Tag: ಮೊಬೈಲ್ ನಿಷೇಧ

  • ಕತ್ರಿನಾ, ವಿಕ್ಕಿ ಮದುವೆಯಲ್ಲಿ ಅತಿಥಿಗಳ ಮೊಬೈಲ್‌ ಬಳಕೆಗೆ ನಿಷೇಧ

    ಕತ್ರಿನಾ, ವಿಕ್ಕಿ ಮದುವೆಯಲ್ಲಿ ಅತಿಥಿಗಳ ಮೊಬೈಲ್‌ ಬಳಕೆಗೆ ನಿಷೇಧ

    ನವದೆಹಲಿ: ಇದೇ ಡಿಸೆಂಬರ್‌ ತಿಂಗಳು ನಡೆಯಲಿದೆ ಎನ್ನಲಾದ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಅವರ ವಿವಾಹ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ.

    ಡಿ.12ರಿಂದ 17ನೇ ತಾರೀಖಿನ ಅವಧಿಯಲ್ಲಿ ರಾಜಸ್ಥಾನದ ಹೋಟೆಲೊಂದರಲ್ಲಿ ಕತ್ರಿನಾ ಹಾಗೂ ವಿಕ್ಕಿ ವಿವಾಹ ನಡೆಯಲಿದೆ. ತಮ್ಮ ವಿವಾಹದ ಸಂದರ್ಭದಲ್ಲಿ ಅತಿಥಿಗಳು ಮೊಬೈಲ್‌ ಬಳಸದಂತೆ ನೋಡಿಕೊಳ್ಳಬೇಕು ಎಂದು ಸಮಾರಂಭ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ವಿವಾಹದ ಫೋಟೊ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಕ್ಕೆ ಅವಕಾಶ ನೀಡಬಾರದು. ವಿವಾಹ ಸಮಾರಂಭದ ಸ್ಥಳದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ಈಗಾಗಲೇ 10 ಮಂದಿಯ ತಂಡವೊಂದು ಹೋಟೆಲ್‌ಗೆ ತೆರಳಿ ವಿವಾಹ ಸಮಾರಂಭದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ಜಾನ್ಸನ್‌ ಹಾಗೂ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಜೋಡಿ ವಿವಾಹ ಸಂದರ್ಭದಲ್ಲೂ ಅತಿಥಿಗಳು ಮೊಬೈಲ್‌ ಬಳಸುವುದಕ್ಕೆ ನಿಷೇಧ ಹೇರಲಾಗಿತ್ತು.

  • ಮೊಬೈಲ್ ನಿಷೇಧ – ಕೊನೆಯ ಬಾರಿ ಮಾವನ ಮುಖ ನೋಡಲಾಗದೆ ಬಿಕ್ಕಿ ಬಿಕ್ಕಿ ಅತ್ತ ನಿರ್ವಾಹಕ

    ಮೊಬೈಲ್ ನಿಷೇಧ – ಕೊನೆಯ ಬಾರಿ ಮಾವನ ಮುಖ ನೋಡಲಾಗದೆ ಬಿಕ್ಕಿ ಬಿಕ್ಕಿ ಅತ್ತ ನಿರ್ವಾಹಕ

    ಬೆಂಗಳೂರು: ಚಾಲಕ ಮತ್ತು ನಿರ್ವಾಹಕರಿಗೆ ಡ್ಯೂಟಿ ಸಮಯದಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಕೊನೆಯ ಬಾರಿ ತನ್ನ ಮಾವನ ಮುಖ ನೋಡಲು ಆಗಲಿಲ್ಲ ಎಂದು ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪರುಶುರಾಮ್ ಯಾದಗಿರಿಯ ಗುರುಮಿಠಕಲ್ ಡಿಪೋದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಅವರು ಡ್ಯೂಟಿ ಮಾಡುತ್ತಿದ್ದಾಗ ಅವರ ಮಾನ ಊರಿನಲ್ಲಿ ತೀರಿಕೊಂಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ಅವರಿಗೆ ಈ ವಿಷಯ ತಿಳಿದಿರಲಿಲ್ಲ.

    ಪರುಶುರಾಮ್ ಮಾವ ಸೆ.16ರಂದು ಮೃತಪಟ್ಟಿದ್ದರು. ಆದರೆ ಆ ದಿನ ಅವರು ಗುರುಮಿಠಕಲ್ – ಕಲಬುರಗಿ ಕಡೆ ಹೋಗುವ ಬಸ್ಸಿನಲ್ಲಿ ಕರ್ತವ್ಯ ಮಾಡುತ್ತಿದ್ದರು. ಮೃತಪಟ್ಟ ವಿಚಾರವನ್ನು ತಿಳಿಸಲು ಪರಶುರಾಮ್ ಮನೆಯವರು ಅವರ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಡ್ಯೂಟಿಯ ಸಮಯದಲ್ಲಿ ಮೊಬೈಲ್ ನಿಷೇಧವಿದ್ದ ಕಾರಣ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಕಾರಣದಿಂದ ಅವರನ್ನು ಸಂಪರ್ಕಿಸಲಾಗಿಲ್ಲ.

    ಈ ವೇಳೆ ಪರುಶರಾಮ್ 17ನೇ ತಾರೀಖು ಡ್ಯೂಟಿ ಮೇಲೆಯೇ ಕಲಬುರಗಿದಿಂದ ಗುರುಮಿಠಕಲ್‍ಗೆ ವಾಪಸ್ ಬಂದಿದ್ದಾರೆ. ಅದೇ ರಸ್ತೆಯಲ್ಲಿ ಬರುವಾಗ ಹಳ್ಳಿಯೊಂದರಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಇದನ್ನು ನೋಡಿದ ಪರುಶರಾಮ್ ಬಸ್ ನಿಲ್ಲಿಸಿ, ಯಾರು, ಏನಾಗಿತ್ತು ಎಂದು ವಿಚಾರಿಸಿದಾಗ ತನ್ನ ಮಾವನೇ ತೀರಿಕೊಂಡಿದ್ದು ಎಂಬ ವಿಷ್ಯ ಗೊತ್ತಾಗಿದೆ. ಇದನ್ನು ಓದಿ: ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ

    ಈ ವಿಚಾರದಿಂದ ಬೇಸರಗೊಂಡ ಪರಶುರಾಮ್ ಮೊಬೈಲ್ ನಿಷೇಧ ಮಾಡಿರೋ ಹಿನ್ನೆಲೆ, ಡ್ರೈವರ್ ಮತ್ತು ಕಂಡಕ್ಟರ್‍ಗಳ ಸಂಕಟವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಚಾಲಕ ಮತ್ತು ನಿರ್ವಾಹಕಗೆ ಮೊಬೈಲ್ ನಿಷೇಧ ಮಾಡಿರುವುದರಿಂದ ತುಂಬಾ ತೊಂದರೆಯಾಗಿದೆ. ಸೋಮವಾರದಿಂದ ನಾನು ಡ್ಯೂಟಿ ಮಾಡುತ್ತಿದ್ದೆ ಈ ವೇಳೆ ನಮ್ಮ ಮಾವ ತೀರಿಕೊಂಡಿದ್ದಾರೆ. ನಾನು ನನ್ನ ಮೊಬೈಲ್‍ನನ್ನು ಸ್ವಿಚ್ ಆಫ್ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿದ್ದೆ ನನಗೆ ವಿಷಯವೇ ತಿಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

    ನಮ್ಮ ಮನೆಯವರು ವಿಷಯ ತಿಳಿಸಲು ನನಗೆ ಕರೆ ಮಾಡಿದ್ದಾರೆ. ಆದರೆ ನನ್ನ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ನನಗೆ ಈ ವಿಚಾರವೇ ಗೊತ್ತಾಗಿಲ್ಲ. ಮೊಬೈಲ್ ನಿಷೇಧ ಮಾಡಿದ ಕಾರಣ ನಾನು ಕೊನೆಯದಾಗಿ ನಮ್ಮ ಮಾವನವರ ಮುಖ ನೋಡದ ಹಾಗೇ ಆಯಿತು ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದನ್ನು ಓದಿ: ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    ಪರಶುರಾಮ್ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದರು. ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಪರಶುರಾಮ್‍ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು ಬೆಳೆಸಿಕೊಂಡಿದ್ದರು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಿನಲ್ಲಿ ಹಾಡುವ ಮೂಲಕ ಪ್ರಯಾಣಿಕರನ್ನು ರಂಜಿಸುತ್ತಿದ್ದಾರೆ.