Tag: ಮೊಬೈಲ್ ಅಪ್ಲಿಕೇಶನ್

  • ಕೋಲ್ಕತ್ತಾ ವೈದ್ಯೆ ಹತ್ಯಾಚಾರ; ನೈಟ್ ಶಿಫ್ಟ್ ಮಹಿಳೆಯರ ಸುರಕ್ಷತೆಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ 5 ಕ್ರಮ

    ಕೋಲ್ಕತ್ತಾ ವೈದ್ಯೆ ಹತ್ಯಾಚಾರ; ನೈಟ್ ಶಿಫ್ಟ್ ಮಹಿಳೆಯರ ಸುರಕ್ಷತೆಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ 5 ಕ್ರಮ

    ಕೋಲ್ಕತ್ತಾ: ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ (Kolkata Doctor Rape And Murder) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ (West Bengal) ಸರ್ಕಾರ ರಾತ್ರಿ ಪಾಳಿಯಲ್ಲಿ (Night Shift) ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಪ್ರಸ್ತಾಪಿಸಿದೆ.

    ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಹಾಸ್ಟೆಲ್‌ಗಳು ಮತ್ತು ಮಹಿಳೆಯರು ಅಗತ್ಯವಿರುವ ಇತರೆ ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ಕೆಲಸದ ಪರಿಸ್ಥಿತಿಗಳನ್ನು ಒದಗಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಐದು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮ ವಿಶೇಷ ಮೊಬೈಲ್ ಅಪ್ಲಿಕೇಶನ್, ಸುರಕ್ಷಿತ ವಲಯಗಳು ಮತ್ತು ಮಹಿಳಾ ಸ್ವಯಂಸೇವಕರನ್ನು ಒಳಗೊಂಡಿದೆ. ಇದನ್ನೂ ಓದಿ: ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್‌ ಚಂದ್ರ ಗುರು ನಿಧನ

    ಐದು ಕ್ರಮಗಳು ಏನು?
    *ಮಹಿಳೆಯರಿಗೆ ಶೌಚಾಲಯದೊಂದಿಗೆ ಪ್ರತ್ಯೇಕ ಗೊತ್ತುಪಡಿಸಿದ ವಿಶ್ರಾಂತಿ ಕೊಠಡಿಗಳು ಇರಬೇಕು.
    *’ರಾಟ್ಟಿರೇರ್ ಶಾಥಿ’ ಅಥವಾ ಮಹಿಳಾ ಸ್ವಯಂಸೇವಕರು ರಾತ್ರಿಯಲ್ಲಿ ಕರ್ತವ್ಯದಲ್ಲಿರಬೇಕು.
    *ಸಿಸಿಟಿವಿಯ ಸಂಪೂರ್ಣ ಕವರೇಜ್‌ನೊಂದಿಗೆ ಮಹಿಳೆಯರಿಗೆ ಸುರಕ್ಷಿತ ವಲಯಗಳಲ್ಲಿ ಕೆಲಸ ನೀಡಲಾಗುವುದು.
    *ಅಲರಾಂ ಸಾಧನಗಳೊಂದಿಗೆ ವಿಶೇಷ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದನ್ನು ಎಲ್ಲಾ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಡೌನ್‌ಲೋಡ್ ಮಾಡಬೇಕು. ಇದು ಸ್ಥಳೀಯ ಪೊಲೀಸ್ ಠಾಣೆಗಳು/ಪೊಲೀಸ್ ನಿಯಂತ್ರಣ ಕೊಠಡಿಗಳ ಸಂಪರ್ಕದಲ್ಲಿರುತ್ತದೆ.
    *ಯಾವುದೇ ಪ್ಯಾನಿಕ್/ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 100/112 ಅನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು.

    ಸಾಧ್ಯವಾದಲ್ಲೆಲ್ಲಾ ಮಹಿಳೆಯರನ್ನು ರಾತ್ರಿ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ ತಿಳಿಸಿದ್ದಾರೆ. ಇದನ್ನೂ ಓದಿ: Udaipur Stabbing Case| ಶಾಲೆಗೆ ಹರಿತವಾದ ಸಾಧನ ಒಯ್ಯುವುದುಕ್ಕೆ ನಿಷೇಧ ಹೇರಿದ ಸರ್ಕಾರ

  • ಟ್ರೂ ಕಾಲರ್ ವಿರುದ್ಧ ಅರ್ಜಿ – ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್

    ಟ್ರೂ ಕಾಲರ್ ವಿರುದ್ಧ ಅರ್ಜಿ – ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಜನರ ವೈಯಕ್ತಿಕ ಡೇಟಾವನ್ನು ಅವರ ಅನುಮತಿಯಿಲ್ಲದೆ ಬಳಸಲಾಗುತ್ತಿದೆ. ಹೀಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್ ನಿಷೇಧಿಸಬೇಕು ಎಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ಅಂಕಿತ್ ಸೇಥಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ.ಯು.ಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಮೊಬೈಲ್ ಆ್ಯಪ್ ಬ್ಯಾನ್ ಮಾಡುವುದು ಕೋರ್ಟ್ ಕೆಲಸವಲ್ಲ ಎಂದರು. ಹೀಗೆ ಅರ್ಜಿಗಳನ್ನು ವಿಚಾರಣೆ ನಡೆಸಲು ಆರಂಭಿಸಿದರೇ ಇಂತಹ ಎಷ್ಟು ಅಪ್ಲಿಕೇಶನ್‍ಗಳ ವಿರುದ್ಧ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಮತ್ತೋರ್ವ ನ್ಯಾಯಮೂರ್ತಿ ಭಟ್ ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ – ನಾಳೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ

    court order law

    ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದಾಗ ಕರೆ ಮಾಡುವವರ ಗುರುತನ್ನು Truecaller ಅಪ್ಲಿಕೇಶನ್ ಪ್ರದರ್ಶಿಸುತ್ತದೆ. ಇದು ಕರೆ ಸ್ವೀಕರಿಸುವವರಿಗೆ ಕರೆಗೆ ಬಂದಾಗ, ಕರೆ ಮಾಡಿದವರು ಯಾರೆಂದು ತಿಳಿಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು. ಇದನ್ನೂ ಓದಿ: ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗ್ತಿದ್ದೇನೆ: ಮುರುಘಾ ಶ್ರೀ

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ. ಯು.ಯು ಲಲಿತ್, ಇಂತಹ ಅಪ್ಲಿಕೇಶನ್‍ಗಳನ್ನು ಮುಚ್ಚುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ, ಇದು ಉನ್ನತ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಯೋಗ್ಯವಾದ ಪ್ರಕರಣವಲ್ಲ ಎಂದು ಸಿಜೆಐ ಹೇಳಿದ್ದರು, ನಂತರ ಅರ್ಜಿದಾರರು ಅರ್ಜಿಯನ್ನು ಹಿಂಪಡೆದುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ಆ್ಯಪ್ ಮೂಲಕ 2021ರ ಜನಗಣತಿ – ಅಮಿತ್ ಶಾ

    ಮೊಬೈಲ್ ಆ್ಯಪ್ ಮೂಲಕ 2021ರ ಜನಗಣತಿ – ಅಮಿತ್ ಶಾ

    ನವದೆಹಲಿ: 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡಲಾಗುವುದು ಎಂದು ತಿಳಿಸಿದರು.

    2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಹೇಳಿದರು.

     

    ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆಯುತ್ತದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್‌ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.