Tag: ಮೊಘಲರು

  • NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ NCERT ತನ್ನ 8ನೇ ತರಗತಿ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದೆಹಲಿ ಸುಲ್ತಾನರ (Delhi Sultanate) ಕ್ರೌರ್ಯ ಮತ್ತು ಮೊಘಲರ ಧಾರ್ಮಿಕ ಅಸಹಿಷ್ಣುತೆಯನ್ನು ಒತ್ತಿಹೇಳುವ ಹೊಸ ವಿಷಯ ಸೇರಿಸಿದೆ.

    ಈ ಪರಿಷ್ಕರಣೆಯಿಂದ ಉಂಟಾಗಬಹುದಾದ ವಿವಾದವನ್ನು ತಡೆಯಲು ಒಂದು ಡಿಸ್ಕ್ಲೈಮರ್‌ನೊಂದಿಗೆ ಹೊರಡಿಸಿದ್ದು, ಇದರಲ್ಲಿ ಇತಿಹಾಸದ ವಿವರಣೆಯು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ರೂಪಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

    ಪರಿಷ್ಕೃತ ಪಠ್ಯಪುಸ್ತಕವು ದೆಹಲಿ ಸುಲ್ತಾನರ ಆಡಳಿತ (1206-1526) ಮತ್ತು ಮೊಘಲ್ ಸಾಮ್ರಾಜ್ಯದ (1526-1857) ಕಾಲಘಟ್ಟದಲ್ಲಿ (Mughal Periods) ಕಂಡುಬಂದ ಧಾರ್ಮಿಕ ಅಸಹಿಷ್ಣುತೆಯ ಕೆಲವು ಘಟನೆಗಳನ್ನು ಒಳಗೊಂಡಿದೆ. ಹೊಸ ಪಠ್ಯಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್‌ನನ್ನು ʻಕ್ರೂರ ವಿಜಯಶಾಲಿʼಅಂತ ವರ್ಣಿಸಿದ್ರೆ, ಅಕ್ಬರ್‌ನನ್ನು ʻಕ್ರೌರ್ಯ ಮತ್ತು ಸಹಿಷ್ಣತೆಯ ಏಕರೂಪʼ, ಔರಂಗಜೇಬ್ ತನ್ನ ಆಳ್ವಿಕೆಯಲ್ಲಿ ʻದೇವಾಲಯಗಳು ಮತ್ತು ಗುರುದ್ವಾರಗಳನ್ನು ಕೆಡವಿದ್ದಕ್ಕೆʼ ಹೆಸರುವಾಸಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

    NCERT ಈ ವಿಷಯವನ್ನು ಮಂಡಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದು, ಡಿಸ್ಕ್ಲೈಮರ್‌ನಲ್ಲಿ ಈ ವಿವರಣೆಯು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಒತ್ತಿಹೇಳಿದೆ. ಇದನ್ನೂ ಓದಿ: ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

  • ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

    ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

    ಶ್ರೀನಗರ: ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಲು ಮೊಘಲರೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯಗಳು ನಾಶವಾದವು ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿದರು. ಮೋಘಲರಿಂದಲೇ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರವನ್ನು ನಾಶ ಮಾಡಲು ಬಿಜೆಪಿ ಬಯಸಿದೆ. ಇದರಿಂದಾಗಿ ಅವರು ಎಲ್ಲಾ ಮಸೀದಿಗಳ ಹಿಂದೆ ಬಿದ್ದಿದ್ದಾರೆ. ಇದೀಗ ಜ್ಞಾನವಾಪಿ ಮಸೀದಿಯ ಹಿಂದೆ ಬಿದ್ದಿದ್ದಾರೆ. ನಾವು ಎಲ್ಲಿ ಪೂಜಿಸುತ್ತೇವೆಯೋ ಅಲ್ಲಿ ನಮ್ಮ ದೇವರು ಇದ್ದಾನೆ. ನೀವು ನೋಡುತ್ತಿರುವ ಎಲ್ಲಾ ಮಸೀದಗಳ ಪಟ್ಟಿಯನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.

    ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಟೀಕಿಸಿದ ಅವರು, ಇತ್ತೀಚೆಗೆ ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿಕೊಂಡಿರುವ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಹೆಚ್ಚಿದೆ. ಅವರು ನೈಜ ಸಮಸ್ಯೆಗಳಿಂದ ದೂರವಿರಲು ಈ ಹಿಂದೂ, ಮುಸ್ಲಿಂ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಘಟನೆ ಏನು?: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಶಿವಲಿಂಗ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಮಸೀದಿಯ ಬಾವಿಯೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ ಹೊಂದಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ತಿಳಿಸಿದ್ದಾರೆ.

    ಇತ್ತೀಚೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಬಗ್ಗೆ ದೇಶದ ಜನರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ಈ ವರೆಗೆ ಮಸೀದಿಯಲ್ಲಿ ಶೇ.65 ರಷ್ಟು ಸರ್ವೇ ಕಾರ್ಯ ಮುಗಿದಿದೆ. ಮಂಗಳವಾರ ನ್ಯಾಯಾಲಯಕ್ಕೆ ಸರ್ವೇ ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ವರದಿಗಳು ತಿಳಿಸಿದ್ದು, ಮಸೀದಿಯ ವೀಡಿಯೋ ಚಿತ್ರೀಕರಣ ಸಂಪೂರ್ಣಗೊಂಡಿದೆ. ಮಸೀದಿಯಲ್ಲಿ ಇದ್ದ ನಂದಿಯ ಎದುರಿನ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ವಿಷ್ಣು ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ