Tag: ಮೊಗವೀರಪಟ್ಟಣ

  • ಉಳ್ಳಾಲದ ಮೊಗವೀರಪಟ್ಟಣದಲ್ಲಿ ಇಬ್ಬರು ಯುವಕರು ಸಮುದ್ರಪಾಲು

    ಉಳ್ಳಾಲದ ಮೊಗವೀರಪಟ್ಟಣದಲ್ಲಿ ಇಬ್ಬರು ಯುವಕರು ಸಮುದ್ರಪಾಲು

    ಮಂಗಳೂರು: ಸಮುದ್ರಕ್ಕಿಳಿದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಮೊಗವೀರಪಟ್ಟಣ ಸಮುದ್ರ ಕಿನಾರೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಹತ್ತು ಮಂದಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ 19 ವರ್ಷದ ಶಾರೂಖ್ ಮತ್ತು 20 ವರ್ಷದ ಹಯಾಝ್ ಸಮುದ್ರಕ್ಕಿಳಿದಿದ್ದರು. ಸಮುದ್ರದ ಅಬ್ಬರದ ಅಲೆಗಳ ಜೊತೆ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಇಬ್ಬರು ಯುವಕರು ಕೊಚ್ಚಿ ಹೋಗಿದ್ದಾರೆ.

    ಮಳೆಗಾಲದ ಸಂದರ್ಭವಾಗಿರೋದ್ರಿಂದ ಸಮುದ್ರದ ಅಬ್ಬರ ಕೂಡಾ ಜಾಸ್ತಿಯಾಗಿದೆ. ಹಾಗಾಗಿ ಮೃತ ದೇಹದ ಶೋಧ ಕಾರ್ಯಕ್ಕೂ ತೊಡಕು ಉಂಟಾಗುತ್ತಿದೆ. ಮಳೆಗಾಲದಲ್ಲಿ ಸಮುದ್ರ ರಭಸದಿಂದ ಕೂಡಿದ್ರೂ, ಎಚ್ಚರಿಕೆಯ ನಿಯಮ ಮೀರಿ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದು ವಾರದೊಳಗೆ ಐದು ಮಂದಿ ಸಮುದ್ರಪಾಲಾಗಿ ಸಾವನ್ನಪ್ಪಿರೋದು ದುರಂತ.