Tag: ಮೈಸೂರು ಸ್ಯಾಂಡಲ್‌ ಸೋಪ್‌

  • ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

    ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ರಾಯಭಾರಿಯಾಗಿ ಆಯ್ಕೆಯಾಗಿರುವ ತಮನ್ನಾ ಭಾಟಿಯಾಗೆ (Tamannaah Bhatia) ಸರ್ಕಾರ 6.20 ಕೋಟಿ ರೂ. ಪಾವತಿಸಿದೆ.

    ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ (Sunil Kumar) ಅವರು ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ತಯಾರಾಗುತ್ತಿರುವ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತಿಗೆ ಸರ್ಕಾರ ಖರ್ಚು ಮಾಡಲಾಗಿರುವ ಹಣವೆಷ್ಟು ಎಂದು ಚುಕ್ಕೆ ಗುರುತು ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಯ ಜೊತೆಗೆ ಈ ಜಾಹೀರಾತಿಗಾಗಿ ಯಾವ ಯಾವ ರಾಯಭಾರಿಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರಿಗೆ ಇದುವರೆಗೂ ನೀಡಲಾಗಿರುವ ಸಂಭಾವನೆಯೆಷ್ಟು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

     

    ಕಳೆದ 2 ವರ್ಷಗಳ  ಅವಧಿಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪ್ರಚಾರಕ್ಕಾಗಿ 48,88,21,350 ರೂ. ವೆಚ್ಚ ಮಾಡಲಾಗಿದೆ. ದೇಶ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪುಚಾರಕ್ಕಾಗಿ ಸಂಸ್ಥೆಯು ರಾಯಭಾರಿಗಳನ್ನು ನೇಮಕ ಮಾಡಿದೆ. ಇದನ್ನೂ ಓದಿಕನ್ನಡಕ್ಕೆ ಅಜಯ್ ದೇವಗನ್  ಜೆಪಿ ತುಮಿನಾಡ್‌ ಸಿನಿಮಾದಲ್ಲಿ ಅಭಿನಯ!

    ಯಾರಿಗೆ ಎಷ್ಟು?
    ತಮನ್ನಾ ಭಾಟಿಯಾ(2025-27) – 6.20 ಕೋಟಿ ರೂ., ಐಷಾನಿ ಶೆಟ್ಟಿ (Ishani Shetty) (2025-27) – 15 ಲಕ್ಷ ರೂ. ನೀಡಲಾಗಿದೆ. ಇವರಲ್ಲದೇ ಕರ್ನಾಟಕ ಮೂಲದ ಸ್ಥಳೀಯ ವ್ಯಕ್ತಿಗಳಾದ ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನ್ಯಾ ಐಯ್ಯರ್ (Sanya Iyer), ಆರಾಧನಾ.ಆರ್ ಇವರುಗಳನ್ನು ದೂರದರ್ಶನ ಜಾಹೀರಾತುಗಳಲ್ಲಿ ಛಾಯಾ ಚಿತ್ರೀಕರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ರೀಲ್ಸ್‌ನಲ್ಲಿ ಬಳಲಾಗಿದೆ. ಒಟ್ಟು ಈ ಕೆಲಸಕ್ಕೆ 62.87 ಲಕ್ಷ ರೂ. ವೆಚ್ಚ ತಗುಲಿದೆ ಎಂದು ಸರ್ಕಾರ ಉತ್ತರ ನೀಡಿದೆ.

  • ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್

    ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್

    ದಾವಣಗೆರೆ: ಮೈಸೂರು ಸ್ಯಾಂಡಲ್ ಸೋಪ್‌ಗೆ (Mysore Sandal Soap) ನಟಿ ತಮನ್ನಾ ಭಾಟಿಯಾ (Tamannaah Bhatia) ರಾಯಭಾರಿಯಾಗಿ ಆಯ್ಕೆ ಸರಿಯಿಲ್ಲ. ನಮ್ಮ ರಾಜ್ಯದವರನ್ನೇ ಮಾಡಬೇಕು ಎಂದು ಸಾಕಷ್ಟು ಜನರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಇದೆ ಎಂದು ದಾವಣಗೆರೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed Khan) ಬೇಸರ ವ್ಯಕ್ತಪಡಿಸಿದರು.

    ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಲು ನಮ್ಮ ರಾಜ್ಯದಲ್ಲೇ ಬಹಳಷ್ಟು ಜನ ನಟಿಯರು ಇದ್ದರು, ಅವರಲ್ಲೇ ಒಬ್ಬರನ್ನು ರಾಯಭಾರಿಯಾಗಿ ಮಾಡಬಹುದಿತ್ತು ಎಂದರು. ಅಲ್ಲದೇ ತಮನ್ನಾರನ್ನು ಆಯ್ಕೆ ಮಾಡಿದ್ದು ಜಮೀರ್ ಎಂಬ ಬಿವೈ ವಿಜಯೇಂದ್ರ ಆರೋಪಕ್ಕೆ, ವಿಜಯೇಂದ್ರ ನಮ್ಮ ಜೊತೆ ಬಂದಿದ್ರಾ ಆಯ್ಕೆ ಮಾಡೋಕೆ ಎಂದು ಗರಂ ಆದರು. ಇದನ್ನೂ ಓದಿ: ರಾಜ್ಯದ ಶಕ್ತಿಸೌಧ ಇನ್ಮುಂದೆ ಜನರ ವೀಕ್ಷಣೆಗೆ ಮುಕ್ತ – ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದು ಚಾಲನೆ

    ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದರು. ಡಿಸೆಂಬರ್‌ನಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಬಿಜೆಪಿಗರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ಹೈಕಮಾಂಡ್‌ನ ಶಿಸ್ತಿನ ಸಿಪಾಯಿಗಳು. ನಮ್ಮ ಹೈಕಮಾಂಡ್ ಪಕ್ಷದವರು ನಿರ್ಧಾರ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗುತ್ತಾರೆ. ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು. ಇದನ್ನೂ ಓದಿ: ಚಿಕ್ಕಮಗಳೂರು | ಭಾರೀ ಮಳೆಗೆ ಆಟೋ ಮೇಲೆ ಮುರಿದು ಬಿದ್ದ ಮರ – ಚಾಲಕ ದುರ್ಮರಣ

    ಡಿಕೆಶಿ, ವಿಜಯೇಂದ್ರ ದೆಹಲಿಯಲ್ಲಿ ಮೀಟಿಂಗ್ ಮಾಡಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ಬಗ್ಗೆ ವಿಜಯೇಂದ್ರರವರಿಗೆ ಏಕೆ ಬೇಕು. ಅವರ ಪಕ್ಷದಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಿ. ಯತ್ನಾಳ್‌ರನ್ನು ಮೊದಲು ಸಮಾಧಾನಪಡಿಸಿ ಸುಮ್ಮನಾಗಿಸಿ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ: ಯುಟಿ ಖಾದರ್

    ಕೋವಿಡ್ ಮುನ್ನೆಚ್ಚರಿಕೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದೇವೆ. ಇದರಿಂದ ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ, ಜಾಗೃತವಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ

  • ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ

    ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ

    – ಛಲವಾದಿ ನಾರಾಯಣಸ್ವಾಮಿ ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ಅಳ್ತಿದ್ದಾರೆ; ಲೇವಡಿ

    ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌ (Mysore Sandal Soap) ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರ ಆಯ್ಕೆಯನ್ನ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಸಮರ್ಥಿಸಿಕೊಂಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು ಸ್ಯಾಂಡಲ್‌ ಸೋಪ್‌ಗೆ ತಮ್ಮನ್ನಾ (Tamannaah Bhatia) ಆಯ್ಕೆ ಕುರಿತು ಸಮರ್ಥನೆ ನೀಡಿದರು. ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆಯಲ್ಲಿ ನಾವು 437 ಕೋಟಿ ಲಾಭ ಮಾಡಿದ್ದೇವೆ. ಅದನ್ನ ಸಾವಿರ ಕೋಟಿ ಮಾಡಬೇಕು. ಅದಕ್ಕೆ ಎಲ್ಲರ ಸಹಕಾರ ಮುಖ್ಯ. ನಮ್ಮ ಮಾರ್ಕೆಟಿಂಗ್‌ ಹೆಚ್ಚಾಗುತ್ತಲ್ಲ, ಹಾಕಿರುವ ಬಂಡವಾಳವೂ ಬರಬೇಕು, ಉದ್ಯೋಗ ಸೃಷ್ಟಿಯೂ ಆಗಬೇಕು. ಅಕ್ಕೆ ಯಾರಾದರೇನು? ಇನ್ವೆಸ್ಟ್ ಕರ್ನಾಟಕದಲ್ಲಿ 15.20 ಸಾವಿರ ಕೋಟಿ ರಾಜ್ಯಕ್ಕೆ ಬಂತಲ್ಲ, ಬಂಡವಾಳ ಹರಿದು ಬಂದಿದೆಯಲ್ಲ ಅಂತ ಸಮರ್ಥನೆ ನೀಡಿದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ಯ ಒಂದು ಕರೆಯಿಂದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಪ್ರಣವ್ ಫೌಂಡೇಶನ್..!

    ನನ್ನನ್ನ ನಾಯಿ ಅಂತ ಬೈಯ್ದು ಅವರು ಅಳುತ್ತಿದ್ದಾರೆ:
    ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ನನ್ನನ್ನ ಕ್ಯಾಬಿನೆಟ್‌ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ. ಇದು ʻಪ್ರಿಯಾಂಕ್ ಖರ್ಗೆ ಹಠಾವ್ ನಾರಾಯಣಸ್ವಾಮಿ ಬಚಾವೋʼ ಪ್ರತಿಭಟನೆ. ಕಾಂಗ್ರೆಸ್‌ನವ್ರು ಮೋದಿಯವರಿಗೆ ಪ್ರಶ್ನೆ ಮಾಡಬಾರದು ಅಂತಾರೆ. ದೇಶದ ಆರ್ಥಿಕ ವಿಚಾರ ಬಂದಾಗಲೂ ಪ್ರಶ್ನೆ ಮಾಡಬಾರದು ಅಂತಾ ಪ್ರೆಸ್‌ಮೀಟ್‌ ಮಾಡ್ತಾರೆ. ಇಂದು ರಿಪಬ್ಲಿಕ್ ಆಫ್ ಕಲಬುರಗಿ ಅಂತಾ ಹೋಗಿದ್ದಾರೆ. ನಾರಾಯಣಸ್ವಾಮಿಯವ್ರು ಅಲ್ಲಿ ಹೋಗಿ ಅಳುತ್ತಾ ಇದ್ದಾರೆ. ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ಅಳುತ್ತಿದ್ದಾರೆ, ಅವ್ರೇನೂ ಸಂತ್ರಸ್ತರಾ..? ನಾಯಿ ಅಂತ ಬೈದಿದ್ದು ನಂಗೆ ಅವ್ರು, ಸಂತ್ರಸ್ತರ ರೀತಿ ಅಳುತ್ತಿದ್ದಾರೆ. ಉಲ್ಟಾ ನನ್ನ ವಿರುದ್ಧವೇ ಪ್ರತಿಭಟನೆ ಮಾಡ್ತಿದ್ದಾರೆ. ಅಶೋಕ್, ವಿಜಯೇಂದ್ರ, ಸಿಟಿ ರವಿ, ಮಾಜಿ ಸಿಎಂಗಳು ಕಲಬುರಗಿಗೆ ಬಂದಿದ್ದಾರೆ. ಅಧಿಕಾರ ಇದ್ದಾಗ ಅಭಿವೃದ್ದಿಗೆ ಒಬ್ಬರೂ ಬರಲಿಲ್ಲ. ಆದ್ರೀಗ ನಾಲ್ಕು ಬಾರಿ ಕಲುಬುರಗಿಗೆ ಭೇಟಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    ಅಕ್ಕಿ ಕಳ್ಳನಿಗೆ ಟಿಕೆಟ್‌ ಕೊಟ್ರಲ್ಲ ಏನಾಯ್ತು?
    4 ಸಲ ಬಂದಾಗಲೂ ಪ್ರಿಯಾಂಕ್ ಖರ್ಗೆ ವಿರುದ್ಧವೇ ಪ್ರತಿಭಟನೆ ಮಾಡಲು ಬಂದಿದ್ದಾರೆ. ನೀವಿಲ್ಲಿ ರಾಜಕೀಯ ಮಾಡೋಕೆ ಬಂದಿದ್ರೆ ನಿಮಗೆ, ಮುಖಭಂಗಾನೆ, ಹಾಲಿನ ಪೌಡರ್ ಕದ್ದು ಶಿಕ್ಷೆ ಆದಂತಹ ವ್ಯಕ್ತಿ ಪರ ಬಂದಿದ್ರು. ಅವ್ರನ್ನ ಮರ್ಡರ್ ಮಾಡಲು ಪ್ರಯತ್ನ ಆಗಿದೆ ಅಂತಾ ಆರೋಪ ಮಾಡಿದ್ರು. ಆದ್ರೆ ಅವರವರೇ ಕುಡಿದು ಗಲಾಟೆ ಮಾಡಿಕೊಂಡಿದ್ರು ಅಂತಾ ವರದಿ ಬಂತು. ಲೋಕಲ್ ಲೀಡರ್ ಶಿಪ್ ನಂಬಿಕೊಂಡು ಬಂದರಲ್ಲಾ ಏನಾಯ್ತು..? ಅಕ್ಕಿ ಕಳ್ಳನಿಗೆ ಟಿಕೆಟ್ ಕೊಟ್ಟು ಅವನ ಪರವಾಗಿ ಬಂದ್ರಲ್ಲಾ ಏನಾಯ್ತು..? ಸ್ವಲ್ಪನಾದರು ಕಾಮನ್ ಸೆನ್ಸ್ ಯೂಸ್ ಮಾಡಿದ್ರೆ ಗೊತ್ತಾಗುತ್ತೆ ಅಲ್ವಾ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

  • ತಮನ್ನಾನು ಬೇಡ, ಸುಮನ್ನಾನು ಬೇಡ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್

    ತಮನ್ನಾನು ಬೇಡ, ಸುಮನ್ನಾನು ಬೇಡ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್

    – ಸಿಎಂ ಸೇರಿದಂತೆ ಎಲ್ಲಾ ಮಂತ್ರಿಗಳೂ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ

    ರಾಮನಗರ: ಮೈಸೂರು ಸ್ಯಾಂಡಲ್ ಸೋಪ್‌ಗೆ (Mysore Sandal Soap) ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.

    ಮೈಸೂರು ಸ್ಯಾಂಡಲ್ ಸೋಪ್‌ಗೆ 6.20 ಕೋಟಿ ರೂ. ನೀಡಿ ನಟಿ ತಮನ್ನಾ ಭಾಟಿಯಾರನ್ನ (Tamannaah Bhatia) ರಾಯಭಾರಿಯಾಗಿ ನೇಮಕ ಮಾಡಿಕೊಂಡಿರುವ ವಿಚಾರಕ್ಕೆ ರಾಮನಗರದಲ್ಲಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

    ತಮಿಳು, ತೆಲುಗಿನವರು ಯಾರೂ ಬೇಡ. ಶ್ರೀಗಂಧ, ಮೈಸೂರು ಇವೆರಡೂ ಸಹ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿ ಎಂದಿದ್ದಾರೆ.

    ತಮನ್ನಾಗೆ 6.20 ಕೋಟಿ ರೂ. ಕೊಟ್ಟಿರೋದರಲ್ಲಿ ದೊಡ್ಡ ರಾಜಕೀಯ ಇದೆ. ಸಿಕ್ಕ‌ಸಿಕ್ಕವರಿಗೆ ಕೋಟಿ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತೆ. ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ ಅಂತ ವಾಟಾಳ್‌ ಹೇಳಿದ್ದಾರೆ.

    ಆಂಧ್ರಕ್ಕೆ ಕೊಟ್ಟ ಆನೆಗಳನ್ನ ವಾಪಸ್‌ ತರಿಸಿಕೊಳಳಬೇಕು:
    ಇನ್ನೂ ರಾಜ್ಯದ ಆನೆಗಳನ್ನು ಆಂಧ್ರಕ್ಕೆ ಕೊಟ್ಟ ವಿಚಾರ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಅವನು ಯಾರೋ ಪವನ್ ಅನ್ನೋನು ಬಂದು ಕನ್ನಡದಲ್ಲಿ ಮಾತನಾಡಿಬಿಟ್ನಂತೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಇವರಿಗೆ ಸ್ವರ್ಗ ಬಂದ ಹಾಗೆ ಆಗೋಗಿದೆ. ಅಲ್ಲಿ ತಿರುಪತಿ ಹೋದ್ರೆ, ಸರಿಯಾಗಿ ನೋಡಿಕೊಳ್ಳಲ್ಲ. ಆನೆ ನಾವು ಕರ್ನಾಟಕದಲ್ಲಿ ಸಾಕಿದ್ದೇವೆ. ನಾವು ಸಾಕಿದ ಮಗುವನ್ನ ಬೇರೆಯವರಿಗೆ ಕೊಟ್ರೆ ಹೇಗೆ.? ನಾವು ಸಾಕಿದ್ದೇವೆ, ಪಳಗಿಸಿದ್ದೇವೆ, ನಮ್ಮಲ್ಲಿ ಯಾರು ದಿಕ್ಕಿಲ್ಲ ಅಂತಾ ಬೇವರ್ಸಿಗಳ ತರ ಕೊಡಬಾರದು. ಇದು ಪ್ರಾಣಿಗಳಿಗೆ ಮಾಡಿದಂತಹ ಮಹಾ ದ್ರೋಹ. ಎರಡು ರಾಜ್ಯದ ಸಂಬಂಧಗಳ ಬಾಂಧವ್ಯಕ್ಕೆ ಆನೆ ಕೊಟ್ಟಿದ್ದಾರೆ ಎಂಬ ವಿಚಾರ ಚರ್ಚೆ ಆಗ್ತಿದೆ. ಇದಕ್ಕೆ ಆನೆಯನ್ನೇ ಯಾಕೆ ಕೊಡಬೇಕು, ಹುಲಿ ಕೊಡಲಿ. ಕರ್ನಾಟಕದಲ್ಲಿ ಆನೆಗೆಳು ಅದ್ಬುತವಾಗಿವೆ‌. ನಮ್ಮ ರಾಜ್ಯ ಬಿಟ್ಟು ಹೋಗುವಾಗ ಆನೆಗಳು ಕಣ್ಣೀರು ಹಾಕಿದ್ದವು. ಆನೆಗಳ ಕಣ್ಣಲ್ಲಿ ನೀರು ಬರಬಾರದು. ಪವನ್ ಕಲ್ಯಾಣ್ ಗೆ ಹೇಳಿ ವಾಪಸ್ ಆನೆಗಳನ್ನ ಕರೆಸಿಕೊಳ್ಳಬೇಕು ಎಂದು ರಾಮನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಹೇಳಿಕೆ ನೀಡಿದ್ದಾರೆ.

  • ರಶ್ಮಿಕಾ, ಶ್ರೀಲೀಲಾ ಎಲ್ಲಾ ಬ್ಯುಸಿ ಇದ್ರು, ಅದಕ್ಕೇ ತಮನ್ನಾ ಆಯ್ಕೆ ಮಾಡಿದ್ವಿ: ಎಂ.ಬಿ ಪಾಟೀಲ್

    ರಶ್ಮಿಕಾ, ಶ್ರೀಲೀಲಾ ಎಲ್ಲಾ ಬ್ಯುಸಿ ಇದ್ರು, ಅದಕ್ಕೇ ತಮನ್ನಾ ಆಯ್ಕೆ ಮಾಡಿದ್ವಿ: ಎಂ.ಬಿ ಪಾಟೀಲ್

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಲು ಕನ್ನಡ ಮೂಲದ ಕೆಲ ನಟಿಯರನ್ನ ಸಂಪರ್ಕಿಸಲಾಗಿತ್ತು. ಅವರು ಸಿಗದ ಕಾರಣ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.

    ನಟಿ ತಮನ್ನಾ ಭಾಟಿಯಾಗೆ ಕನ್ನಡಪರ ಸಂಘಟನೆಗಳಿಂದ ವಿರೋಧ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತಾಡಿದ ಅವರು, ರಾಯಭಾರಿ ಆಯ್ಕೆಗೆ ಒಂದು ಸಮಿತಿ ರಚಿಸಲಾಗಿತ್ತು. ಕನ್ನಡಿಗರನ್ನೇ ನಾವು ಮೊದಲು ಸಂಪರ್ಕಿಸಿದ್ದೇವೆ. ಆದ್ರೆ ಅವ್ರು ಯಾರೂ ಫ್ರೀ ಇರಲಿಲ್ಲ ಎಂದರು. ಇದನ್ನೂ ಓದಿ: ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ

    ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ದೇವೆ. ಅವರು ಬೇರೆ ಕಡೆ ಸೈನ್ ಮಾಡಿದ್ದೇನೆ ಆಗಲ್ಲ ಅಂದ್ರು. ಶ್ರೀಲೀಲಾ ಅವರನ್ನು ಸಂಪರ್ಕಿಸಿದ್ದೇವೆ, ಅವ್ರೂ ಆಗಲ್ಲ ಅಂದಿದ್ರು. ಬಳಿಕ ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರೂ ಆಗೋದಿಲ್ಲ ಬೇರೆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇನೆ ಅಂತಾ ಹೇಳಿದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್‌ಗೆ ಎಟುಕದವರು, ಹಾಗಾಗಿ ಅವರನ್ನು ಸಂಪರ್ಕ ಮಾಡಿಲ್ಲ. ಕೊನೆಯದಾಗಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್‌

    ಇನ್ನು ಯಾರೇ ರಾಯಭಾರಿ ಆದರೂ 2 ವರ್ಷ ಲಾಕ್ ಆಗ್ತಾರೆ. ಇದರಲ್ಲಿ ಕನ್ನಡಕ್ಕೆ ಅವಮಾನ ಮಾಡಬೇಕು ಎಂಬ ಉದ್ದೇಶ ಇಲ್ಲ. ಇದು ಬಿಸಿನೆಸ್, ಸ್ಪರ್ಧೆ ಜಾಸ್ತಿ. ಕನ್ನಡದ ಅಸ್ಮಿತೆ, ಕನ್ನಡದ ಕಲಾವಿದರ ಬಗ್ಗೆ ಬದ್ಧತೆ, ಗೌರವ ಇದೆ. ಯಾರೂ ವಿವಾದ ಮಾಡಬಾರದು. ನಮ್ಮದು ಪ್ಯಾನ್ ಇಂಡಿಯಾ ಬಿಸಿನೆಸ್, ಈಗ ವಿದೇಶಕ್ಕೂ ಬಿಸಿನೆಸ್ ಒಯ್ಯಬೇಕೆಂಬ ಯೋಜನೆ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ | ಆರೋಪಿಗಳಿಗೆ ಜಾಮೀನು – ಜೈಲಿನಿಂದಲೇ 5 ಕಾರು, ಹಿಂಬಾಲಕರೊಂದಿಗೆ ರೋಡ್ ಶೋ

    ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ಹೊಸ ಸೋಪ್‌ಗಳನ್ನು ಸಹ ಪರಿಚಯ ಮಾಡಿದ್ದೇವೆ. ನಾವು ಈಗ ಪರ್‌ಫ್ಯೂಮ್ ಮಾರ್ಕೆಟ್‌ಗೂ ಕಾಲಿಡ್ತಿದ್ದೇವೆ. ಇದನ್ನು 5 ಸಾವಿರ ಕೋಟಿ ರೂ. ಬಿಸಿನೆಸ್‌ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ಮುಂದೆ ವಿದೇಶಿಯವರನ್ನೂ ರಾಯಭಾರಿಯಾಗಿ ಆಯ್ಕೆ ಮಾಡುವ ಉದ್ದೇಶ ಇದೆ. ಆ ಕಾಲ ಬರಲಿ ಅಂತ ಹಾರೈಸಿ. ಬಿಸಿನೆಸ್ ಇನ್ನೂ ಎತ್ತರಕ್ಕೆ ಒಯ್ಯುವ ಉದ್ದೇಶ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

    ಗಲ್ಫ್, ಯುರೋಪ್ ದೇಶಗಳಿಗೂ ನಮ್ಮ ಉತ್ಪನ್ನಗಳು ಹೋಗಬೇಕು. 23 ಉತ್ಪನ್ನಗಳ ಉತ್ಪಾದನೆ ಮಾಡ್ತಿದ್ದೇವೆ. ಕನ್ನಡ, ನಮ್ಮ ಕಲಾವಿದರ ಬಗ್ಗೆ ನಮಗೆ ಗೌರವ ಇದೆ. ಇದರಲ್ಲಿ ಯಾವುದೇ ತಪ್ಪು ತಿಳಿದುಕೊಳ್ಳುವ ಅಗತ್ಯ ಇಲ್ಲ. ಕಮಿಟಿ ರಚಿಸಿ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿದರು.

  • ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ

    ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ

    – ತಮನ್ನಾ ರಾಯಭಾರಿ ನಿರ್ಧಾರ ಹಿಂಪಡೆಯದಿದ್ರೆ ತೀವ್ರ ಪ್ರತಿಭಟನೆ; ಕರವೇ ಎಚ್ಚರಿಕೆ

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ(Narayan Gowda) ಆಕ್ರೋಶ ಹೊರಹಾಕಿದ್ದಾರೆ.

    ಪರಭಾಷಾ ನಟಿ ತಮನ್ನಾ ಭಾಟಿಯಾ(Tamanna Bhatia) ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ(Mysore Sandal Soap) ರಾಯಭಾರಿಯಾಗಿ ಮಾಡಿದ ಬಗ್ಗೆ ಮಾತನಾಡಿದರು. ಮೈಸೂರು ಸ್ಯಾಂಡಲ್ ಸೋಪ್ ಕಂಪನಿ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂ. ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ

    ಇದು ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದಾರೆ. ಈ ಕಂಪನಿಯು ಕರ್ನಾಟಕದಲ್ಲಿ(Karnataka) ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

    ಈ ನೇಮಕಕ್ಕಾಗಿ ಕರ್ನಾಟಕ ಸರ್ಕಾರವು 6.20 ಕೋಟಿ ರೂ.ಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಇನ್ನಷ್ಟು ಆಕ್ಷೇಪಾರ್ಹವಾಗಿದೆ. ಈ ನಿರ್ಧಾರದ ವಿರುದ್ಧ ನಮ್ಮ ತೀವ್ರ ವಿರೋಧವಿದೆ. ತಮನ್ನಾಗೆ ಸರ್ಕಾರವು 6.20 ಕೋಟಿ ರೂ. ವ್ಯಯಿಸಿರುವುದು ಸಂಪೂರ್ಣವಾಗಿ ಅನಗತ್ಯ ಮತ್ತು ಜವಾಬ್ದಾರಿಯಿಲ್ಲದ ನಿರ್ಧಾರವಾಗಿದೆ. ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ, ಉದಾಹರಣೆಗೆ ಶಿಕ್ಷಣ, ಆರೋಗ್ಯ, ಅಥವಾ ಉದ್ಯೋಗ ಸೃಷ್ಟಿಗೆ ಬಳಸಬಹುದಾಗಿತ್ತು. ಸರ್ಕಾರವು ಜನರ ತೆರಿಗೆ ಹಣವನ್ನು ಈ ರೀತಿ ವ್ಯರ್ಥವಾಗಿ ಖರ್ಚು ಮಾಡಿರುವುದು ಖಂಡನೀಯವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದೇ ಕಾರ್ಯಕ್ರಮದಲ್ಲಿ ಕಾಣಿಸಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ

    ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಮತ್ತು ಜನಪ್ರಿಯ ಕನ್ನಡ ನಟಿಯರು ಇದ್ದಾರೆ. ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದರೆ, ಕನ್ನಡಿಗರ ಮನಸ್ಸಿಗೆ ಹತ್ತಿರವಾಗುವುದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಬಹುದಾಗಿತ್ತು. ಆದರೆ ಕರ್ನಾಟಕ ಸರ್ಕಾರ ಮತ್ತು ಮೈಸೂರು ಸ್ಯಾಂಡಲ್ ಕಂಪನಿಯು ಕನ್ನಡ ನಟಿಯರನ್ನು ಕಡೆಗಣಿಸಿ ಬಾಲಿವುಡ್ ನಟಿಯನ್ನು ಆಯ್ಕೆ ಮಾಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಕರ್ನಾಟಕದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುವ ಕಂಪನಿಯು ಸ್ಥಳೀಯ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಬೇಕಿತ್ತು ಎಂದು ಹೇಳಿದ್ದಾರೆ.

    ಮೈಸೂರು ಸ್ಯಾಂಡಲ್‌ನ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡಿಗರಿಗೆ ತಮ್ಮ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಸಾವಯವ ಸಂಬಂಧವಿರುವ ಕನ್ನಡ ನಟಿಯರೊಂದಿಗೆ ಬ್ರಾಂಡ್ ಅನ್ನು ಬೆಳೆಸುವುದು ಸಹಜವಾಗಿ ಪರಿಣಾಮಕಾರಿಯಾಗಿರುತ್ತದೆ. ಆದರೆ ತಮನ್ನಾ ಅವರಂತಹ ಬಾಲಿವುಡ್ ನಟಿಯನ್ನು ಆಯ್ಕೆ ಮಾಡುವ ಮೂಲಕ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮತ್ತು ಸ್ಥಳೀಯ ಮಾರುಕಟ್ಟೆಯ ಸಂವೇದನೆಗೆ ಗೌರವ ನೀಡದಿರುವುದು ಆಕ್ಷೇಪಾರ್ಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್‌ ಮುಂದೆ ನಿಲ್ಲಿಸಿ ಎಂದ ಗಾಯಕಿ

    ತಮನ್ನಾ ಕರ್ನಾಟಕದ ಸಂಸ್ಕೃತಿ, ಭಾಷೆ, ಅಥವಾ ಮೈಸೂರು ಸ್ಯಾಂಡಲ್‌ನ ಇತಿಹಾಸದೊಂದಿಗೆ ಯಾವುದೇ ನೇರ ಸಂಬಂಧ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡುವುದು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ. ಹಿಂದಿ ಚಿತ್ರರಂಗದ ನಟಿಯರನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಸ್ಥಳೀಯ ಸಂಸ್ಕೃತಿಯ ಮೇಲೆ ಹಿಂದಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವುದು ಕರ್ನಾಟಕ ರಕ್ಷಣಾ ವೇದಿಕೆಗೆ ಸ್ವೀಕಾರಾರ್ಹವಲ್ಲ. ಮೈಸೂರು ಸ್ಯಾಂಡಲ್‌ನಂತಹ ಕರ್ನಾಟಕದ ಐತಿಹಾಸಿಕ ಬ್ರಾಂಡ್ ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2,200 ಕೋಟಿ ರೂ. ಭ್ರಷ್ಟಾಚಾರ ಕೇಸ್‌ – ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ

    ಸರ್ಕಾರ ಕೂಡಲೇ ತಮನ್ನಾ ಅವರ ಬ್ರಾಂಡ್ ಅಂಬಾಸಿಡರ್ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಇದರ ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡ ನಟಿಯರನ್ನು ಆಯ್ಕೆ ಮಾಡಬೇಕು. ಕರ್ನಾಟಕ ಸರ್ಕಾರವು 6.20 ಕೋಟಿ ರೂ. ವೆಚ್ಚದ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಮತ್ತು ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ ಬಳಸಬೇಕು. ಭವಿಷ್ಯದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗೆ ಗೌರವ ನೀಡುವಂತಹ ನಿರ್ಧಾರಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಖಾತರಿ ನೀಡಬೇಕು ಎಂದು ಹೇಳಿದ್ದಾರೆ.

    ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರ ಪ್ರತಿಭಟನೆಯನ್ನು ಆಯೋಜಿಸಲಿದೆ. ಕರ್ನಾಟಕ ಸರ್ಕಾರ ಮತ್ತು ಮೈಸೂರು ಸ್ಯಾಂಡಲ್ ಸೋಪ್ಸ್ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮನ್ನಣೆ ನೀಡಿ, ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

  • Video | ತಮನ್ನಾಗೆ 6.20 ಕೋಟಿ – ನಟಿ ತಾರಾ ಬೇಸರ

    Video | ತಮನ್ನಾಗೆ 6.20 ಕೋಟಿ – ನಟಿ ತಾರಾ ಬೇಸರ

    ಬೆಂಗಳೂರು: ಮೈಸೂರ್ ಸ್ಯಾಂಡಲ್ ಸೋಪ್ (Mysore Sandal Soap) ರಾಯಭಾರಿಯಾಗಿ ಬಹುಭಾಷಾ ನಟಿಗೆ ಸರ್ಕಾರ ಮಣೆ ಹಾಕಿದೆ. ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ ಲಿಮಿಟೆಡ್ ಅಧಿಕೃತ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾರನ್ನ (Tamanna Bhatia) ನೇಮಕ ಮಾಡಿ ಸರ್ಕಾರ ಆದೇಶಿಸಿದೆ. 6.20 ಕೋಟಿ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ನಡೆಗೆ ಕನ್ನಡ ಚಿತ್ರರಂಗದ ಕಲಾವಿದರೂ ಬೇಸರ ಹೊರಹಾಕಿದ್ದಾರೆ.

    ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ನಟಿ ತಾರಾ ಅನುರಾಧ, ನಮ್ಮಲ್ಲಿ ರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌ ಅಂತಹವರು ನಂದಿನಿ ಬ್ರ್ಯಾಂಡ್‌ಗೆ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದು ಖ್ಯಾತಿಯಾಗಿತ್ತು. ಇತ್ತೀಚೆಗೆ ಡಾಲಿ ಧನಂಜಯ್‌ ಅವರೂ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿದ್ರು. ಮೈಸೂರು ಸ್ಯಾಂಡಲ್‌ ನಮ್ಮ ರಾಜ್ಯದ್ದು, ನಮ್ಮ ರಾಜ್ಯದ ಕಲಾವಿದೆಯರಿಗೆ ಒಂದು ಅವಕಾಶ ಕೊಡಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತದ್ದಾಗಲಿ, ಉಚಿತವಾಗಿ ಮಾಡುವವರು ನಮ್ಮಲ್ಲಿದ್ದಾರೆ. ಈಗ ಯಾರದ್ದೋ ಮಾತು ಕೇಳಿ ಉಚ್ಚಾಟದಲ್ಲಿ ಕೊಚ್ಚಿಕೊಂಡು ಹೋಗಿದಂತಾಗಿದೆ. ಈ ಹಣದಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ಸಹಾಯ ಮಾಡಬಹುದಲ್ಲವೇ ಅಂತ ನಟಿ ತಾರಾ ಹೇಳಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ..

  • ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ

    ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ

    ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ತೆಲುಗು ನಟಿ ತಮನ್ನಾ ಭಾಟಿಯಾ (Tamannaah Bhatia) ರಾಯಭಾರಿಯಾಗಿದ್ದಾರೆ. ನಟಿಗೆ ಕರ್ನಾಟಕ ಸರ್ಕಾರ ಕೋಟಿ ಕೋಟಿ ಹಣ ಕೊಟ್ಟಿದೆ.

    ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕೃತ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ನೇಮಕಗೊಂಡಿದ್ದಾರೆ. 2 ವರ್ಷ 2 ದಿನದ ಅವಧಿಗೆ ರಾಯಭಾರಿಯಾಗಲು ನಟಿ ಬರೋಬ್ಬರಿ 6.20 ಕೋಟಿ ಸಂಭಾವನೆ ಪಡೆದಿದ್ದಾರೆ. ಇದನ್ನೂ ಓದಿ: ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್

    ಈ ಸಂಬಂಧ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ನೇಮಕ ಮಾಡಿಕೊಳ್ಳಲಾಗಿದೆ.

  • ಮೈಸೂರು ಸ್ಯಾಂಡಲ್‌ ಸೋಪ್‌ ನಕಲಿ ಘಟಕದ ಮೇಲೆ ದಾಳಿ; 2 ಕೋಟಿ ಮೌಲ್ಯದ ಸಾಮಗ್ರಿ ವಶ

    ಮೈಸೂರು ಸ್ಯಾಂಡಲ್‌ ಸೋಪ್‌ ನಕಲಿ ಘಟಕದ ಮೇಲೆ ದಾಳಿ; 2 ಕೋಟಿ ಮೌಲ್ಯದ ಸಾಮಗ್ರಿ ವಶ

    – ಪ್ರಕರಣದಲ್ಲಿ ಇಬ್ಬರ ಬಂಧನ

    ಹೈದರಾಬಾದ್‌: ಇಲ್ಲಿನ ಮೈಸೂರು ಸ್ಯಾಂಡಲ್‌ ಸೋಪ್‌ (Mysore Sandal Soap) ನಕಲಿ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ 2 ಕೋಟಿ ರೂ. ಮೌಲ್ಯದ ನಕಲಿ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಚಿವ ಎಂ.ಬಿ.ಪಾಟೀಲ್‌, ಹೈದರಾಬಾದ್ ಮಾರುಕಟ್ಟೆಗೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಪೂರೈಕೆಯಾಗುತ್ತಿರುವ ಬಗೆಗೆ ಅನಾಮಧೇಯ ಕರೆ ಬಂತು. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸ್ಥೆಯ MDಯವರಿಗೆ ನಿರ್ದೇಶನ ನೀಡಿದ್ದೆ. ಅದರಂತೆ ಸಿಕಂದರಾಬಾದಿನಲ್ಲಿರುವ ನಮ್ಮ ಸಂಸ್ಥೆಯ ಅಧಿಕೃತ ಮಾರಾಟದ ಸಿಬ್ಬಂದಿ, ನಕಲಿಗಳ ಜಾಲವನ್ನು ಬೇಧಿಸಲು ತಂತ್ರ ರೂಪಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂವಿಧಾನದ ಮೂಲಭೂತ ಹಕ್ಕುಗಳ ಭಾಗದಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾದೇವಿಯ ಚಿತ್ರಗಳಿವೆ: ಜಗದೀಪ್‌ ಧನಕರ್‌

    ಪೊಲೀಸರೊಂದಿಗೆ ಭೇಟೆಯಾಡಿ 2 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧಿಗಳಿಗೆ ಕಾನೂನು ರೀತಿಯಲ್ಲಿ ಉಗ್ರ ಶಿಕ್ಷೆಯಾಗಲಿ. ಮೈಸೂರು ಸ್ಯಾಂಡಲ್‌ನ ಅಸಲಿ ಪರಿಮಳ ಎಲ್ಲೆಡೆ ಪಸರಿಸಲಿ ಎಂದು ಸಚಿವರು ಹೇಳಿದ್ದಾರೆ.

    ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್)ನ ಮೈಸೂರು ಸ್ಯಾಂಡಲ್ ಸೋಪ್‌ನ ನಕಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಶನಿವಾರ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ

    ಮಲಕಪೇಟೆ ಪೊಲೀಸರು ನಕಲಿ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳು ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    150 ಗ್ರಾಂ ಸಾಬೂನು ಪ್ಯಾಕ್‌ಗಳ 1,800 ತುಂಡುಗಳನ್ನು ಹೊಂದಿರುವ 20 ಪೆಟ್ಟಿಗೆಗಳು, 75 ಗ್ರಾಂ ಸಾಬೂನಿನ 9,400 ತುಂಡುಗಳ 47 ರಟ್ಟಿನ ಪೆಟ್ಟಿಗೆಗಳು ಮತ್ತು 150 ಗ್ರಾಂ ಹಾಗೂ 75 ಗ್ರಾಂ ಸಾಬೂನುಗಳ 400 ಖಾಲಿ ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

    ಆರೋಪಿ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ವಿರುದ್ಧ ಹೈದರಾಬಾದ್‌ನ ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಎಸ್‌ಡಿಎಲ್‌ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಅನಾಮಧೇಯ ಸುಳಿವು ದೊರೆತ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸಾಬೂನುಗಳು ಚಲಾವಣೆಯಾಗುತ್ತಿರುವ ಬಗ್ಗೆ ಕರೆ ಸ್ವೀಕರಿಸಿದ ಸಚಿವ ಪಾಟೀಲ್, ಈ ಬಗ್ಗೆ ಪರಿಶೀಲಿಸುವಂತೆ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ಸೂಚಿಸಿದ್ದರು.

    ಕೆಎಸ್‌ಡಿಎಲ್ ತಂಡವು ಮಾರುಕಟ್ಟೆಯಲ್ಲಿ ನಕಲಿ ಸಾಬೂನು ಇರುವುದನ್ನು ದೃಢಪಡಿಸಿದ ನಂತರ, ಅದರ ಮೂಲವನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ನಡೆಸಿತು. ತಂಡವು ಮೊದಲು ಒಂದು ಲಕ್ಷ ರೂಪಾಯಿ ಮೌಲ್ಯದ ನಕಲಿ ಉತ್ಪನ್ನವನ್ನು ಖರೀದಿಸಿತು. ಅದನ್ನು ಪರಿಶೀಲಿಸಿದಾಗ ನಕಲಿ ಉತ್ಪನ್ನ ಎಂಬುದು ಗೊತ್ತಾಗಿ ಘಟಕದ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಯೋಧ್ಯೆ ಭೇಟಿಯಲ್ಲಿ ತಪ್ಪೇನಿದೆ?: ಸಿಎಂ ಹೇಳಿಕೆ ಸಮರ್ಥಿಸಿದ ಸಚಿವ ಕೆ.ಎನ್ ರಾಜಣ್ಣ

  • ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ ಬಿ ಪಾಟೀಲ್‌

    ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ ಬಿ ಪಾಟೀಲ್‌

    ಬೆಂಗಳೂರು: ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ (MB Patil) ಹೇಳಿದ್ದಾರೆ. ಆಸಕ್ತರು karnatakavision2030@gmail.comಗೆ ತಮ್ಮ ಸಲಹೆಗಳನ್ನು ಕಳಿಸಬಹುದು.

    ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಅವರು, “ಮೈಸೂರು ಸ್ಯಾಂಡಲ್‌ ಸೋಪ್‌, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍‌ ಅವರು ಆರಂಭಿಸಿದ ಉತ್ಪನ್ನವಾಗಿದೆ. ಅದು ರಾಜ್ಯದ ಮಕುಟಮಣಿಯ ಅನರ್ಘ್ಯರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರ್ಕಾರದ ಈ ಪ್ರಯತ್ನಕ್ಕೆ ಕೈಗೂಡಿಸಬೇಕು” ಎಂದು ಆಹ್ವಾನಿಸಿದ್ದಾರೆ.  ಇದನ್ನೂ ಓದಿ: ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ : ಹೆಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನೆ

    ಮೈಸೂರು ಸ್ಯಾಂಡಲ್‌ ಸೋಪ್‌ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ. ಹಾಗೆಯೇ, ಈ ಬ್ರ್ಯಾಂಡ್‌ ಉತ್ಪನ್ನವು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಒಟ್ಟು ವಹಿವಾಟಿನಲ್ಲಿ 3% ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

     

    ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗವಾಗಿದೆ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]