Tag: ಮೈಸೂರು ವಿಮಾನ ನಿಲ್ದಾಣ

  • Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 15 ಬಾರಿ ಬಜೆಟ್‌ ಮಂಡಿಸಿ ರಾಜ್ಯ ರಾಜಕೀಯದ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ. ಒಟ್ಟು 3,71,383 ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

    ಬಜೆಟ್‌ ಗಾತ್ರದ ಪೈಕಿ ಒಟ್ಟು ಸ್ವೀಕೃತಿ 3,68,674 ಕೋಟಿ ರೂ., ರಾಜಸ್ವ ಸ್ವೀಕೃತಿ 2,63,178 ಕೋಟಿ ರೂ.ಗಳಿದ್ದು, ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    1 ರೂಪಾಯಿ ಹೋಗಿದ್ದು ಎಲ್ಲಿಗೆ?
    (ಪೈಸೆಗಳಲ್ಲಿ ನೀಡಲಾಗಿದೆ)

    * ನೀರು ಪೂರೈಕೆ ಮತ್ತು ನೈರ್ಮಲ್ಯ – 3
    * ಸಾಲ ತೀರಿಕೆ – 18
    * ಇತರ ಸಾಮಾನ್ಯ ಸೇವೆಗಳು – 17
    * ಸಮಾಜ ಕಲ್ಯಾಣ – 15
    * ಇತರ ಆರ್ಥಿಕ ಸೇವೆಗಳು – 15
    * ಕೃಷಿ ಮತ್ತು ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ – 14
    * ಶಿಕ್ಷಣ – 11
    * ಆರೋಗ್ಯ – 4
    * ಇತರ ಸಾಮಾಜಿಕ ಸೇವೆಗಳು – 3

    1 ರೂಪಾಯಿ ಬಂದಿದ್ದು ಎಲ್ಲಿಂದ?
    (ಪೈಸೆಗಳಲ್ಲಿ ನೀಡಲಾಗಿದೆ)

    * ರಾಜ್ಯದ ತೆರಿಗೆಯೇತರ ರಾಜಸ್ವದಿಂದ – 4
    * ರಾಜ್ಯ ತೆರಿಗೆ ಆದಾಯದಿಂದ – 52
    * ಸಾಲದಿಂದ – 28
    * ಕೇಂದ್ರ ತೆರಿಗೆ ಪಾಲಿನಿಂದ – 12
    * ಕೇಂದ್ರ ಸರ್ಕಾರದ ಸಹಾಯಾನುಧಾನ – 4

    ರಾಜ್ಯದ ಸ್ವಂತ ತೆರಿಗೆಗಳ ವಿವರ (ಕೋಟಿ ರೂ.ಗಳಲ್ಲಿ)
    * ಮೋಟಾರು ವಾಹನ ತೆರಿಗೆ – 13,000 (7%)
    * ನೋಂದಣಿ ಮತ್ತು ಮುದ್ರಾಂಕ – 26,000 (14%)
    * ರಾಜ್ಯ ಅಬಕಾರಿ – 38,525 (20%)
    * ವಾಣಿಜ್ಯ ತೆರಿಗೆಗಳು – 1,10,000 (58%)
    * ಇತರೇ – 2,368 (1%)

  • ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಬೆಂಗಳೂರು: ಮೈಸೂರು ವಿಮಾನ ನಿಲ್ದಾಣ ರನ್‌ವೇ (Mysuru Airport Runway) ವಿಸ್ತರಣೆ ಹಾಗೂ ವಿಜಯಪುರ ಹಾಗೂ ಹಾಸನ ವಿಮಾನ ನಿಲ್ದಾಣ ಕಾಮಗಾರಿ, ರಾಯಚೂರು ಮತ್ತು ಕಾರವಾರ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ 1,600 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Karnataka Budget 2024- ಸಿದ್ದರಾಮಯ್ಯ ಹಿಡಿದ ಬಜೆಟ್ ‘ಬ್ಯಾಗ್’ಗೆ ನಟ ಧನಂಜಯ್ ಮೆಚ್ಚುಗೆ

    2024-25ನೇ ಸಾಲಿನ ತಮ್ಮ ಬಜೆಟ್‌ನಲ್ಲಿ (Karnataka Budget) ತವರು ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದು, ಜನರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್

    ತವರು ಜಿಲ್ಲೆ ಮೈಸೂರಿಗೆ ಸಿಎಂ ಕೊಡುಗೆ ಏನು?
    * ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ Nephro-Urology ಆಸ್ಪತ್ರೆಯ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಣ.
    * ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಶತಮಾನೋತ್ಸವ ಸವಿನೆನಪಿಗಾಗಿ ಕೆ.ಆರ್‌ ಆಸ್ಪತ್ರೆ ಆವರಣದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಕ್ರಮ.
    * ಮೈಸೂರಿನ ಜೊತೆಗೆ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ತುಮಕೂರು, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ರಸ್ತೆಯಲ್ಲಿ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ ಅಭಿವೃದ್ಧಿ.
    * ಮೈಸೂರಿನಲ್ಲಿ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಕಾರ್ಯ ಸಾಧ್ಯತಾ ವರದಿ.
    * ಮೈಸೂರು ಸೇರಿದಂತೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳ ಪ್ರಾರಂಭ, ಜೊತೆಗೆ 10,000 ಉದ್ಯೋಗ ಸೃಷ್ಟಿ
    * ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಪ್ರೋತ್ಸಾಹಕ್ಕೆ ಕ್ರಮ.

  • ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

    ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

    – ಕೊಡಗಿನಲ್ಲಿ ಹಿಂದೂಗಳ ಹತ್ಯೆ ಮಾಡಿದ ಚರಿತ್ರೆ ಟಿಪ್ಪು ಹೆಸರಲ್ಲಿದೆ ಎಂದ ಶಾಸಕ

    ಮಂಡ್ಯ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಸುಲ್ತಾನ್‌ ಹೆಸರು ನಾಮಕಾರಣ ಮಾಡುವಂತೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನರೇ ಬುದ್ದಿ ಕಲಿಸುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು (Tipu Sultan) ಒಬ್ಬ ಮತಾಂಧ, ಮಂಡ್ಯದಲ್ಲಿ ಅವನ ಚರಿತ್ರೆ ಇದೆ. ಕೊಡಗಿನಲ್ಲಿ ಹಿಂದೂಗಳ ಹತ್ಯೆ ಮಾಡಿದ್ದ ಚರಿತ್ರೆ ಇದೆ. ಮೇಲುಕೋಟೆಯಲ್ಲಿ ಬ್ರಾಹ್ಮಣರನ್ನ ಕಟ್ಟಾಕಿ ಕತ್ತರಿಸಿ ಹಾಕಿದ್ದ ಎಲ್ಲಾ ಇತಿಹಾಸವಿದೆ. ಟಿಪ್ಪು ಸ್ವತಂತ್ರ ಹೋರಾಟಗಾರ ಅಲ್ಲ. ಆಗ ಮೈಸೂರು ಆಡಳಿತ ನಡೆಸುತ್ತಿದ್ದವರು ಒಡೆಯರ್ ವಂಶಸ್ಥರು. ಹೈದರಾಲಿ ಚಾಕ್ರಿ, ಕೂಲಿಗೆ ಬಂದು ಒಡೆಯರ್‌ಗೆ ಮೋಸ ಮಾಡಿ ಸಿಂಹಾಸನ ಏರೋಕೆ ಬಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಟಿಪ್ಪು ಸುಲ್ತಾನ್‌ನನ್ನ ಹೋರಾಟಗಾರ ಅಂತಾರಲ್ಲ ನಾಚಿಕೆ ಆಗಲ್ವ? ಟಿಪ್ಪು, ಹೈದರಾಲಿ ಡ್ಯಾಂ ಕಟ್ಟಿಸಿದ್ರಾ? ಒಂದು ಕೆರೆನಾದ್ರೂ ಕಟ್ಟಿಸಿದ್ರಾ? ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಸಿದ್ರಾ? ಎಲ್ಲವನ್ನು ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ವೋಟಿಗೋಸ್ಕರ ಕಾಂಗ್ರೆಸ್‌ನವರು ಹೋರಾಟಗಾರ ಅಂತಾರೆ. ವೋಟಿಗೋಸ್ಕರ ಎಂತಹ‌ ಕೀಳು ಮಟ್ಟಕ್ಕೆ ಕಾಂಗ್ರೆಸ್‌ನವರು ಹೋಗ್ತಾರೆ. ಕಾಂಗ್ರೆಸ್ ಟಿಪ್ಪು ಸಿದ್ಧಾಂತದ ಮೇಲೆ ಬಂದಿದ್ದಾರೆ, ನಾವೂ ಹಿಂದುತ್ವದ ಸಿದ್ಧಾಂತದ ಮೇಲೆ ಬಂದಿದ್ದೇವೆ. ಜನರು ಅದರ ಬಗ್ಗೆ ಮುಂದೆ ತೀರ್ಮಾನ ಮಾಡ್ತಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ