Tag: ಮೈ ಭೀ ಚೌಕಿದಾರ್

  • ಚಾಯ್‍ವಾಲಾ ಮೋದಿ ಚೌಕಿದಾರ್ ಆಗಿದ್ದು ಯಾವಾಗ: ಮಾಯಾವತಿ ಪ್ರಶ್ನೆ

    ಚಾಯ್‍ವಾಲಾ ಮೋದಿ ಚೌಕಿದಾರ್ ಆಗಿದ್ದು ಯಾವಾಗ: ಮಾಯಾವತಿ ಪ್ರಶ್ನೆ

    ನವದೆಹಲಿ: ಚಾಯ್‍ವಾಲಾ ಮೋದಿ ಚೌಕಿದಾರ್ ಆಗಿದ್ದು ಯಾವಾಗ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ಆರಂಭಿಸಿದರುವ `ಚೌಕಿದಾರ್’ ಅಭಿಯಾನದ ಕುರಿತು ಟ್ವಿಟ್ಟರ್ ನಲ್ಲಿ ಮಾಯಾವತಿ ಲೇವಡಿ ಮಾಡಿದ್ದಾರೆ. ಬಿಎಸ್‍ಪಿ ನಾಯಕಿಯ ಹೇಳಿಕೆಗೆ ಅನೇಕ ಬಿಜೆಪಿ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

    ಮಾಯಾವತಿ ಟ್ವೀಟ್‍ನಲ್ಲಿ ಏನಿದೆ?:
    ಬಿಜೆಪಿ ಚೌಕಿದಾರ್ ಎಂಬ ಅಭಿಯಾನ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ತಮ್ಮ ಟ್ವೀಟರ್ ಖಾತೆಯ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಯ್‍ವಾಲಾ ಆಗಿದ್ದರು. ಆದರೆ ಈ ಬಾರಿ ಚೌಕಿದಾರ್ ಆಗಿ ಬದಲಾಗಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಭಾರತವು ಇಂತಹ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ಮೋದಿ ಅವರು ಮಾರ್ಚ್ 16ರಂದು `ನಾನೂ ಕೂಡ ಚೌಕಿದಾರ’ #MainBhiChowkidar ಎಂದು ಹೇಳಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರಿನ ಮುಂದೆ `ಚೌಕಿದಾರ’ ಎಂದು ಸೇರಿಸಿಕೊಂಡಿದ್ದರು. ಮೋದಿ ಹೆಸರು ಬದಲಾಯಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ `ನಾನೂ ಕೂಡ ಚೌಕಿದಾರ’ #MainBhiChowkidar ಆಂದೋಲನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಶ್ವದಲ್ಲಿ ಟ್ರೆಂಡ್ ಆಗಿತ್ತು. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರು ಚೌಕಿದಾರರೇ ಎಂದು ಮೋದಿ ಹೇಳಿದ್ದರು.