Tag: ಮೊಟ್ಟೆ ಆಲೂಗಡ್ಡೆ ಕಟ್ಲೆಟ್

  • ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    ಸಂಜೆ ಅಥವಾ ಟೀ ಟೈಮ್‌ಗೆ ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಅಂದ್ರೆ ಕಟ್ಲೆಟ್. ಆಲೂಗಡ್ಡೆ ಹಾಗೂ ಇತರ ತರಕಾರಿಗಳನ್ನು ಹೆಚ್ಚಾಗಿ ಕಟ್ಲೆಟ್‌ನಲ್ಲಿ ಬಳಸಲಾಗುತ್ತದೆ. ಯಾವಾಗಲೂ ಕೇವಲ ತರಕಾರಿಗಳನ್ನೇ ಬಳಸಿ ಕಟ್ಲೆಟ್ ಮಾಡಬೇಕೆಂದೇನಿಲ್ಲ. ನಾವಿಂದು ಬೇಯಿಸಿದ ಮೊಟ್ಟೆಯ ಕಟ್ಲೆಟ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಕೂಡಾ ಇದನ್ನು ಮನೆಯಲ್ಲಿ ಟ್ರೈ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 5
    ಬೇಯಿಸಿ ಕಿವುಚಿದ ಆಲೂಗಡ್ಡೆ – 3
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹಸಿ ಮೊಟ್ಟೆ – 1
    ಬ್ರೆಡ್ ಕ್ರಂಪ್ಸ್ ಅಥವಾ ರಸ್ಕ್ ಪೌಡರ್ – ಕೋಟಿಂಗ್‌ಗೆ
    ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಬೇಯಿಸಿ ಕಿವುಚಿದ ಆಲೂಗಡ್ಡೆ, ಈರುಳ್ಳಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬೇಯಿಸಿದ ಮೊಟ್ಟೆಗಳನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆ ಮಿಶ್ರಣವನ್ನು ಸುತ್ತಲೂ ಕೋಟ್ ಮಾಡಿ.
    * ಮೊಟ್ಟೆ ಸಂಪೂರ್ಣವಾಗಿ ಆಲೂಗಡ್ಡೆ ಮಿಶ್ರಣದಿಂದ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಈಗ ಇನ್ನೊಂದು ಬಟ್ಟಲಿನಲ್ಲಿ ಹಸಿ ಮೊಟ್ಟೆಯನ್ನು ಒಡೆದು ಹಾಕಿ, ಹಳದಿ ಹಾಗೂ ಬಿಳಿ ಭಾಗ ಕೂಡುವಂತೆ ಚೆನ್ನಾಗಿ ಮಿಕ್ಸ್ ಮಾಡಿ.

    * ಒಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಂಪ್ಸ್ ಅಥವಾ ರಸ್ಕ್ ಪೌಡರ್ ಅನ್ನು ಹರಡಿ ಇರಿಸಿರಿ.
    * ಈಗ ಆಲೂಗಡ್ಡೆ ಮಿಶ್ರಣದಿಂದ ಕೋಟ್ ಮಾಡಿದ ಮೊಟ್ಟೆಗಳನ್ನು ಒಂದೊಂದಾಗಿಯೇ ಹಸಿ ಮೊಟ್ಟೆಯಲ್ಲಿ ಅದ್ದಿ ಬಳಿಕ ಬ್ರೆಡ್ ಕ್ರಂಪ್ಸ್‌ನಲ್ಲಿ ಉರುಳಿಸಿ.
    * ಈಗ ಮೊಟ್ಟೆಗಳನ್ನು ಒಂದೊಂದಾಗಿಯೆ ಬಿಸಿ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ.
    * ಕಟ್ಲೆಟ್ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಈಗ ಗರಿಗರಿಯಾದ ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ತಯಾರಾಗಿದ್ದು, ಚಹಾದೊಂದಿಗೆ ಸ್ನ್ಯಾಕ್ಸ್ ಆಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]