Tag: ಮೊಟೊರೊಲಾ

  • ಮೊಟೋ ಜಿ9 ಟ್ರಿಪಲ್ ಕ್ಯಾಮೆರಾ ಬಿಡುಗಡೆ – ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಮೊಟೋ ಜಿ9 ಟ್ರಿಪಲ್ ಕ್ಯಾಮೆರಾ ಬಿಡುಗಡೆ – ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಮಾರುಕಟ್ಟೆಗೆ ಮೊಟೊರೊಲಾ ಕಂಪನಿಯ ಮೊಟೊ ಜಿ9 ಡ್ಯುಯಲ್ ಸಿಮ್ ಸ್ಮಾರ್ಟ್‍ಫೋನ್ ಬಿಡುಗಡೆಯಾಗಿದೆ. ಲೆನೆವೊ ಮಾಲೀಕತ್ವದ ಮೊಟೊರೊಲಾ ಹೊಸ ಹ್ಯಾಂಡ್‍ಸೆಟ್ ಮೊಟೊ ಜಿ8 ಅಪ್‍ಗ್ರೇಡೆಡ್ ವೆರಿಯೆಂಟ್ ಇದಾಗಿದೆ.

    ಮೊಟೊ ಜಿ9 ಟ್ರಿಪಲ್ ರಿಯರ್ ಕ್ಯಾಮೆರಾ, 6.5 ಇಂಚು ಡಿಸ್‍ಪ್ಲೇ, ವಾಟರ್ ರಿಪೈಲೆಂಟ್ ಸೇರಿದಂತೆ ಹಲವು ಫೀಚರ್ ಹೊಂದಿದೆ. ಮೊಟೊ ಜಿ9 ಸದ್ಯ ಮಾರುಕಟ್ಟೆಯಲ್ಲಿರುವ ರೆಡ್ಮಿ ನೋಟ್ 9ಪ್ರೊ, ಸ್ಯಾಮ್‍ಸಂಗ್ ಗೆಲ್ಯಾಕ್ಸಿ ಎಂ21 ಮತ್ತು ರಿಯಲ್ ಮಿ 6i ಜೊತೆ ಪೈಪೋಟಿ ನಡೆಸಲಿದೆ.

    4ಜಿಬಿ ರ‌್ಯಾಮ್ 64 ಜಿಬಿ ಆಂತರಿಕ ಮೆಮೊರಿಯ ಈ ಫೋನಿಗೆ 11,499 ರೂ. ದರವನ್ನು ನಿಗದಿ ಮಾಡಿದೆ. ನೀಲಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯ ಇರುವ ಈ ಫೋನ್ ಮೊದಲ ಫ್ಲ್ಯಾಶ್ ಸೇಲ್ ಆಗಸ್ಟ್ 31ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‍ಕಾರ್ಟ್ ನಲ್ಲಿ ಆರಂಭವಾಗಲಿದೆ.

    ಗುಣವೈಶಿಷ್ಟ್ಯ
    ಡಿಸ್‍ಪ್ಲೇ ಮತ್ತು ಬಾಡಿ: 165.21*75.73*9.18 ಮಿಲಿ ಮೀಟರ್ ಗಾತ್ರ, 200 ಗ್ರಾಂ ತೂಕ, ಹೈ ಬ್ರಿಡ್ ಡ್ಯೂಯಲ್ ಸಿಮ್, 6.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಇವ್ ಟಚ್‍ಸ್ಕ್ರೀನ್(720*1600 ಪಿಕ್ಸೆಲ್, 270 ಪಿಪಿಐ) 20:09 ಆಸ್ಪೆಕ್ ಅನುಪಾತ ಹೊಂದಿದೆ. ಸ್ಕ್ರೀನ್ ಟು ಬಾಡಿ ರೆಶಿಯೋ ಶೇ.87 ರಷ್ಟಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ
    ಆಂಡ್ರಾಯ್ಡ್ 10 ಓಎಸ್, ಕ್ವಾಲಕಂ ಸ್ನಾಪ್‍ಡ್ರಗನ್ 662 ಪ್ರೊಸೆಸರ್, 4ಜಿಬಿ ರ್ಯಾಮ್, 64 ಜಿಬಿ ಆಂತರಿಕ ಮೆಮೊರಿ. ಹೈ ಬ್ರಿಡ್ ಸಿಮ್ ಸ್ಲಾಟ್ ಕೊಟ್ಟಿರುವ ಕಾರಣ ಸಿಮ್ ಹಾಕುವ ಜಾಗದಲ್ಲಿ ಕಾರ್ಡ್ ಹಾಕಿದರೆ 512 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ 48 ಎಂಪಿ, ಎಫ್/1.7 ವೈಡ್ ಕ್ಯಾಮೆರಾ, 2 ಎಂಪಿ, ಎಫ್/2.4 ಇರುವ ಮ್ಯಾಕ್ರೋ, 2 ಎಂಪಿ ಎಫ್/2.4 ಇರುವ ಡೆಪ್ತ್ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿಗಾಗಿ 8 ಎಂಪಿ, ಎಫ್/2.0 ಇರುವ ಕ್ಯಾಮೆರಾವನ್ನು ನೀಡಲಾಗಿದೆ.

    ಆಟೋ ಸ್ಮೈಲ್ ಕ್ಯಾಪ್ಚರ್, ಹೆಚ್‍ಡಿಆರ್, ಫೇಸ್ ಬ್ಯೂಟಿ, ಮ್ಯಾನ್ಯುವಲ್ ಮೋಡ್ ಮತ್ತು ರಾ ಫೋಟೋ ಔಟ್‍ಪುಟ್ ಸೇರಿದಂತೆ ಮುಂತಾದ ಫೀಚರ್ಸ್ ಗಳಿವೆ.

    5.0 ಬ್ಲೂಟೂತ್, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ 5000 ಎಂಎಎಚ್ ಲಿಪೋ ಬ್ಯಾಟರಿ, 20 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಸಿಂಗಲ್ ಚಾರ್ಜ್ ನಲ್ಲಿ ಬ್ಯಾಟರಿ ಎರಡು ದಿನ ಬರಲಿದೆ. ಯುಎಸ್‍ಬಿ 2.0 ಟೈಪ್-ಸಿ ಮತ್ತು 3.5 ಎಂಎಂ ಹೆಡ್‍ಫೋನ್ ಜ್ಯಾಕ್.

  • ಮೊಟೊದ ನೂತನ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಮೊಟೊದ ನೂತನ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ಮೊಟೊ ಒನ್ ಪವರ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ಈ ಫೋನಿನಲ್ಲಿ ಸೆಲ್ಫಿಗಾಗಿ 12 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 16+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಕೇವಲ ಒಂದೇ ಒಂದು ಮಿಡ್‍ನೈಟ್ ಬ್ಲಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಅಕ್ಟೋಬರ್ 11ರಿಂದ ಮೊಟೊ ಹಬ್ ಹಾಗೂ ಫ್ಲಿಪ್‍ಕಾರ್ಟ್ ಆನ್‍ಲೈನ್ ಜಾಲತಾಣಗಳಲ್ಲಿ ಸಿಗಲಿದೆ.

    ಮೊಟೊ ಒನ್ ಪವರ್ ಫೋನಿನ ಗುಣವೈಶಿಷ್ಟ್ಯಗಳು:
    ಬೆಲೆ ಎಷ್ಟು?
    4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,999 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಭಾರತದಲ್ಲಿ ಒಂದೇ ಆವೃತ್ತಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    156 x 76 x 8.4 ಮಿ.ಮೀ., 205 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.2 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×2246 ಪಿಕ್ಸೆಲ್, 18.7:9 ಅನುಪಾತ 403 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಸ್ನಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೊ 509 ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿಯಾಗಿ 256 ಜಿಬಿ ವರೆಗೆ ವಿಸ್ತರಿಸಬಹುದು.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 12 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 16+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 5,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 15 ವೋಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

    ಫೋನ್ ಖರೀದಿಸಿದ್ರೆ ಲಾಭ ಏನು?
    15 ನಿಮಿಷದಲ್ಲಿ 6 ತಾಸಿನ ಬ್ಯಾಟರಿ ಚಾರ್ಜ್ ಆಗುತ್ತದೆ. ಗೂಗಲ್ ಡ್ರೈವ್‍ನಲ್ಲಿ ಅನಿಯಮಿತ ಸ್ಟೋರೆಜ್ ಮಾಡಬಹುದು (ಸದ್ಯ ಎಲ್ಲಾ ಸ್ಮಾರ್ಟ್ ಫೋನ್‍ಗಳಿಗೆ ಗೂಗಲ್ 15 ಜಿಬಿ ವರೆಗೆ ಮಾತ್ರ ಅವಕಾಶ ನೀಡಿದೆ. ಗೂಗಲ್ ಫೋಟೋ ಅನಿಯಮಿತ ಸ್ಟೋರೇಜ್ ಮಾಡಬಹುದು) ಮೊಟೊ ಒನ್ ಪವರ್ ಪ್ಯೂರ್ ಆಂಡ್ರಾಯ್ಡ್ ಓಎಸ್ ಆಗಿರುವುದರಿಂದ ಆಂಡ್ರಾಯ್ಡ್ ಬಿಡುಗಡೆ ಮಾಡುವ ಯಾವುದೇ ಅಪ್‍ಡೇಟ್‍ಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇತರೇ ಆಂಡ್ರಾಯ್ಡ್ ಫೋನ್ ಗಳಲ್ಲಿ ಆಂಡ್ರಾಯ್ಡ್ ಅಪ್‍ಡೇಟ್ ಕೂಡಲೇ ಸಿಗುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=AD-K7dmB68g

  • 5ಜಿ ಆವೃತ್ತಿಯ ಮೊಟೊರೊಲದ ನೂತನ ಜೆಡ್ 3 ಸ್ಮಾರ್ಟ್ ಫೋನ್ ಬಿಡುಗಡೆ

    5ಜಿ ಆವೃತ್ತಿಯ ಮೊಟೊರೊಲದ ನೂತನ ಜೆಡ್ 3 ಸ್ಮಾರ್ಟ್ ಫೋನ್ ಬಿಡುಗಡೆ

    – ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಲಿನೊವೋ ಒಡೆತನದ ಮೊಟೊರೊಲ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯು ತನ್ನ ನೂತನ ಜೆಡ್ 3, 5ಜಿ ಆವೃತ್ತಿಯ ನೂತನ ಸ್ಮಾಟ್ ಫೋನನ್ನು ಅಮೇರಿಕಾದ ಚಿಕಾಗೋದಲ್ಲಿ ಅನಾವರಣಗೊಳಿಸಿದೆ.

    ವಿಶ್ವದ ಹಳೆಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಮೊಟೊರೊಲಾ ಸದ್ಯ ಲಿನೊವೋ ಕಂಪೆನಿಯ ಒಡೆತನದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನೂತನ ಫೀಚರ್ ಹೊಂದಿರುವ ಮೊಟೊರೊಲಾ ಈಗ ತನ್ನ 5ಜಿ ಆವೃತ್ತಿಯ ನೂತನ ಮೊಟೊರೊಲಾ ಜೆಡ್ 3 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ಮೊಟೊರೊಲಾ ಜೆಡ್ 3, 5ಜಿ ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. 2019ರ ವೇಳೆಗೆ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರಲಿದೆ ಎನ್ನಲಾಗಿದೆ.

    ಬೆಲೆ ಎಷ್ಟು?
    4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನಿಗೆ ಅಮೆರಿಕಾದಲ್ಲಿ 480 ಡಾಲರ್ ನಿಗದಿಪಡಿಸಿದೆ. (ಅಂದಾಜು 32,000 ರೂಪಾಯಿ)

    ಜೆಡ್ 3 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 156.5 x 76.5 x 6.8 ಮಿ.ಮೀ., 156 ಗ್ರಾಂ ತೂಕ, 5ಜಿ ಆವೃತ್ತಿಯ ಸಿಂಗಲ್ ಸಿಮ್(ನ್ಯಾನೋ ಸಿಮ್) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.1 ಇಂಚಿನ ಸೂಪರ್ ಅಮಾಲಾಯಿಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×160 ಪಿಕ್ಸೆಲ್, 18:9 ಅನುಪಾತ 402ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8998 ಸ್ನ್ಯಾಪ್ ಡ್ರಾಗನ್ 835 ಆಕ್ಟಾ ಕೋರ್ ಪ್ರೊಸೆಸರ್ 2.35 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 540 ಗ್ರಾಫಿಕ್ಸ್ ಪ್ರೊಸೆಸರ್, 1 ಟಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್ ಲಾಕ್ ಹಾಗೂ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    https://www.youtube.com/watch?v=tWaGF1pz1uo&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.

    ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಆರಂಭವಾಗಲಿದೆ.

    5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 4ಜಿ ವೋಲ್ಟ್ ಗೆ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ. ಮೊಟೊರೊಲಾ ಮೊಬೈಲ್ ಕಂಪೆನಿಯನ್ನು ಈ ಹಿಂದೆ ಗೂಗಲ್ ಖರೀದಿಸಿತ್ತು. 2014ರಲ್ಲಿ ಗೂಗಲ್ ಮೊಟೊರೊಲಾವನ್ನು ಲೆನೊವೊ ಕಂಪೆನಿಗೆ ಮಾರಾಟ ಮಾಡಿತ್ತು.

    ಗೂಗಲ್ ಆಂಡ್ರಾಯ್ಡ್ ಅಪ್‍ಡೇಟ್ ಬಿಡುಗಡೆ ಮಾಡುವಾಗ ಎಲ್ಲ ಸ್ಮಾರ್ಟ್ ಫೋನ್ ಗಳಿಗೆ ಬೇಗನೇ ಆಪ್‍ಡೇಟ್ ಸಿಗುವುದಿಲ್ಲ. ಆದರೆ ಮೋಟೋ ಫೋನ್ ಗಳಲ್ಲಿ ಶುದ್ಧವಾಘಿರುವ ಆಂಡ್ರಾಯ್ಡ್ ಓಎಸ್ ಇರುವ ಕಾರಣ ಬೇಗನೇ ಆಪ್‍ಡೇಟ್ ಸಿಗುತ್ತದೆ.

    ಮೋಟೋ ಇ4 ಪ್ಲಸ್ ಗುಣವೈಶಿಷ್ಟ್ಯಗಳು

    ಬಾಡಿ ಮತ್ತು ಡಿಸ್ಪ್ಲೇ:
    155*77.5*9.6 ಮಿ.ಮೀ ಗಾತ್ರ, 198 ಗ್ರಾಂ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್, 720*1280 ಪಿಕ್ಸೆಲ್, 267 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3

    ಪ್ಲಾಟ್ ಫಾರಂ ಮತ್ತು ಮೊಮೊರಿ:
    ಆಂಡ್ರಾಯ್ಡ್ ನೂಗಟ್ ಓಎಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 ಕಾರ್ಟೆಕ್ಸ್ ಎ53 1.3 GHz  ಪ್ರೊಸೆಸರ್, ಮಾಲಿ ಟಿ720 ಗ್ರಾಫಿಕ್ಸ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ, 3ಜಿಬಿ ರಾಮ್, 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.

    ಕ್ಯಾಮೆರಾ, ಬ್ಯಾಟರಿ:
    13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಮೈಕ್ರೋ ಯುಎಸ್‍ಬಿ 2.0, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, 500 ಎಂಎಎಚ್ ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ.