Tag: ಮೊಟ್ಟೆ ಪ್ರಕರಣ

  • ಆಗಸ್ಟ್‌ 26ಕ್ಕೆ ಮಡಿಕೇರಿ ಚಲೋ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಆಗಸ್ಟ್‌ 26ಕ್ಕೆ ಮಡಿಕೇರಿ ಚಲೋ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಬೆಂಗಳೂರು: ಆಗಸ್ಟ್‌ 26ಕ್ಕೆ ಕರೆ ನೀಡಿದ್ದ ಮಡಿಕೇರಿ ಚಲೋ ನಡೆಸುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿ ನಾನು ಕಾನೂನು ಉಲ್ಲಂಘನೆ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

    ತಮ್ಮ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಡಿಕೇರಿ ಚಲೋ ಮಾಡಲು ಜಿಲ್ಲಾಧಿಕಾರಿ, ಎಸ್‌ಪಿ ಅನುಮತಿ ಕೊಟ್ಟಿಲ್ಲ. ಈ ಸಂಬಂಧ ಪಕ್ಷದ ಶಾಸಕರು, ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಮಡಿಕೇರಿ ಚಲೋ ಮುಂದೂಡುತ್ತೇವೆ. ಕಾನೂನು ಉಲ್ಲಂಘನೆ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಡಿಕೇರಿ ಚಲೋಗೆ ನಿಷೇಧಾಜ್ಞೆ ಅಡ್ಡಿ – ಕಾಂಗ್ರೆಸ್‌ ಮುಂದಿನ ನಡೆ ಏನು?

    ಅತಿವೃಷ್ಟಿ ಹಾನಿ ಪರಿಶೀಲನೆಗೆ ಕೊಡಗಿಗೆ ಹೋಗಿದ್ದಾಗ ಕೆಲವರು ಕೋಳಿ ಮೊಟ್ಟೆ ಎಸೆದರು. ಆಗ ಪೊಲೀಸರು ಮಾತ್ರ ಸುಮ್ಮನೆ ನಿಂತಿದ್ದರು, ಏನೂ ಮಾಡಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ ಮಾಡಿದ್ರೆ ಹೊರತು ಬಿಜೆಪಿ, ಭಜರಂಗದಳ ಕಾರ್ಯಕರ್ತರ ಮೇಲೆ ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕೊಡಗಿಗೆ ಬರಲಿ ನಾವು ನೋಡ್ಕೋತೀವಿ ಅಂತಾ ಬೋಪಯ್ಯ ಹೇಳ್ತಾರೆ. ನಾವೇನು ಸ್ವಾತಂತ್ರ್ಯ ಭಾರತದಲ್ಲಿ ಇದ್ದೇವಾ? ನನಗೆ ಸವಾಲು ಹಾಕ್ತಾರೆ ಇವರು. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿ ಅವರ ಆಟಾಟೋಪದ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಬಿಜೆಪಿ ಜನಜಾಗೃತಿ ಸಮಾವೇಶ ಮಾಡಲು ಹೊರಟಿದ್ದು ದ್ವೇಷದಿಂದ. ನಾನು ಮಡಿಕೇರಿ ಚಲೋ ಘೋಷಣೆ ಮಾಡಿದ ಬಳಿಕ ಅದರ ಮಾರನೇ ದಿನ ಬಿಜೆಪಿ ಅವರು ಘೋಷಣೆ ಮಾಡಿದ್ರು. ನಮ್ಮ ಮೇಲೆ ಕುಟಿಲ ಪ್ರಯತ್ನ ಮಾಡಿ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ- ಸಿದ್ದರಾಮಯ್ಯಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್

    ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನೇ ಮುಂದಿಟ್ಟುಕೊಂಡು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ಸಿನ ʼಮಡಿಕೇರಿ ಚಲೋʼಗೆ ಕೊಡಗು ಜಿಲ್ಲಾಡಳಿತ ಬ್ರೇಕ್‌ ಹಾಕಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಡಳಿತ ಬುಧವಾರದಿಂದ ಶುಕ್ರವಾರದವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ಈ ಹಿನ್ನೆಲೆ ಮಡಿಕೇರಿ ಚಲೋ ನಡೆಸುವುದಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮೊಟ್ಟೆ ಎಸೆದವ ಕಾಂಗ್ರೆಸ್‌ ಕಾರ್ಯಕರ್ತ ಅಲ್ಲ; ನಾವು ಸಾಕ್ಷ್ಯ ಬಿಡುಗಡೆ ಮಾಡಿದ್ದೇವೆ – ಮಿಥುನ್‌ ಗೌಡ

    ಮೊಟ್ಟೆ ಎಸೆದವ ಕಾಂಗ್ರೆಸ್‌ ಕಾರ್ಯಕರ್ತ ಅಲ್ಲ; ನಾವು ಸಾಕ್ಷ್ಯ ಬಿಡುಗಡೆ ಮಾಡಿದ್ದೇವೆ – ಮಿಥುನ್‌ ಗೌಡ

    ಕೊಡಗು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದವ ಕಾಂಗ್ರೆಸ್‌ ಕಾರ್ಯಕರ್ತ ಅಲ್ಲ. ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ನಾವೀಗ ಬಿಡುಗಡೆ ಮಾಡಿದ್ದೇವೆ ಎಂದು ಕೊಡಗು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ಗೌಡ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್‌ ಎಂಬಾತ ಮೊನ್ನೆ ಅರೆಸ್ಟ್ ಆದಾಗ ಬಿಜೆಪಿ ನಾಯಕರೇ ಅವನನ್ನು ಬಿಡಿಸಿದ್ದಾರೆ. ಈಗಲೂ ಕೂಡ ಅವನಿಗೆ ಜಾಮೀನು ಕೊಡಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ. ಅವನು ಕಾಂಗ್ರೆಸ್ ಕಾರ್ಯಕರ್ತ ಆಗಿದ್ದರೆ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?

    ಆತ ಸೋಮವಾರಪೇಟೆ ಮೂಲದವನಂತೆ. ನಾನೂ ಕೂಡ ಸೋಮವಾರಪೇಟೆಯವನು. ಎಂದೂ ಕೂಡ ಅವನು ನಮಗೆ ಕಂಡೇ ಇಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಸಾಕ್ಷಿ ಕೊಡಲಿ. ಸಾಕ್ಷಿ ನೀಡಿದರೆ ಅವನು ಕಾಂಗ್ರೆಸ್ ಕಾರ್ಯಕರ್ತ ಅಂತ ಒಪ್ಪಿಕೊಳ್ಳೋಕೆ ನಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.

    ಯಾವುದೋ ಒಂದು ಶಲ್ಯ ಹಾಕೊಂಡು ಫೋಟೋ ತೆಗೆಸಿಕೊಂಡ ತಕ್ಷಣ ಕಾಂಗ್ರೆಸ್ ಕಾರ್ಯಕರ್ತ ಆಗಲ್ಲ.‌ ಬಿಜೆಪಿ ಶಾಸಕರು ಅವನ ಹೆಗಲ ಮೇಲೆ ಕೈ ಹಾಕಿಕೊಂಡ ಫೋಟೋ ಇದೆ. ಸೋಮವಾರಪೇಟೆ ಭಾಗದ ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಸಂಪತ್ ಮಾಡ್ತಿದ್ದಾನೆ. ಶಾಸಕರ ಆಮಿಷಕ್ಕೆ ಒಳಗಾಗಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    ಬ್ರಿಟಿಷರ ಸಂತತಿಯೇ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು. ಆತ ಕಾಂಗ್ರೆಸ್‌ ಕಾರ್ಯಕರ್ತ ಅಲ್ಲ ಎಂದು ಮಿಥುನ್‌ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.

    ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಲ್ಲ, ಅವನ್ಯಾರು ಗೊತ್ತೇ ಇಲ್ಲ. ಮಡಿಕೇರಿಯ ಬಿಜೆಪಿ ಶಾಸಕರ ಜೊತೆ ಆತನ ಫೋಟೋ ಇದೆ. ಅದೇ ಹೇಳುತ್ತದೆ ಆತ ಬಿಜೆಪಿಯ ಕಾರ್ಯಕರ್ತ ಅಂತಾ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ಕುಶಾಲನಗರದಲ್ಲಿ ಆತ ಅರೆಸ್ಟ್ ಆದಾಗ ಜಾಮೀನು ಕೊಟ್ಟು ಬಿಡಿಸಿದ್ಯಾರು? ಅದನ್ನ ಬಿಜೆಪಿಯವರು ಮೊದಲು ಹೇಳಲಿ. 26ರಂದು ನಾವು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿಯೇ ಹಾಕುತ್ತೇವೆ. ಅವರೂ ಮಾಡಲಿ, ಕಾನೂನು ಸುವ್ಯವಸ್ಥೆಯನ್ನ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]