Tag: ಮೊನಾಲಿಸಾ

  • ನಟಿ ಮಾಡೋದಾಗಿ ಹೇಳಿ ರೇಪ್‌ – ಮೊನಾಲಿಸಾಗೆ ಅವಕಾಶ ನೀಡಿದ್ದ ನಿರ್ದೇಶಕ ಅರೆಸ್ಟ್‌

    ನಟಿ ಮಾಡೋದಾಗಿ ಹೇಳಿ ರೇಪ್‌ – ಮೊನಾಲಿಸಾಗೆ ಅವಕಾಶ ನೀಡಿದ್ದ ನಿರ್ದೇಶಕ ಅರೆಸ್ಟ್‌

    ನವದೆಹಲಿ: ಮಹಾ ಕುಂಭ ಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾಗೆ (Maha Kumbh Viral Girl Monalisa) ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್‌ ಮಿಶ್ರಾ (Sanoj Mishra) ಅವರನ್ನು ಅತ್ಯಾಚಾರ (Rape) ಆರೋಪದ ಅಡಿ ಬಂಧಿಸಲಾಗಿದೆ.

    ತನ್ನನ್ನು ಚಿತ್ರನಟಿ (Actress) ಮಾಡುವುದಾಗಿ ಹೇಳಿ ಸನೋಜ್‌ ಸುಳ್ಳು ಭರವಸೆ ನೀಡಿ ಶೋಷಣೆ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ ಆರೋಪದ ಅಡಿ ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಯುವತಿಯ ದೂರಿನಲ್ಲಿ ಏನಿದೆ?
    2020 ರಲ್ಲಿ ಝಾನ್ಸಿಯಲ್ಲಿ ವಾಸಿಸುತ್ತಿದ್ದಾಗ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದೆ. ನನ್ನ ವಿಡಿಯೋ ನೋಡಿ ಸನೋಜ್‌ ಮಿಶ್ರ ಸಂಪರ್ಕಿಸಿದ್ದರು. ನಂತರ ನಾವು ನಿರಂತರ ಸಂಪರ್ಕದಲ್ಲಿದ್ದೆವು.

    ಜೂನ್‌ 2021 ರಲ್ಲಿ ನಾನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇದ್ದೇನೆ. ಭೇಟಿಯಾಗಲು ಬಾ ಎಂದು ಕರೆದರು. ನಾನು ಬರಲು ನಿರಾಕರಿಸಿದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಕುಂಭಮೇಳದ ಬ್ಯೂಟಿ ಮೊನಾಲಿಸಾ ಈಗ ಚಿನ್ನದ ಆಭರಣ ರಾಯಭಾರಿ – ಸಂಭಾವನೆ ಎಷ್ಟು ಗೊತ್ತಾ?

    ಬೆದರಿಕೆಗೆ ಹೆದರಿ ಮರುದಿನ ನಾನು ಅವರನ್ನು ಭೇಟಿಯಾಗಲು ಒಪ್ಪಿಕೊಂಡೆ. ಮಿಶ್ರಾ ಅವರು ರೆಸಾರ್ಟ್‌ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ನನ್ನ ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿದರು. ಕರೆದಾಗ ಬರದೇ ಇದ್ದರೆ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದರು.

    ಮಿಶ್ರಾ ಹಲವು ಬಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮದುವೆಯ ಸುಳ್ಳು ಭರವಸೆಗಳನ್ನು ನೀಡಿ ಸಿನಿಮಾಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ಹೇಳಿದ್ದರು ಎಂದು ದೂರಿದ್ದಾಳೆ. ಇದನ್ನೂ ಓದಿ: ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

    ಮಹಾ ಕುಂಭಮೇಳದ ಸಮಯದಲ್ಲಿ ಮೊನಾಲಿಸಾ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಕೆಲವು ದಿನಗಳ ನಂತರ ಸನೋಜ್ ಮಿಶ್ರಾ ʼದಿ ಡೈರಿ ಆಫ್ ಮಣಿಪುರʼ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಮೊನಾಲಿಸಾಗೆ ನಟನಾ ಪಾಠಗಳನ್ನು ನೀಡಲು ಪ್ರಾರಂಭಿಸಿದ್ದರು.

    ಮಿಶ್ರಾ ಅವರು ಗಾಂಧಿಗಿರಿ, ರಾಮ್ ಕಿ ಜನ್ಮಭೂಮಿ, ಲಫಂಗೆ ನವಾಬ್, ಧರ್ಮ್ ಕೆ ಸೌದಾಗರ್ ಮತ್ತು ಕಾಶಿ ಟು ಕಾಶ್ಮೀರ್ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

     

  • ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮುಂಬೈ: ಮಹಾ ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಭೋಂಸ್ಲೆ (Monalisa Bhosle) ಅವರ ಬಗ್ಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ʻದಿ ಡೈರಿ ಆಫ್ ಮಣಿಪುರʼ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ನೀಡಿದ ದೂರು ಆಧರಿಸಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸನೋಜ್ ಮಿಶ್ರಾ (Sanoj Mishra) ನೀಡಿದ ದೂರು ಆಧರಿಸಿ ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ವೇಳೆ ಮೊನಾಲಿಸಾ ಭೋಂಸ್ಲೆ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದಾರೆ. ಅವರ ಫೋಟೊ ಮತ್ತು ವಿಡಿಯೋಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಮೊನಾಲಿಸಾ ಟ್ರೆಂಡ್‌ ಅದ ಬೆನ್ನಲ್ಲೇ ʻದಿ ಡೈರಿ ಆಫ್ ಮಣಿಪುರʼ (The Diary of Manipur) ಸಿನಿಮಾ ನಿರ್ಮಿಸುವುದಾಗಿ ಮಿಶ್ರಾ ಘೋಷಿಸಿದ್ದರು.

    ʻಮಿಶ್ರಾ ನಿರ್ದೇಶಿಸಿದ ಯಾವುದೇ ಸಿನಿಮಾಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹಾಗಾಗಿ ಮಿಶ್ರಾ ಅವರು 16 ವರ್ಷದ ಮೊನಾಲಿಸಾ ಅವರ ವೃತ್ತಿಜೀವನವನ್ನು ಹಾಳು ಮಾಡಲು ಮುಂದಾಗಿದ್ದಾರೆʼ ಎಂದು ದೂರಿನಲ್ಲಿ ಹೆಸರಿಸಲಾದ ಐವರು ಆರೋಪಿಸಿದ್ದರು. ಹೀಗಾಗಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನಗೆ ಘನತೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮಿಶ್ರಾ ಪ್ರತಿದೂರು ದಾಖಲಿಸಿದ್ದಾರೆ ಎಂಬುದಾಗಿ ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಿಶ್ರಾ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕುಂಭಮೇಳದ ಬ್ಯೂಟಿ ಮೊನಾಲಿಸಾ ಈಗ ಚಿನ್ನದ ಆಭರಣ ರಾಯಭಾರಿ – ಸಂಭಾವನೆ ಎಷ್ಟು ಗೊತ್ತಾ?

    ಕುಂಭಮೇಳದ ಬ್ಯೂಟಿ ಮೊನಾಲಿಸಾ ಈಗ ಚಿನ್ನದ ಆಭರಣ ರಾಯಭಾರಿ – ಸಂಭಾವನೆ ಎಷ್ಟು ಗೊತ್ತಾ?

    ಲಕ್ನೋ: ಮಹಾ ಕುಂಭಮೇಳದ (Maha Kumbh Mela) ವೈರಲ್‌ ಸೆನ್ಸೇಷನ್‌ ಬ್ಯೂಟಿ ಮೊನಾಲಿಸಾ (Monalisa) ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಬಹುನಿರೀಕ್ಷಿತ ಬಾಲಿವುಡ್‌ ಚೊಚ್ಚಲ ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿಯೂ ನೇಮಕಗೊಂಡಿದ್ದಾರೆ.

    ಕೇರಳದ ಚೆಮ್ಮನೂರ್‌ ಜ್ಯುವೆಲ್ಲರಿ ತನ್ನ ಪ್ರಚಾರಕ್ಕೆ ಮೊನಾಲಿಸಾಳನ್ನು ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಬಾಬಿ ಚೆಮ್ಮನೂರ್‌ ಮಾತನಾಡಿ, ಮೊನಾಲಿಸಾ ಶುಕ್ರವಾರ ಕೇರಳದ ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುವುದು. ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

    ಆಂಗ್ಲ ಮಾಧ್ಯಮ ವರದಿಗಳ ಪ್ರಕಾರ, ಮೊನಾಲಿಸಾ ತಮ್ಮ ಚೊಚ್ಚಲ ಚಿತ್ರಕ್ಕಾಗಿ 21 ಲಕ್ಷ ರೂಪಾಯಿಗಳ ಗಣನೀಯ ಸಂಭಾವನೆಗೆ ಸಹಿ ಹಾಕಿದ್ದಾರೆ. 1 ಲಕ್ಷ ರೂಪಾಯಿಗಳ ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

    ‘ನಮಸ್ತೆ. ನಾನು ಮಹಾಕುಂಭಕ್ಕೆ ಹೋಗಿ ರುದ್ರಾಕ್ಷಿಗಳನ್ನು ಮಾರುತ್ತಿದ್ದೆ. ಆದರೆ ವಿಧಿ ನನಗಾಗಿ ಬೇರೆ ಯೋಜನೆಗಳನ್ನು ಹೊಂದಿತ್ತು. ಶಿವ ಮತ್ತು ಸಂತರ ಆಶೀರ್ವಾದದಿಂದ, ನಾನು ಜನಪ್ರಿಯತೆಯನ್ನು ಗಳಿಸಿದೆ. ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈ ಕಾರಣದಿಂದಾಗಿ, ನನಗೆ ಬಾಲಿವುಡ್ ಚಿತ್ರವೊಂದರ ಆಫರ್‌ ಬಂದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರು ವೈಯಕ್ತಿಕವಾಗಿ ನನ್ನ ಮನೆಗೆ ಭೇಟಿ ನೀಡಿ ಈ ಅವಕಾಶವನ್ನು ನೀಡಿದ್ದಾರೆ. ನಾನು ಯಾವಾಗಲೂ ನಾಯಕಿಯಾಗುವ ಕನಸು ಕಂಡಿದ್ದೆ. ಇಂದು ಆ ಕನಸು ನನಸಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

  • ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?

    ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?

    ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ (Maha Kumbhamela) ತನ್ನ ಕಣ್ಣುಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಶೇಷ ಅಂದರೆ, ತಾವು ನಟಿಸುತ್ತಿರುವ ಮೊದಲ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು

    ಇಂಟರ್‌ನೆಟ್‌ನ ಸೆನ್ಸೇಷನಲ್ ಮೊನಾಲಿಸಾಗೆ (Monalisa Bhonsle) ಸಿನಿಮಾದಲ್ಲಿ ನಟಿಸಲು ಬೇಡಿಕೆ ಹೆಚ್ಚಾಗಿದೆ. ಸದ್ಯ ಒಪ್ಪಿಕೊಂಡಿರುವ ಬಾಲಿವುಡ್‌ನ `ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು. ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 21 ಲಕ್ಷ ರೂ. ಪಡೆದಿದ್ದಾರಂತೆ. ಇದರೊಟ್ಟಿಗೆ ಸ್ಥಳೀಯ ಚಿತ್ರದ ಪ್ರಚಾರಕ್ಕಾಗಿ 15 ಲಕ್ಷ ರೂ. ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಮೊನಾಲಿಸಾ ಕುರಿತು ಹೀಗೊಂದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

    ಇನ್ನೂ ಬರಹಗಾರ ಹಾಗೂ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಓಕೆ ಎಂದಿದ್ದಾರೆ.

    ಇನ್ನೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್ ಆಗಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಳು.

  • ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್‌ ಒಪ್ಪಿದ್ಹೇಗೆ?

    ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್‌ ಒಪ್ಪಿದ್ಹೇಗೆ?

    ನವದೆಹಲಿ: ಪ್ರಯಾಗ್‌ರಾಜ್‌ನ (Prayagraj) ಕುಂಭಮೇಳದಲ್ಲಿ (Maha Kumbhamela) ತನ್ನ ಕಣ್ಣುಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ಪರದೆಯ ಮೇಲೆ ಬರಲು ಸಿದ್ಧಳಾಗಿದ್ದಾಳೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್‌ ಆಗಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಳು.

    ಇದೀಗ ಬರಹಗಾರ ಹಾಗೂ ನಿರ್ದೇಶಕ ಸನೋಜ್‌ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ʻದಿ ಡೈರಿ ಆಫ್‌ ಮಣಿಪುರ್‌ʼ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿದ್ದಾರೆ. ಇದಕ್ಕೂ ಮುನ್ನ ಮೊನಾಲಿಸಾಳಿಗೆ ಹಲವು ಸಿನಿಮಾದಲ್ಲಿ ನಟಿಸುವಂತೆ ಆಫರ್‌ಗಳು ಬಂದಿದ್ದವು ಎನ್ನಲಾಗಿದೆ.ಇದನ್ನೂ ಓದಿ: ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

     

    View this post on Instagram

     

    A post shared by Sanoj Mishra (@sanojmishra)

    ಮೊನಾಲಿಸಾ ಮನೆಗೆ ನಿರ್ದೇಶಕರು ಭೇಟಿ ನೀಡಿರುವ ವಿಡಿಯೇವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ನಿರ್ದೇಶಕ ಸನೋಜ್‌ ಮಿಶ್ರಾ ಮಾತನಾಡಿ, ಮೊನಾಲಿಸಾ ಕುಟುಂಬದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮೊನಾಲಿಸಾ ಕುಟುಂಬದವರು ಮುಗ್ಧ ಮನಸ್ಸಿನವರು. ಸಿನಿಮಾದಲ್ಲಿ ನಟಿಸಲು ಆಕೆ ಹಾಗೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಮೊನಾಲಿಸಾ ಹಾಟ್‌ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಕೆಂಪು ಬಣ್ಣದ ಒನ್‌ಪೀಸ್‌ನಲ್ಲಿ ಕಾಣಿಸಿಕೊಂಡಿದ್ದ ಮೊನಾಲಿಸಾಳ ಸಂಪೂರ್ಣ ಲುಕ್‌ ಬದಲಾಗಿದ್ದು, ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ವಿಡಿಯೋ ಮಾಡಲಾಗಿತ್ತು.ಇದನ್ನೂ ಓದಿ: ವೈರಲ್ ಆಗಿದ್ದ ಸುಂದರ ಕಣ್ಣಿನ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

     

  • ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

    ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

    ನವದೆಹಲಿ: ‌ಮಹಾಕುಂಭಮೇಳದಲ್ಲಿ (Mahakumbhamela) ತನ್ನ ಕಣ್ಣಿನ ಮೂಲಕ ಎಲ್ಲರ ನಿದ್ದೆಗೆಡಿಸಿದ್ದ ಮೊನಲಿಸಾಳ (Monalisa) ಹಾಟ್‌ ಸಾಂಗ್‌ ರಿಲೀಸ್‌ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಉತ್ತರ ಪ್ರದೇಶದ (Uttara Pradesh) ಪ್ರಯಾಗ್‌ರಾಜ್‌ದಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್‌ ಆಗಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಳು.ಇದನ್ನೂ ಓದಿ: ಶೂಟಿಂಗ್‌ ಮುಗಿಸಿದ ದುಷ್ಯಂತ್‌, ಆಶಿಕಾ ನಟನೆಯ ‘ಗತವೈಭವ’ ಸಿನಿಮಾ

    ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೊನಾಲಿಸಾ ಹಾಟ್‌ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಕೆಂಪು ಬಣ್ಣದ ಒನ್‌ಪೀಸ್‌ನಲ್ಲಿ ಕಾಣಿಸಿಕೊಂಡಿರುವ ಮೊನಾಲಿಸಾಳ ಸಂಪೂರ್ಣ ಲುಕ್‌ ಬದಲಾಗಿದ್ದು, ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ವಿಡಿಯೋ ಇದಾಗಿದೆ.

     

    View this post on Instagram

     

    A post shared by ni8.out9⭐Star (@ni8.out9)

    ವೈರಲ್‌ ಆಗಿರುವ ವಿಡಿಯೋದಿಂದಾಗಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಿದಾಡುತ್ತಿರುವ ವಿಡಿಯೋಗೆ ಹಲವರು ಕಮೆಂಟ್‌ ಮಾಡಿದ್ದು, ಎಡಿಟ್‌ ಮಾಡಿರುವವರ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಕುಂಭಮೇಳದಿಂದ ವಾಪಸ್ ಆಗುವಾಗ ರಸ್ತೆ ಅಪಘಾತ – ಮೈಸೂರಿನ ಇಬ್ಬರು ದುರ್ಮರಣ

     

  • ವೈರಲ್ ಆಗಿದ್ದ ಸುಂದರ ಕಣ್ಣಿನ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

    ವೈರಲ್ ಆಗಿದ್ದ ಸುಂದರ ಕಣ್ಣಿನ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (MahaKumbhamela) ಸುಂದರ ಕಣ್ಣಿನ ಮೊನಾಲಿಸಾ ಎಂಬ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದಳು. ಆದರೆ ಸದ್ಯ ಇದೀಗ ಆಕೆ ಕುಂಭಮೇಳದಿಂದ ಹೊರನಡೆದಿದ್ದಾಳೆ.

    ಹೌದು, ಜ.13ರಿಂದ ಪ್ರಾರಂಭವಾಗಿರುವ ಮಹಾಕುಂಭಮೇಳದಲ್ಲಿ ದೇಶ- ವಿದೇಶದಿಂದ ಕೋಟ್ಯಂತರ ಜನರು ಬರುತ್ತಿದ್ದಾರೆ. ಜೊತೆಗೆ ಕುಂಭಮೇಳದಲ್ಲಿ ವಿಭಿನ್ನ ರೀತಿಯಲ್ಲಿ ಹಲವರು ಗುರುತಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಳು.ಇದನ್ನೂ ಓದಿ: ನೆಲಮಂಗಲದಲ್ಲಿ ಸರಣಿ ಅಪಘಾತ – ಕಾರು ಲಾರಿಯ ಕೆಳಗೆ ಸಿಲುಕಿದ್ರೂ ಪವಾಡ ರೀತಿಯಲ್ಲಿ ಚಾಲಕ ಪಾರು

    ಮೂಲತಃ ಇಂದೋರ್‌ನವಳಾದ ಈಕೆಯ ಹೆಸರು ಮೊನಾಲಿಸಾ ಭೋಸ್ಲೆ, ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಳು. ತನ್ನ ಸುಂದರ ಕಣ್ಣು, ನಗು ಹಾಗೂ ಮುಗ್ಧ ಸ್ವಭಾವವದಿಂದ ಎಲ್ಲರ ಹೃದಯ ಕದ್ದಿದ್ದಳು. ಇದರಿಂದ ರಾತ್ರೋರಾತ್ರಿ ಫೇಮಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಆಕೆಯೊಂದಿಗಿನ ಸೆಲ್ಫಿ, ಅವಳ ವಿಡಿಯೋಗಳು ಹರಿದಾಡುತ್ತಿದ್ದವು.

    ಇದನ್ನು ಕಂಡ ಆಕೆಯ ತಂದೆ ಬೇಸರಗೊಂಡಿದ್ದು, ರುದ್ರಾಕ್ಷಿ ಮಾರಾಟದಲ್ಲಿ ಕುಸಿತವಾಗಿದೆ. ಇನ್ನೂ ಇಂಟರ್ನೆಟ್‌ನಲ್ಲಿ ಮಗಳ ವಿಡಿಯೋಗಳೇ ಹರಿದಾಡುತ್ತಿದೆ ಎಂದು ಆಕೆಯನ್ನು ಇಂದೋರ್‌ಗೆ ಕಳಿಸಿದ್ದಾರೆ.ಇದನ್ನೂ ಓದಿ: 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

     

  • ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದಲ್ಲಿ ಧ್ಯಾನ್ ಮತ್ತು ಸದಾ ನಟಿಸಿದ್ದ ಸೂಪರ್ ಹಿಟ್ ‘ಮೊನಾಲಿಸಾ’ (Monalisa) ಚಿತ್ರ ತೆರೆಕಂಡು ಇಪ್ಪತ್ತು ವರ್ಷಗಳಾಗಿದೆ. ಚಿತ್ರತಂಡದ ಸದಸ್ಯರೊಡನೆ ಕೇಕ್ ಕಟ್ ಮಾಡುವ ಮೂಲಕ ‘ಮೊನಾಲಿಸಾ’ ಚಿತ್ರದ 20 ವರ್ಷಗಳ ಸಂಭ್ರಮವನ್ನು ಆಚರಿಸಲಾಯಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ಧ್ಯಾನ್ (Dhyan), ನಾಯಕಿ ಸದಾ (Sadha), ನಟ ಶರಣ್, ಸಂಭಾಷಣೆ ಬರೆದಿದ್ದ ಬಿ.ಎ.ಮಧು, ಸ್ಥಿರ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಡಿಸೈನರ್ ಮಣಿ ಸೇರಿದಂತೆ ಮೊನಾಲಿಸಾ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಈ ಸಂಭ್ರಮದ ಸಂಧರ್ಭದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಮಗ ಸಮರ್ಜಿತ್ ಲಂಕೇಶ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ‘ಗೌರಿ’ ಚಿತ್ರದ ಮುದ್ದಾದ ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ‘ಗೌರಿ’ ಹಾಡನ್ನು ಬಿಡುಗಡೆ ಮಾಡಿದರು. ಇಂದಿರಾ ಲಂಕೇಶ್ ಅವರು ಉಪಸ್ಥಿತರಿದ್ದರು. ಈ ಹಾಡನ್ನು ಇಂದ್ರಜಿತ್ ಅವರ ಸಹೋದರಿ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಮದ್ದಾದ ಹಾಡನ್ನು ಮೊನಾಲಿಸಾ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ ‘ಗೌರಿ’ ಚಿತ್ರದ ಜೋಡಿ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ (Saanya Iyer) ಸೇರಿ ಬಿಡುಗಡೆ ಮಾಡಿದರು. ‘ಗೌರಿ’ ಹಾಡನ್ನು ಕೆ.ಕಲ್ಯಾಣ್ ಹಾಗೂ ‘ಮುದ್ದಾದ’ ಹಾಡನ್ನು ಕವಿರಾಜ್ ಬರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಇದನ್ನೂ ಓದಿ:ಜುಲೈ19ರಂದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆ-ದುಬೈನಲ್ಲಿ ಪ್ರೀಮಿಯರ್ ಶೋಗೆ ಮೆಚ್ಚುಗೆ

    ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ ಅವರು, ಸಂಗೀತ ಎಂದರೆ ಸಿನಿಮಾ. ಸಿನಿಮಾ ಎಂದರೆ ಸಂಗೀತ. ಸಂಗೀತವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲು ಅಸಾಧ್ಯ. ಸ್ಟೈಲೀಶ್ ಚಿತ್ರಗಳಿಗೆ ಹೆಸರಾದ ಇಂದ್ರಜಿತ್ ಅವರು ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದಲ್ಲೇ ಮಗನನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸುತ್ತಿದ್ದಾರೆ. ಇಂದು ನನ್ನಿಂದ ಬಿಡುಗಡೆಯಾದ ಹಾಡನ್ನು ಗೌರಿ ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. ‘ಗೌರಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮಾತನಾಡಿ, ‘ಗೌರಿ’ ಚಿತ್ರದಲ್ಲಿ ಏಳು ಹಾಡುಗಳಿದೆ. ಇದೊಂದು ಸಂಗೀತ ಪ್ರಧಾನ ಚಿತ್ರವಾಗಿರುವುದರಿಂದ ಹಂಸಲೇಖ ಅವರಿಂದಲೇ ಹಾಡು ಬಿಡುಗಡೆ ಮಾಡಿಸಬೇಕೆಂಬ ಹಂಬಲ ನನ್ನಗಿತ್ತು. ಹಾಡು ಬಿಡುಗಡೆ ಮಾಡಿಕೊಟ್ಟ ಅವರಿಗೆ ವಂದನೆ. ಇಂದು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ‘ಮುದ್ದಾದ’ ಹಾಡನ್ನು ಕವಿರಾಜ್ ಅವರು ಬರೆದಿದ್ದು, ನಿಹಾಲ್ ತವ್ರು ಹಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಮತ್ತೊಂದು ಹಾಡನ್ನು ಕೆ.ಕಲ್ಯಾಣ್ ಅವರು ಬರೆದಿದ್ದು, ಆ ಹಾಡನ್ನು ನನ್ನ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಣೆ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಗಂಗಾಧರ್ ಮೈಸೂರು ಭಾಗದ ವಿತರಕರು. ಮೈಸೂರು ಒಂದನ್ನು ಬಿಟ್ಟು ವಿಶಾಲ ಕರ್ನಾಟಕಕ್ಕೆ ಜಯಣ್ಣ ಫಿಲಂಸ್ ಅವರು ವಿತರಣೆ ಮಾಡುತ್ತಿದ್ದಾರೆ. ಡಬ್ಬಿಂಗ್ ರೈಟ್ಸ್ ಕೂಡ ಮಾರಾಟವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಮೂಲಕ ನಮ್ಮ ಚಿತ್ರ ಗೆದ್ದಿದೆ. ಇನ್ನೇನಿದ್ದರೂ ನಿರ್ದೇಶಕನಾಗಿ ನಾನು ಗೆಲ್ಲಬೇಕು ಎಂದರು.

    ನನ್ನ ಬಹು ದಿನಗಳ ಕನಸು ನನಸ್ಸಾಗುವ ಸಮಯ ಸಮೀಪಿಸಿದೆ. ಮೊದಲು ನಾನು ನನ್ನ ಅಪ್ಪನಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎಂದರು ನಾಯಕ ಸಮರ್ಜಿತ್ ಲಂಕೇಶ್. ಇಷ್ಟು ದಿಗ್ಗಜ್ಜರ ನಡುವೆ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದು ಖುಷಿಯಾಗಿದೆ ಎಂದರು ನಾಯಕಿ ಸಾನ್ಯಾ ಅಯ್ಯರ್. ‘ಗೌರಿ’ ಚಿತ್ರದ ಛಾಯಾಗ್ರಾಹಕ ಕೆ.ಕೆ, ಗೀತರಚನೆ ಮಾಡಿರುವ ಕೆ.ಕಲ್ಯಾಣ್, ಕವಿರಾಜ್ ಚಿತ್ರದ ಕುರಿತು ಮಾತನಾಡಿದರು.

    ‘ಮೊನಾಲಿಸಾ’ ಚಿತ್ರದ ಬಗ್ಗೆ ನಾಯಕ ಧ್ಯಾನ್, ನಾಯಕಿ ಸದಾ, ಸಂಭಾಷಣೆ ಬರೆದಿರುವ ಬಿ.ಎ.ಮಧು ಮುಂತಾದವರು ಅನುಭವಗಳನ್ನು ಹಂಚಿಕೊಂಡರು.

  • ನಟಿಯ ಬಾತ್ ಟಬ್ ವಿಡಿಯೋ ವೈರಲ್

    ನಟಿಯ ಬಾತ್ ಟಬ್ ವಿಡಿಯೋ ವೈರಲ್

    ಮುಂಬೈ: ನಟಿ ಮೊನಾಲಿಸಾ ಬಾತ್ ಟಬ್ ನಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗ ವೈರಲ್ ಆಗಿದೆ.

    ನಟಿ ಮೊನಾಲಿಸಾ ಅವರು ತಮ್ಮ ಬಾತ್ ಟಬ್ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮೊನಾಲಿಸಾ ಅವರು ಬಾತ್ ಟಬ್ ನಲ್ಲಿ ಇರುವುದನ್ನು ಕಾಣಬಹುದಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದ್ದು, ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ.

    ನಟಿ ಮೊನಾಲಿಸಾ ಅವರು ಬೋಜ್ಪುರಿ ಸಿನಿಮಾದಿಂದ ಹಿಡಿದು ಟಿವಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ಇವರು ತಮ್ಮ ಫಿಗರ್ ಮೈಂಟೇನ್ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮೊನಾಲಿಸಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಆಗಾಗ ತಮ್ಮ ಹಾಟ್ ಆಂಡ್ ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

    ಸದ್ಯಕ್ಕೆ ನಟಿ ಮೊನಾಲಿಸಾ ಅವರು ‘ನಜರ್’ ಟಿವಿ ಶೋನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಮಾಟಗಾತಿಯಾಗಿ ಮಾಡುತ್ತಿದ್ದು, ಜನರಿಗೆ ಹತ್ತಿರದ ಪಾತ್ರವಾಗಿದೆ. ಅನೇಕರು ಈ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಈಗಾಗಲೇ ಮೊನಾಲಿಸಾ ಅವರು ಬೋಜ್ಪುರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೊನಾಲಿಸಾ ಅವರು ಅಪಾರ ಪ್ರಮಾಣದ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Boi9lPSBtYG/?taken-by=aslimonalisa