Tag: ಮೈಸೂರೂ

  • ದೇಶದಲ್ಲೇ ಮೊದಲು – ಕ್ವಾರಂಟೈನ್ ಮನೆಯೊಳಗೆ ಔಷಧಿ ಸಿಂಪಡಣೆ

    ದೇಶದಲ್ಲೇ ಮೊದಲು – ಕ್ವಾರಂಟೈನ್ ಮನೆಯೊಳಗೆ ಔಷಧಿ ಸಿಂಪಡಣೆ

    – ಇತ್ತ ಟೊಮೆಟೊವನ್ನ ರಸ್ತೆಗೆ ಚೆಲ್ಲಿದ ರೈತ

    ಮೈಸೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೋಂ ಕ್ವಾರಂಟೈನ್ ಆದವರ ಮನೆಗೆ ಪಾಲಿಕೆಯಿಂದ ಔಷಧಿ ಸಿಂಪಡಣೆ ಇಂದಿನಿಂದ ಆರಂಭವಾಗಿದೆ.

    ಮೈಸೂರು ಮಹಾನಗರ ಪಾಲಿಕೆಯಿಂದ ವೈರಾಣು ನಾಶಕ್ಕೆ ಔಷಧಿ ಸಿಂಪಡಣೆ ಆಗುತ್ತಿದ್ದು, ಹೈಡ್ರೋಜನ್ ಪೆರಾಕ್ಸೈಡ್ ವಿತ್ ಸಿಲ್ವರ್ ನ್ರೈಟೆಡ್ ಮಿಶ್ರಿತ ಔಷಧಿ ಇದ್ದಾಗಿದೆ. ಕುಡಿಯುವ ಮಿನರಲ್ ವಾಟರ್ ಜೊತೆ ಔಷಧಿ ಮಿಶ್ರಣ ಮಾಡಲಾಗುತ್ತದೆ.

    ಮೈಸೂರು ಪಾಲಿಕೆ ಪೌರಕಾರ್ಮಿಕರಿಂದ ಹೋಂ ಕ್ವಾರಂಟೈನ್ ಆದವರ ಮನೆಗೆ ಇದನ್ನು ಸಿಂಪಡಣೆ ಮಾಡಲಿದ್ದಾರೆ. ಹೋಂ ಕ್ವಾರಂಟೈನ್ ಆದವರ ಮನೆಗಳು ಮುಗಿದ ಮೇಲೆ ವಾರ್ಡಿನಲ್ಲಿರುವ ಮನೆಗಳಿಗೆ ಸಿಂಪಡಣೆ ಮಾಡಲಾಗುತ್ತದೆ.

    ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ರೈತರು ಬೆಳೆದಿರುವ ಬೆಳೆಯ ಬೆಲೆ ಕುಸಿತವಾಗಿದೆ. ಟೊಮೆಟೊ ಬೆಲೆ ಭಾರೀ ಕುಸಿತವಾಗಿದ್ದು, ಕೆಜಿಗೆ 50 ಪೈಸೆ, ಒಂದು ರೂಪಾಯಿ ಆಗಿದೆ. ಇದರಿಂದ ಕಂಗಾಲಾದ ಟೊಮೆಟೊ ಬೆಳೆದ ರೈತರು ಮಾರಾಟಕ್ಕೆ ತಂದಿದ್ದ ನೂರಾರು ಕ್ವಿಂಟಾಲ್ ಟೊಮೆಟೊ ಹಣ್ಣನ್ನು ಮೈಸೂರಿನ ಎ.ಪಿ.ಎಂ.ಸಿ ಆವರಣದಲ್ಲಿ ಸುರಿದಿದ್ದಾರೆ.

    ಮೈಸೂರಿನಲ್ಲಿ ದಿನ ದಿನಕ್ಕೂ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮೈಸೂರಿನ ಎಂಜಿ ರಸ್ತೆಯ ತರಕಾರಿ ಖರೀದಿಗೆ ಮಾತ್ರ ಜನ ಎಂದಿನಂತೆ ಮುಗಿ ಬೀಳುತ್ತಿದ್ದಾರೆ. ನಡುವೆ ಅಂತರದ ಮಾತು ಪಾಲಿಸದೆ, ಮುಖಕ್ಕೆ ಮಾಸ್ಕ್ ಕಟ್ಟಿಕೊಳ್ಳದೆ ತರಕಾರಿ ಖರೀದಿ ಮಾಡುತ್ತಿದ್ದಾರೆ.