Tag: ಮೊಗ್ಗಿನ ಮನಸು

  • ‘ಮೊಗ್ಗಿನ ಮನಸು’ ಚಿತ್ರಕ್ಕೆ 16 ವರ್ಷಗಳ ಸಂಭ್ರಮ- ಸೀಕ್ವೆಲ್ ಬಗ್ಗೆ ಸಿಕ್ತು ಗುಡ್ ನ್ಯೂಸ್

    ‘ಮೊಗ್ಗಿನ ಮನಸು’ ಚಿತ್ರಕ್ಕೆ 16 ವರ್ಷಗಳ ಸಂಭ್ರಮ- ಸೀಕ್ವೆಲ್ ಬಗ್ಗೆ ಸಿಕ್ತು ಗುಡ್ ನ್ಯೂಸ್

    ಶ್ (Actor Yash) ಮತ್ತು ರಾಧಿಕಾ ಪಂಡಿತ್ (Radhika Pandit) ನಟನೆಯ ‘ಮೊಗ್ಗಿನ ಮನಸು’ (Moggina Manasu) ಸಿನಿಮಾ ರಿಲೀಸ್ ಆಗಿ 16 ವರ್ಷಗಳು ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಈಗ ಸೀಕ್ವೆಲ್ ಮಾಡುವ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಇದನ್ನೂ ಓದಿ:ದರ್ಶನ್ ಭೇಟಿಗೆ ಜೈಲಿಗೆ ಬಂದ ತರುಣ್ ಸುಧೀರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ

    ಚಂದನವನದ ರೀಲ್ & ರಿಯಲ್ ಜೋಡಿ ಯಶ್ ಮತ್ತು ರಾಧಿಕಾ ನಟಿಸಿರುವ ‘ಮೊಗ್ಗಿನ ಮನಸು’ ಸಿನಿಮಾ ರಿಲೀಸ್ ಆಗಿ 16 ವರ್ಷಗಳು ಕಳೆದಿದೆ. ಈ ಸಂಭ್ರಮದ ನಡುವೆ ಡೈರೆಕ್ಟರ್ ಶಶಾಂಕ್ (Director Shashank) ಕಡೆಯಿಂದ ಸಿಹಿಸುದ್ದಿ ಸಿಕ್ಕಿದೆ. ‘ಮೊಗ್ಗಿನ ಮನಸು’ ಪಾರ್ಟ್ 2 ಸಿನಿಮಾ ಬರಲಿದೆ. ಮುಂದಿನ ದಿನಗಳಲ್ಲಿ ಈ ಪ್ಲ್ಯಾನ್ ಇದೆ ಎಂದು ತಿಳಿಸಿದ್ದಾರೆ.

    ಅಂದಹಾಗೆ, 2008ರ ಜುಲೈ 18ರಂದು ‘ಮೊಗ್ಗಿನ ಮನಸು’ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಮತ್ತು ರಾಧಿಕಾರ ಮುದ್ದಾದ ಲವ್ ಸ್ಟೋರಿ ಮತ್ತು ಶುಭಾ ಪೂಂಜಾ ಅಭಿನಯ ಫ್ಯಾನ್ಸ್‌ಗೆ ಇಷ್ಟವಾಗಿತ್ತು.

    ‘ನನಗೂ ಒಬ್ಬ ಗೆಳೆಯ ಬೇಕು’ ಎಂದು ನೃತ್ಯ ಮಾಡಿದ್ದ ರಾಧಿಕಾ ಮತ್ತು ಶುಭಾಗೆ ಪಡ್ಡೆಹುಡುಗರ ಫಿದಾ ಆಗಿದ್ದರು. ಇಂದಿಗೂ ಅಭಿಮಾನಿಗಳಿಗೆ ‘ಮೊಗ್ಗಿನ ಮನಸು’ ಫೇವರೇಟ್ ಸಿನಿಮಾ ಆಗಿದೆ. ಸದ್ಯ ಈ ಸಿನಿಮಾದ ಸೀಕ್ವೆಲ್‌ ಮಾಡುವ ಸುದ್ದಿ ತಿಳಿದು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • 14 ವರ್ಷದ ಥ್ರೋಬ್ಯಾಕ್‌ ಫೋಟೋ ಶೇರ್ ಮಾಡಿ – ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ಸಿಂಡ್ರೆಲಾ

    14 ವರ್ಷದ ಥ್ರೋಬ್ಯಾಕ್‌ ಫೋಟೋ ಶೇರ್ ಮಾಡಿ – ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ಸಿಂಡ್ರೆಲಾ

    ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಮಿಸೆಸ್ ಯಶ್ ಆಗಿ ಸಂಸಾರಿಕ ಜೀವನವನ್ನು ಫುಲ್ ಖುಷಿಯಿಂದ ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ, ತಮ್ಮ ಮುದ್ದು ಮಕ್ಕಳ ವೀಡಿಯೋ ಹಾಕಿ ಅಭಿಮಾನಿಗಳಿಗೆ ಫ್ಯಾಮಿಲಿ ಅಪ್ಡೇಟ್ ಕೊಡುತ್ತಿದ್ದ ರಾಧಿಕಾ, ಇಂದು ತಮ್ಮ 14 ವರ್ಷದ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ರಾಧಿಕಾ ತಮ್ಮ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳಲ್ಲಿ ನೀವು ನೋಡುತ್ತಿರುವ ಈ ಇಬ್ಬರು 14 ವರ್ಷಗಳ ಹಿಂದೆ ಈ ಚಿತ್ರದ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. ವೈಯಕ್ತಿಕವಾಗಿ, ಈ ಚಿತ್ರ ನನಗೆ ತುಂಬಾ ನೀಡಿದೆ. ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಜೀವನ ಸಂಗಾತಿ ಎಲ್ಲವನ್ನು ನೀಡಿದೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್

    ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ವಿಶೇಷವಾಗಿ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಸುಂದರ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ‘ಮೊಗ್ಗಿನ ಮನಸು’ ಸದಾ ವಿಶೇಷವಾಗಿರುತ್ತದೆ ಎಂದು ಬರೆದು ಯಶ್ ಮತ್ತು ಅವರ ಹಳೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ರಾಧಿಕಾ ಶೇರ್ ಮಾಡಿರುವ ಫೋಟೋ ಅವರ ಮತ್ತು ಯಶ್ ಮೊದಲ ಸಿನಿಮಾ ‘ಮೊಗ್ಗಿನ ಮನಸು’ ದೃಶ್ಯದ್ದಾಗಿದೆ. ಈ ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಸಿನಿಮಾರಂಗಕ್ಕೆ ಕಾಲಿಟ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಈ ಸಿನಿಮಾ ಮೂಲಕ ಬಂದ ರಾಧಿಕಾ ಸಿನಿ ಜರ್ನಿ ಯಶಸ್ಸು ಕಂಡಿದ್ದು, ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇಬ್ಬರ ಜೋಡಿ ಚಂದನವನದಲ್ಲಿ ಸೂಪರ್ ಮತ್ತು ಪವರ್ ಫುಲ್ ಜೋಡಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೊಗ್ಗಿನ ಮನಸು ಚಿತ್ರಕ್ಕೂ ಲವ್ 360 ಸಿನಿಮಾಗೂ ಇರೋ ಸಂಬಂಧ ಏನು?

    ಮೊಗ್ಗಿನ ಮನಸು ಚಿತ್ರಕ್ಕೂ ಲವ್ 360 ಸಿನಿಮಾಗೂ ಇರೋ ಸಂಬಂಧ ಏನು?

    ನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ ಸದ್ದಿಲ್ಲದೇ ತಮ್ಮ ‘ಲವ್ 360’ ಹೊಸ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಕ್ಯೂಟ್ ಆಗಿರೋ ಲವ್ ಸ್ಟೋರಿಯನ್ನು ಸಿನಿಮಾವಾಗಿಸಿರುವ ಅವರು ಈ ಸಿನಿಮಾದಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಸಿನಿಮಾದ ನಾಯಕ ತನ್ನ ಹುಡುಗಿಗಾಗಿ 360 ಡಿಗ್ರಿ ಯೋಚಿಸುವಂತಹ ಕಥಾ ಹಂದರವನ್ನು ಈ ಚಿತ್ರ ಹೊಂದಿದ್ದು, ಇಬ್ಬರು ಹೊಸ ಕಲಾವಿದರು ಈ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ. ಇದನ್ನೂ ಓದಿ : ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

    ಶಶಾಂಕ್ ಅಂದಾಕ್ಷಣ ಥಟ್ಟನೆ ನೆನಪಾಗುವ ಚಿತ್ರ ಮೊಗ್ಗಿನ ಮನಸು. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿದ ಚಿತ್ರವಿದು. ಶತದಿನೋತ್ಸವ ಕಂಡ ಎವರ್ ಗ್ರೀನ್ ಸಿನಿಮಾ. ಅನೇಕ ಕಲಾವಿದರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿದ ಹೆಗ್ಗಳಿಕೆ ಈ ಚಿತ್ರದ್ದು. ಈ “ಮೊಗ್ಗಿನ ಮನಸು” ಚಿತ್ರಕ್ಕೂ ಶಶಾಂಕ್ ಅವರು ಈಗ ನಿರ್ದೇಶನ ಮಾಡಿರುವ “ಲವ್ 360” ಚಿತ್ರಕ್ಕೂ ಸಂಬಂಧವಿದೆ. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

    ಯಶ್-ರಾಧಿಕಾಗೆ ಬ್ರೇಕ್ ನೀಡಿದ್ದ ಶಶಾಂಕ್

    ಮೊಗ್ಗಿನ ಮನಸು ಸಿನಿಮಾದ ಮೂಲಕ ಯಶ್ ಮತ್ತು ರಾಧಿಕಾ ಪಂಡಿತ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದವರು ಶಶಾಂಕ್. ಈ ಸಿನಿಮಾದಿಂದಾಗಿ ಈ ಇಬ್ಬರೂ ಕಲಾವಿದರು ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಶಶಾಂಕ್ ಅವರ ಮೊದಲ ಸಿನಿಮಾ ಸಿಕ್ಸರ್ ಕೂಡ ಪ್ರಜ್ವಲ್ ದೇವರಾಜ್ ಬಹುದೊಡ್ಡ ಬ್ರೇಕ್ ನೀಡಿತ್ತು. ತಮ್ಮ ಮೊದಲೆರಡು ಚಿತ್ರಗಳಲ್ಲಿ ಹೊಸ ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿರುವ ಶಶಾಂಕ್, ಲವ್ 360 ಚಿತ್ರದಲ್ಲೂ ಹೊಸ ನಾಯಕ ನಾಯಕಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ಈ ಸಿನಿಮಾದ ಮೂಲಕ ಪ್ರವೀಣ್ ಎಂಬ ಹೊಸ ಕಲಾವಿದ ಸ್ಯಾಂಡಲ್ ವುಡ್ ಗೆ ಪರಿಚಯ ಆಗುತ್ತಿದ್ದಾರೆ. ವೈದ್ಯಕೀಯ ಪದವಿ ಮುಗಿಸಿರುವ ಪ್ರವೀಣ್ ಗೆ ಲವ್ 360 ಚೊಚ್ಚಲು ಸಿನಿಮಾ. ಅಲ್ಲದೇ, ನಾಯಕಿಯಾಗಿ ರಚನಾ ಇಂದರ್ ಅವರಿಗೆ ಇದು ಹೊಸ ಸಿನಿಮಾ. ಹಾಗಾಗಿ ಮೊಗ್ಗಿನ ಮನಸು ಸಿನಿಮಾದಷ್ಟೇ ಈ ಚಿತ್ರ ಕೂಡ ಫ್ರೆಶ್ ಆಗಿ ಇರಲಿದೆಯಂತೆ.  ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

    ಮೊಗ್ಗಿನ ಮನಸು ಚಿತ್ರೀಕರಣದ ನೆನಪು

    ಸಿನಿಮಾದ ಕಥೆ ನಡೆಯುವುದು ಗೋಕರ್ಣದಲ್ಲಿ. ಹಾಗಾಗಿ ಆ ಭಾಗದಲ್ಲೇ ಅತೀ ಹೆಚ್ಚು ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ ಶಶಾಂಕ್. ಮಂಗಳೂರು, ಕಾಸರಗೋಡು, ಬೆಂಗಳೂರು ಸೇರಿದಂತೆ ಹಲವು ಕಡೆ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಮೊಗ್ಗಿನ ಮನಸು ಸಿನಿಮಾದ ಶೂಟಿಂಗ್ ಕೂಡ ಇದೇ ಭಾಗದಲ್ಲೇ ನಡೆದಿರುವುದು ವಿಶೇಷ. “ಲವ್ 360 ಸಿನಿಮಾದ ಶೂಟಿಂಗ್ ಗಾಗಿ ಕರಾವಳಿಯ ಅನೇಕ ಭಾಗಗಳನ್ನು ಸುತ್ತಾಡಿದೆ.

    ದಶಕದ ಹಿಂದೆ ಈ ಜಾಗಗಳಲ್ಲೇ ನಾನು ಮೊಗ್ಗಿನ ಮನಸು ಚಿತ್ರೀಕರಣ ಮಾಡಿದ್ದೆ. ಹಲವು ನೆನಪುಗಳು ಮತ್ತೆ ಮರುಕಳಿಸಿದೆವು. ಹೊಸ ಸಿನಿಮಾ ಕ್ಯೂಟ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಹಾಗಾಗಿ ಕರಾವಳಿಯ ಪ್ರದೇಶವೇ ಶೂಟಿಂಗ್ ಗೆ ಬೇಕಾಗಿತ್ತು” ಎನ್ನುತ್ತಾರೆ ಶಶಾಂಕ್.

  • ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ!

    ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ!

    – ಮತ್ತೆ ಅರಳಿತು ಮೊಗ್ಗಿನ ಮನಸು!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಮರೆಯಾದಂತಿದ್ದ ಮೊಗ್ಗಿನ ಮನಸಿನ ಹುಡುಗಿ ಮತ್ತೆ ಬಂದಿದ್ದಾರೆ. ಮದುವೆಯ ಬಳಿಕ ಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾದಂತಿದ್ದ ರಾಧಿಕಾ ಪಂಡಿತ್ ಮತ್ತೆ ನಾಯಕಿಯಾಗಿ ಮರಳಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ರಾಧಿಕಾ ನಾಯಕಿಯಾಗಲಿದ್ದಾರೆಂಬುದು ಲೇಟೆಸ್ಟ್ ಸುದ್ದಿ!

    ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸಾಗಿಲ್ಲ. ಆದರೆ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಮಾತ್ರ ಜಾಹೀರಾಗಿದೆ. ಇದೀಗ ಈ ಚಿತ್ರಕ್ಕೆ ಸಕಲ ತಯಾರಿಗಳೂ ಭರದಿಂದ ಸಾಗುತ್ತಿವೆ. ಇನ್ನೇನು ತಿಂಗಳ ಅಂತರದಲ್ಲಿಯೇ ಚಿತ್ರೀಕರಣ ಶುರು ಮಾಡಲಿರೋ ಈ ಚಿತ್ರವನ್ನು ಈ ವರ್ಷದ ಕಡೆಯ ಹೊತ್ತಿಗೆ ತೆರೆ ಕಾಣಿಸುವ ಗುರಿಯೂ ಚಿತ್ರ ತಂಡಕ್ಕಿದೆ.

    ಅಲ್ಲಿಗೆ ತಮ್ಮಿಷ್ಟದ ತಾರೆ ಮದುವೆಯಾದ ನಂತರ ಚಿತ್ರ ರಂಗದಿಂದ ದೂರಾಗುತ್ತಾರೆಂಬ ಕಸಿವಿಸಿಯಿಂದಿದ್ದ ರಾಧಿಕಾ ಪಂಡಿತ್ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಗೊಂಡಿದ್ದಾರೆ. ರಾಧಿಕಾ ನಟಿಸುತ್ತಿರೋ ಈ ಚಿತ್ರದ ಕಥೆಯೇನೆಂಬುದರಿಂದ ಹಿಡಿದು ಎಲ್ಲ ವಿಚಾರಗಳನ್ನೂ ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಆದರೆ ರಾಧಿಕಾ ಅಳೆದೂ ತೂಗಿ ಈ ಕಥೆಯ ಕಸುವು ನೋಡಿಯೇ ಒಪ್ಪಿಕೊಂಡಿದ್ದಾರೆಂಬುದು ಮಾತ್ರ ಸತ್ಯ. ಯಾಕೆಂದರೆ ಮದುವೆ ಗೌಜಿನ ನಂತರದಲ್ಲಿ ರಾಧಿಕಾ ಮುಂದೆ ಸಾಕಷ್ಟು ಕಥೆಗಳು ಬಂದಿದ್ದವಂತೆ. ಆದರೆ ಅದ್ಯಾವುದನ್ನೂ ಒಪ್ಪಿಕೊಳ್ಳದ ರಾಧಿಕಾ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂದರೆ ಕಥೆ ಚೆನ್ನಾಗಿದೆ ಅಂತಲೇ ಅರ್ಥ.

    ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಧಿಕಾ ಆ ನಂತರದಲ್ಲಿ ನಂಬರ್ ಒನ್ ನಟಿಯಾಗಿ ಹೊರ ಹೊಮ್ಮಿದ್ದು ತನ್ನ ನಟನೆಯ ಕಾರಣದಿಂದಲೇ. ವಿವಾದ ತಗಾದೆಗಳಿಂದ ಸದಾ ದೂರವಿರುವ ರಾಧಿಕಾ ಅನೂಪ್ ಭಂಡಾರಿಗೆ ಜೊತೆಯಾಗಿ ರೀ ಎಂಟ್ರಿ ಕೊಟ್ಟಿರೋದು ಸಹಜವಾಗಿಯೇ ಚಿತ್ರ ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.