ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕೋಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೆನೇ ಇರುತ್ತಿದ್ದೆ, ಈಗ ನಾನು ಏನು ಮಾಡಲಿ. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ, ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ, ನನ್ನ ಯಾಕೆ ಬಿಟ್ಟು ಹೋದೆ ಎಂದು ನಟಿ ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಅಂದಹಾಗೆ, ‘ಜಾಕ್‌ಪಾಟ್’ ಸಿನಿಮಾದ ಮೂಲಕ ಶುಭಾ ಪೂಂಜಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊಗ್ಗಿನ ಮನಸ್ಸು, ಕಂಠೀರವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದ್ದಾರೆ.
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಹೊಸ ಫೋಟೋಶೂಟ್‌ನಲ್ಲಿ ಬಂಗಾರದ ಗೊಂಬೆಯಂತೆ ಮಿಂಚಿದ್ದಾರೆ. ಗೋಲ್ಡನ್ ಬೆಡಗಿ ಆಗಿರುವ ಯಶ್ (Yash) ಪತ್ನಿಯ ನಯಾ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಾಧಿಕಾ ನ್ಯೂ ಫೋಟೋಶೂಟ್ ಸದ್ಯ ಭಾರೀ ಸದ್ದು ಮಾಡುತ್ತಿದೆ.
ರಾಧಿಕಾರ ಹುಟ್ಟುಹಬ್ಬ ಈ ಬಾರಿ ಅದ್ಧೂರಿಯಾಗಿ ಜರುಗಿದೆ. ಅದಾದ ಬಳಿಕ ಇದೀಗ ಗೋಲ್ಡನ್ ಕಲರ್ ಸೀರೆಯುಟ್ಟು ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ‘ಮೊಗ್ಗಿನ ಮನಸ್ಸು’ ಚಿತ್ರದ ನಟಿಯ ಲುಕ್ ನೋಡ್ತಿದ್ದಂತೆ ಚೆಂದಕ್ಕಿಂತ ಚೆಂದ ನೀನೇ ಸುಂದರ ಎಂದು ಅವರ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಕಡೆಯದಾಗಿ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ನಟಿಸಿದ್ದರು. ಯಶ್ ಜೊತೆ ದಾಂಪತ್ಯ ಬದುಕಿನಲ್ಲಿ ನಟಿ ಖುಷಿಯಾಗಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಹೊರಬಂದ್ಮೇಲೆ ಸೈಲೆಂಟ್ ಆದ ಸೋನು ಶ್ರೀನಿವಾಸ್ ಗೌಡ
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಫೋಟೋಶೂಟ್‌ನಲ್ಲಿ ರಾಧಿಕಾ ಸಖತ್ ಫಿಟ್ ಆಗಿರೋದನ್ನು ನೋಡಿ, ಮತ್ತೆ ಸ್ಯಾಂಡಲ್‌ವುಡ್‌ಗೆ ಬರಲು ತಯಾರಿ ಮಾಡಿಕೊಳ್ತಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸ್ಯಾಂಡಲ್ವುಡ್ ಬ್ಯೂಟಿ ರಾಧಿಕಾ ಪಂಡಿತ್ (Radhika Pandit) ಅವರಿಗೆ ಇಂದು ಜನ್ಮ ದಿನದ ಸಂಭ್ರಮವಾಗಿದ್ದು, ಇದೀಗ ಅಭಿಮಾನಿಗಳಿಂದ ನಟಿಗೆ ಬಿಗ್ ಸರ್ಪ್ರೈಸ್‌ವೊಂದು ಸಿಕ್ಕಿದೆ. ಈ ವರ್ಷ ಅಭಿಮಾನಿಗಳಿಗೆ ನಟಿ ಸಮಯ ನೀಡಿದ್ದು, ಅವರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಕೊವೀಡ್ ನಂತರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಶನ್‌ಗೆ ನಟಿ ಬ್ರೇಕ್ ಹಾಕಿದ್ದರು. ಈ ಬಾರಿ ಅಭಿಮಾನಿಗಳ ಆಸೆಯಂತೆ ತಮ್ಮ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಫ್ಯಾನ್ಸ್ ತಂದಿರುವ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರತಿಯೊಬ್ಬರಿಗೂ ಸೆಲ್ಫಿಗೆ ಪೋಸ್ ಕೊಟ್ಟು ನಟಿ ಖುಷಿಪಡಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ನಡೆಗೆ ಮುನಿಸಿಕೊಂಡ ಸಮಂತಾ
‘ಮೊಗ್ಗಿನ ಮನಸ್ಸು’ (Moggina Manasu) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್, ಸಾಗರ್, ದೊಡ್ಮನೆ ಹುಡುಗ, ಅದ್ಧೂರಿ, ಡ್ರಾಮಾ, ಕಡ್ಡಿಪುಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಕಡೆಯದಾಗಿ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ನಟಿಸಿದ್ದರು.
ಬೇಡಿಕೆಯಿರುವಾಗಲೇ ನಟಿ ಯಶ್ (Yash) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಬಳಿಕವೂ ಸಿನಿಮಾ ಮಾಡಿ ರಾಧಿಕಾ ಗಮನ ಸೆಳೆದರು. ಇದನ್ನೂ ಓದಿ:ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್
ಇದೀಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗೋದಕ್ಕೆ ನಟಿ ಸಕಲ ಸಿದ್ಧತೆ ನಡೆಸಿದ್ದಾರೆ. ಹೊಸ ಬಗೆಯ ಕಥೆ ಕೇಳ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಂತೂರ್ ಮಮ್ಮಿ ಆಗಿರುವ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ತಾರೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡ್ತಿದ್ದಾರೆ. ಸದ್ಯ 40ನೇ ವರ್ಷಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾದಿಂದ ದೂರವಿದ್ರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರಾಧಿಕಾ ರೆಡಿಯಾಗಿದ್ದಾರೆ. ಯಶ್ ಪತ್ನಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಫೆಬ್ರವರಿ ಪ್ರೇಮಿಗಳು ಆಚರಿಸುವ ತಿಂಗಳು. ಪ್ರೇಮಿಗಳ ದಿನವನ್ನು ಆಚರಿಸಲು ರಾಧಿಕಾ ರೆಡಿಯಾದಂತಿದೆ. ‘ಹಲೋ ಟು ಮಂತ್ ಆಫ್ ಲವ್’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಫೆಬ್ರವರಿ ತಿಂಗಳನ್ನು ನಟಿ ವೆಲ್‌ಕಮ್ ಮಾಡಿದ್ದಾರೆ.
ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಕುಳಿತು ರಾಧಿಕಾ ಪಂಡಿತ್ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ರಾಧಿಕಾರ ಸ್ಟೈಲೀಶ್ ಲುಕ್, ಮುಖದಲ್ಲಿರುವ ಮಂದಹಾಸ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್
ನಟ ಯಶ್ (Yash) ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ರಾಧಿಕಾ ನಟನೆಯಿಂದ ದೂರ ಉಳಿದ್ದಾರೆ.
ಕೆಲ ನೆಟ್ಟಿಗರು ರಾಧಿಕಾ ಹೊಸ ಫೋಟೋಗೆ ‘ಟಾಕ್ಸಿಕ್’ (Toxic Film) ಬಗ್ಗೆ ಅಪ್‌ಡೇಟ್ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ರೆ, ಮತ್ತೆ ಯಾವಾಗ ನೀವು ಸಿನಿಮಾ ಮಾಡ್ತಿರಾ? ನಾವು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಅವರು ಯಶ್ (Yash) ಜೊತೆಗಿನ ದಾಂಪತ್ಯ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ 5 ವರ್ಷದ ಹಿಂದಿನ ಪೋಸ್ಟ್ ಹಂಚಿಕೊಂಡು, ತಾವು ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿರೋದರ ಬಗ್ಗೆ ಮೆಲುಕು ಹಾಕಿದ್ದಾರೆ. ಈ ಮೂಲಕ ಮತ್ತೆ ನಟನೆಗೆ, ಯಶ್ ಪತ್ನಿ ಕಮ್ ಬ್ಯಾಕ್ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಯಶ್- ರಾಧಿಕಾ ಪಂಡಿತ್ ಅವರಿಗೆ ಜುಲೈ 18 ತುಂಬಾನೇ ಸ್ಪೆಷಲ್ ದಿನ. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಚಂಚಲ ಎಂಬ ಪಾತ್ರದ ಮೊಗ್ಗಿನ ಮನಸ್ಸಿನ ಹುಡುಗಿಯಾಗಿ ರಾಧಿಕಾ ಪಂಡಿತ್ ಮಿಂಚಿದ್ದರು. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ಆಮೇಲೆ ಆಗಿದೆಲ್ಲಾ ಇತಿಹಾಸ. ಚಂದನವನದ ಸಿಂಡ್ರೆಲಾ ಆಗಿ ನಟಿ ಸೌಂಡ್ ಮಾಡಿದ್ರು. ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದು ಈಗ 15 ವರ್ಷಗಳಾಗಿದೆ.
ಜುಲೈ 18, 2008 ರಾಧಿಕಾ ಪಂಡಿತ್ (Radhika Pandit) ಆಗಿ ನಿಮಗೆಲ್ಲ ಪರಿಚಿತಳಾದೆ, ನನಗೆ ಚಿತ್ರಪ್ರಪಂಚದ ಪರಿಚಯವಾಯ್ತು. ನಟಿಯರ ಜೀವನ ಚಿಕ್ಕದು ಎನ್ನುತ್ತಾರೆ ಆದರೆ 10 ವರ್ಷ ಎಂಬುದು ಸಣ್ಣದಲ್ಲ. 10 ವರ್ಷ ಹೋರಾಡಿ ಉಳಿದದ್ದೇನೂ ಅಲ್ಲ ಬದಲಿಗೆ ಗಟ್ಟಿಯಾಗಿ ನೆಲೆಗೊಂಡಿದ್ದು. ಈ ಹತ್ತು ವರ್ಷಗಳಲ್ಲಿ ನಿನ್ನ ಸಾಧನೆ ಏನು? ಎಂದು ನೀವು ಕೇಳಬಹುದು, ನಿಮ್ಮನ್ನು (ಅಭಿಮಾನಿಗಳು) ಗಳಿಸಿರುವುದೇ ನನ್ನ ಸಾಧನೆ. ಇಂದಿಗೂ ನನ್ನನ್ನು ಪ್ರೀತಿಸುವ ಅಭಿಮಾನಿಗಳನ್ನು ಪಡೆದಿದ್ದೇನೆ. ಗೌರವಿಸುವ ಚಿತ್ರೋದ್ಯಮವನ್ನು ಪಡೆದಿದ್ದೇನೆ ಎಂದು ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದಿದ್ದರು.
ಮುಂದುವರೆದು, ಈ ಪಯಣ ಸುಲಭದ್ದೇನು ಆಗಿರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದರಲ್ಲಿ ನನ್ನ ಸುತ್ತಲಿನವರ ಶ್ರಮ ದೊಡ್ಡದು. ಅದರಲ್ಲಿಯೂ ನನ್ನ ಕುಟುಂಬದವರ ಶ್ರಮ ದೊಡ್ಡದು. ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು, ಮಾರ್ಗದರ್ಶನ ಮಾಡಿದರು. ಎಲ್ಲ ರೀತಿಯ ಋಣಾತ್ಮಕತೆಗಳಿಂದಲೂ ನನ್ನನ್ನು ಕಾಪಾಡಿದರು. ನನ್ನ ಪ್ರತಿದಿನದ ಶೂಟಿಂಗ್‌ನಲ್ಲೂ ನನ್ನ ತಾಯಿ ಜೊತೆಯಾಗಿರುತ್ತಿದ್ದರು, ಅಂತೆಯೇ ನನ್ನ ಸಹಾಯಕ ಶಂಕರ್ ಸಹ. ಶಂಕರ್ ನನ್ನ ಸಹಾಯಕನಾಗಿ ಕೆಲಸ ಆರಂಭಿಸಿ ಹತ್ತು ವರ್ಷಗಳಾಗಿವೆ ಎಂದು ತಮ್ಮ ಸಿನಿಮಾ ಪಯಣಕ್ಕೆ ಸಹಾಯ ಮಾಡಿದ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಹೇಳಿದ್ದರು. ಇದನ್ನೂ ಓದಿ:ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್
ತಮ್ಮ ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ಇದು ಸಿನಿಮಾ ರಂಗದ ನಿವೃತ್ತಿ ಭಾಷಣವಲ್ಲ, ಪಿಕ್ಚರ್ ಇನ್ನೂ ಇದೆ ಎಂದಿದ್ದರು. ಆ ಮೂಲಕ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.
ಕೆಲ ತಿಂಗಳುಗಳ ಹಿಂದೆ ರಾಧಿಕಾ ಪಂಡಿತ್ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡಿತ್ತು. ನಟಿ ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಲಾಗಿತ್ತು. ಪತಿ ಯಶ್, ಯಶಸ್ಸಿಗೆ ರಾಧಿಕಾ ಪಾತ್ರ ಕೂಡ ತುಂಬಾನೇ ಇದೆ. ಕೆಜಿಎಫ್ 2 (KGF2) ನಂತರ ಯಶ್ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಅವರ ಮುಂದಿನ ಸಿನಿಮಾದಲ್ಲಿ ರಾಧಿಕಾ ಕೂಡ ಸಾಥ್ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
ಸ್ಯಾಂಡಲ್ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸುವ ಮೂಲಕ ತಮ್ಮ ಕುಟುಂಬದ ಜೊತೆ ನಟಿ ಸಂಭ್ರಮಿಸಿದ್ದಾರೆ. ಇದೀಗ ಬರ್ತ್‌ಡೇ (Birthday) ಸುಂದರ ಕ್ಷಣಗಳನ್ನ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ ಮಂಗಳವಾರ (ಫೆ.7)ರಂದು ಇದ್ದ ಕಾರಣ, ಒಂದು ದಿನ ಮುಂಚಿತವಾಗಿಯೇ ತಾವು ದೂರದ ಊರಿಗೆ ಹೋಗುತ್ತಿರುವ ಕಾರಣ ತಿಳಿಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೇಳಿರುವ ಪ್ರಶ್ನೆಗೆ ಉತ್ತರಿಸುವ ಮೂಲಕ ಶುಭಹಾರೈಸಿದವರಿಗೆ ಬರ್ತ್‌ಡೇಗೆ ಧನ್ಯವಾದ ತಿಳಿಸಿದ್ದರು. ಇದನ್ನೂ ಓದಿ: `ಪುಷ್ಪ 2′ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಸಾಯಿ ಪಲ್ಲವಿ
39ನೇ ವರ್ಷದ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿ ತಮ್ಮ ಕುಟುಂಬದ ಜೊತೆ ಆಚರಿಸಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಪತಿ ಯಶ್ (Yash) ಮತ್ತು ಮುದ್ದಾದ ಮಕ್ಕಳ ಜೊತೆ ರಾಧಿಕಾ ತಂದೆ-ತಾಯಿ (Parents) ಕೂಡ ಬರ್ತ್‌ಡೇ ಖುಷಿಯಲ್ಲಿ ಭಾಗಿಯಾಗಿದ್ದಾರೆ.
ಮೊದಲ ಫೋಟೋದಲ್ಲಿ ನಟಿ ಕೇಕ್ ಕತ್ತರಿಸುತ್ತಿದ್ದಾರೆ. 2ನೇ ಫೋಟೋದಲ್ಲಿ ಯಶ್- ರಾಧಿಕಾ ಕೇಕ್ ತಿನ್ನುತ್ತಿದ್ದಾರೆ. ಕಡೆಯ ಫೋಟೋದಲ್ಲಿ ತನ್ನ ಇಡೀ ಕುಟುಂಬದ ಜೊತೆ ರಾಧಿಕಾ ಸಂಭ್ರಮಿಸಿದ್ದಾರೆ.
ರಾಧಿಕಾ ಪಂಡಿತ್ ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಅಪ್‌ಡೇಟ್ ನೀಡಲಿದ್ದಾರೆ. ಹೊಸ ಕಥೆ, ಪಾತ್ರದ ಮೂಲಕ ತೆರೆಗೆ ಅಬ್ಬರಿಸಲಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರಿಗೂ ಜುಲೈ 18 ವಿಶೇಷ ದಿನವಾಗಿದೆ. ಯಾಕೆಂದರೆ ಈ ಜೋಡಿ ಚಂದನವನಕ್ಕೆ ಕಾಲಿಟ್ಟು ಬರೋಬ್ಬರಿ 12 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಯಶ್ ಕೂಡ ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಒಟ್ಟಿಗೆ ಅಭಿನಯಿಸಿದ ಸಿನಿಮಾ ‘ಮೊಗ್ಗಿನ ಮನಸ್ಸು’. ಈ ಸಿನಿಮಾ 2008 ಜುಲೈ 18 ರಂದು ತೆರೆಕಂಡಿತ್ತು. ಈ ಸಿನಿಮಾದಲ್ಲಿ ಇಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾ ಯಶಸ್ಸು ಕೂಡ ಕಂಡಿತ್ತು. ಹೀಗಾಗಿ ಈ ಸಿನಿಮಾ ರಿಲೀಸ್ ಆಗಿ 12 ವರ್ಷಗಳು ಕಳೆದಿದೆ. ಈ ಮೂಲಕ ರಾಕಿಂಗ್ ಜೋಡಿ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ.
ನಟ ಯಶ್ ಕೂಡ ಈ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ಮೊಗ್ಗಿನ ಮನಸ್ಸು’ ಸಿನಿಮಾ ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ. ರಾಧಿಕಾ ಮತ್ತು ನನ್ನನ್ನು ಒಟ್ಟಿಗೆ ಪರಿಚಯಿಸಿದ ಸಿನಿಮಾ ಇದು. ಅಲ್ಲದೇ ಈ ಚಿತ್ರ ನಮ್ಮ ಸಿನಿಮಾ ವೃತ್ತಿಜೀವನವನ್ನು ಮಾತ್ರ ಪ್ರಾರಂಭಿಸುತ್ತಿಲ್ಲ ಎಂದು ನನಗೆ ತಿಳಿದಿರಲಿಲ್ಲ” ಎಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
“ಇಂತಹ ವಿಶೇಷ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಸರ್ ಮತ್ತು ಗಂಗಾಧರ್ ಅವರಿಗೆ ಧನ್ಯವಾದಗಳು. ಚಂದ್ರು ಸರ್, ನನ್ನನ್ನು ನಂಬಿ ಸಿನಿಮಾ ಮಾಡಿದ್ದಕ್ಕಾಗಿ ನಮ್ಮ ನಿರ್ದೇಶಕರಾದ ಶಶಾಂಕ್ ಸರ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಕಿಂಗ್ ಜೋಡಿ ‘ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅದರಂತಯೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಮತ್ತೆ ಈ ರಾಕಿಂಗ್ ಜೋಡಿ ಎರಡ್ಮೂರು ಸಿನಿಮಾದಲ್ಲಿ ಒಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಂತರ ಯಶ್ ಮತ್ತು ರಾಧಿಕಾ ಪಂಡಿತ್ 2016ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.