವಂತೆ ಹೇಳಿದರು ಎಂಬುದು ಮಾತ್ರ ಸದ್ಯ ಗೌಪ್ಯವಾಗಿದ್ದು, ಹಲ್ಲೆಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.

    https://www.youtube.com/watch?v=6Os2rDOpWg4