Tag: ಮೊನಾಲಿಸಾ ಸಿನಿಮಾ

  • ಮದುವೆಯಾದರೆ ಖುಷಿಯಾಗಿರುತ್ತೇನೆ ಎಂಬ ಭರವಸೆಯಿಲ್ಲ: ‘ಮೊನಾಲಿಸಾ’ ನಟಿ

    ಮದುವೆಯಾದರೆ ಖುಷಿಯಾಗಿರುತ್ತೇನೆ ಎಂಬ ಭರವಸೆಯಿಲ್ಲ: ‘ಮೊನಾಲಿಸಾ’ ನಟಿ

    ನ್ನಡದ ‘ಮೊನಲಿಸಾ’ (Monalisa) ನಟಿ ಸದಾ (Actress Sadha) ಇದೀಗ ದಕ್ಷಿಣದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋವೊಂದರ ಜಡ್ಜ್ ಆಗಿಯೂ ಗಮನ ಸೆಳೆಯುತ್ತಿದ್ದಾರೆ. ನಟಿ ಸದಾಗೆ ಯಾವಾಗಲೂ ಎದುರಾಗುವ ಪ್ರಶ್ನೆ ಅಂದರೆ ಮದುವೆ ಮ್ಯಾಟರ್. ಹಾಗಾಗಿ ಮದುವೆ ಬಗ್ಗೆ ನಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮದುವೆಯಾಗದೇ (Wedding) ಸಿಂಗಲ್‌ ಆಗಿರಲು ಕಾರಣವೇನು ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಇದನ್ನೂ ಓದಿ:ನಯನತಾರಾ, ತ್ರಿಷಾ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ- ದುಬಾರಿ ಸಂಭಾವನೆ ಪಡೆದ ನಟಿ

    ಚಿತ್ರರಂಗಕ್ಕೆ ನಾಯಕಿಯಾಗಿಯೇ ಪಾದಾರ್ಪಣೆ ಮಾಡಿದ್ದ ಸದಾ 39 ವರ್ಷವಾದ್ರೂ ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ. ಅವರ ಜೊತೆಯೇ ಚಿತ್ರರಂಕ್ಕೆ ಎಂಟ್ರಿ ಕೊಟ್ಟ ಸಹನಟಿಯರ ಲೈಫು ಸೆಟಲ್ ಆಗಿದೆ. ಆದರೆ ತಾವ್ಯಾಕೆ ಮದುವೆಗೆ ಮನಸ್ಸು ಮಾಡುತ್ತಿಲ್ಲ ಎಂಬುದನ್ನು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮದುವೆಯಾದ್ರೆ ಖುಷಿಯಾಗಿರುತ್ತೇನೆ ಎಂಬ ಭರವಸೆ ಇಲ್ಲ ಎಂದಿದ್ದಾರೆ.

    ನಾನು ಮದುವೆಯ ವಿರೋಧಿಯಲ್ಲ. ಆದರೆ ನನಗೆ ಅರೇಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ. ಯಾರೋ ತಿಳಿಯದೇ ಇರುವ ವ್ಯಕ್ತಿಯ ಜೊತೆ ಇರುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ. ನನಗೆ ಲವ್ ಮ್ಯಾರೇಜ್ ಇಷ್ಟ. ನನ್ನ ಪೋಷಕರು ಪ್ರೀತಿಸಿ ಮದುವೆಯಾದವರು. ಅದಕ್ಕೆ ನನಗೆ ಪ್ರೇಮ ವಿವಾಹ ಇಷ್ಟ. ಆದರೆ ನಾನು ಒಬ್ಬಂಟಿಯಾಗಿರಲು ಕಾರಣ ಏನೆಂದರೆ, ನನಗೆ ಇದುವರೆಗೂ ಒಳ್ಳೆಯ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದಾರೆ. ಈಗ ನಾನು ನನ್ನ ವೈಯಕ್ತಿಕ ಬದುಕು ಮತ್ತು ವೃತ್ತಿ ಜೀವನ ಎರಡರಲ್ಲೂ ಖುಷಿಯಾಗಿದ್ದೇನೆ. ಮದುವೆಯಾದರೆ ಈ ಸಂತೋಷ ನನಗೆ ಸಿಗುತ್ತದೆ ಎಂಬ ಭರವಸೆ ನನಗಿಲ್ಲ ಎಂದು ನಟಿ ಸದಾ ಮಾತನಾಡಿದ್ದಾರೆ.

    ಅಂದಹಾಗೆ, ಧ್ಯಾನ್ ಜೊತೆ ಕನ್ನಡದ ಮೊನಾಲಿಸಾ ಚಿತ್ರ, ಶಿವಣ್ಣ (Shivarajkumar) ಜೊತೆ ಮೈಲಾರಿ, ರವಿಚಂದ್ರನ್ ಜೊತೆ ಮಲ್ಲಿಕಾರ್ಜುನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸದಾ ನಟಿಸಿದ್ದಾರೆ.