Tag: ಮೊಬೈಲ್ ನಂಬರ್

  • ಡಿಶ್ ರಿಪೇರಿ ಮಾಡುತ್ತಿದ್ದವನಿಗೆ ಸ್ಥಳೀಯರಿಂದ ಧರ್ಮದೇಟು

    ಡಿಶ್ ರಿಪೇರಿ ಮಾಡುತ್ತಿದ್ದವನಿಗೆ ಸ್ಥಳೀಯರಿಂದ ಧರ್ಮದೇಟು

    ಚಿಕ್ಕಮಗಳೂರು: ಮಹಿಳೆಯರಿಗೆ (Woman) ನಂಬರ್ (Mobile Number) ಕೊಟ್ಟು ಕಾಲ್ ಮಾಡುವಂತೆ ಪೀಡಿಸುತ್ತಿದ್ದವನಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ (Koppa) ತಾಲೂಕಿನಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಜಯಪುರ (Jayapura) ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಶೀರ್ ಎಂಬಾತ ಮಹಿಳೆಯರಿಗೆ ಮೊಬೈಲ್ ನಂಬರ್ ಕೊಟ್ಟು ಕಾಲ್ ಮಾಡುವಂತೆ ಟಾರ್ಚರ್ ನೀಡುತ್ತಿದ್ದ. ಅದೇ ರೀತಿ ಕಟ್ಟೆಮನೆ ಗ್ರಾಮದ ರಮೇಶ್ ಎಂಬವರ ಪತ್ನಿಗೆ ಬಶೀರ್ ನಂಬರ್ ನೀಡಿದ್ದು, ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ತನ್ನ ಹೆಂಡತಿಗೆ ಮೊಬೈಲ್ ನಂಬರ್ ನೀಡಿದ ಹಿನ್ನೆಲೆ ರಮೇಶ್ ಆತನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಬಶೀರ್ ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡುತ್ತಿದ್ದ. ಪತ್ನಿಗೆ ಕಾಲ್ ಮಾಡುವಂತೆ ಕಿರುಕುಳ ನೀಡುತ್ತಿದ್ದ ಈತನಿಗೆ ರಮೇಶ್ ಹಾಗೂ ಸ್ಥಳೀಯರು ಧರ್ಮದೇಟು ನೀಡಿ ರಿಪೇರಿ ಮಾಡಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ನವದೆಹಲಿ: ಅಂಗಡಿಗಳಲ್ಲಿ ಸೇವೆಗಳನ್ನು ಒದಗಿಸುವ ಸಲುವಾಗಿ ಗ್ರಾಹಕರ ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡಲು ಒತ್ತಾಯಿಸದಂತೆ ಗ್ರಾಹಕರ ವ್ಯವಹಾರಗಳ ಸಚಿವಾಲಯವು (Consumer Affairs Ministry) ಚಿಲ್ಲರೆ ವ್ಯಾಪಾರಿಗಳಿಗೆ (Retailers) ಸೂಚನೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಯಾವುದೇ ಅಂಗಡಿಗಳಿಗೆ ಹೋದರೂ ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೊಡುವಂತೆ ಕೇಳುತ್ತಾರೆ. ಗ್ರಾಹಕರು ತಮ್ಮ ವೈಯಕ್ತಿಕ ನಂಬರ್ ಕೊಡಲು ಒಪ್ಪದಿದ್ದಾಗ ಅವರಿಗೆ ಸೇವೆಗಳನ್ನು ಒದಗಿಸಲಿಲ್ಲ ಎಂದು ಹಲವು ಗ್ರಾಹಕರು ದೂರು ನೀಡಿದ್ದರು. ಗ್ರಾಹಕರು ನೀಡಿದ ದೂರಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡುವವರೆಗೆ ಬಿಲ್ ಕೊಡಲಾಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ (Consumer Protection Act) ಇದು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದ್ದು, ಮಾಹಿತಿ ಸಂಗ್ರಹಿಸಲು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಅಲ್ಲದೇ ಗೌಪ್ಯತೆ ಕಪಾಡುವ ಸಲುವಾಗಿ ಚಿಲ್ಲರೆ ಉದ್ಯಮ ಮತ್ತು ಉದ್ಯಮ ಚೇಂಬರ್‌ಗಳಾದ ಸಿಐಐ (CII) ಹಾಗೂ ಎಫ್‌ಐಸಿಸಿಐಗಳಿಗೆ (FICCI) ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    ಬಿಲ್ ಪಡೆದುಕೊಳ್ಳುವ ಸಲುವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ. ಈ ರೀತಿ ಮೊಬೈಲ್ ನಂಬರ್ ನೀಡುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರು ಮೊಬೈಲ್ ನಂಬರ್ ನೀಡಲು ಹಿಂಜರಿಯುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಈ ಸೂಚನೆ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

  • ಜೆಎನ್‍ಯುನಲ್ಲಿ ಹಲ್ಲೆ – ಫೋನ್ ನಂಬರ್‌ನಿಂದ ಫಜೀತಿಗೆ ಸಿಲುಕಿದ ಕಾಂಗ್ರೆಸ್

    ಜೆಎನ್‍ಯುನಲ್ಲಿ ಹಲ್ಲೆ – ಫೋನ್ ನಂಬರ್‌ನಿಂದ ಫಜೀತಿಗೆ ಸಿಲುಕಿದ ಕಾಂಗ್ರೆಸ್

    – ಚರ್ಚೆ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕಾಂಗ್ರೆಸ್
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ನವದೆಹಲಿ : ಭಾನುವಾರ ರಾತ್ರಿ ದೆಹಲಿಯ ಜೆಎನ್‍ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲಾದ ಹಲ್ಲೆಗೆ ಕಾರಣ ಯಾರು, ಘಟನೆಯ ಹಿಂದಿರುವ ಶಕ್ತಿ ಯಾವುದು ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಎಬಿವಿಪಿ ಮೇಲೆ ಆರೋಪಿಸಿದರೆ ಇತ್ತ ಎಬಿವಿಪಿ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಪ್ರತ್ಯಾರೋಪ ಮಾಡುತ್ತಿವೆ.

    ಪರ ವಿರೋಧ ಚರ್ಚೆಗಳ ನಡುವೆ ಪತ್ರಕರ್ತೆ ಬರ್ಕಾ ದತ್ ಮಾಡಿರುವ ಒಂದು ಟ್ವಿಟ್ ಹೊಸ ಚರ್ಚೆ ಹುಟ್ಟು ಹಾಕಿದೆ. ನಿನ್ನೆ ನಡೆದ ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆಯೇ ಎನ್ನುವ ಅನುಮಾನ ಹುಟ್ಟು ಹಾಕಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

    ರಾತ್ರಿ 10 ಗಂಟೆಗೆ ವಾಟ್ಸಪ್ ಚಾಟ್ ಸ್ಕ್ರೀನ್ ಚಾಟ್ ಅಪ್ಲೋಡ್ ಮಾಡಿ ಘಟನೆ ಪೂರ್ವ ನಿಯೋಜಿತ ಎನ್ನುವ ರೀತಿಯಲ್ಲಿ ಅವರು ಟ್ವೀಟ್ ಮಾಡಿದ್ದರು. ಯೂನಿಟಿ ಅಗ್ನೆಸ್ಟ್ ಲೆಫ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಜೆಎನ್‍ಯು ಕ್ಯಾಂಪಸ್ ನಲ್ಲಿ ಗಲಭೆ ಮಾಡುವ ಬಗ್ಗೆ ಮುಂಚೆಯೇ ಚರ್ಚೆ ಆಗಿದೆ. ಇದರಲ್ಲಿ ಕ್ಯಾಂಪಸ್ ಮುಖ್ಯ ಗೇಟ್ ಬಳಿ ಏನಾದರೂ ಮಾಡಬೇಕೇ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದರು.

    ಈ ಪೈಕಿ ಚಾಟ್ ಲಿಸ್ಟ್ ನಲ್ಲಿದ್ದ ನಂಬರ್ ಅನ್ನು ಬ್ಲರ್ ಮಾಡದೇ ಹಾಗೆಯೇ ಹಾಕಿದ್ದರು. ಈ ನಂಬರ್ ಅನ್ನು ಕೂಡಲೇ ಜನ ಚೆಕ್ ಮಾಡಿದ್ದು ಇದು ಕಾಂಗ್ರೆಸ್ ಕ್ರೌಡ್ ಫೌಂಡಿಂಗ್ ವೆಬ್‍ಸೈಟಿಗೆ ಲಿಂಕ್ ಆಗಿದ್ದನ್ನು ಜನ ಪತ್ತೆ ಹಚ್ಚಿದ್ದಾರೆ.

    https://twitter.com/Anshulkanwar3/status/1213868803114713088

    ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಕಾಂಗ್ರೆಸ್ ಪ್ರತಿಕ್ರಿಯಿಸಿ, ನಮ್ಮ ಸಾಮಾಜಿಕ ಜಾಲತಾಣ ವಿಭಾಗ ಈ ಹಿಂದೆ ಕಾಂಗ್ರೆಸ್ಸಿಗೆ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಹಲವು ಖಾಸಗಿ ಸಂಸ್ಥೆಗಳ ಜೊತೆ ಕೈ ಜೋಡಿಸಿತ್ತು. ಲೋಕಸಭಾ ಚುನಾವಣೆಗೂ ಮುನ್ನ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು ಈಗ ನಿಲ್ಲಿಸಲಾಗಿದೆ. ಈ ನಂಬರ್ ಆ ಸಂಸ್ಥೆಯ ವ್ಯಕ್ತಿಗೆ ಸೇರಿದ್ದೇ ಹೊರತು ಕಾಂಗ್ರೆಸ್ಸಿಗೆ ಸೇರಿದ್ದಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

  • ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡ್ತಿದ್ರೆ ಹುಷಾರ್!

    ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡ್ತಿದ್ರೆ ಹುಷಾರ್!

    ಬೆಂಗಳೂರು: ಮಾಲ್ ಗಳಲ್ಲಿ ಶಾಪಿಂಗ್ ಮುಗಿದ ಮೇಲೆ ಮೊಬೈಲ್ ನಂಬರ್, ಇ ಮೇಲ್ ಐಡಿ ಕೊಡೋದು ಸರ್ವೇ ಸಾಮಾನ್ಯ. ಹಾಗಾದರೆ ನೀವು ಈ ಸುದ್ದಿ ಓದಲೇಬೇಕು.

    ಡಿಸ್ಕೌಂಟ್ ಆಫರ್ ಇದ್ದಾಗ ಮೆಸೇಜ್ ಕಳಿಸ್ತೀವಿ ನಂಬರ್ ಕೊಟ್ಟು ಹೋಗಿ ಸರ್, ನಂಬರ್ ಕೊಡಿ ಮೇಡಮ್ ಅಂದರೆ ಇನ್ಮುಂದೆ ಹುಷಾರಾಗಿರಿ. ಯಾಕಂದ್ರೆ ನೀವು ಕೊಡುವ ನಂಬರ್ ಸೈಬರ್ ಕ್ರೈಂ ಗೆ ದಾರಿ ಕೊಟ್ಟ ಹಾಗೆ. ನೀವು ಮಾಲ್ ಗಳಲ್ಲಿ ಕೊಟ್ಟ ನಂಬರ್ ಪಡೆಯುವ ಸೈಬರ್ ವಂಚಕರು, ಡಿಫರೆಂಟ್ ರೀಸನ್ ಹೇಳಿ ನಿಮ್ಮ ಅಕೌಂಟ್ ನಲ್ಲಿರೊ ಹಣ ಲಪಟಾಯಿಸೋದು ಗ್ಯಾರೆಂಟಿ.

    ಹೀಗಾಗಿ ಇನ್ಮುಂದೆ ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡ್ಕೊಂಡಿದ್ದಾರೆ. ಮಾಲ್ ಗಳಲ್ಲಿ ನಂಬರ್ ಕೇಳಿದರೆ ಕೊಡಬೇಡಿ ನಿಮ್ಮ ಡೇಟಾ ಸೇಲ್ ಆಗುತ್ತೆ. ಸೈಬರ್ ವಂಚನೆಗೆ ಬಾಗಿಲು ನೀವೇ ತೆರೆದಂತಾಗುತ್ತೆ ಎಂದು ಕಮೀಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ಯಾವುದೇ ಸ್ಥಳಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡೊ ಮುನ್ನ ಸಾವಿರ ಬಾರಿ ಯೋಚಿಸಿ.

  • ಮಹಿಳಾ ಟೆಲಿಕಾಲರ್ ಮೂಲಕ ಕರೆ ಮಾಡಿಸಿ ವಂಚಿಸುತ್ತಿದ್ದವನ ಬಂಧನ

    ಮಹಿಳಾ ಟೆಲಿಕಾಲರ್ ಮೂಲಕ ಕರೆ ಮಾಡಿಸಿ ವಂಚಿಸುತ್ತಿದ್ದವನ ಬಂಧನ

    ರಾಮನಗರ: ನಿಮಗೆ ಗಿಫ್ಟ್ ಅಫರ್ ಬಂದಿದೆ ಅದನ್ನು ಅಂಚೆಗೆ ಕಳುಹಿಸುತ್ತೇವೆ. ಅಲ್ಲಿ ಹಣ ಕೊಟ್ಟು ಪಡೆದುಕೊಳ್ಳಿ ಎಂದು ಮಹಿಳಾ ಟೆಲಿಕಾಲರ್ ಮೂಲಕ ಹೇಳಿಸಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ನಮ್ಮ ಡಾಟಾ ಬೇಸ್‍ನಲ್ಲಿರುವ ಮೊಬೈಲ್ ನಂಬರ್ ಗಳ ಪೈಕಿ ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ನಿಮ್ಮ ಹೆಸರಿಗೆ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಬಹುಮಾನವಾಗಿ ಬಂದಿದೆ. ಅಂಚೆ ಕಚೇರಿಯಲ್ಲಿ ಹಣ ಕೊಟ್ಟು ಬಿಡಿಸಿಕೊಳ್ಳಿ ಎಂದು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 27 ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್, ಪ್ರಿಂಟರ್, 130 ತರಕಾರಿ ಕಟರ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈತ ಮೈಸೂರು ಹಾಗೂ ಕೋಲಾರದಲ್ಲಿ ಕಾಲ್‍ಸೆಂಟರ್ ಗಳನ್ನು ತೆರೆದು ಮಹಿಳಾ ಟೆಲಿಕಾಲರ್ ಗಳ ಮೂಲಕ ಜನರನ್ನು ಸೆಳೆದು ನಂತರ ಪಾರ್ಸಲ್‍ನಲ್ಲಿ ತರಕಾರಿ ಕಟರ್ ಗಳನ್ನು ಕಳುಹಿಸಿ ಜನರನ್ನು ವಂಚಿಸುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

  • ‘ನಾನು ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕಾಲ್ ಮಾಡ್ಬೇಡಿ’

    ‘ನಾನು ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕಾಲ್ ಮಾಡ್ಬೇಡಿ’

    ನವದೆಹಲಿ: ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ದೆಹಲಿಯ ಪೀತಮಪುರದ ಯುವಕ ಪುನೀತ್ ಅಗ್ರವಾಲ್ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾನೆ. ಈ ರೀತಿಯ ಕರೆಗಳಿಂದ ಬೇಸತ್ತಿರುವ ಪುನೀತ್ ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

    ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದಾರೆ. ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ತಿಳಿಸುತ್ತಾರೆ. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ಪುನೀತ್ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಶುಕ್ರವಾರ ಅರ್ಜುನ ಪಟಿಯಾಲಾ ಸಿನಿಮಾ ಬಿಡುಗಡೆಯಾಗಿದ್ದು, ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ. ಆದ್ರೆ ಎಲ್ಲ ಕರೆಗಳಿಗೂ ನಾನು ಸನ್ನಿ ಲಿಯೋನ್ ಅಲ್ಲ ಎಂದು ಹೇಳುತ್ತಿದ್ದೇನೆ. ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ ಎಂದು ಪುನೀತ್ ಆರೋಪಿಸಿದ್ದಾರೆ.

    ಕರೆ ಮಾಡಿದ ಬಹುತೇಕರು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಭೇಟಿಗೆ ಒಪ್ಪದಿದ್ದರೆ ನಿಂದಿಸಲು ಆರಂಭಿಸುತ್ತಾರೆ. ಮಾನಸಿಕವಾಗಿ ನೊಂದ ಪುನೀತ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಸಹ ಸೈಬರ್ ತಜ್ಞರ ಸಲಹೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ಡಿಸಿಪಿ ವಿಜಯಂತ್ ಆರ್ಯ ತಿಳಿಸಿದ್ದಾರೆ.

  • ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಲಕ್ನೋ: ಫೋನ್ ನಂಬರ್ ನೀಡದ್ದಕ್ಕೆ ಯುವಕನೊಬ್ಬ ಬಾಲಕಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಫರಿಹಾ ಜಿಲ್ಲೆಯ ಅಜಮ್‍ಘರ್ ನಲ್ಲಿ ನಡೆದಿದೆ.

    ಮೊಹ್ಮದ್ ಶಾಯಿ ಬೆಂಕಿ ಹಚ್ಚಿದ ಆರೋಪಿ. ಶಾಯಿ ಕೂಡ ಬಾಲಕಿಯ ಗ್ರಾಮದವನಾಗಿದ್ದು, ಮಂಗಳವಾರ ಶಾಯಿ ಬಾಲಕಿ ಮನೆಗೆ ಹೋಗಿ ಫೋನ್ ನಂಬರ್ ಕೊಡು ಎಂದು ಒತ್ತಾಯಿಸಿದ್ದಾನೆ.

    ಬಾಲಕಿ ಯುವಕನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ಕೋಪಗೊಂಡ ಶಾಯಿ ಮೊದಲು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಕಿರುಚಾಟದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಜನ ಬರುವುದನ್ನು ನೋಡಿ ಶಾಯಿ ಓಡಿ ಹೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಅಲ್ಲಿದ್ದ ಜನ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಸೇರಿದ್ದ ಅಕ್ಕಪಕ್ಕದ ಮನೆಯವರು ಬಾಲಕಿಯನ್ನು ಸರ್ದಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆಕೆಯನ್ನು ವಾರಣಾಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ದೇಹ ಶೇ.80ರಷ್ಟು ಸುಟ್ಟು ಹೋಗಿದ್ದು, ಈಗ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಶಾಯಿಯನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಕೂಡ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಎಸ್‍ಸಿ, ಎಸ್‍ಟಿ ಕಾಯ್ದೆ ಹಾಗೂ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ಈ ನಾಲ್ಕು ಆಧಾರ್ ಡೆಡ್‍ಲೈನ್ ದಿನಾಂಕವನ್ನು ಮಿಸ್ ಮಾಡಬೇಡಿ

    ಈ ನಾಲ್ಕು ಆಧಾರ್ ಡೆಡ್‍ಲೈನ್ ದಿನಾಂಕವನ್ನು ಮಿಸ್ ಮಾಡಬೇಡಿ

    ಕೇಂದ್ರ ಸರ್ಕಾರ ಈಗ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಆಧಾರ್ ಪಾನ್ ಲಿಂಕ್: ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಈ ಹಿಂದೆ ಪಾನ್ ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ರಂದು ಕೊನೆಯ ದಿನಾಂಕವನ್ನು ನೀಡಿತ್ತು. ಆದರೆ ಈಗ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಸರ್ಕಾರ ಆಗಸ್ಟ್ 31 ರಿಂದ ಡಿಸೆಂಬರ್ 31 ಕ್ಕೆ ಡೆಡ್‍ಲೈನ್ ವಿಸ್ತರಿಸಿದೆ. ಆಧಾರ್ ಗೆ ಲಿಂಕ್ ಮಾಡದೇ ಇದ್ದರೆ ಆ ಪಾನ್ ನಂಬರ್ ನಿಷ್ಕ್ರಿಯವಾಗಲಿದೆ.

    ಆಧಾರ್ ಮೊಬೈಲ್ ಲಿಂಕ್: ಮೊಬೈಲ್ ನಂಬರ್‍ಗೆ ಆಧಾರ್ ಅನ್ನು ಲಿಂಕ್ ಮಾಡಿಸದಿದ್ದರೆ ಎಲ್ಲಾ ಮೊಬೈಲ್ ಫೋನ್ ನಂಬರ್‍ಗಳು 2018 ಫೆಬ್ರವರಿ ನಂತರ ನಿಷ್ರ್ಕಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಈಗ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಆಧಾರ್ ಲಿಂಕ್ ಮಾಡುವಂತೆ ಮೊಬೈಲ್ ಸಂದೇಶ ಕಳುಹಿಸುತ್ತಿದೆ.

    ಆಧಾರ್ ಬ್ಯಾಂಕ್ ಲಿಂಕ್: ಎಲ್ಲಾ ಬ್ಯಾಂಕ್‍ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ 2017ರ ಡಿಸೆಂಬರ್ 31ರ ಒಳಗಡೆ ಗ್ರಾಹಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂದು ನಿರ್ದೇಶನ ನೀಡಿದೆ. ಹಣಕಾಸು ಸಂಸ್ಥೆಗಳು ಒಂದು ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ದಾಖಲಾತಿಯನ್ನು ಸಿದ್ಧಪಡಿಸಬೇಕು. ಸಾಲವನ್ನು ಪಡೆಯುವಂತಹ ಗ್ರಾಹಕರು ತಮ್ಮ ಆಧಾರ ವಿವರವನ್ನು ನೀಡಬೇಕು ಎಂದು ತಿಳಿಸಿದೆ.

    ಆಧಾರ್ ಸಾಮಾಜಿಕ ಭದ್ರತಾ ಯೋಜನೆ ಲಿಂಕ್: ಆಧಾರ್‍ನ 12 ಡಿಜಿಟಲ್ ಸಂಖ್ಯೆಯನ್ನು ಸಾಮಾಜಿಕ ಭದ್ರತಾ ಯೋಜನೆಗಳಾದ ಎಲ್‍ಪಿಜಿ ಸಿಲಿಂಡರ್, ಪಿಂಚಣಿ, ಸರ್ಕಾರಿ ವಿದ್ಯಾರ್ಥಿ ವೇತನ ಇತರೆ ಸಾಮಾಜಿಕ ಯೋಜನೆಗಳಿಗೆ ಲಿಂಕ್ ಮಾಡಿಸಲು 2017ರ ಡಿಸೆಂಬರ್ 31ಕ್ಕೆ ನೀಡಲಾಗಿದೆ.