Tag: ಮೊಬೈಲ್ ಬ್ಯಾಂಕಿಂಗ್

  • 2015ರ ಮಿಸ್ ಇಂಡಿಯಾ ವಿಜೇತೆ ಅದಿತಿ ಆರ್ಯ ಜೊತೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಸಂಸ್ಥಾಪಕನ ಮಗನ ನಿಶ್ಚಿತಾರ್ಥ

    2015ರ ಮಿಸ್ ಇಂಡಿಯಾ ವಿಜೇತೆ ಅದಿತಿ ಆರ್ಯ ಜೊತೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಸಂಸ್ಥಾಪಕನ ಮಗನ ನಿಶ್ಚಿತಾರ್ಥ

    ನವದೆಹಲಿ: ಕೋಟಕ್ ಮಹೀಂದ್ರಾ ಬ್ಯಾಂಕ್‌ನ (Kotak Mahindra Bank) ಸಂಸ್ಥಾಪಕ ಮತ್ತು ಸಿಇಒ ಉದಯ್ ಕೋಟಕ್ (Uday Kotak) ಅವರ ಪುತ್ರ ಜೇ ಕೋಟಕ್ ಅವರು 2015ರ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಅದಿತಿ ಆರ್ಯ (Aditi Arya) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಅದಿತಿ ಆರ್ಯ ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಫೋಟೋವನ್ನ ಜೇ ಕೋಟಕ್ (Jay Kotak) ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಳ್ಳವ ಮೂಲಕ ತಮ್ಮ ಸಂಬಂಧದ ಆರಂಭದ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಗಿಣಿ ಐಎಎಸ್ ವರ್ಸಸ್ ಐಪಿಎಸ್: ಇದು ನೈಜ ಘಟನೆಯ ಚಿತ್ರ

    ಅದಿತಿ ಆರ್ಯ ಪದವಿ ಪಡೆದಿರುವ ಫೋಟೋ ಹಂಚಿಕೊಂಡು ಅವರಿಗೆ ಅಭಿನಂದಿಸಿದ್ದಾರೆ. ʻಅದಿತಿ, ನನ್ನ ಫಿಯಾನ್ಸಿ, ಯೇಲ್ ವಿಶ್ವವಿದ್ಯಾನಿಲಯದಿಂದ ತನ್ನ MBA ಪೂರ್ಣಗೊಳಿಸಿದ್ದಾಳೆ, ನಿಮ್ಮ ಬಗ್ಗೆ ಅಪಾರ ಹೆಮ್ಮೆʼ ಎಂದು ಬರೆದುಕೊಂಡಿದ್ದಾರೆ.

    ಕಳೆದ ವರ್ಷ, ಅವರಿಬ್ಬರೂ ಪ್ಯಾರಿಸ್‌ನ ಐಫೆಲ್ ಟವರ್‌ನ ಹೊರಗೆ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅವರ ನಿಶ್ಚಿತಾರ್ಥದ ವದಂತಿ ಕಾರಣವಾಗಿತ್ತು. ಆದರೆ, ಇದುವರೆಗೂ ಅವರಿಬ್ಬರೂ ನಿಶ್ಚಿತಾರ್ಥದ ಖಚಿತಪಡಿಸಿರಲಿಲ್ಲ. ಇದನ್ನೂ ಓದಿ: ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಅದಿತಿ ಆರ್ಯ ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬ್ಯುಸಿನೆಸ್ ಸ್ಟಡೀಸ್‌ನ ಪದವೀಧರರಾಗಿದ್ದು, ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಸಂಶೋಧನಾ ವಿಶ್ಲೇಷಕರಾಗಿದ್ದಾರೆ. 2015ರಲ್ಲಿ, ಅವರು ಸೌಂದರ್ಯ ಸ್ಪರ್ಧೆಯ 52ನೇ ಆವೃತ್ತಿಯಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಪಡೆದಿದ್ದರು. ಯೇಲ್ ವಿಶ್ವವಿದ್ಯಾಲಯಕ್ಕೆ ಸೇರಲು ಯುಎಸ್‌ಗೆ ತೆರಳುವುದಕ್ಕೂ ಮುನ್ನ ಹಿಂದಿ ಹಾಗೂ ತೆಲುಗು ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.

    ಜೇ ಕೋಟಕ್ ಅವರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಮಾಡಿದರು. ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಮುಗಿಸಿ. ಪ್ರಸ್ತುತ ಕೋಟಕ್​​ನ 811 ನ ಉಪಾಧ್ಯಕ್ಷರಾಗಿದ್ದಾರೆ. ಇದು ಕೋಟನ್‌ನ ಮೊದಲ ಡಿಜಿಟಲ್‌ ಮೊಬೈಲ್‌ ಬ್ಯಾಂಕ್‌ ಆಗಿದೆ.

  • ಹಣದ ಹರಿವು ಹೆಚ್ಚಳ, 2021-22ರಲ್ಲಿ ಶೇ.7.4 ಜಿಡಿಪಿ ಗುರಿ – ಆರ್ಥಿಕ ಚೇತರಿಕೆಗೆ ಆರ್‌ಬಿಐ ಮದ್ದು

    ಹಣದ ಹರಿವು ಹೆಚ್ಚಳ, 2021-22ರಲ್ಲಿ ಶೇ.7.4 ಜಿಡಿಪಿ ಗುರಿ – ಆರ್ಥಿಕ ಚೇತರಿಕೆಗೆ ಆರ್‌ಬಿಐ ಮದ್ದು

    – ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೆ
    – ಜಿ20 ರಾಷ್ಟ್ರಗಳ ಪೈಕಿ ಭಾರತದ ಬೆಳವಣಿಗೆ ದರ ಹೆಚ್ಚು

    ನವದೆಹಲಿ : ಕೊರೊನಾ ವೈರಸ್ ಸಂಕಷ್ಟ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಕುಸಿದಿದ್ದು, ಈ ಹಣಕಾಸು ವರ್ಷದಲ್ಲಿ ಶೇ.1.9 ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ದಾಖಲಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

    ಕೊರೊನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆ ಕಷ್ಟ ಎದುರಾಗಿದೆ. ಹಾಗಿದ್ದರೂ ಜಿ-20 ರಾಷ್ಟ್ರಗಳ ಪೈಕಿ ಭಾರತ ಅತಿ ಹೆಚ್ಚು ಶೇ.1.9 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಆದರೆ 2021-22ರ ಅವಧಿಯಲ್ಲಿ ಶೇ.7.4 ಜಿಡಿಪಿ ದಾಖಲಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಮುಖ್ಯಾಂಶಗಳು
    – ಭಾರತದ ಆರ್ಥಿಕತೆಯನ್ನು ಆರ್‌ಬಿಐ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಕೊರೊನಾ ವೈರಸ್ ನಿಂದ ಹೊಡ್ಡ ಆರ್ಥಿಕ ಹಿನ್ನಡೆಯಾಗಿದೆ. 2020ರಲ್ಲಿ ಅತ್ಯಂತ ಕೆಟ್ಟ ಹಿಂಜರಿತವಾಗಲಿದೆ ಎಂದು ಐಎಂಎಫ್ ಹೇಳಿದೆ. ಮಾರ್ಚ್ 27ರ ನಂತರ ವಿಶ್ವದ ಆರ್ಥಿಕತೆ ಕುಸಿದಿದ್ದು ಈ ವೇಳೆ ಕೆಲವೇ ಕೆಲವು ದೇಶಗಳು ಉತ್ತಮ ಪ್ರಗತಿ ದರವನ್ನು ಕಾಯ್ದುಕೊಂಡಿದ್ದು, ಅದರಲ್ಲಿ ಭಾರತವೂ ಒಂದಾಗಿದೆ.

    – ಚೆಸ್ಟ್ ಮೂಲಕ ಮಾರ್ಚ್ ಒಂದರಿಂದ 1.20 ಲಕ್ಷ ಕೋಟಿ ರೂ. ಹೊಸ ಕರೆನ್ಸಿ ಕರೆನ್ಸಿ ಚಲಾವಣೆಗೆ ಬಂದಿದೆ. ಕೋವಿಡ್-19 ನಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಕಂಪನಿಗಳ ವ್ಯವಹಾರಕ್ಕೆ ಸಮಸ್ಯೆಯಾಗಿದೆ. ಈ ಕಂಪನಿಗಳಿಗೆ ದೀರ್ಘಾವಧಿ ಸಾಲ ಒದಗಿಸುವ ಬಗ್ಗೆ ಆರ್‌ಬಿಐ ಗಮನ ವಹಿಸಲಿದೆ.

    – ಉತ್ಪಾದನಾ ವಲಯಗಳಲ್ಲಿ ಹೆಚ್ಚು ನಷ್ಟವಾಗಿದ್ದು ಶೇ.25-30 ಬೇಡಿಕೆ ಕುಸಿದಿದೆ ರಫ್ತು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಆರ್ಥಿಕತೆ 9 ಟ್ರಿಲಿಯನ್ ಡಾಲರ್ ಕುಸಿತ ಕಂಡಿದ್ದು ಉದ್ಯೋಗ ವಲಯಕ್ಕೆ ಭಾರೀ ಪೆಟ್ಟು ಬಿದ್ದಿದೆ.

    – ರೆಪೋ ದರಲ್ಲಿ 25 ಬೇಸಿಸ್ ಅಂಕ ಇಳಿಸಿದೆ. ಈ ಮೂಲಕ ಶೇ.4. ಇದ್ದ ರೆಪೋ ದರ ಶೇ.3.75ಕ್ಕೆ ಇಳಿಕೆಯಾಗಿದೆ. (ವಾಣಿಜ್ಯ ಬ್ಯಾಂಕುಗಳು ಆರ್‍ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು)

    – 90 ದಿನಗಳಲ್ಲಿ ಸಾಲ ಮರುಪಾವತಿ ಮಾಡದವರಿಗೆ ಆರ್‌ಬಿಐ ವಿನಾಯ್ತಿಯಡಿ ರಿಯಾಯಿತಿ. ಈ ಸಾಲವನ್ನು ಎನ್‍ಪಿಎ(ವಸೂಲಾಗದ ಸಾಲ) ಎಂದು ಪರಿಗಣಿಸುವುದಿಲ್ಲ ಮತ್ತು ಕ್ರೆಡಿಟ್ ಸ್ಕೋರ್ ಇಳಿಕೆಯಾಗುವುದಿಲ್ಲ.

    – ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ಗೆ (ನಬಾರ್ಡ್) 25 ಸಾವಿರ ಕೋಟಿ ರೂ., ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‍ಗೆ (ಎಸ್‍ಐಡಿಬಿ) 15 ಸಾವಿರ ಕೋಟಿ ರೂ., ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‍ಗೆ (ಎನ್‍ಎಚ್‍ಬಿ) 10 ಸಾವಿರ ಕೋಟಿ ರೂ. ನೀಡಲು ಒಪ್ಪಿಗೆ. ವಿಶೇಷ ಮರು ಬಂಡವಾಳ ಪೂರೈಕೆಗಾಗಿ ಒಟ್ಟು 50 ಸಾವಿರ ಕೋಟಿ ರೂಪಾಯಿ ಅನುದಾನ.

    – ವಿದೇಶಿ ವ್ಯಾಪಾರದ ಅಲ್ಪಾವಧಿಯ ಕೊರತೆಯನ್ನು ನೀಗಿಸಲು ಸಂಗ್ರಹಿಸುವ ವಿದೇಶಿ ವಿನಿಮಯ ನಮ್ಮಲ್ಲಿ 476.5 ಶತಕೋಟಿ ಡಾಲರ್ ನಷ್ಟಿದೆ. ಇದು 11.8 ತಿಂಗಳ ಆಮದು ನಿರ್ವಹಣೆಗೆ ಸಾಕಾಗುತ್ತದೆ.

    – ದೇಶದಲ್ಲಿ ಮೊಬೈಲ್ ಬ್ಯಾಂಕಿಂಗ್ ಬಳಕೆ ಹೆಚ್ಚಾಗಿದ್ದು, ಶೇ. 91ರಷ್ಟು ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಂಡಿದ್ದು ಬ್ಯಾಂಕುಗಳಿಗೆ ಹಣ ಕೊರತೆ ಉಂಟಾಗಿಲ್ಲ. ಈ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.

    – ಭಾರತದಲ್ಲಿ ಅಗತ್ಯ ಪ್ರಮಾಣ ದಿನಸಿ ದಾಸ್ತಾನು ಹೊಂದಿದ್ದು, ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದ್ದು, ಕೃಷಿ ವಲಯ ಚೇತರಿಕೆ ಕಾಣಲಿದೆ.

  • ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ- ಹೊಸ ಯೋಜನೆ ಜಾರಿಗೊಳಿಸ್ತೀನಿ ಅಂದ್ರು ಸಿಎಂ

    ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ- ಹೊಸ ಯೋಜನೆ ಜಾರಿಗೊಳಿಸ್ತೀನಿ ಅಂದ್ರು ಸಿಎಂ

    ಬೆಂಗಳೂರು: ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ. ಅಂತಹದ್ದೊಂದು ಹೊಸ ಯೋಜನೆ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮ ವೇಳೆ ಮಾತನಾಡಿದ ಅವರು, ಮೊಬೈಲ್ ಬ್ಯಾಂಕಿಂಗ್ ಯೋಜನೆ ಜಾರಿಗೆ ತರುತ್ತೇನೆ. ಅದರಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ದಿನದ ಮಟ್ಟಿಗೆ ಸಾಲ ನೀಡೋ ಯೋಜನೆ ಜಾರಿ ತರುತ್ತೇನೆ. ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ ಹೊಸ ಯೋಜನೆ ಜಾರಿಗೆ ತರುತ್ತೇನೆ. ಇದಕ್ಕೆ ಯಾವುದೇ ರೀತಿಯ ಬಡ್ಡಿ ಹಾಕುವುದಿಲ್ಲ ಎಂದು ಹೇಳಿದರು.

    ಕೆಲವೇ ದಿನಗಳಲ್ಲಿ ಹಲವು ಬದಲಾವಣೆ ಮಾಡಲಿದ್ದೇನೆ. ಸಹಕಾರ ನೀಡಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ನನ್ನ ವಿರುದ್ಧ ಹಲವು ಟೀಕೆಗಳು ಬರುತ್ತಿದೆ. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.

    ಜೈಲು ಶಿಕ್ಷೆ:
    ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.

    ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ಇದೇ ವೇಳೆ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv